ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪಂಜಾಬ್‌ನಲ್ಲಿ ಎಎಪಿ ವೇಗವಾಗಿ ಮುನ್ನಡೆಯುತ್ತಿದೆ ಎಂದ ಕಾಂಗ್ರೆಸ್‌ ಸಮೀಕ್ಷೆ!

|
Google Oneindia Kannada News

ಚಂಡೀಗಢ, ಜನವರಿ 23: ಪಂಜಾಬ್‌ ಚುನಾವಣೆಯಲ್ಲಿ ಆಡಳಿತಾರೂಢ ಕಾಂಗ್ರೆಸ್‌ಗೆ ಆಮ್‌ ಆದ್ಮಿ ಪಕ್ಷ ಕಠಿಣ ಪೈಪೋಟಿ ನೀಡುತ್ತಿದ್ದು, ಮಾಲ್ವಾ ಪ್ರದೇಶದಲ್ಲಿ ಪಕ್ಷದ ಸಂಸದ ಭಗವಂತ್‌ ಮಾನ್‌ರನ್ನು ಎಎಪಿ ಮುಖ್ಯಮಂತ್ರಿ ಅಭ್ಯರ್ಥಿಯನ್ನಾಗಿ ಘೋಷಣೆ ಮಾಡಲಾಗಿದೆ. ಈ ನಡುವೆ ಅರವಿಂದ್‌ ಕೇಜ್ರಿವಾಲ್‌ ನೇತೃತ್ವದ ಆಮ್‌ ಆದ್ಮಿ ಪಕ್ಷವು ಪಂಜಾಬ್‌ನಲ್ಲಿ ವೇಗವಾಗಿ ಬೆಳೆಯುತ್ತಿದೆ ಎಂದು ಕಾಂಗ್ರೆಸ್‌ನ ಆಂತರಿಕ ಸಮೀಕ್ಷೆಯು ಬಹಿರಂಗಪಡಿಸಿದೆ.

ಮತದಾನಕ್ಕೆ ಒಂದು ತಿಂಗಳ ಹಿಂದೆ ನಡೆಸಿರುವ ಈ ಸಮೀಕ್ಷೆಯು ಅಮರಿಂದರ್ ಸಿಂಗ್ ಪಂಜಾಬ್‌ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ ಬಳಿಕ ಚರಣ್‌ಜೀತ್‌ ಸಿಂಗ್‌ ಚನ್ನಿರನ್ನು ಮುಖ್ಯಮಂತ್ರಿಯನ್ನಾಗಿಸುವ ಮೂಲಕ ಕಾಂಗ್ರೆಸ್‌ ಪಕ್ಷವು ಜನರ ಬೆಂಬಲವನ್ನು ಗಳಿಸಿದೆ ಎಂದು ತೋರಿಸಿದೆ. ಆದರೆ ಎಎಪಿಯ ಭಗವಂತ್‌ ಮನ್‌ ಚುನಾವಣಾ ಕಣಕ್ಕೆ ಇಳಿಯುವ ಮೂಲಕ ಪಂಜಾಬ್‌ ರಾಜಕೀಯದಲ್ಲಿ ಬದಲಾವಣೆ ಆಗುತ್ತಿದೆ. ಮಾಲ್ವಾವು ಎಎಪಿಯ ಭದ್ರಕೋಟೆಯಾಗಿದೆ ಎಂದು ಸಮೀಕ್ಷೆಯು ಉಲ್ಲೇಖ ಮಾಡಿದೆ.

 ಪಂಜಾಬ್‌ ಚುನಾವಣೆ: ರಾಹುಲ್ ಸಹಾಯಕರ ಟ್ವಿಟ್ಟರ್‌ ಸಮೀಕ್ಷೆಯಲ್ಲಿ ಚನ್ನಿಗೆ ಗೆಲುವು ಪಂಜಾಬ್‌ ಚುನಾವಣೆ: ರಾಹುಲ್ ಸಹಾಯಕರ ಟ್ವಿಟ್ಟರ್‌ ಸಮೀಕ್ಷೆಯಲ್ಲಿ ಚನ್ನಿಗೆ ಗೆಲುವು

ಎಎಪಿಯ ಮುಖ್ಯಮಂತ್ರಿ ಅಭ್ಯರ್ಥಿ ಭಗವಂತ್‌ ಮಾನ್‌ ಅದೇ ಪ್ರದೇಶದ ಸಂಗ್ರೂರ್‌ನ ಸಂಸದರಾಗಿದ್ದು, ಕಳೆದ ವಿಧಾನಸಭಾ ಚುನಾವಣೆಯಲ್ಲಿ ಮಾಲ್ವಾದಿಂದ ಎಎಪಿ 20 ಸ್ಥಾನಗಳಲ್ಲಿ 18 ಸ್ಥಾನಗಳನ್ನು ಗೆದ್ದಿತ್ತು. ಈ ಪ್ರದೇಶವು ಪಂಜಾಬ್‌ನ 117 ವಿಧಾನಸಭಾ ಸ್ಥಾನಗಳಲ್ಲಿ 69 ಸ್ಥಾನಗಳನ್ನು ಹೊಂದಿದೆ. ಎಎಪಿ ಧುರಿ ಕ್ಷೇತ್ರದಿಂದ ಭಗವಂತ್‌ ಮಾನ್‌ರನ್ನು ಕಣಕ್ಕೆ ಇಳಿಸಿದೆ. ಈ ನಡುವೆ ಧುರಿಯಲ್ಲಿ ನನ್ನ ವಿರುದ್ಧ ಸ್ಪರ್ಧೆಗೆ ಇಳಿಯಿರಿ ಎಂದು ಮುಖ್ಯಮಂತ್ರಿ ಚರಣ್‌ಜೀತ್‌ ಸಿಂಗ್‌ ಚನ್ನಿಗೆ ಭಗವಂತ್‌ ಮಾನ್‌ ಸವಾಲು ಹಾಕಿದ್ದಾರೆ.

Breaking; ಗೋವಾ ಚುನಾವಣೆ; ಸಿಎಂ ಅಭ್ಯರ್ಥಿ ಘೋಷಿಸಿದ ಎಎಪಿ Breaking; ಗೋವಾ ಚುನಾವಣೆ; ಸಿಎಂ ಅಭ್ಯರ್ಥಿ ಘೋಷಿಸಿದ ಎಎಪಿ

 ಕಾಂಗ್ರೆಸ್‌ ಭಿನ್ನಾಭಿಪ್ರಾಯ ಬಳಸಿಕೊಳ್ಳುತ್ತಿದೆ ಇತರೆ ಪಕ್ಷಗಳು

ಕಾಂಗ್ರೆಸ್‌ ಭಿನ್ನಾಭಿಪ್ರಾಯ ಬಳಸಿಕೊಳ್ಳುತ್ತಿದೆ ಇತರೆ ಪಕ್ಷಗಳು

ಪಂಜಾಬ್‌ ಮುಖ್ಯಮಂತ್ರಿ ಚರಣ್‌ಜೀತ್‌ ಸಿಂಗ್‌ ಚನ್ನಿ ಹಾಗೂ ಪಕ್ಷದ ರಾಜ್ಯ ಮುಖ್ಯಸ್ಥ ನವಜೋತ್ ಸಿಂಗ್ ಸಿಧು ನಡುವಿನ ಭಿನ್ನಾಭಿಪ್ರಾಯದ ಕುರಿತು ಪಕ್ಷದ ಸಮೀಕ್ಷೆ ನಡೆಸಿದಾಗ ಈ ಹಿನ್ನೆಲೆಯಿಂದಾಗಿ ಪಂಜಾಬ್‌ನಲ್ಲಿ ಕಾಂಗ್ರೆಸ್‌ಗೆ ಹಿನ್ನೆಡೆ ಆಗಬಹುದು ಎಂದು ಸಮೀಕ್ಷೆಯು ತೋರಿಸಿದೆ. ಇನ್ನು ಈ ಕಾಂಗ್ರೆಸ್‌ ಭಿನ್ನಾಭಿಪ್ರಾಯವನ್ನು ವಿರೋಧ ಪಕ್ಷಗಳು ಬಳಸಿಕೊಳ್ಳುತ್ತಿದೆ ಎಂದು ಕೂಡಾ ಕಾಂಗ್ರೆಸ್‌ ಸಮೀಕ್ಷೆಯಿಂದ ತಿಳಿದು ಬಂದಿದೆ.

 ಎಎಪಿ ವೇಗವಾಗಿ ಮುನ್ನಡೆಯುತ್ತಿದೆ

ಎಎಪಿ ವೇಗವಾಗಿ ಮುನ್ನಡೆಯುತ್ತಿದೆ

"ಎಪಿ ಪಂಜಾಬ್‌ನಲ್ಲಿ ವೇಗವಾಗಿ ನೆಲೆಸುತ್ತಿದೆ. ಚರಣ್‌ಜೀತ್‌ ಸಿಂಗ್‌ ಚನ್ನಿ ಮುಖ್ಯಮಂತ್ರಿಯಾದ ಬಳಿಕ ಪಕ್ಷಕ್ಕೆ ಸಹಾಯಕವಾಗಿದೆ. ಆದರೆ ಭಗವಂತ್‌ ಮಾನ್‌ರನ್ನು ಪಂಜಾಬ್‌ ಸಿಎಂ ಆಗಿ ಆಮ್‌ ಆದ್ಮಿ ಪಕ್ಷ ಬಿಂಬಿಸುತ್ತಿರುವುದರಿಂದಾಗಿ ಅದು ಎಎಪಿಗೆ ಸಹಾಯ ಮಾಡುತ್ತಿದೆ," ಎಂದು ಕಾಂಗ್ರೆಸ್‌ನ ಮೂಲಗಳು ತಿಳಿಸಿದೆ. "ಮಾಲ್ವಾ ಪ್ರದೇಶದಲ್ಲಿ ಎಎಪಿ ಲಾಭ ಪಡೆಯುವ ನಿರೀಕ್ಷೆಯಿದೆ. ಇದು ಮಜಾ ಮತ್ತು ದೋಬಾದ ಇತರ ಎರಡು ಪ್ರದೇಶಗಳಲ್ಲಿ ಪಕ್ಷವು ಸಮತೋಲನ ಕಾಯ್ದುಕೊಳ್ಳಲು ಸಹಾಯಕವಾಗುತ್ತದೆ," ಎಂದು ಕೂಡಾ ಈ ಸಮೀಕ್ಷೆಯು ಉಲ್ಲೇಖ ಮಾಡಿದೆ. ಉತ್ತರ ಪ್ರದೇಶದಲ್ಲಿ ಫೆಬ್ರವರಿ 10, 14, 20, 23 ಮತ್ತು ಮಾರ್ಚ್ 3 ಮತ್ತು 7 ರಂದು ಚುನಾವಣೆ ನಡೆಯಲಿದೆ. ಗೋವಾ ಮತ್ತು ಉತ್ತರಾಖಂಡದಲ್ಲಿ ಫೆಬ್ರವರಿ 14 ರಂದು ಮತದಾನ ನಡೆಯಲಿದೆ. ಮಣಿಪುರದಲ್ಲಿ ಫೆಬ್ರವರಿ 27 ಮತ್ತು ಮಾರ್ಚ್ 3 ರಂದು ಎರಡು ಹಂತಗಳಲ್ಲಿ ಮತದಾನ ನಡೆಯಲಿದೆ. ಪಂಜಾಬ್‌ನಲ್ಲಿ ಫೆಬ್ರವರಿ 20 ರಂದು ಮತದಾನ ನಡೆಯಲಿದೆ. ಪಂಚ ರಾಜ್ಯಗಳಲ್ಲಿಯೂ ಮಾರ್ಚ್ 10 ರಂದು ಮತ ಎಣಿಕೆ ನಡೆಯಲಿದೆ.

 ಕಾಂಗ್ರೆಸ್‌ ಟ್ವಿಟ್ಟರ್‌ ಸಮೀಕ್ಷೆ

ಕಾಂಗ್ರೆಸ್‌ ಟ್ವಿಟ್ಟರ್‌ ಸಮೀಕ್ಷೆ

ಎಎಪಿ ಫೋನ್‌ ಸಮೀಕ್ಷೆ ನಡೆಸಿ ಮುಖ್ಯಮಂತ್ರಿ ಆಯ್ಕೆ ಮಾಡಿದ ಬಳಿಕ ರಾಹುಲ್‌ ಗಾಂಧಿ ಸಹಾಯಕ ನಿಖಿಲ್‌ ಆಳ್ವಾ ಕೂಡಾ ಸಮೀಕ್ಷೆಯನ್ನು ನಡೆಸಿದ್ದಾರೆ. ರಾಹುಲ್‌ ಗಾಂಧಿ ಸಹಾಯಕ ನಿಖಿಲ್‌ ಆಳ್ವಾರ ಟ್ವಿಟ್ಟರ್‌ ಸಮೀಕ್ಷೆಯು ಒಟ್ಟು 1,283 ಮತಗಳು ಆಧಾರಿತವಾಗಿದೆ. ಈ ಒಟ್ಟು ಮತಗಳ ಪೈಕಿ ನವಜೋತ್ ಸಿಧುಗೆ ಶೇಕಡ 11.5, ಸುನೀಲ್ ಜಾಖರ್‌ಗೆ ಶೇಕಡ 9.3 ಮತಗಳು ಬಿದ್ದಿದ್ದಾರೆ. ಶೇಕಡ 10.4 ರಷ್ಟು ಜನರು ಸಿಎಂ ಅಭ್ಯರ್ಥಿ ಘೋಷಣೆ ಮಾಡುವ ಅಗತ್ಯವಿಲ್ಲ ಎಂದು ಹೇಳಿದ್ದಾರೆ. ಪಂಜಾಬ್‌ನ ಹಾಲಿ ಮುಖ್ಯಮಂತ್ರಿ ಚರಣ್‌ಜೀತ್‌ ಸಿಂಗ್‌ ಚನ್ನಿಗೆ ಟ್ವಿಟ್ಟರ್‌ ಸಮೀಕ್ಷೆಯಲ್ಲಿ ಗರಿಷ್ಠ 68.7 ಪ್ರತಿಶತ ಮತದಾನ ಲಭಿಸಿದೆ.

 ಎಎಪಿ ಫೋನ್‌ ಕರೆ ಸಮೀಕ್ಷೆ

ಎಎಪಿ ಫೋನ್‌ ಕರೆ ಸಮೀಕ್ಷೆ

ಪಂಜಾಬ್‌ನಲ್ಲಿ ನಡೆಯುವ ವಿಧಾನಸಭೆ ಚುನಾವಣೆಯಲ್ಲಿ ಎಎಪಿ ಗೆಲುವು ಸಾಧಿಸಿದರೆ ಪಕ್ಷದಿಂದ ಯಾರು ಮುಖ್ಯಮಂತ್ರಿ ಆಗಬೇಕು ಎಂಬ ಬಗ್ಗೆ ಎಎಪಿ ಜನರ ಅಭಿಪ್ರಾಯವನ್ನು ಪಡೆದಿದೆ. ಎಎಪಿ, ಗಮನಾರ್ಹವಾಗಿ, ವಿಧಾನಸಭೆ ಚುನಾವಣೆಗೆ ತನ್ನ ಸಿಎಂ ಮುಖವನ್ನು ಆಯ್ಕೆ ಮಾಡುವ ಅಭಿಯಾನದ ಅಡಿಯಲ್ಲಿ ಸುಮಾರು 22 ಲಕ್ಷ ಪ್ರತಿಕ್ರಿಯೆಗಳನ್ನು ಸ್ವೀಕರಿಸಿದೆ. ಜನರ ಪ್ರತಿಕ್ರಿಯೆಯ ಆಧಾರದಲ್ಲಿ ಎಎಎಪಿ ಪಂಜಾಬ್‌ ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಭಗವಂತ್ ಮಾನ್‌ ಹೆಸರನ್ನು ಘೋಷಣೆ ಮಾಡಿದೆ. (ಒನ್‌ಇಂಡಿಯಾ ಸುದ್ದಿ)

English summary
Punjab Poll: Congress survey says AAP gaining fast in State.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X