Punjab Election Result 2022: ಕೇಜ್ರಿವಾಲ್ ಪ್ರಧಾನಿಯಾಗ್ತಾರೆ ಎಂದ ಚಡ್ಡಾ
ಚಂಡೀಗಢ, ಮಾರ್ಚ್ 10: ಪಂಜಾಬ್‌ನಲ್ಲಿ ಆಮ್ ಆದ್ಮಿ ಪಕ್ಷ (ಎಎಪಿ) ಅದ್ಭುತ ಜಯ ಸಾಧಿಸಿ, ಕಾಂಗ್ರೆಸ್ ಅನ್ನು ಅಳಿಸಿಹಾಕಲಿದೆ. ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ದೇಶದ ಪ್ರಧಾನ ಮಂತ್ರಿ ಆಗಲಿದ್ದಾರೆ ಎಂದು ಎಎಪಿ ಪಕ್ಷದ ನಾಯಕ ರಾಘವ್ ಚಡ್ಡಾ ಹೇಳಿದ್ದಾರೆ.
ಪಂಜಾಬ್‌ನಲ್ಲಿ ಎಎಪಿ ಭಾರೀ ಮುನ್ನಡೆಯಲ್ಲಿದ್ದು, ಅಧಿಕಾರದ ಚುಕ್ಕಾಣಿಯನ್ನು ಪಡೆಯುವ ಸಾಧ್ಯತೆಗಳು ಇದೆ. ಈ ನಡುವೆ ಎಎಪಿ ಸಂಭ್ರಮಾಚರಣೆಯನ್ನು ಆರಂಭ ಮಾಡಿದೆ. ಪಂಜಾಬ್ ವಿಧಾನಸಭೆ ಚುನಾವಣೆಯ ಮತ ಎಣಿಕೆ ಪ್ರಕ್ರಿಯೆ ನಡೆಯುತ್ತಿದೆ. ಫಲಿತಾಂಶ ಪ್ರಕಟವಾಗುವ ಮುನ್ನವೇ ಎಎಪಿ ಅಧಿಕಾರ ಪಡೆಯುವ ಭರವಸೆಯನ್ನು ವ್ಯಕ್ತಪಡಿಸಿದೆ. ಅಷ್ಟು ಮಾತ್ರವಲ್ಲದೇ ಆಮ್ ಆದ್ಮಿ ಪಕ್ಷವು ಈಗಾಗಲೇ ಜಿಲೇಬಿ ಸಿದ್ಧಪಡಿಸಿದ್ದಾರೆ.
ಪಕ್ಷದ ಕಚೇರಿಯ ಹೊರಗೆ ಭಗವಂತ್ ಮಾನ್ ಅವರ ಚಿತ್ರವಿರುವ 'ಥ್ಯಾಂಕ್ಯೂ' ಎಂಬ ಬ್ಯಾನರ್ ಹಾಕಲಾಗಿದೆ. ಆದರೆ, ಬ್ಯಾನರ್ ಅನ್ನು ಇನ್ನೂ ಬಿಳಿ ಬಟ್ಟೆಯಿಂದ ಮುಚ್ಚಲಾಗಿದೆ. ಇದೇ ವೇಳೆ ಕಚೇರಿಯನ್ನು ಹೂ, ಬಲೂನ್‌ಗಳಿಂದ ಅಲಂಕರಿಸಲಾಗಿದೆ.

ಈ ಬೆನ್ನಲ್ಲೇ ಪ್ರತಿಕ್ರಿಯೆ ನೀಡಿದ ಎಎಪಿ ಪಕ್ಷದ ನಾಯಕ ರಾಘವ್ ಚಡ್ಡಾ, "ಪಂಜಾಬ್‌ನಲ್ಲಿ ಆಮ್ ಆದ್ಮಿ ಪಕ್ಷ (ಎಎಪಿ) ಅದ್ಭುತ ಜಯ ಸಾಧಿಸಿ, ಕಾಂಗ್ರೆಸ್ ಅನ್ನು ಅಳಿಸಿಹಾಕಲಿದೆ. ದೆಹಲಿಯ ನಂತರ ಎರಡನೇ ರಾಜ್ಯವನ್ನು ತನ್ನದಾಗಿಸಿಕೊಂಡಿದ್ದು, ಆಪ್ ಈಗ ರಾಷ್ಟ್ರೀಯ ಪಕ್ಷವಾಗಿದೆ. ದೇಶದ ಅತಿ ದೊಡ್ಡ ವಿರೋಧ ಪಕ್ಷ ಕಾಂಗ್ರೆಸ್ ಎಂಬುವುದನ್ನು ಬದಲಾವಣೆ ಮಾಡಲಿದೆ," ಎಂದು ತಿಳಿಸಿದರು.
"ಎಎಪಿ ರಾಷ್ಟ್ರೀಯ ಶಕ್ತಿಯಾಗುತ್ತಿರುವುದನ್ನು ನಾನು ನೋಡುತ್ತೇನೆ. ಒಂದು ಪಕ್ಷವಾಗಿ ಎಎಪಿಗೆ ಇದು ಪ್ರಚಂಡ ದಿನವಾಗಿದೆ, ಏಕೆಂದರೆ ಇಂದು ನಾವು ರಾಷ್ಟ್ರೀಯ ಪಕ್ಷವಾಗಿದ್ದೇವೆ. ನಾವು ಇನ್ನು ಮುಂದೆ ಪ್ರಾದೇಶಿಕ ಪಕ್ಷವಾಗಿಲ್ಲ. ಸರ್ವಶಕ್ತರು ನಮ್ಮನ್ನು ಮತ್ತು ಅರವಿಂದ್ ಕೇಜ್ರಿವಾಲ್ ಅವರನ್ನು ಆಶೀರ್ವದಿಸಲಿ. ಅವರು ಒಂದು ದಿನ ರಾಷ್ಟ್ರವನ್ನು ಮುನ್ನಡೆಸಲಿ," ಎಂದು ಹೇಳಿದರು.
2012 ರಲ್ಲಿ ಸ್ಥಾಪನೆಯಾದ ಎಎಪಿಗಿಂತ ಎರಡು ರಾಜ್ಯಗಳನ್ನು ಗೆಲ್ಲಲು ಬಿಜೆಪಿ "ಹೆಚ್ಚು ಸಮಯ" ತೆಗೆದುಕೊಂಡಿತು ಎಂದು ಕೂಡಾ ಈ ಸಂದರ್ಭದಲ್ಲೇ ಉಲ್ಲೇಖ ಮಾಡಿದ್ದಾರೆ. ಇನ್ನು ಅರವಿಂದ್ ಕೇಜ್ರಿವಾಲ್ ಪ್ರಧಾನ ಮಂತ್ರಿ ಆಗಲಿದ್ದಾರೆ ಎಂದು ಕೂಡಾ ತಿಳಿಸಿದ್ದಾರೆ. (ಒನ್‌ಇಂಡಿಯಾ ಸುದ್ದಿ)
ಚುನಾವಣಾ ಫಲಿತಾಂಶವನ್ನು ಪರಿಶೀಲಿಸುವುದು ಹೇಗೆ? ಎಲ್ಲಿ?
ಒನ್ ಇಂಡಿಯಾ ಕನ್ನಡದ ಲೈವ್ ಲಿಂಕ್ ಮೂಲಕ ನೀವು ಪಂಚ ರಾಜ್ಯಗಳ ವಿಧಾನಸಭೆ ಚುನಾವಣಾ ಫಲಿತಾಂಶವನ್ನು ನೀವು ನೋಡಬಹುದು. ಇದನ್ನು ಹೊರತುಪಡಿಸಿ ಚುನಾವಣಾ ಫಲಿತಾಂಶಗಳನ್ನು ಭಾರತೀಯ ಚುನಾವಣಾ ಆಯೋಗದ (ಇಸಿಐ) ವೆಬ್‌ಸೈಟ್ ಅಂದರೆ eciresults.nic.in ನಲ್ಲಿ ಪರಿಶೀಲಿಸಬಹುದು.












Click it and Unblock the Notifications