ಸೋನಾಲಿ ಫೋಗಟ್ ಸಾವಿನ ಬಗ್ಗೆ ಅನುಮಾನ: ಮರಣೋತ್ತರ ಪರೀಕ್ಷೆಯ ವಿಡಿಯೊಗ್ರಫಿಗೆ ಪೊಲೀಸರು ಆದೇಶ
ಚಂಡೀಗಢ ಆಗಸ್ಟ್ 24: ಗೋವಾದಲ್ಲಿ ಸೋನಾಲಿ ಫೋಗಟ್ ಹಠಾತ್ ನಿಧನರಾದ ರೀತಿಗೆ ಎಲ್ಲರೂ ಶಾಕ್ ಆಗಿದ್ದಾರೆ. ವರದಿಗಳ ಪ್ರಕಾರ, ಸೋನಾಲಿ ಫೋಗಟ್ ಹೃದಯಾಘಾತದಿಂದ ಆಗಸ್ಟ್ 23 ರಂದು ಗೋವಾದಲ್ಲಿ ನಿಧನರಾದರು. ಸೋನಾಲಿ ತನ್ನ ಕೆಲವು ಸಿಬ್ಬಂದಿಯೊಂದಿಗೆ ಆಗಸ್ಟ್ 22 ರಂದು ಗೋವಾಕ್ಕೆ ಹೋಗಿದ್ದರು. ಸೋನಾಲಿ ರಾತ್ರಿ ತನ್ನ ಸ್ನೇಹಿತರೊಂದಿಗೆ ಪಾರ್ಟಿಗೆ ಹೋಗಿದ್ದರು. ಆದರೆ ಮರುದಿನ ಆಕೆಗೆ ಹೃದಯಾಘಾತವಾಯಿತು. ನಂತರ ಸೋನಾಲಿಯನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಅಲ್ಲಿ ಅವರು ಸಾವನ್ನಪ್ಪಿರುವುದಾಗಿ ವೈದ್ಯರು ತಿಳಿಸಿದ್ದಾರೆ. ಸಾವಿನ ಬಗ್ಗೆ ಸೋನಾಲಿ ಸಹೋದರಿ ಅನುಮಾನ ವ್ಯಕ್ತಪಡಿಸಿದ್ದಾರೆ.
ಸೋನಾಲಿ ಸಾವಿನ ಬಗ್ಗೆ ಪ್ರಶ್ನೆಗಳು ಎದ್ದಿರುವ ಮಧ್ಯೆ, ಸೋನಾಲಿಯ ಮರಣೋತ್ತರ ಪರೀಕ್ಷೆಯನ್ನು ವಿಡಿಯೊಗ್ರಾಫ್ ಮಾಡುವಂತೆ ಪೊಲೀಸರು ಆದೇಶಿಸಿದ್ದಾರೆ. ಸೋನಾಲಿಯ ಮರಣೋತ್ತರ ಪರೀಕ್ಷೆ ಇನ್ನೂ ಆರಂಭವಾಗಿಲ್ಲ. ಇಬ್ಬರು ವೈದ್ಯರ ತಂಡ ಸೋನಾಲಿಯ ಮರಣೋತ್ತರ ಪರೀಕ್ಷೆ ನಡೆಸಲಿದೆ. ಪೊಲೀಸರ ಆದೇಶದ ಪ್ರಕಾರ ಈ ಸಂಪೂರ್ಣ ಪ್ರಕ್ರಿಯೆಯ ಮರಣೋತ್ತರ ಪರೀಕ್ಷೆ ನಡೆಯಲಿದೆ. ಸೋನಾಲಿಯ ಒಳಾಂಗಗಳನ್ನು ವಿಧಿವಿಜ್ಞಾನ ತಜ್ಞರಿಗೆ ಕಳುಹಿಸಲಾಗುವುದು. ಪೊಲೀಸರು ಇಂದು ಗೋವಾ ಮೆಡಿಕಲ್ ಕಾಲೇಜಿಗೆ ತಲುಪಲಿದ್ದು, ಈ ಸಮಯದಲ್ಲಿ ಸೋನಾಲಿ ಅವರ ಕುಟುಂಬ ಸದಸ್ಯರು ಸಹ ಇರಲಿದ್ದಾರೆ ಎನ್ನಲಾಗುತ್ತಿದೆ.

ವರ್ಷದ ಮಗಳನ್ನು ಅಗಲಿದ ಸೋನಾಲಿ
ಸೋನಾಲಿ ಫೋಗಾಗ್ ಬಿಗ್ ಬಾಸ್ 14 ರಲ್ಲಿ ಕಾಣಿಸಿಕೊಂಡು ಇಲ್ಲಿಂದ ಅವರು ಸಾಕಷ್ಟು ಜನಪ್ರಿಯತೆಯನ್ನು ಪಡೆದರು. ಇದಲ್ಲದೆ ಅವರು ಟಿಕ್‌ಟಾಕ್‌ನಲ್ಲಿಯೂ ಬಹಳ ಜನಪ್ರಿಯರಾಗಿದ್ದರು. ಸೋನಾಲಿ ಫೋಗಟ್ ಅವರು ಫತೇಹಾಬಾದ್ ಜಿಲ್ಲೆಯ ಭೂತಾನ್ ಗ್ರಾಮದವರು. ಅವರು ಈಗಾಗಲೇ ನಿಧನರಾದ ಹಿಸಾರ್‌ನ ಸಂಜಯ್ ಫೋಗಟ್ ಅವರನ್ನು ವಿವಾಹವಾಗಿದ್ದರು. ಸಂಜಯ್ ಫೋಗಟ್ ಡಿಸೆಂಬರ್ 2016 ರಲ್ಲಿ ಅನುಮಾನಾಸ್ಪದವಾಗಿ ನಿಧನರಾಗಿದ್ದರು. ಈ ವೇಳೆ ಸೋನಾಲಿ ಮುಂಬೈನಲ್ಲಿದ್ದರು. ಸೋನಾಲಿಗೆ 7 ವರ್ಷದ ಮಗಳಿದ್ದಾಳೆ.

ರಾಜಕೀಯ, ನಟನೆಯಲ್ಲಿ ಸೋನಾಲಿ
ಸೋನಾಲಿ ನಟಿಯಾಗಬೇಕೆಂದು ಬಯಸಿದ್ದರು. ಅವರು ಹರ್ಯಾನ್ವಿ ಕಾರ್ಯಕ್ರಮಗಳ ನಿರೂಪಣೆಯೊಂದಿಗೆ ಟಿವಿಯಲ್ಲಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು. 8 ವರ್ಷಗಳ ಕಾಲ ಪ್ರದರ್ಶನವನ್ನು ಪ್ರಸ್ತುತಪಡಿಸಿದರು. ಇದರ ನಂತರ ಅವರು ಜೀ ಟಿವಿಯಲ್ಲಿ ಅಮ್ಮ ಧಾರಾವಾಹಿಯಲ್ಲಿ ದೊಡ್ಡ ಅಭಿಮಾನಿಗಳನ್ನು ಪಡೆದರು. ಇದರಲ್ಲಿ ಅವರು ನವಾಬ್ ಶಾ ಅವರ ಹೆಂಡತಿಯ ಪಾತ್ರವನ್ನು ಮಾಡಿದ್ದಾರೆ. ಈ ಧಾರಾವಾಹಿ ಭಾರತ-ಪಾಕಿಸ್ತಾನ ವಿಭಜನೆಯನ್ನು ಆಧರಿಸಿದೆ. ಸೋನಾಲಿ ಸೋಷಿಯಲ್ ಮೀಡಿಯಾದಲ್ಲಿ ತುಂಬಾ ಜನಪ್ರಿಯರಾಗಿದ್ದಾರೆ. ನಂತರ ಅವರು ರಾಜಕೀಯಕ್ಕೆ ಕಾಲಿಟ್ಟ ಅವರು ಭಾರತೀಯ ಜನತಾ ಪಕ್ಷಕ್ಕೆ ಸೇರಿದರು. ಅವರನ್ನು ಆದಂಪುರದಿಂದ ಪಕ್ಷ ನಾಮಕರಣ ಮಾಡಿತ್ತು.

ಜಾರ್ಖಂಡ್ ನಲ್ಲಿ ಆದಿವಾಸಿಗಳ ಪರ ಕೆಲಸ
ಸೋನಾಲಿ ಫೋಗಟ್ ಅವರು ಭಾರತೀಯ ಜನತಾ ಪಕ್ಷದ ಮಹಿಳಾ ಮೋರ್ಚಾದ ರಾಷ್ಟ್ರೀಯ ಉಪಾಧ್ಯಕ್ಷರಾಗಿದ್ದರು. ಅವರಿಗೆ ಹರಿಯಾಣ, ದೆಹಲಿ, ಚಂಡೀಗಢದ ನಿಗದಿತ ಪ್ರವಾಸ ವಿಭಾಗದ ಜವಾಬ್ದಾರಿಯನ್ನು ಸಹ ನೀಡಲಾಯಿತು. ಬಿಜೆಪಿಯ ರಾಷ್ಟ್ರೀಯ ಕಾರ್ಯಕಾರಿ ಸಮಿತಿ ಸದಸ್ಯರಾಗಿಯೂ ಅವರು ಆಯ್ಕೆಯಾಗಿದ್ದರು. ಮಧ್ಯಪ್ರದೇಶ, ಜಾರ್ಖಂಡ್ ನಲ್ಲಿ ಆದಿವಾಸಿಗಳ ಪರ ಕೆಲಸ ಮಾಡಿದ್ದರು. 2019ರ ಹರ್ಯಾಣ ವಿಧಾನಸಭಾ ಚುನಾವಣೆಯಲ್ಲಿ ಸೋನಾಲಿ ಕುಲದೀಪ್ ಬಿಷ್ಣೋಯ್ ವಿರುದ್ಧ ಸ್ಪರ್ಧಿಸಿದ್ದರು. ಆದರೆ ಜಯ ಸಾಧಿಸಲಿಲ್ಲ.

ಅಧಿಕಾರಿಯೊಬ್ಬರಿಗೆ ಸೋನಾಲಿ ಫೋಗಟ್ ಚಪ್ಪಲಿ ಏಟು
ಸೋನಾಲಿ ಫೋಗಟ್‌ಗೆ ಯಶೋಧರ ಫೋಗಟ್ ಎಂಬ ಮಗಳಿದ್ದಾಳೆ. ಸೋನಾಲಿ ಮತ್ತು ಸಂಜಯ್ ಫೋಗಟ್ ಅವರ ಏಕೈಕ ಪುತ್ರಿ ಯಶೋಧರ ಫೋಗಟ್ ಹಾಸ್ಟೆಲ್‌ನಲ್ಲಿಯೇ ಹೈಸ್ಕೂಲ್ ಓದುತ್ತಿದ್ದಾರೆ. ಬಿಗ್ ಬಾಸ್-14 ರಲ್ಲಿ ಸೋನಾಲಿ ಮಗಳು ಕೂಡ ತನ್ನ ತಾಯಿಯನ್ನು ಭೇಟಿಯಾಗಲು ಬಂದಿದ್ದಳು. ಸೋನಾಲಿ ಆಗಾಗ್ಗೆ ತನ್ನ ಇನ್ಸ್ಟಾಗ್ರಾಮ್ನಲ್ಲಿ ತನ್ನ ಮಗಳೊಂದಿಗೆ ವಿಡಿಯೊಗಳನ್ನು ಪೋಸ್ಟ್ ಮಾಡುತ್ತಿದ್ದರು.
ಸೋನಾಲಿ ಫೋಗಟ್ ಅವರು ಭಾರತೀಯ ಜನತಾ ಪಕ್ಷದ ಮಹಿಳಾ ಮೋರ್ಚಾದ ರಾಷ್ಟ್ರೀಯ ಕಾರ್ಯಕಾರಿ ಸಮಿತಿಯ ಉಪಾಧ್ಯಕ್ಷರಾಗಿದ್ದರು. ಎರಡು ವರ್ಷಗಳ ಹಿಂದೆ ಜೂನ್ 2020 ರಲ್ಲಿ ಅಧಿಕಾರಿಯೊಬ್ಬರಿಗೆ ಚಪ್ಪಲಿಯಿಂದ ಹೊಡೆದಾಗ ಸೋನಾಲಿ ಫೋಗಟ್ ವಿವಾದಕ್ಕೆ ಒಳಗಾಗಿದ್ದರು. ಸೋನಾಲಿ ಫೋಗಟ್ ಅವರು ಬಾಲ್ಸಾಮಂಡ್ ಮಾರುಕಟ್ಟೆ ಕಾರ್ಯದರ್ಶಿ ಸುಲ್ತಾನ್ ಸಿಂಗ್ ಅವರ ಸದಸ್ಯನನ್ನು ಚಪ್ಪಲಿಯಿಂದ ಥಳಿಸಿದ್ದರು. ಆಕೆಯ ಮೇಲೆ ದೌರ್ಜನ್ಯ ಎಸಗಿದ್ದಾರೆ ಎಂದು ಆರೋಪಿಸಿ ಥಳಿಸಿದ್ದಾರೆ.












Click it and Unblock the Notifications