• search
  • Live TV
ಚಂಡೀಗಢ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

'ತಮ್ಮವರ ವಿರುದ್ಧವೇ ಮಾತನಾಡುತ್ತಾರೆ': ಕಾಂಗ್ರೆ‌ಸ್‌ ವಿರುದ್ಧ ಕ್ಯಾಪ್ಟನ್‌ ವಾಗ್ದಾಳಿ

|
Google Oneindia Kannada News

ಚಂಡೀಗಢ, ಜನವರಿ 05: ಪಂಜಾಬ್‌ ಮುಖ್ಯಮಂತ್ರಿ ಚರಣ್‌ಜೀತ್‌ ಸಿಂಗ್‌ ಚನ್ನಿ ಹಾಗೂ ಕಾಂಗ್ರೆಸ್‌ ರಾಜ್ಯ ಮುಖ್ಯಸ್ಥ ನವಜೋತ್‌ ಸಿಂಗ್‌ ಸಿಧು ನಡುವೆ ವಾಕ್ಸಮರವು ಮುಂದುವರಿದಿದೆ. ಈ ನಡುವೆ ಮಾಜಿ ಮುಖ್ಯಮಂತ್ರಿ, ಮಾಜಿ ಕಾಂಗ್ರೆಸ್‌ ನಾಯಕ ಅಮರೀಂದರ್‌ ಸಿಂಗ್‌, "ಕಾಂಗ್ರೆಸ್‌ ಪಕ್ಷದವರು ತಮ್ಮವರ ವಿರುದ್ಧವೇ ಮಾತನಾಡಿಕೊಳ್ಳುತ್ತಾರೆ," ಎಂದು ಟೀಕೆ ಮಾಡಿದ್ದಾರೆ. ಹಾಗೆಯೇ ಇವರಿಬ್ಬರು ಕೂಡಾ ವಿಧಾನಸಭೆ ಚುನಾವಣೆಗೆ ಒಂದು ವಾರ ಇರುವಾಗಲೂ ಕೂಡಾ ಪರಸ್ಪರರ ವಿರುದ್ಧ ಮಾತನಾಡಿಕೊಳ್ಳುತ್ತಾರೆ," ಎಂದು ಹೇಳಿದ್ದಾರೆ.

ಮಂಗಳವಾರ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಪಿಎಲ್‌ಸಿ ಮುಖ್ಯಸ್ಥ ಕ್ಯಾಪ್ಟನ್‌ ಅಮರೀಂದರ್‌ ಸಿಂಗ್‌, "ಮುಖ್ಯಮಂತ್ರಿ ಚರಣ್‌ಜೀತ್‌ ಸಿಂಗ್‌ ಚನ್ನಿ ಪ್ರತಿ ದಿನವೂ ಕೂಡಾ ಹೊಸ ಹೊಸ ಘೋಷಣೆಯನ್ನು ಮಾಡುತ್ತಾರೆ. ಈಗ ನವಜೋತ್‌ ಸಿಂಗ್‌ ಸಿಧು ಕೂಡಾ ಚರಣ್‌ಜೀತ್‌ ಸಿಂಗ್‌ ಚನ್ನಿ ವಿರುದ್ಧವಾಗಿ ಮಾತನಾಡುತ್ತಿದ್ದಾರೆ. ಇಬ್ಬರು ಕೂಡಾ ಪರಸ್ಪರರ ವಿರುದ್ಧವಾಗಿ ಮಾತನಾಡುತ್ತಿದ್ದಾರೆ," ಎಂದು ತಿಳಿಸಿದ್ದಾರೆ.

Breaking News: ಪಂಜಾಬ್‌ನಲ್ಲಿ ಬಿಜೆಪಿ ಜೊತೆ ಕ್ಯಾಪ್ಟನ್ ಅಮರೀಂದರ್ ಸಿಂಗ್ ಮೈತ್ರಿ Breaking News: ಪಂಜಾಬ್‌ನಲ್ಲಿ ಬಿಜೆಪಿ ಜೊತೆ ಕ್ಯಾಪ್ಟನ್ ಅಮರೀಂದರ್ ಸಿಂಗ್ ಮೈತ್ರಿ

ಇನ್ನು ಈ ಸಂದರ್ಭದಲ್ಲೇ ಪಂಜಾಬ್‌ ಕಾಂಗ್ರೆಸ್‌ ಮುಖ್ಯಸ್ಥ ನವಜೋತ್‌ ಸಿಂಗ್‌ ಸಿಧು ವಿರುದ್ಧವಾಗಿ ಮಾತನಾಡಿದ ಅಮರಿಂದರ್‌ ಸಿಂಗ್‌, "ನವಜೋತ್‌ ಸಿಂಗ್‌ ಸಿಧುಗೆ ತನ್ನದೇ ಆದ ಯಾವುದೇ ಒಂದು ನಿಲುವು ಇಲ್ಲ. ಪ್ರತಿ ಕ್ಷಣ ಕ್ಷಣಕ್ಕೂ ಸಿಧು ತನ್ನ ನಿಲುವನ್ನು ಬದಲು ಮಾಡುತ್ತಾರೆ. ಪ್ರತಿ ಕ್ಷಣ ಕ್ಷಣಕ್ಕೂ ಬದಲಾವಣೆ ಆಗುವ ವ್ಯಕ್ತಿಯ ಬಗ್ಗೆ ಮಾತನಾಡುವುದು ಮೌಲ್ಯಯುತವಲ್ಲ. ಸಿಧುವಿಗೆ ತನ್ನದೇ ಆದ ನಿಲುವೇ ಇಲ್ಲ," ಎಂದು ಟೀಕೆ ಮಾಡಿದ್ದಾರೆ.

ಸಿಧು, ಚನ್ನಿ ವಿರುದ್ಧ ಪಂಜಾಬ್‌ ಮಾಜಿ ಸಿಎಂ ವಾಗ್ದಾಳಿ

"ನವಜೋತ್‌ ಸಿಂಗ್‌ ಸಿಧು ಪಂಜಾಬ್‌ ಸಂಸತ್ತಿನಲ್ಲಿ ಸಚಿವ ಆಗಿದ್ದ ಸಂದರ್ಭದಲ್ಲಿ ತನ್ನ ಯಾವುದೇ ಕಾರ್ಯವನ್ನು ಸರಿಯಾದ ರೀತಿಯಲ್ಲಿ ಮಾಡಿಲ್ಲ. ಆದ ಕಾರಣದಿಂದಾಗಿ ನಾವು ನವಜೋತ್‌ ಸಿಂಗ್‌ ಸಿಧುವನ್ನು ಸಚಿವ ಸಂಪುಟದಿಂದ ಹೊರಗಿಡಬೇಕಾಯಿತು," ಎಂದು ಹೇಳಿರುವ ಪಂಜಾಬ್‌ನ ಮಾಜಿ ಮುಖ್ಯಮಂತ್ರಿ ಅಮರಿಂದರ್‌ ಸಿಂಗ್‌, ಪಂಜಾಬ್‌ನ ಹಾಲಿ ಮುಖ್ಯಮಂತ್ರಿ ಚರಣ್‌ಜೀತ್‌ ಸಿಂಗ್‌ ಚನ್ನಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಪಂಜಾಬ್‌ನಲ್ಲಿ ವಿಧಾನಸಭೆ ಚುನಾವಣೆ ನಡೆಯಲು ಇನ್ನು ಕೆಲವೇ ವಾರಗಳು ಇರುವ ಸಂದರ್ಭದಲ್ಲಿ ಹಲವಾರು ಘೋಷಣೆಗಳನ್ನು ಮಾಡಿದ ಚನ್ನಿ ವಿರುದ್ಧ ಕಿಡಿಕಾರಿದ್ದಾರೆ. "ಸಿಎಂ ಚನ್ನಿ ಈ ಎಲ್ಲಾ ಘೋಷಣೆಗಳನ್ನು ಹೇಗೆ ಪೂರೈಸುತ್ತಾರೆ ಎಂಬುವುದನ್ನು ನಾವು ಪ್ರಶ್ನೆ ಮಾಡಬೇಕಾಗಿದೆ," ಎಂದರು. "ಮುಖ್ಯಮಂತ್ರಿ ಚರಣ್‌ಜೀತ್‌ ಸಿಂಗ್‌ ಚನ್ನಿ ಮಾಡುವ ಘೋಷಣೆಗಳನ್ನು ನೋಡಿದಾಗ, ಆ ಭರವಸೆಗಳನ್ನು ಹೇಗೆ ಪೂರೈಸುತ್ತೀರಿ ಎಂದು ನಾವು ಅವರ ಬಳಿ ಕೇಳಬೇಕು. ಈ ಭರವಸೆಗಳನ್ನು ಪೂರೈಸಲು ಕಾಂಗ್ರೆಸ್‌ ಬಳಿ ಯಾವುದೇ ಯೋಜನೆಗಳು ಇಲ್ಲ," ಎಂದಿದ್ದಾರೆ.

ಅಮರಿಂದರ್ ಸಿಂಗ್ 117 ಅಭ್ಯರ್ಥಿಗಳನ್ನು ಕಣಕ್ಕಿಳಿಸುವುದು ಕಷ್ಟ: ಜಸ್ಬೀರ್ ಗಿಲ್ಅಮರಿಂದರ್ ಸಿಂಗ್ 117 ಅಭ್ಯರ್ಥಿಗಳನ್ನು ಕಣಕ್ಕಿಳಿಸುವುದು ಕಷ್ಟ: ಜಸ್ಬೀರ್ ಗಿಲ್

ಪಂಜಾಬ್‌ನಲ್ಲಿ ಬಿಜೆಪಿ ಜೊತೆ ಮಾಜಿ ಕೈ ನಾಯಕನ ಮೈತ್ರಿ

ಪಂಜಾಬ್‌ ಕಾಂಗ್ರೆಸ್‌ನಲ್ಲಿ ಮನಸ್ಥಾಪ ಉಂಟಾಗಿ ಪಕ್ಷವನ್ನು ತೊರೆದು ತನ್ನದೇ ಆದ ಪಕ್ಷವನ್ನು ಸ್ಥಾಪನೆ ಮಾಡಿರುವ ಅಮರಿಂದರ್‌ ಸಿಂಗ್‌ ಇತ್ತೀಚೆಗೆ ಬಿಜೆಪಿ ಜೊತೆಗೆ ಮೈತ್ರಿ ಮಾಡಿಕೊಂಡಿದ್ದಾರೆ. ಇತ್ತೀಚೆಗೆ ಪಂಜಾಬ್‌ನಲ್ಲಿ ಸೀಟು ಹಂಚಿಕೆ ವಿಚಾರದಲ್ಲಿ ಅಮಿತ್‌ ಶಾ ಜೊತೆಯಲ್ಲಿ ಮಾತುಕತೆಯನ್ನು ಕೂಡಾ ನಡೆಸಿದ್ದಾರೆ. ಪಂಜಾಬ್‌ನಲ್ಲಿ ಶೀಘ್ರದಲ್ಲೇ ವಿಧಾನಸಭೆ ಚುನಾವಣೆ ನಡೆಯಲಿದ್ದು, ಈ ನಿಟ್ಟಿನಲ್ಲಿ ಪಂಜಾಬ್‌ ರಾಜಕೀಯವಾಗಿ ಭಾರೀ ಚರ್ಚೆಗೆ ಕಾರಣವಾಗುತ್ತಿದೆ. ಇನ್ನು ಈ ಮೈತ್ರಿಯಲ್ಲಿ ಬಿಜೆಪಿ ಪಕ್ಷವು ಹೆಚ್ಚು ಸ್ಥಾನಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸುವ ಸಾಧ್ಯತೆ ಇದೆ. ಆದರೆ ಪಂಜಾಬ್‌ ಲೋಕ ಕಾಂಗ್ರೆಸ್‌ ಮಾತ್ರ 30 ರಿಂದ 35 ಕ್ಷೇತ್ರಗಳಲ್ಲಿ ಸ್ಪರ್ಧೆ ಮಾಡುವ ಸಾಧ್ಯತೆ ಇದೆ. (ಒನ್‌ಇಂಡಿಯಾ ಸುದ್ದಿ)

English summary
Amarinder Singh Slams Against Congress Says, They Speak Against Each Other.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X