ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪಂಜಾಬ್‌ ಚುನಾವಣೆ: ರಾಹುಲ್ ಸಹಾಯಕರ ಟ್ವಿಟ್ಟರ್‌ ಸಮೀಕ್ಷೆಯಲ್ಲಿ ಚನ್ನಿಗೆ ಗೆಲುವು

|
Google Oneindia Kannada News

ಚಂಡೀಗಢ, ಜನವರಿ 21: ಪಂಜಾಬ್‌ನಲ್ಲಿ ಕಾಂಗ್ರೆಸ್‌ನ ಮುಖ್ಯಮಂತ್ರಿ ಅಭ್ಯರ್ಥಿ ಯಾರಾಗಬೇಕು ಎಂದಬ ವಿಚಾರದಲ್ಲಿ ಕಾಂಗ್ರೆಸ್‌ ಮುಖಂಡ ರಾಹುಲ್‌ ಗಾಂಧಿ ಅವರ ಸಹಾಯಕ ನಿಖಿಲ್‌ ಆಳ್ವಾ ನಡೆಸಿದ ಟ್ವಿಟ್ಟರ್‌ ಸಮೀಕ್ಷೆಯಲ್ಲಿ ಚರಣ್‌ಜಿತ್‌ ಸಿಂಗ್‌ ಚನ್ನಿ ಗೆಲುವು ಸಾಧಿಸಿದ್ದಾರೆ. ಪಂಜಾಬ್‌ನ ಹಾಲಿ ಮುಖ್ಯಮಂತ್ರಿ ಚರಣ್‌ಜೀತ್‌ ಸಿಂಗ್‌ ಚನ್ನಿಗೆ ಟ್ವಿಟ್ಟರ್‌ ಸಮೀಕ್ಷೆಯಲ್ಲಿ ಗರಿಷ್ಠ 68.7 ಪ್ರತಿಶತ ಮತದಾರ ಲಭಿಸಿದ್ದು, ಮತದಾರರು ಚನ್ನಿ ಅಭ್ಯರ್ಥಿ ಆಗಬೇಕು ಎಂಬ ಅಭಿಲಾಷೆಯನ್ನು ವ್ಯಕ್ತಪಡಿಸಿದ್ದಾರೆ.

ಕಾಂಗ್ರೆಸ್‌ನ ಮುಖ್ಯಮಂತ್ರಿ ಯಾರಾಗಬೇಕು ಎಂಬ ಸಮೀಕ್ಷೆಯು ರಾಜಕೀಯ ವಲಯದಲ್ಲಿ ಸಂಚಲನ ಮೂಡಿಸಿದೆ. ಆಮ್ ಆದ್ಮಿ ಪಾರ್ಟಿ (ಎಎಪಿ) ದೂರವಾಣಿ ಸಮೀಕ್ಷೆ ನಡೆಸಿ ಭಗವಂತ್‌ ಮನ್‌ರನ್ನು ಪಂಜಾಬ್‌ನ ಆಮ್ ಆದ್ಮಿ ಪಾರ್ಟಿ ಮುಖ್ಯಮಂತ್ರಿ ಅಭ್ಯರ್ಥಿಯನ್ನಾಗಿ ಆಯ್ಕೆ ಮಾಡಿದ ಬೆನ್ನಲ್ಲೇ ರಾಹುಲ್‌ ಗಾಂಧಿ ಸಹಾಯಕ ನಿಖಿಲ್‌ ಆಳ್ವಾ ಈ ಟ್ವಿಟ್ಟರ್‌ ಸಮೀಕ್ಷೆಯನ್ನು ನಡೆಸಿದ್ದಾರೆ. ಇನ್ನು ಎಎಪಿ ದೂರವಾಣಿ ಸಮೀಕ್ಷೆಯಲ್ಲಿ 93 ರಷ್ಟು ಮತಗಳನ್ನು ಭಗವಂತ್‌ ಮಾನ್‌ ಪಡೆದಿದ್ದಾರೆ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಹೇಳಿಕೆ ನೀಡಿದ್ದರು.

 ಸಿಎಂ ಆಗಲು ಯಾರು ಅರ್ಹ?: ಸೋನು ಸೂದ್‌ ವಿಡಿಯೋ ಹಂಚಿದ ಪಂಜಾಬ್‌ ಕಾಂಗ್ರೆಸ್‌ ಸಿಎಂ ಆಗಲು ಯಾರು ಅರ್ಹ?: ಸೋನು ಸೂದ್‌ ವಿಡಿಯೋ ಹಂಚಿದ ಪಂಜಾಬ್‌ ಕಾಂಗ್ರೆಸ್‌

ಉತ್ತರ ಪ್ರದೇಶದಲ್ಲಿ ಫೆಬ್ರವರಿ 10, 14, 20, 23 ಮತ್ತು ಮಾರ್ಚ್ 3 ಮತ್ತು 7 ರಂದು ಚುನಾವಣೆ ನಡೆಯಲಿದೆ. ಗೋವಾ ಮತ್ತು ಉತ್ತರಾಖಂಡದಲ್ಲಿ ಫೆಬ್ರವರಿ 14 ರಂದು ಮತದಾನ ನಡೆಯಲಿದೆ. ಮಣಿಪುರದಲ್ಲಿ ಫೆಬ್ರವರಿ 27 ಮತ್ತು ಮಾರ್ಚ್ 3 ರಂದು ಎರಡು ಹಂತಗಳಲ್ಲಿ ಮತದಾನ ನಡೆಯಲಿದೆ. ಪಂಜಾಬ್‌ನಲ್ಲಿ ಫೆಬ್ರವರಿ 20 ರಂದು ಮತದಾನ ನಡೆಯಲಿದೆ. ಪಂಚ ರಾಜ್ಯಗಳಲ್ಲಿ ಮಾರ್ಚ್ 10 ರಂದು ಮತ ಎಣಿಕೆ ನಡೆಯಲಿದೆ. ಈ ನಡುವೆ ಪಂಜಾಬ್‌ನಲ್ಲಿ ಕಾಂಗ್ರೆಸ್‌ನ ಮುಖ್ಯಮಂತ್ರಿ ಅಭ್ಯರ್ಥಿ ಯಾರಾಗಲಿದ್ದಾರೆ ಎಂಬ ಬಗ್ಗೆ ಭಾರೀ ಕುತೂಹಲ ಸೃಷ್ಟಿಯಾಗಿದೆ.

Punjab Poll: Charanjit Singh Channi Wins Twitter Poll by Rahul Aide

ಸಮೀಕ್ಷೆ ಹೇಗೆ ನಡೆದಿದೆ?

ರಾಹುಲ್‌ ಗಾಂಧಿ ಸಹಾಯಕ ನಿಖಿಲ್‌ ಆಳ್ವಾರ ಟ್ವಿಟ್ಟರ್‌ ಸಮೀಕ್ಷೆಯು ಒಟ್ಟು 1,283 ಮತಗಳು ಆಧಾರಿತವಾಗಿದೆ. ಈ ಒಟ್ಟು ಮತಗಳ ಪೈಕಿ ನವಜೋತ್ ಸಿಧುಗೆ ಶೇಕಡ 11.5, ಸುನೀಲ್ ಜಾಖರ್‌ಗೆ ಶೇಕಡ 9.3 ಮತಗಳು ಬಿದ್ದಿದ್ದಾರೆ. ಶೇಕಡ 10.4 ರಷ್ಟು ಜನರು ಸಿಎಂ ಅಭ್ಯರ್ಥಿ ಘೋಷಣೆ ಮಾಡುವ ಅಗತ್ಯವಿಲ್ಲ ಎಂದು ಹೇಳಿದ್ದಾರೆ.

ZEE News Opinion Poll: ಪಂಜಾಬ್‌ನಲ್ಲಿ ಯಾರಿಗೆ ಸಿಎಂ ಕುರ್ಚಿ? ZEE News Opinion Poll: ಪಂಜಾಬ್‌ನಲ್ಲಿ ಯಾರಿಗೆ ಸಿಎಂ ಕುರ್ಚಿ?

ಕಾಂಗ್ರೆಸ್ ತನ್ನ ಅಧಿಕೃತ ಟ್ವಿಟರ್ ಹ್ಯಾಂಡಲ್‌ನಲ್ಲಿ ಇತ್ತೀಚೆಗಿನ ವೀಡಿಯೊವನ್ನು ಬಿಡುಗಡೆ ಮಾಡಿದ ನಂತರ ಈ ಸಮೀಕ್ಷೆಯು ಚರಣ್‌ಜೀತ್‌ ಸಿಂಗ್‌ ಚನ್ನಿ ರಾಜ್ಯದ ಮುಂದಿನ ಸಿಎಂ ಎಂದು ತೋರಿಸಿದೆ. ವೀಡಿಯೊದಲ್ಲಿ ಸೋನು ಸೂದ್‌, "ನಿಜವಾದ ಸಿಎಂ (ಮುಖ್ಯಮಂತ್ರಿ) ಅಥವಾ ರಾಜನನ್ನು ಬಲವಂತವಾಗಿ ಕುರ್ಚಿಗೆ ತರಲಾಗುತ್ತದೆ. ಅವರು ಹೋರಾಟ ಮಾಡುವ ಅಗತ್ಯವಿಲ್ಲ ಮತ್ತು ನಾನು ಮುಖ್ಯಮಂತ್ರಿ ಅಭ್ಯರ್ಥಿ ಮತ್ತು ನಾನು ಅದಕ್ಕೆ ಅರ್ಹನಾಗಿದ್ದೆ ಎಂದು ಹೇಳುವ ಅಗತ್ಯವಿಲ್ಲ," ಎಂದಿದ್ದಾರೆ. "ಅವನು (ಮುಖ್ಯಮಂತ್ರಿ ಹುದ್ದೆಗೆ ಬರುವ ವ್ಯಕ್ತಿ) ಹಿಂದಿನ ಬೆಂಚರ್ ಆಗಿರಬೇಕು ಮತ್ತು ಅವನನ್ನು ಹಿಂದಿನಿಂದ ಕರೆತಂದು ನೀವು ಇದಕ್ಕೆ ಅರ್ಹರು ಮತ್ತು ನೀವು (ಮುಖ್ಯಮಂತ್ರಿ) ಆಗುತ್ತೀರಿ ಎಂದು ಹೇಳಬೇಕು. ಆ ವ್ಯಕ್ತಿ ಮುಖ್ಯಮಂತ್ರಿ ಆದಾಗ ದೇಶವನ್ನು ಬದಲಾಯಿಸಬಹುದು," ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಇನ್ನು ಈ ವಿಡಿಯೋವನ್ನು ರೀಟ್ವೀಟ್‌ ಮಾಡಿರುವ ಕಾಂಗ್ರೆಸ್‌, "ಪಂಜಾಬ್ ಹೇಳುತ್ತಿದೆ, ಜನರು ಕೈಗೆ (ಕಾಂಗ್ರೆಸ್‌ ಚಿಹ್ನೆ) ಗೆ ಬೆಂಬಲ ನೀಡುತ್ತಾರೆ ಎಂದು," ಉಲ್ಲೇಖ ಮಾಡಿದೆ. ಇನ್ನು ಈ ವಿಡಿಯೋದಲ್ಲಿ ಸೋನು ಸೂದ್‌ ಮಾತಿನ ಬಳಿಕ ಪಂಜಾಬ್‌ ಮುಖ್ಯಮಂತ್ರಿ ಚರಂಜಿತ್ ಸಿಂಗ್ ಚನ್ನಿ ಇರುವ ದೃಶ್ಯಗಳು ಕಾಣಿಸಿಕೊಂಡಿದೆ. ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ಅಮರಿಂದರ್ ಸಿಂಗ್ ರಾಜೀನಾಮೆ ನೀಡಿದ ನಂತರ ಚನ್ನಿ ಅವರನ್ನು ಪಂಜಾಬ್ ಮುಖ್ಯಮಂತ್ರಿಯಾಗಿ ನೇಮಿಸಲಾಯಿತು.

ಸಾಮೂಹಿಕ ನಾಯಕತ್ವದಲ್ಲಿ ಸ್ಪರ್ಧೆ

Recommended Video

Legends League Cricket: Virender Singh ನೇತೃತ್ವದಲ್ಲಿ ಇಂಡಿಯಾ ಮಹಾರಾಜ ತಂಡ!! | Oneindia Kannada

ಆದರೆ ಕಾಂಗ್ರೆಸ್ ಪಕ್ಷವು ಸಾಮೂಹಿಕ ನಾಯಕತ್ವದಲ್ಲಿ ಚುನಾವಣೆಗೆ ಸ್ಪರ್ಧಿಸುವುದಾಗಿ ಪಟ್ಟು ಹಿಡಿದಿದೆ. ಕೆಲವು ದಿನಗಳ ಹಿಂದೆ ಪಕ್ಷವು ಚನ್ನಿ, ಸಿದ್ದು ಮತ್ತು ಜಾಖರ್ ಚಿತ್ರಗಳು ಹೊಂದಿರುವ ಜಾಹೀರಾತು ಫಲಕಗಳನ್ನು ರಾಜ್ಯಾದ್ಯಂತ ಹಾಕಿತ್ತು. ಆದರೆ, ಚನ್ನಿ ಅವರನ್ನೇ ಮುಖ್ಯಮಂತ್ರಿಯನ್ನಾಗಿ ಘೋಷಿಸಬೇಕು ಎಂದು ಹಲವು ನಾಯಕರು ಈಗಾಗಲೇ ಒತ್ತಾಯಿಸಿದ್ದಾರೆ. (ಒನ್‌ಇಂಡಿಯಾ ಸುದ್ದಿ)

English summary
Punjab Poll: Charanjit Singh Channi wins Twitter poll by Rahul aide.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X