ತಪ್ಪೊಪ್ಪಿಕೊಂಡ ಪಂಜಾಬ್ ಸಿಎಂ ಸೋದರಳಿಯ: ED

ಚಂಡೀಗಢ, ಫೆಬ್ರವರಿ 8: ಮರಳು ಮಾಫಿಯಾ ಪ್ರಕರಣಕ್ಕೆ ಸಂಬಂಧಿಸಿದಂತೆ ಪಂಜಾಬ್ ಸಿಎಂ ಚರಣ್‌ಜಿತ್‌ ಸಿಂಗ್‌ ಚನ್ನಿ ಅವರ ಸೋದರಳಿಯ ಭೂಪಿಂದರ್‌ ಸಿಂಗ್‌ ತಪ್ಪೊಪ್ಪಿಕೊಂಡಿದ್ದಾರೆ ಎಂದು ಜಾರಿ ನಿರ್ದೇಶನಾಲಯ ಹೇಳಿಕೊಂಡಿದೆ.

ಗಣಿಗಾರಿಕೆ ಅಧಿಕಾರಿಗಳ ವರ್ಗಾವಣೆ ಮತ್ತು ನಿಯೋಜನೆ ಮತ್ತು ಮರಳು ಮಾಫಿಯಾದಿಂದ 10 ಕೋಟಿ ರೂಪಾಯಿ ಹಣ ಪಡೆದಿರುವುದಾಗಿ ಕಸ್ಟಡಿ ವಿಚಾರಣೆ ವೇಳೆ ಭೂಪಿಂದರ್ ಸಿಂಗ್ ಹನಿ ಒಪ್ಪಿಕೊಂಡಿದ್ದಾರೆ ಎಂದು ಜಾರಿ ನಿರ್ದೇಶನಾಲಯ ಸ್ಪಷ್ಟನೆ ನೀಡಿದೆ.

ಪಂಜಾಬ್‌ನಲ್ಲಿ ಚುನಾವಣೆಗೆ 13 ದಿನಗಳು ಬಾಕಿ ಉಳಿದಿದ್ದು, ಅದಕ್ಕೂ ಮುನ್ನವೇ ಜಾರಿ ನಿರ್ದೇಶನಾಲಯ ಈ ವಿಚಾರವನ್ನು ಬಹಿರಂಗಪಡಿಸಿದೆ. ಈ ವಿಚಾರದ ಪಂಜಾಬ್ ಸಿಎಂ ಮತ್ತು ಅವರ ಪಕ್ಷಕ್ಕೆ ಭಾರಿ ಹೊಡೆತವನ್ನು ನೀಡಬಹುದು ಎಂದು ಹೇಳಲಾಗುತ್ತಿದೆ.

Punjab CMs Nephew Accepts He Got Rs 10 Crore Cash For Sand Mining, Transfer In State: ED

ಪಂಜಾಬ್‌ನಲ್ಲಿ ಮರಳು ಗಣಿಗಾರಿಕೆ ನಡೆಸಲಾಗುತ್ತಿದೆ ಎಂದು ಆರೋಪಿಸಿ ಹಣ ವರ್ಗಾವಣೆ ಪ್ರಕರಣವನ್ನು ದಾಖಲಿಸಿಕೊಂಡಿದ್ದ ಜಾರಿ ನಿರ್ದೇಶನಾಲಯ ಜಲಂಧರ್​ನಲ್ಲಿ ದಾಳಿ ನಡೆಸಿ, ಫೆಬ್ರವರಿ 3ರಂದು ಭೂಪಿಂದರ್ ಸಿಂಗ್ ಅವರನ್ನು ಬಂಧಿಸಿತ್ತು.

ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಪಂಜಾಬ್ ಮುಖ್ಯಮಂತ್ರಿ ಚರಣ್‌ಜಿತ್ ಸಿಂಗ್ ಚನ್ನಿ ಅವರ ಸೋದರಳಿಯ ಭೂಪಿಂದರ್ ಸಿಂಗ್ ಹನಿ ಅವರನ್ನು ಜಾರಿ ನಿರ್ದೇಶನಾಲಯ (ಇಡಿ) ಗುರುವಾರ ಸಂಜೆ ಬಂಧಿಸಿದೆ. ಜಲಂಧರ್‌ನಲ್ಲಿರುವ ಇಡಿ ಕಚೇರಿಯಲ್ಲಿ ಭೂಪಿಂದರ್ ಸಿಂಗ್ ಹನಿ ವಿಚಾರಣೆಗೆ ಒಳಪಡಿಸಲಾಗಿತ್ತು.ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆಯ (ಪಿಎಂಎಲ್‌ಎ) ಅನ್ವಯ ಬಂಧನಾವಾಗಿದೆ. ನಂತರ ಅವರನ್ನು ಮೊಹಾಲಿಯ ವಿಶೇಷ ನ್ಯಾಯಾಲಯದ ಮುಂದೆ ಹಾಜರುಪಡಿಸುವ ಸಾಧ್ಯತೆಯಿದೆ.

ಅಕ್ರಮ ಮರಳು ಗಣಿಗಾರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಭೂಪಿಂದರ್ ಸಿಂಗ್ ಹನಿ ಮತ್ತು ಇತರರ ವಸತಿ ಆವರಣದಲ್ಲಿ 10 ಕೋಟಿಗೂ ಹೆಚ್ಚು ಹಣ, 21 ಲಕ್ಷಕ್ಕೂ ಹೆಚ್ಚು ಮೌಲ್ಯದ ಚಿನ್ನ ಮತ್ತು 12 ಲಕ್ಷ ರೂಪಾಯಿ ಮೌಲ್ಯದ ರೋಲೆಕ್ಸ್ ವಾಚ್ ವಶಪಡಿಸಿಕೊಂಡ 20 ದಿನಗಳ ನಂತರ ಇಡಿ ಈ ಕ್ರಮ ಕೈಗೊಂಡಿದೆ.

ಮೊಹಾಲಿ, ಲುಧಿಯಾನ, ರೂಪನಗರ, ಫತೇಘರ್ ಸಾಹಿಬ್ ಮತ್ತು ಪಠಾಣ್‌ಕೋಟ್‌ನಲ್ಲಿ ಹನ್ನೆರಡು ಸ್ಥಳಗಳಲ್ಲಿ ಆರೋಪಿಗಳು ಮತ್ತು ಅವರ ಸಹಚರರ ವ್ಯಾಪಾರ ಮತ್ತು ವಸತಿ ಆವರಣದಲ್ಲಿ ನಡೆಸಿದ ಎರಡು ದಿನಗಳ ದಾಳಿಯನ್ನು ಮುಕ್ತಾಯಗೊಳಿಸಿದ ನಂತರ ಇಡಿ ವಸೂಲಾತಿಗಳನ್ನು ಘೋಷಿಸಿದೆ.

ಇಡಿ ದಾಳಿ ಕುರಿತು ಪ್ರತಿಕ್ರಿಯಿಸಿದ ಸಿಎಂ ಚನ್ನಿ, ಮಾಧ್ಯಮ ಪ್ರತಿನಿಧಿಗಳೊಂದಿಗೆ ನಡೆಸಿದ ಸಂವಾದದಲ್ಲಿ, ಇದು ನನ್ನನ್ನು, ನನ್ನ ಮಂತ್ರಿಗಳನ್ನು ಮತ್ತು ಕಾಂಗ್ರೆಸ್ ಕಾರ್ಯಕರ್ತರನ್ನು ಗುರಿಯಾಗಿಸುವ ಪ್ರಯತ್ನವನ್ನು ಹೊರತುಪಡಿಸಿ ಬೇರೇನೂ ಅಲ್ಲ. ಇಡಿ ಕ್ರಮವು ಪ್ರಧಾನಿ ಭದ್ರತಾ ಉಲ್ಲಂಘನೆಯ ಘಟನೆಗೆ ಪ್ರತೀಕಾರವಾಗಿರಬಹುದು ಎಂದು ಅವರು ಆರೋಪಿಸಿದ್ದಾರೆ.

ಫೆಡರಲ್ ಏಜೆನ್ಸಿ ಜನವರಿ 18 ಮತ್ತು 19 ರಂದು ಪಿಂಜೋರ್ ರಾಯಲ್ಟಿ ಕಂಪನಿಯ ಮಾಲೀಕ ಕುದ್ರತ್‌ದೀಪ್ ಸಿಂಗ್ ಮತ್ತು ಅವರ ಪಾಲುದಾರರು ಮತ್ತು ಷೇರುದಾರರಾದ ಕನ್ವರ್ಮಹಿಪ್ ಸಿಂಗ್, ಮನ್‌ಪ್ರೀತ್ ಸಿಂಗ್, ಸುನೀಲ್ ಕುಮಾರ್ ಜೋಶಿ, ಜಗವೀರ್ ಇಂದರ್ ಸಿಂಗ್ ಸೇರಿದಂತೆ ಆರೋಪಿಗಳು ಮತ್ತು ಅವರ ಸಹಚರರ ಆವರಣಗಳ ಮೇಲೆ ದಾಳಿ ನಡೆಸಿತ್ತು.

ಪ್ರೊವೈಡರ್ಸ್ ಓವರ್‌ಸೀಸ್ ಕನ್ಸಲ್ಟೆಂಟ್ಸ್ ಪ್ರೈವೇಟ್ ಲಿಮಿಟೆಡ್‌ನ ಮಾಲೀಕ ರಣದೀಪ್ ಸಿಂಗ್ ಮತ್ತು ಭೂಪಿಂದರ್ ಸಿಂಗ್ ಮತ್ತು ಸಂದೀಪ್ ಕುಮಾರ್ ಸೇರಿದಂತೆ ಅದರ ಇತರ ನಿರ್ದೇಶಕರು ಮತ್ತು ಷೇರುದಾರರ ಆವರಣದಲ್ಲಿಯೂ ದಾಳಿ ನಡೆಸಲಾಯಿತು. ದಾಳಿಯಲ್ಲಿ ಮೊಹಾಲಿಯ ಸೆಕ್ಟರ್-70 ನಲ್ಲಿರುವ ಭೂಪಿಂದರ್ ಸಿಂಗ್ ಹನಿ ಹೋಮ್‌ಲ್ಯಾಂಡ್ ಹೈಟ್ಸ್ ಸೊಸೈಟಿ ನಿವಾಸ ಕೂಡ ಸೇರಿತ್ತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+