ಬಿಜೆಪಿ ಶಾಸಕನನ್ನು ಥಳಿಸಿದ ಪ್ರತಿಭಟನಾನಿರತ ರೈತರು

ಚಂಡೀಗಢ, ಮಾರ್ಚ್ 28: ಕೃಷಿ ಕಾಯ್ದೆ ವಿರೋಧಿಸಿ ಪ್ರತಿಭಟನೆ ನಡೆಸುತ್ತಿರುವ ರೈತರು ಪಂಬಾಜ್‌ನಲ್ಲಿ ಬಿಜೆಪಿ ಶಾಸಕನಿಗೆ ಥಳಿಸಿದ್ದಾರೆ. ಕಾಂಗ್ರೆಸ್ ಈ ದಾಳಿಯನ್ನು ಖಂಡಿಸಿದೆ.

ಬಿಜೆಪಿಯ ಅಬೋರ್ ಕ್ಷೇತ್ರದ ಶಾಸಕ ಅರುಣ್ ನಾರಂಗ್ ಮೇಲೆ ರೈತರು ಹಲ್ಲೆ ಮಾಡಿದ್ದು, ಶರ್ಟ್ ಹರಿದು ಹಾಕಿದ್ದಾರೆ. ಶಾಸಕರ ಮೇಲೆ ಮಸಿಯನ್ನು ಎರಚಿದ್ದಾರೆ.

ಪಂಜಾಬ್‌ನಲ್ಲಿನ ಅಕಾಲಿದಳ ಮತ್ತು ಕಾಂಗ್ರೆಸ್ ಈ ಘಟನೆಯನ್ನು ಖಂಡಿಸಿವೆ. ಇಂತಹ ಘಟನೆಗಳಿಂದ ರೈತರ ಹೋರಾಟದ ಶಕ್ತಿಯನ್ನು ಕುಗ್ಗಿಸಲಿವೆ ಎಂದು ಹೇಳಿದ್ದಾರೆ.

 Farmers Thrashed BJP MLA In Panjab

ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಲು ಶಾಸಕ ಅರುಣ್ ನಾರಂಗ್ ಹೋಗುತ್ತಿದ್ದರು. ಆಗ ರೈತ ಸಂಘಟನೆಗಳ ಸದಸ್ಯರು ಅವರನ್ನು ಸುತ್ತುವರೆದಿದ್ದಾರೆ. ಅವರ ಮೇಲೆ ಮಸಿಯನ್ನು ಎರಚಿದ್ದಾರೆ.

ತಕ್ಷಣ ಪೊಲೀಸರು ಶಾಸಕರನ್ನು ಸ್ಥಳೀಯ ಅಂಗಡಿಯೊಂದಕ್ಕೆ ಕರೆದುಕೊಂಡು ಹೋದರು. ಅವರು ಅಂಗಡಿಯಿಂದ ಹೊರಬರುತ್ತಿದ್ದಂತೆ ಮತ್ತೆ ಸುತ್ತುವರೆದ ಗುಂಪು ಅವರ ಮೇಲೆ ಹಲ್ಲೆ ಮಾಡಿದೆ, ಶರ್ಟ್ ಹರಿದು ಹಾಕಿದೆ.

 Farmers Thrashed BJP MLA In Panjab

ಶಾಸಕರು ಪತ್ರಿಕಾಗೋಷ್ಠಿ ಮಾಡುವುದಕ್ಕೆ ರೈತ ಸಂಘದ ಸದಸ್ಯರು ವಿರೋಧ ಮಾಡುತ್ತಿದ್ದರು. ಇಂತಹ ಸಂದರ್ಭದಲ್ಲಿ ಈ ಗಲಾಟೆ ನಡೆದಿದೆ ಎಂದು ಪೊಲೀಸರು ಹೇಳಿದ್ದಾರೆ. "ನನ್ನ ಮೇಲೆ ಕೆಲವರು ಹಲ್ಲೆ ಮಾಡಿದರು, ಬಟ್ಟೆ ಹರಿದು ಹಾಕಿದರು" ಎಂದು ಶಾಸಕ ಅರುಣ್ ನಾರಂಗ್ ಹೇಳಿದ್ದಾರೆ.

ಕೊಲೆ ಪ್ರಯತ್ನ ಆರೋಪದ ಅಡಿಯಲ್ಲಿ 250 ರಿಂದ 300 ಜನರ ಮೇಲೆ ಪೊಲೀಸರು ಎಫ್‌ಐಆರ್ ದಾಖಲು ಮಾಡಿಕೊಂಡಿದ್ದಾರೆ. ಗುಂಪಿನಲ್ಲಿದ್ದ ರೈತರನ್ನು ಗುರುತಿಸಲು ಪೊಲೀಸರು ತನಿಖೆಯನ್ನು ಕೈಗೊಂಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+