ಹರ್ಯಾಣ; ಶಂಕಿತ ಖಲಿಸ್ತಾನಿ ಭಯೋತ್ಪಾದಕ ವಶಕ್ಕೆ

ಚಂಡೀಗಢ್, ಮೇ 23: ಪರ್ಮಿಂದರ್ ಸಿಂಗ್ ಎಂಬ ಶಂಕಿತ ಖಲಿಸ್ತಾನಿ ಭಯೋತ್ಪಾದಕನನ್ನು ಹರ್ಯಾಣದ ಅಪರಾಧ ತನಿಖಾ ಸಂಸ್ಥೆ (ಸಿಐಎ) ವಶಕ್ಕೆ ಪಡೆದಿದೆ. ನಕಲಿ ನೋಂದಣಿ ಪ್ರಮಾಣಪತ್ರಗಳೊಂದಿಗೆ ಎರಡು ಎಸ್‌ಯುವಿಗಳನ್ನು ವಶಪಡಿಸಿಕೊಂಡಿದ್ದು, ಈ ಕುರಿತು ತನಿಖೆ ಕೈಗೊಂಡಿದೆ.

ಮೇ 5 ರಂದು ಕರ್ನಾಲ್‌ನಲ್ಲಿ ಸ್ಫೋಟಕಗಳು ಮತ್ತು ಶಸ್ತ್ರಾಸ್ತ್ರಗಳೊಂದಿಗೆ ಹರ್ಯಾಣ ಪೊಲೀಸರು ಬಂಧಿಸಿದ ನಾಲ್ವರು ಖಾಲಿಸ್ತಾನಿ ಭಯೋತ್ಪಾದಕರಲ್ಲಿ ಪರ್ಮಿಂದರ್ ಸೇರಿದ್ದಾರೆ. ಪೊಲೀಸರು ಮೊದಲು ಎಲ್ಲಾ ನಾಲ್ವರು ಆರೋಪಿಗಳ ವಿಚಾರಣೆಯನ್ನು ಪೂರ್ಣಗೊಳಿಸಿದ್ದರು ಮತ್ತು ಅವರನ್ನು ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿತ್ತು.

ಈಗಾಗಲೇ ಬಂಧಿತರಾಗಿರುವ ಪಂಜಾಬ್‌ನ ಅಂಬಾಲಾದ ನಿತಿನ್ ಮತ್ತು ಖರಾರ್‌ನ ಸಂದೀಪ್ ಬಳಿ ಪರ್ಮಿಂದರ್ ನಕಲಿ ನೋಂದಣಿ ಸಂಖ್ಯೆಗಳನ್ನು ಹೊಂದಿರುವ ಎರಡು ಎಸ್‌ಯುವಿಗಳನ್ನು ಖರೀದಿಸಿದ್ದಾರೆ ಎಂದು ತನಿಖಾಧಿಕಾರಿಗಳು ಹೇಳಿದ್ದಾರೆ.

Haryana CIA Detains Suspected Khalistani Terrorist

ಪಂಜಾಬ್‌ನಲ್ಲಿ ನಕಲಿ ನೋಂದಣಿ ಸಂಖ್ಯೆಯೊಂದಿಗೆ ಬಳಸುತ್ತಿದ್ದ ಎಸ್‌ಯುವಿಯನ್ನು ಈಗಾಗಲೇ ವಶಪಡಿಸಿಕೊಳ್ಳಲಾಗಿದೆ ಎಂದು ಉಸ್ತುವಾರಿ CIA-II ಮೋಹನ್ ಲಾಲ್ ಹೇಳಿದ್ದಾರೆ. ಎರಡನೇ ವಾಹನವನ್ನು ಪಂಜಾಬ್ ಪೊಲೀಸರು ಈ ಹಿಂದೆ ವಶಪಡಿಸಿಕೊಂಡಿದ್ದರು ಎಂದು ಹೇಳಿದರು.

Haryana CIA Detains Suspected Khalistani Terrorist

ಪೊಲೀಸರ ಪ್ರಕಾರ ನಿತಿನ್ ಮತ್ತು ಸಂದೀಪ್ ಉತ್ತರ ಪ್ರದೇಶದ ಪವನ್ ಎಂಬುವವರಿಂದ ನಕಲಿ ನೋಂದಣಿ ಮತ್ತು ಚಾಸಿ ನಂಬರ್ ಹೊಂದಿರುವ ವಾಹನಗಳನ್ನು ಖರೀದಿಸಿ ಮುಂದೆ ಮಾರಾಟ ಮಾಡುತ್ತಿದ್ದರು ಎಂದು ತನಿಖೆಯಲ್ಲಿ ತಿಳಿದುಬಂದಿದೆ. ಆದರೆ, ಪವನ್ ತಲೆಮರೆಸಿಕೊಂಡಿದ್ದು, ಆತನನ್ನು ಹಿಡಿಯುವ ಪ್ರಯತ್ನ ನಡೆಯುತ್ತಿದೆ ಎಂದು ಹೇಳಿವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+