ಪಂಜಾಬ್‌ನಲ್ಲಿ ಸರ್ಕಾರ ರಚಿಸಿ ಅಭಿವೃದ್ಧಿಯ ಹೊಸ ಅಧ್ಯಾಯ ಆರಂಭಿಸುತ್ತೇವೆ: ಮೋದಿ

ಚಂಡೀಗಢ, ಫೆಬ್ರವರಿ 14: ಮುಂದಿನ ವಾರ ಪಂಜಾಬ್‌ನಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಯಲ್ಲಿ ಮೈತ್ರಿಯೊಂದಿಗೆ ಸರ್ಕಾರ ರಚಿಸಿ ಅಭಿವೃದ್ಧಿಯ ಹೊಸ ಅಧ್ಯಾಯವನ್ನು ತೆರೆಯುತ್ತೇವೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ಪಂಜಾಬ್‌ನಲ್ಲಿ ನಡೆದ ಚುನಾವಣಾ ಪ್ರಚಾರದಲ್ಲಿ ಮಾತನಾಡಿದ ಅವರು, ಪಂಜಾಬ್‌ನಲ್ಲಿ ಸರ್ಕಾರ ರಚನೆ ಮಾಡಿದ ಬಳಿಕ ಪಂಜಾಬ್‌ ಅನ್ನು ಬೇರೆಯ ಹಾದಿಯಲ್ಲಿ ಕರೆದೊಯ್ಯುತ್ತೇವೆ ಎಂದರು.

ರಾಜ್ಯದ ಆಡಳಿತ ಪಕ್ಷ ಕಾಂಗ್ರೆಸ್​ ವಿರುದ್ಧ ಹರಿಹಾಯ್ದಿದ್ದಾರೆ. ಪಂಜಾಬ್​​ನಲ್ಲಿನ ಸರ್ಕಾರ ರಿಮೋಟ್ ಕಂಟ್ರೋಲ್​ ಆಧಾರದ ಮೇಲೆ ನಡೆಯುತ್ತಿದೆ. ಕಾಂಗ್ರೆಸ್​ ಕ್ಯಾಪ್ಟನ್ ಅಮರಿಂದರ್ ಸಿಂಗ್ ಅವರನ್ನು ಅವಮಾನಿಸಿದೆ ಎಂದು ಟೀಕಿಸಿದ್ದಾರೆ.

BJP-Led Alliance Will Form Next Govt In Punjab, New Chapter Of Development Will Start: PM

ಕ್ಯಾಪ್ಟನ್ ಕೇಂದ್ರ ಸರ್ಕಾರದೊಂದಿಗೆ ಕೆಲಸ ಮಾಡಿದ್ದರೆ, ಅವರು ಸಂವಿಧಾನದ ಅಡಿಯಲ್ಲಿ ಸಂಯುಕ್ತ ವ್ಯವಸ್ಥೆ ನಿಯಮದ ಮೂಲಕ ಹೋಗಲಿಲ್ಲವೇ? ಕ್ಯಾಪ್ಟನ್ ನಮ್ಮ ಮಾತನ್ನು ಕೇಳಲಿಲ್ಲ ಆದರೆ ಅವರು ಕೇಂದ್ರ ಸರ್ಕಾರ ಮಾತು ಕೇಳುತ್ತಾರೆ ಎಂದು ಅವರ ಸರ್ಕಾರಕ್ಕೆ ಅವರದೇ ಪಕ್ಷದ ಹೈ ಕಮಾಂಡ್​ ಅಡ್ಡಿ ಮಾಡಿ ಅವರನ್ನು ಅಧಿಕಾರದಿಂದ ಕೆಳಗೆ ಇಳಿಸಿದರು.

ಕಾಂಗ್ರೆಸ್‌ನ ಸ್ಥಿತಿ ನೋಡಿ. ಅವರದೇ ಪಕ್ಷ ಛಿದ್ರವಾಗುತ್ತಿದೆ. ಅವರದೇ ನಾಯಕರೇ ಅವರನ್ನು ಬಯಲಿಗೆಳೆಯುತ್ತಿದ್ದಾರೆ. ಇಷ್ಟೆಲ್ಲಾ ಆಂತರಿಕ ಕಚ್ಚಾಟವಿರುವ ಪಕ್ಷ - ಪಂಜಾಬ್‌ಗೆ ಸ್ಥಿರ ಸರ್ಕಾರ ನೀಡಬಹುದೇ? ಎಂದ ಅವರು, ಬಿಜೆಪಿಯೊಂದಿಗೆ ಹೊಸ ಪಂಜಾಬ್, ಹೊಸ ತಂಡದೊಂದಿಗೆ ಹೊಸ ಪಂಜಾಬ್ ಎಂಬ ಘೋಷಣೆಯನ್ನು ಕೂಗಿದರು.

ಪಂಜಾಬ್​​ ಜನರು ಅವಕಾಶ ನೀಡಿದರೆ, ನಾನು ಮುಂದಿನ ಐದು ವರ್ಷಗಳನ್ನು ಸಾಲ, ಭ್ರಷ್ಟಾಚಾರ ಮತ್ತು ಮಾದಕ ದ್ರವ್ಯಗಳಿಂದ ಮುಕ್ತವಾಗಿರುವ ನವ ಪಂಜಾಬ್ ಅನ್ನು ನಿರ್ಮಿಸಲು ಬಯಸುತ್ತೇವೆ ಎಂಬ ಭರವಸೆ ನೀಡಿದರು.

ರಾಜ್ಯದ ಯುವಕರಿಗೆ ಎಲ್ಲಾ ಸರ್ಕಾರಿ ಉದ್ಯೋಗಗಳಲ್ಲಿ ಶೇಕಡಾ 75 ರಷ್ಟು ಮೀಸಲಾತಿ, ಮತ್ತು ನಿರುದ್ಯೋಗ ಭತ್ಯೆ, ಮತ್ತು ಸರ್ಕಾರಿ ಉದ್ಯೋಗಗಳಲ್ಲಿ ಮಹಿಳೆಯರಿಗೆ ಶೇಕಡಾ 35 ರಷ್ಟು ಮೀಸಲಾತಿ ಸೇರಿದಂತೆ ನಿರುದ್ಯೋಗ ಭತ್ಯೆ ಸೇರಿದಂತೆ ಅನೇಕ ಭರವಸೆಗಳನ್ನು ಬಿಜೆಪಿ ಚುನಾವಣಾ ಪ್ರಣಾಳಿಕೆಯಲ್ಲಿ ತಿಳಿಸಿದೆ.

ಕಳೆದ ತಿಂಗಳ ಭದ್ರತಾ ಲೋಪದ ನಂತರ ಪಂಜಾಬ್‌ನಲ್ಲಿ ಪ್ರಧಾನಿ ತಮ್ಮ ಮೊದಲ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡುತ್ತಿದ್ದರು. ರೈತ ಪ್ರತಿಭಟನಾಕಾರರ ದಿಗ್ಬಂಧನದಿಂದಾಗಿ ಪ್ರಚಾರಕ್ಕೆ ಹೋಗುವ ಮಾರ್ಗದಲ್ಲಿ ಫ್ಲೈಓವರ್‌ನಲ್ಲಿ 20 ನಿಮಿಷಗಳ ಕಾಲ ಕಳೆಯಬೇಕಾಯಿತು.

"ನಾನು ದೇವಿ ಕಾ ತಲಾಬ್‌ಗೆ ಭೇಟಿ ನೀಡಲು ಬಯಸಿದ್ದೆ ಆದರೆ ಭದ್ರತೆಯ ಕಾರಣ ಅದನ್ನು ಅನುಮತಿಸಲಾಗುವುದಿಲ್ಲ ಎಂದು ಪಂಜಾಬ್ ಪೊಲೀಸರು ಹೇಳಿದ್ದಾರೆ. ಇದು ಪಂಜಾಬ್‌ನಲ್ಲಿ ಭದ್ರತೆಯ ಸ್ಥಿತಿಯಾಗಿದೆ" ಎಂದು ಪ್ರಧಾನಿ ಮೋದಿ ಟೀಕಿಸಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+