Get Updates
Get notified of breaking news, exclusive insights, and must-see stories!

Breaking; ಪಾಕ್‌ ಕಡೆಯಿಂದ ಬಂದ ಡ್ರೋನ್ ಹೊಡೆದುರುಳಿಸಿದ ಸೇನೆ

ಚಂಡೀಗಢ, ಮೇ 10; ಪಾಕಿಸ್ತಾನದಿಂದ ಹೆರಾಯಿನ್ ಸರಬರಾಜು ಮಾಡುತ್ತಿದ್ದ ಡ್ರೋನ್‌ ಅನ್ನು ಭಾರತೀಯ ಯೋಧರು ಹೊಡೆದುರುಳಿಸಿದ್ದಾರೆ. ಸುಮಾರು 10 ಕೆಜಿ ಮಾದಕ ವಸ್ತುವನ್ನು 9 ಪ್ಯಾಕ್‌ಗಳಲ್ಲಿ ಡ್ರೋನ್ ಮೂಲಕ ಸಾಗಣೆ ಮಾಡಲಾಗುತ್ತಿತ್ತು.

ಅಮೃತಸರದ ಬಿಎಸ್ಎಫ್ ಡಿಐಜಿ ಬಿ. ಸಿಂಗ್ ಈ ಕುರಿತು ಮಾಹಿತಿ ನೀಡಿದರು, "ಪಾಕಿಸ್ತಾನ ಕಡೆಯಿಂದ ರಾತ್ರಿ 11.15ರ ಸುಮಾರಿಗೆ ಡ್ರೋನ್ ಹಾರಿ ಬರುವುದನ್ನು ಕಣ್ಗಾವಲು ಪಡೆ ಸಿಬ್ಭಂದಿ ಗಮನಿಸಿದ್ದರು. ತಕ್ಷಣ 9 ಸುತ್ತು ಗುಂಡು ಹಾರಿಸಿದರು" ಎಂದರು.

"ಅಮೃತಸರದಲ್ಲಿ ಅಂತರಾಷ್ಟ್ರೀಯ ಗಡಿಯ ಸಮೀಪ ನೆಲಕ್ಕೆ ಬಿದ್ದ ಡ್ರೋನ್ ಪರಿಶೀಲನೆ ನಡೆಸಿದಾಗ ಮಾದಕ ವಸ್ತು ಸಾಗಾಟ ಮಾಡುತ್ತಿರುವುದು ಬೆಳಕಿಗೆ ಬಂದಿದೆ. ಇದು ಹೆಕ್ಸಾಕಾಪ್ಟರ್ ಮಾದರಿಯ ಡ್ರೋನ್ ಆಗಿದೆ" ಎಂದು ಡಿಜಿಪಿ ಮಾಹಿತಿ ನೀಡಿದರು.

BSF Foiled Smuggling Of Heroin Through Pakistan Drone

ಡ್ರೋನ್ ಮೂಲಕ ಪಾಕಿಸ್ತಾನ ಕಡೆಯಿಂದ ಮಾದಕ ವಸ್ತು ಸಾಗಾಟ ಮಾಡಲಾಗುತ್ತಿತ್ತು. 9 ಪ್ಯಾಕ್‌ಗಳ ಮೂಲಕ ಸುಮಾರು 10 ಕೆಜಿ ಹೆರಾಯಿನ್ ಸಾಗಣೆ ಮಾಡುತ್ತಿರುವುದು ಪತ್ತೆಯಾಗಿದೆ.

ಪಂಜಾಬ್‌ನಲ್ಲಿ ಭಾರತ-ಪಾಕಿಸ್ತಾನವು 553 ಕಿ. ಮೀ. ಗಡಿಯನ್ನು ಹೊಂದಿದೆ. ಪಾಕಿಸ್ತಾನ ಮೂಲಕ ಆಗಾಗ ಡ್ರೋನ್ ಮೂಲಕ ಮಾದಕ ವಸ್ತುಗಳ ಸಾಗಾಟ ನಡೆಯುತ್ತಿದೆ. ಇದೇ ಮಾದರಿ ಕೃತ್ಯವೂ ಸೋಮವಾರ ರಾತ್ರಿ ನಡೆದಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+