ಹರಿಯಾಣ ಜತೆ ನೀರು ಹಂಚಿಕೆಯಾದರೆ ಪಂಜಾಬ್ ಸುಟ್ಟು ಹೋಗುತ್ತದೆ: ಅಮರಿಂದರ್ ಎಚ್ಚರಿಕೆ
ಚಂಡೀಗಡ, ಆಗಸ್ಟ್ 19: ಹರಿಯಾಣ ಮತ್ತು ಪಂಜಾಬ್ ನಡುವೆ ನದಿ ನೀರಿನ ಹಂಚಿಕೆಯ ವಿವಾದ ಭುಗಿಲೆದ್ದಿದೆ. ಸಟ್ಲೆಜ್-ಯಮುನಾ ಸಂಪರ್ಕ (ಎಸ್‌ವೈಎಲ್) ಕಾಲುವೆ ಯೋಜನೆಗೆ ತೀವ್ರ ವಿರೋಧ ವ್ಯಕ್ತಪಡಿಸಿರುವ ಪಂಜಾಬ್ ಮುಖ್ಯಮಂತ್ರಿ ಅಮರಿಂದರ್ ಸಿಂಗ್, ಹರಿಯಾಣದೊಂದಿಗೆ ನೀರು ಹಂಚಿಕೊಳ್ಳುವಂತೆ ಸೂಚಿಸಿದರೆ ಪಂಜಾಬ್ ಹೊತ್ತಿ ಉರಿಯಲಿದೆ ಎಂದು ಎಚ್ಚರಿಕೆ ನೀಡಿದ್ದಾರೆ.
ಹರಿಯಾಣ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ಮತ್ತು ಕೇಂದ್ರ ಜಲಶಕ್ತಿ ಸಚಿವ ಗಜೇಂದ್ರ ಸಿಂಗ್ ಶೆಖಾವತ್ ಜತೆಗೆ ಮಂಗಳವಾರ ಸಭೆ ನಡೆಸಿದ ಅಮರಿಂದರ್ ಸಿಂಗ್, ಎಸ್‌ವೈಎಲ್ ಒಂದು ಭಾವನಾತ್ಮಕ ವಿಚಾರವಾಗಿದ್ದು, ಇದು ರಾಷ್ಟ್ರೀಯ ಭದ್ರತೆಯನ್ನು ಹದಗೆಡಿಸುತ್ತದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಸುಪ್ರೀಂಕೋರ್ಟ್ ನೀಡಿದ ನಿರ್ದೇಶನದಂತೆ ಈ ಸಭೆ ನಡೆದಿದೆ. ಹಲವು ದಶಕಗಳಿಂದ ಬಾಕಿ ಉಳಿದಿರುವ ಎಚ್‌ವೈಎಲ್ ಕಾಲುವೆಯನ್ನು ಪೂರ್ಣಗೊಳಿಸುವ ವಿಚಾರವಾಗಿ ಎರಡು ರಾಜ್ಯಗಳ ಮುಖ್ಯಮಂತ್ರಿಗಳು ಚರ್ಚಿಸುವಂತೆ ಕಳೆದ ತಿಂಗಳು ಸೂಚಿಸಿತ್ತು. ಹರಿಯಾಣ ಮತ್ತು ರಾಜಸ್ಥಾನಗಳೊಂದಿಗೆ ನೀರು ಹಂಚಿಕೆ ಮಾಡುವುದಿಲ್ಲ ಎಂದು ಪಟ್ಟು ಹಿಡಿದಿರುವ ಪಂಜಾಬ್, ಈ ವಿಚಾರವಾಗಿ ಚರ್ಚಿಸಲು ಏನೂ ಉಳಿದಿಲ್ಲ ಎಂದಿದೆ. ಮುಂದೆ ಓದಿ.

ಯೋಜನೆ ನಡೆಯಬೇಕಷ್ಟೇ
ಈ ವಿವಾದಕ್ಕೆ ಸಂಬಂಧಿಸಿದಂತೆ ಸೌಹಾರ್ದಯುತ ಪರಿಹಾರ ಸಿಗಲಿದೆ ಎಂದು ಭರವಸೆ ವ್ಯಕ್ತಪಡಿಸಿರುವ ಖಟ್ಟರ್, ಎಸ್‌ವೈಎಲ್ ಕುರಿತಾದ ನಮ್ಮ ನಿಲುವನ್ನು ಕಾಪಾಡಿಕೊಂಡಿದ್ದೇವೆ. ಈ ಯೋಜನೆ ನಿರ್ಮಾಣವಾಗಬೇಕಿದೆ. ಇದನ್ನೇ ಸುಪ್ರೀಂಕೋರ್ಟ್ ಕೂಡ ಹೇಳಿದೆ ಎಂದಿದ್ದಾರೆ.

ಪಂಜಾಬ್ ಭಾಗದಲ್ಲಿ ನಡೆಯದ ಕಾಮಗಾರಿ
ಎಸ್‌ವೈಎಲ್ ಯೋಜನೆ ಪಂಜಾಬ್ ಮತ್ತು ಹರಿಯಾಣ ನಡುವೆ ಸುದೀರ್ಘ ಸಮಯದಿಂದ ವಿವಾದವಾಗಿಯೇ ಉಳಿದಿದೆ. 1982ರಲ್ಲಿಯೇ ಈ ಯೋಜನೆ ಆರಂಭವಾಗಿತ್ತು. ಆದರೆ ಪಂಜಾಬ್ ಭಾಗದ ನಿರ್ಮಾಣ ನನೆಗುದಿಗೆ ಬಿದ್ದಿದೆ.

ನಮ್ಮ ಪಾಲಿನ ನೀರು ನೀಡಿ
ರಾವಿ-ಬಿಯಾಸ್ ನದಿ ನೀರಿನ ಹಂಚಿಕೆ ಪ್ರಮಾಣವನ್ನು ಮರುಮೌಲ್ಯಮಾಪನ ಮಾಡಬೇಕು ಎಂದು ಪಂಜಾಬ್ ಪಟ್ಟು ಹಿಡಿದಿದ್ದರೆ, ಎಸ್‌ವೈಎಲ್ ಕಾಲುವೆ ಪೂರ್ಣಗೊಳಿಸಿ ತಮ್ಮ ಪಾಲಿನ 3.5 ಮಿಲಿಯನ್ ಎಕರೆ ಅಡಿ (ಎಂಎಎಫ್) ನೀರನ್ನು ನೀಡುವಂತೆ ಹರಿಯಾಣ ವಾದಿಸುತ್ತಿದೆ.

ಮೊದಲು ಕಾಲುವೆ ಪೂರ್ಣಗೊಳ್ಳಲಿ
1966ರಲ್ಲಿ ಹರಿಯಾಣ ಪ್ರತ್ಯೇಕ ರಾಜ್ಯವಾಗಿ ವಿಭಜನೆಯಾಗುವಾಗ 60:40ರ ಆಸ್ತಿ ಹಂಚಿಕೆಯಲ್ಲಿ ತನಗೆ ಸೂಕ್ತ ಪಾಲು ಸಿಕ್ಕಿರಲಿಲ್ಲ. ಹೀಗಾಗಿ ಯಮುನಾ ನದಿ ನೀರಿನಲ್ಲಿ ತನಗೂ ಹಕ್ಕಿದೆ ಎಂದು ಅಮರಿಂದರ್ ಸಿಂಗ್ ಪ್ರತಿಪಾದಿಸಿದ್ದಾರೆ. ಎಸ್‌ವೈಎಲ್ ಯೋಜನೆ ಮೊದಲು ಪೂರ್ಣಗೊಳ್ಳಲಿ. ಬಳಿಕ ನೀರು ಹಂಚಿಕೆ ಚರ್ಚೆಗಳನ್ನು ಮುಂದುವರಿಸಿ ಅಂತಿಮ ಸೂತ್ರವನ್ನು ಕಂಡುಕೊಳ್ಳಬಹುದು ಎಂದು ಸಚಿವ ಶೆಖಾವತ್ ಸಲಹೆ ನೀಡಿದ್ದಾರೆ.
-
Viral Video: 11 ವರ್ಷದ ಬಾಲಕನಿಂದ ಯಶಸ್ವಿ ವಿಮಾನ ಲ್ಯಾಂಡಿಂಗ್; ನೆಟ್ಟಿಗರ ಮನಗೆದ್ದ ಈ ಪುಟ್ಟ ಪೋರ -
ಪೆಟ್ರೋಲ್ ಬದಲು ಎಥೆನಾಲ್ ಬ್ಲೆಂಡಿಂಗ್ ಮ್ಯಾಜಿಕ್; ಸಂಕಷ್ಟದಲ್ಲಿ ಭಾರತಕ್ಕೆ ನೆರವಾದ ಮೋದಿ ಮಾಸ್ಟರ್ ಪ್ಲ್ಯಾನ್: ಕೃಷ್ಣ ಭಟ್ ಬರಹ -
Gold Price: ಚಿನ್ನ-ಬೆಳ್ಳಿ ಬೆಲೆಯಲ್ಲಿ ಭರ್ಜರಿ ಏರಿಕೆ: ಮೂರೇ ದಿನದಲ್ಲಿ ಬೆಳ್ಳಿ 20,000 ರೂ. ಜಂಪ್ -
ಬೆಂಗಳೂರಿನ ಎಂ.ಚಿನ್ನಸ್ವಾಮಿಯಲ್ಲಿ ಐಪಿಎಲ್ ಉದ್ಘಾಟನಾ ಸಮಾರಂಭಕ್ಕೆ ಬ್ರೇಕ್: ಬಿಸಿಸಿಐ ಈ ನಿರ್ಧಾರದ ಹಿಂದಿದೆ ಮಹತ್ವದ ಉದ್ದೇಶ -
Gold Rate: ಇಂದು ನಿಮ್ಮ ನಗರಗಳಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ ಎಷ್ಟಿದೆ? ಇಲ್ಲಿದೆ ಸಂಪೂರ್ಣ ಮಾಹಿತಿ -
RCB ಮಾರಾಟದ ಬಗ್ಗೆ ವಿಜಯ್ ಮಲ್ಯ ಭಾವುಕ ಪೋಸ್ಟ್ ; ವಿರಾಟ್ ಕೊಹ್ಲಿ ಬಗ್ಗೆ ಅವರು ಹೇಳಿದ್ದೇನು? ಇಲ್ಲಿದೆ ಮಾಹಿತಿ -
Jacob Bethell: ವಾಂಖೆಡೆಯಲ್ಲಿ ಕಿವಿಗೆ ಬಿದ್ದಿದ್ದು ಮಾತ್ರ ಆರ್ಸಿಬಿ.. ಆರ್ಸಿಬಿ ಘೋಷಣೆ: ಜೇಕಬ್ ಬೆಥೆಲ್ ವಿಡಿಯೋ ವೈರಲ್ -
Karnataka Weather: ಇಂದು ಕರಾವಳಿ, ಉತ್ತರ ಹಾಗೂ ದಕ್ಷಿಣ ಒಳನಾಡಿನ ಹಲವೆಡೆ ಗುಡುಗು ಸಹಿತ ಮಳೆ ಸಾಧ್ಯತೆ -
March 27 Horoscope: ಉದ್ಯೋಗ ಮತ್ತು ಹಣಕಾಸಿನಲ್ಲಿ ದೊಡ್ಡ ಬದಲಾವಣೆ -
March 26 Horoscope: ಇಂದು ಈ 3 ರಾಶಿಗಳ ಜೀವನದಲ್ಲಿ ದೊಡ್ಡ ಬದಲಾವಣೆ -
Gold Rate: ಆಭರಣ ಪ್ರಿಯರಿಗೆ ಗುಡ್ ನ್ಯೂಸ್: ಮಾರುಕಟ್ಟೆಯಲ್ಲಿಂದು ಕೊಂಚ ಇಳಿಕೆ ಕಂಡ ಚಿನ್ನ, ಬೆಳ್ಳಿ ದರ -
Bengaluru Startup: ಬೆಂಗಳೂರು ಸ್ಟಾರ್ಟ್ಅಪ್ ರಾಜಧಾನಿ ಅಲ್ಲ ಎಂದ ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ನವೀಸ್












Click it and Unblock the Notifications