ಪಂಜಾಬ್‌ ಮುಂದಿನ ಸಿಎಂ ಅಭ್ಯರ್ಥಿ ಯಾರು?: ಭಗವಂತ್ ಮಾನ್ ಕಡೆಗೆ ಆಪ್ ಒಲವು

ಚಂಡಿಗಢ ಜನವರಿ 04: ಪಂಜಾಬ್ ವಿಧಾನಸಭೆ ಚುನಾವಣೆ ಗೆಲುವಿನ ನಂತರ ಎಎಪಿ ಭಗವಂತ್ ಮಾನ್ ಸಿಎಂ ಅಭ್ಯರ್ಥಿಯಾಗುವ ಸಾಧ್ಯತೆ ಇದೆ. ಪಂಜಾಬ್‌ನ ಸಂಗ್ರೂರ್ ಕ್ಷೇತ್ರದ ಆಮ್ ಆದ್ಮಿ ಪಕ್ಷದ ಲೋಕಸಭಾ ಸಂಸದ ಭಗವಂತ್ ಮಾನ್ ಮುಂಬರುವ ವಿಧಾನಸಭೆ ಚುನಾವಣೆಗೆ ಪಕ್ಷದ ಮುಖ್ಯಮಂತ್ರಿ ಅಭ್ಯರ್ಥಿಯಾಗಬಹುದು. ಮೂಲಗಳ ಪ್ರಕಾರ ಪಂಜಾಬ್ ಚುನಾವಣೆ ಎದುರಿಸಲಿರುವ ಭಗವಂತ್ ಮಾನ್ ಅವರನ್ನು ಸಿಎಂ ಮಾಡಲು ಪಕ್ಷ ಮನಸ್ಸು ಮಾಡಿದೆ.

117 ಸ್ಥಾನಗಳ ಪಂಜಾಬ್ ಚುನಾವಣೆಯಲ್ಲಿ ಸ್ಪರ್ಧಿಸಲು ಆಪ್ ಇದುವರೆಗೆ ಐದು ಪಟ್ಟಿಗಳಲ್ಲಿ 88 ಅಭ್ಯರ್ಥಿಗಳನ್ನು ಹೆಸರಿಸಿದೆ. ಕಳೆದ ತಿಂಗಳು ಪಕ್ಷದ ಪಂಜಾಬ್ ಅಧ್ಯಕ್ಷರಾದ ಮಾನ್ ಭಾರತೀಯ ಜನತಾ ಪಕ್ಷದ ನಾಯಕರೊಬ್ಬರು ತಮಗೆ (ಭಗವಂತ್ ಮಾನ್) ಕ್ಯಾಬಿನೆಟ್ ಸ್ಥಾನ ಮತ್ತು ಪಕ್ಷಕ್ಕೆ ಸೇರಲು ಹಣವನ್ನು ನೀಡುವುದಾಗಿ ಆಮಿಶ ಒಡ್ಡಿದ್ದರು ಎಂದು ಆರೋಪಿಸಿದ್ದರು.

ಬಿಜೆಪಿ ವಿರುದ್ಧ ಆರೋಪಿಸಿದ್ದ ಭಗವಂತ್ ಮಾನ್, "ಇಂದು ನಾನು ಒಂದು ದೊಡ್ಡ ವಿಷಯವನ್ನು ಬಹಿರಂಗಪಡಿಸಲಿದ್ದೇನೆ, ನಾಲ್ಕು ದಿನಗಳ ಹಿಂದೆ, ಬಿಜೆಪಿಯ ಉನ್ನತ ನಾಯಕರಿಂದ ನನಗೆ ಕರೆ ಬಂದಿತು, ಅವರು ಪಕ್ಷಕ್ಕೆ ಸೇರುವಂತೆ ಕೇಳಿದರು ಮತ್ತು ಹಣ ಮತ್ತು ಕ್ಯಾಬಿನೆಟ್ ದರ್ಜೆಯ ಸ್ಥಾನ ಎರಡನ್ನೂ ನೀಡುವುದಾಗಿ ಆಮಿಷ ಒಡ್ಡಿದರು. ಪಕ್ಷಾಂತರ ಕಾನೂನು ನನಗೆ ಅನ್ವಯಿಸುವುದಿಲ್ಲ ಮತ್ತು ನನ್ನ ಆಯ್ಕೆ ಕ್ಯಾಬಿನೆಟ್ ದರ್ಜೆಯದ್ದಾಗಿರಲಿಲ್ಲ. ಅವರು ನನ್ನ ಆಯ್ಕೆಯನ್ನೂ ಕೇಳಿದರು" ಎಂದು ಹೇಳಿದ್ದರು.

Bhagwant Mann likely to be AAPs CM candidate for Punjab elections

ಬಿಜೆಪಿಯು ಈ ಆರೋಪಗಳನ್ನು ತಳ್ಳಿಹಾಕಿದೆ. ಭಗವಂತ್ ಮಾನ್ ಅವರ ಆರೋಪಗಳಿಗೆ ಪ್ರತಿಕ್ರಿಯಿಸಿದ ಬಿಜೆಪಿಯ ಹಿರಿಯ ನಾಯಕ ವಿನೀತ್ ಜೋಶಿ, ಎಎಪಿ ಸಂಸದರು ತಮ್ಮ ಕುಡಿತದ ಚಟಕ್ಕೆ ಹೆಸರುವಾಸಿಯಾಗಿದ್ದಾರೆ ಮತ್ತು ಅವರು ಮದ್ಯದ ನಶೆಯಲ್ಲಿ ವಿವಾದಾತ್ಮಕ ಹೇಳಿಕೆಯನ್ನು ನೀಡಿರಬಹುದು ಎಂದು ವ್ಯಂಗ್ಯವಾಡಿದ್ದಾರೆ.

"ಅವರು ಮದ್ಯವ್ಯಸನಿಯಾಗಿದ್ದಾರೆ ಮತ್ತು ಅಮಲೇರಿದ ಸ್ಥಿತಿಯಲ್ಲಿ ಅನೇಕ ಪತ್ರಿಕಾಗೋಷ್ಠಿಗಳನ್ನು ಉದ್ದೇಶಿಸಿ ಮಾತನಾಡಿದ್ದಾರೆ. ಈ ವಿವಾದಾತ್ಮಕ ಹೇಳಿಕೆಯನ್ನು ನೀಡುವಾಗ ಅವರ ಕಾಲುಗಳು ನಡುಗಿರಬಹುದು" ಎಂದು ವಿನೀತ್ ಜೋಶಿ ವಾಗ್ದಾಳಿ ಮಾಡಿದ್ದರು. ಭಗವಂತ್ ಮಾನ್ ಅವರು ಮಾನಹಾನಿಕರ ಆರೋಪಗಳನ್ನು ಸಾಬೀತುಪಡಿಸಬೇಕು ಎಂದು ಅವರು ಸವಾಲು ಹಾಕಿದ್ದಾರೆ.

ಇತ್ತ ಪಂಜಾಬ್ ಕಾಂಗ್ರೆಸ್ ಮುಖ್ಯಸ್ಥ ನವಜೋತ್ ಸಿಂಗ್ ಸಿಧು ಆಪ್ ವಿರುದ್ಧ ವಾಗ್ದಾಳಿ ತೀಕ್ಷ್ಣಗೊಳಿಸಿದ್ದಾರೆ. ಅವರು ಪಂಜಾಬ್ ರಾಜ್ಯದ ಮಹಿಳೆಯರಿಗೆ ಹಲವಾರು ಉಚಿತ ಕೊಡುಗೆಗಳನ್ನು ನೀಡುವ ಬಗ್ಗೆ ಪ್ರಸ್ತಾಪಿಸಿದ್ದಾರೆ.

Bhagwant Mann likely to be AAPs CM candidate for Punjab elections

ಇತ್ತೀಚೆಗೆ ಅರವಿಂದ್ ಕೇಜ್ರಿವಾಲ್ ಅವರ ಆಮ್ ಆದ್ಮಿ ಪಕ್ಷ, ಚಂಡೀಗಢ ಸಿವಿಕ್ ಚುನಾವಣೆಯಲ್ಲಿ 35 ಸ್ಥಾನಗಳಲ್ಲಿ 14 ಸ್ಥಾನಗಳನ್ನು ಗೆದ್ದುಕೊಂಡಿತು, ಕಳೆದ ಬಾರಿ ಚುನಾವಣೆಯಲ್ಲಿ 20 ಸ್ಥಾನಗಳನ್ನು ಗೆದ್ದ ಬಿಜೆಪಿಯನ್ನು ಸೋಲಿಸಿತು. ಕಾಂಗ್ರೆಸ್ ಕೂಡ ತನ್ನ ಕಾರ್ಯಕ್ಷಮತೆಯನ್ನು ಸುಧಾರಿಸಿಕೊಂಡಿತು. ಅದರ ಸ್ಥಾನಗಳನ್ನು ನಾಲ್ಕರಿಂದ ಎಂಟಕ್ಕೆ ದ್ವಿಗುಣಗೊಳಿಸಿತು.

ಆಡಳಿತಾರೂಢ ಕಾಂಗ್ರೆಸ್‌ನಲ್ಲಿ ನಡೆಯುತ್ತಿರುವ ಒಳಜಗಳಗಳು, ಇತ್ತ ಸಾರ್ವಜನಿಕ ವಾಗ್ವಾದಗಳು ಮತ್ತು ವಿವಾದಾಸ್ಪದ ಕೃಷಿ ಕಾನೂನುಗಳ ಕುರಿತು ತಡವಾದ ಬಿಜೆಪಿಯ ನಿರ್ಧಾರ ಇದರ ಮಧ್ಯೆ ಪಂಜಾಬ್ ವಿಧಾನಸಭಾ ಚುನಾವಣೆಯಲ್ಲಿ AAP ದೊಡ್ಡ ಗೆಲುವು ಸಾಧಿಸುವ ನಿರೀಕ್ಷೆಯಲ್ಲಿದೆ. ಇದರೊಂದಿಗೆ ಉಚಿತ ವಿದ್ಯುತ್, ನೀರು, ಮನೆ ಬಾಗಿಲಿಗೆ ಸೇವೆಗಳು, ಆರೋಗ್ಯ ಮತ್ತು ಶಿಕ್ಷಣದ ಮೇಲೆ ಕೇಂದ್ರೀಕರಿಸುವ ಮೂಲಕ ರಾಜ್ಯದಲ್ಲಿ ದೆಹಲಿ ಮಾದರಿಯ ಆಡಳಿತವನ್ನು ಪುನರಾವರ್ತಿಸುವುದಾಗಿ ಕೇಜ್ರಿವಾಲ್ ಅವರ ಪಕ್ಷವು ಸಾಕಷ್ಟು ಭರವಸೆಗಳನ್ನು ನೀಡಿದೆ. ಕಳೆದ ಬಾರಿ ಎಎಪಿ ಪಂಜಾಬ್‌ನ 117 ಸ್ಥಾನಗಳಲ್ಲಿ 20 ಸ್ಥಾನಗಳನ್ನು ಗೆದ್ದಿತ್ತು. ಈ ಬಾರಿ ಅಧಿಕ ಸ್ಥಾನಗಳನ್ನು ಪಡೆಯುವ ನಿರೀಕ್ಷೆ ಇದೆ.

Recommended Video

      RTPCR Scam : ಏರ್ಪೋರ್ಟ್ ನಲ್ಲಿ ದೊಡ್ಡ ಸ್ಕ್ಯಾಮ್ ನಡಿಯತ್ತೆ! | Oneindia Kannada

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+