Get Updates
Get notified of breaking news, exclusive insights, and must-see stories!

Punjab Election Result 2022: ಗೆಲುವಿನ ಭರವಸೆ, ಜಿಲೇಬಿ ಸಿದ್ಧಪಡಿಸಿದ ಎಎಪಿ

ಚಂಡೀಗಢ, ಮಾರ್ಚ್ 10: ಪಂಜಾಬ್‌ ವಿಧಾನಸಭೆ ಚುನಾವಣೆಯ ಮತ ಎಣಿಕೆ ಪ್ರಕ್ರಿಯೆ ನಡೆಯುತ್ತಿದೆ. ಫಲಿತಾಂಶ ಪ್ರಕಟವಾಗುವ ಮುನ್ನವೇ ಪಕ್ಷದ ರಾಷ್ಟ್ರೀಯ ಕಚೇರಿಯ ಹೊರಗೆ ಧನ್ಯವಾದಗಳ ಬ್ಯಾನರ್ ಹಾಕಿದೆ. ಅಷ್ಟು ಮಾತ್ರವಲ್ಲದೇ ಆಮ್ ಆದ್ಮಿ ಪಕ್ಷವು ಈಗಾಗಲೇ ಜಿಲೇಬಿ ಸಿದ್ಧಪಡಿಸಿದ್ದಾರೆ.

ಸದಸ್ಯರು ತಮ್ಮ ಗೆಲುವಿನ ವಿಶ್ವಾಸದಲ್ಲಿದ್ದಾರೆ. ಪಂಜಾಬ್ ಚುನಾವಣೆಯ ಚುನಾವಣೋತ್ತರ ಸಮೀಕ್ಷೆಯ ಪ್ರಕಾರ ಆಮ್ ಆದ್ಮಿ ಪಕ್ಷವು ಚುನಾವಣೆಯಲ್ಲಿ ಗೆಲ್ಲಬಹುದು ಎಂದು ಹೇಳಿದೆ. ಈ ಕಾರಣದಿಂದಾಗಿಯೇ ಗೆಲುವಿನ ಬಗ್ಗೆ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಈಗಾಗಲೇ ಎಎಪಿ ಮುನ್ನಡೆಯನ್ನು ಸಾಧಿಸಿದೆ. ಈ ನಿಟ್ಟಿನಲ್ಲಿ ಎಎಪಿ ಕಾರ್ಯಕರ್ತರು ಸಂಭ್ರಮಾಚರಣೆಗೆ ಈಗಲೇ ಸಿದ್ಧವಾಗಿದ್ದಾರೆ.

ಪಕ್ಷದ ಕಚೇರಿಯ ಹೊರಗೆ ಭಗವಂತ್ ಮಾನ್ ಅವರ ಚಿತ್ರವಿರುವ 'ಥ್ಯಾಂಕ್ಯೂ' ಎಂಬ ಬ್ಯಾನರ್ ಹಾಕಲಾಗಿದೆ. ಆದರೆ, ಬ್ಯಾನರ್ ಅನ್ನು ಇನ್ನೂ ಬಿಳಿ ಬಟ್ಟೆಯಿಂದ ಮುಚ್ಚಲಾಗಿದೆ. ಇದೇ ವೇಳೆ ಕಚೇರಿಯನ್ನು ಹೂ, ಬಲೂನ್‌ಗಳಿಂದ ಅಲಂಕರಿಸಲಾಗಿದೆ.

Punjab Election Result 2022: AAP made Jalebi, banner became special

ಎಎಪಿ ಸದಸ್ಯರು ಎಷ್ಟು ಉತ್ಸುಕರಾಗಿದ್ದಾರೆ ಮತ್ತು ಸಂತೋಷವಾಗಿದ್ದಾರೆ ಎಂದು ಸೂಚಿಸುವಂತೆ ಸಿಹಿ ಖಾದ್ಯ ಜಿಲೇಬಿಯನ್ನು ಸಹ ತಯಾರಿಸಲಾಗುತ್ತಿದೆ. ಅಲ್ಲದೆ, ಆಮ್ ಆದ್ಮಿ ಪಕ್ಷದ ಸಿಎಂ ಅಭ್ಯರ್ಥಿ ಭಗವಂತ್ ಮಾನ್ ಅವರ ಸಂಗ್ರೂರಿನ ನಿವಾಸವನ್ನು ಹೂವಿನಿಂದ ಅಲಂಕರಿಸಲಾಗಿದೆ.

ಪಂಜಾಬ್ ವಿಧಾನಸಭಾ ಚುನಾವಣೆಯ ಮತ ಎಣಿಕೆ ಬೆಳಗ್ಗೆ 8 ಗಂಟೆಗೆ ಆರಂಭವಾಗಿದೆ. ರಾಜ್ಯದ ಒಟ್ಟು 117 ವಿಧಾನಸಭಾ ಸ್ಥಾನಗಳಲ್ಲಿ ಅಭ್ಯರ್ಥಿಯ ಭವಿಷ್ಯ ಪ್ರಕಟವಾಗಲಿದೆ. ಫೆಬ್ರವರಿ 20 ರಂದು ಪಂಜಾಬ್‌ನಲ್ಲಿ ಮತದಾನ ನಡೆದಿತ್ತು. ಒಟ್ಟು 1304 ಅಭ್ಯರ್ಥಿಗಳು ಚುನಾವಣೆಯಲ್ಲಿ ಭಾಗವಹಿಸಿದ್ದಾರೆ. ಇದರಲ್ಲಿ 1209 ಪುರುಷರು ಮತ್ತು 93 ಮಹಿಳಾ ಅಭ್ಯರ್ಥಿಗಳು ಮತ್ತು ಇಬ್ಬರು ಅಭ್ಯರ್ಥಿಗಳು ಮಂಗಳಮುಖಿಯರು ಆಗಿದ್ದಾರೆ.

ಪಂಜಾಬ್‌ ವಿಧಾನಸಭೆ ಚುನಾವಣೆ

ಪಂಜಾಬ್‌ನ 117 ವಿಧಾನಸಭೆ ಕ್ಷೇತ್ರಗಳಿಗೆ ಒಂದೇ ಹಂತದಲ್ಲಿ ಮತದಾನ ನಡೆಸಲಾಗಿದೆ. ಪಂಜಾಬ್‌ ವಿಧಾನಸಭೆ ಚುನಾವಣೆಯು ಫೆಬ್ರವರಿ 20ರಂದು ನಡೆದಿದೆ. ಪಂಜಾಬ್‌ ಹೊರತಾಗಿ ನಾಲ್ಕು ರಾಜ್ಯಗಳಲ್ಲೂ ವಿಧಾನಸಭೆ ಚುನಾವಣೆ ನಡೆದಿದೆ. ಉತ್ತರ ಪ್ರದೇಶ, ಗೋವಾ, ಉತ್ತರಾಖಂಡ ಮತ್ತು ಮಣಿಪುರದಲ್ಲೂ ಚುನಾವಣೆ ನಡೆದಿದೆ. ಉತ್ತರ ಪ್ರದೇಶದಲ್ಲಿ ಫೆಬ್ರವರಿ 10, 14, 20, 23, 27 ಮತ್ತು ಮಾರ್ಚ್ 3, 7 ರಂದು ಚುನಾವಣೆ ನಡೆದಿದೆ. ಗೋವಾ ಮತ್ತು ಉತ್ತರಾಖಂಡದಲ್ಲಿ ಫೆಬ್ರವರಿ 14 ರಂದು ಮತದಾನ ನಡೆದಿದೆ. ಪಂಜಾಬ್‌ನಲ್ಲಿ ಫೆಬ್ರವರಿ 20 ರಂದು ಮತದಾನ ನಡೆಯಲಿದೆ. ಮಣಿಪುರದಲ್ಲಿ ಫೆಬ್ರವರಿ 28 ಮತ್ತು ಮಾರ್ಚ್ 5 ರಂದು ಎರಡು ಹಂತಗಳಲ್ಲಿ ಮತದಾನ ನಡೆದಿದೆ.

2017 ರ ಪಂಜಾಬ್ ವಿಧಾನಸಭೆ ಚುನಾವಣೆಯಲ್ಲಿ, 117 ವಿಧಾನಸಭೆ ಕ್ಷೇತ್ರಗಳ ಪೈಕಿ ಕಾಂಗ್ರೆಸ್ 77 ಸ್ಥಾನಗಳನ್ನು ಗೆದ್ದುಕೊಂಡಿದೆ. ಭಾರತೀಯರ ಜನತಾ ಪಾರ್ಟಿ (ಬಿಜೆಪಿ) ಕೇವಲ ಮೂರು ಸ್ಥಾನಗಳನ್ನು ತನ್ನದಾಗಿಸಿಕೊಂಡಿದೆ. ಶಿರೋಮಣಿ ಅಕಾಲಿದಳವು ಕೇವಲ 15 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದೆ. ಮತ್ತೊಂದೆಡೆ, ಎಎಪಿ 20 ಸ್ಥಾನಗಳೊಂದಿಗೆ ಎರಡನೇ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಲೋಕ ಇನ್ಸಾಫ್‌ ಪಕ್ಷವು ಎರಡು ಕ್ಷೇತ್ರಗಳಲ್ಲಿ ಜಯ ಗಳಿಸಿದೆ. ಪಂಜಾಬ್‌ನಲ್ಲಿ ಯಾವುದೇ ಪಕ್ಷ ಅಧಿಕಾರ ಸ್ಥಾಪಿಸಲು ಬೇಕಿರುವ ಮ್ಯಾಜಿಕ್ ನಂಬರ್ 59.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+