ನಾವು ದೇವೇಗೌಡರ ಸಾವು ಬಯಸಲ್ಲ: ನಿಮ್ಮ ಮನೆ ಅನಾಹುತಕ್ಕೆ ಕಾಂಗ್ರೆಸ್ ಕಾರಣವಲ್ಲ: ಸಚಿವ
ಚಾಮರಾಜನಗರ, ಮೇ, 20: ಜೆಡಿಎಸ್ ನಾಯಕರು ಮೂರ್ಖರ ರೀತಿ ಮಾತನಾಡುತ್ತಿದ್ದಾರೆ, ಅವರ ಮನೆಯ ಅನಾಹುತಕ್ಕೆ ನಾವು ಹೇಗೆ ಕಾರಣ? ಅವರ ಸಾವನ್ನು ನಾವು ಏಕೆ ಬಯಸೋಣ ಎಂದು ಸಚಿವ ಕೆ.ವೆಂಕಟೇಶ್ ಹೇಳಿದರು.
ಚಾಮರಾಜನಗರದಲ್ಲಿ ಮಾಧ್ಯಮದವರೊಂದಿಗೆ ಅವರು ಎಚ್.ಡಿ.ದೇವೇಗೌಡ ಸಾವನ್ನು ಕಾಂಗ್ರೆಸ್ ಬಯಸಲಿದೆ ಎಂಬ ಜೆಡಿಎಸ್ ಆರೋಪಕ್ಕೆ ಪ್ರತಿಕ್ರಿಯಿಸಿ, ಎಚ್.ಡಿ.ದೇವೇಗೌಡರಿಗೆ ವಯಸ್ಸಾಗಿದೆ. ಪೆನ್‌ಡ್ರೈವ್ ಪ್ರಕರಣದಿಂದ ಅವರ ಮನಸ್ಸಿಗೆ ನೋವಾಗಿದೆ. ಅವರು ಇನ್ನಷ್ಟು ವರ್ಷ ಸಾರ್ಥಕ ಜೀವನ ನಡೆಸಲಿ ಎಂದರು.

ಇಷ್ಟು ದಿನ ಪೆನ್‌ಡ್ರೈವ್ ಇದೆ ಎಂದು ತಿರುಗಾಡುತ್ತಿದುದು ದೇವೇರಾಜೇಗೌಡ. ಈಗ ಡಿ.ಕೆ.ಶಿವಕುಮಾರ್ ಅನ್ನುತ್ತಿದ್ದಾರೆ. ಪೆನ್‌ಡ್ರೈವ್ ಪ್ರಕರಣದ ಹಿಂದೆ ಬಿಜೆಪಿ ಕುತಂತ್ರ ಅಡಗಿದೆ, ದೇವರಾಜೇಗೌಡ ಅಂತಹವರು ನೂರು ಜನ ಆಚೆ ಬಂದರೂ ಸರ್ಕಾರ ಬೀಳುವುದಿಲ್ಲ ಎಂದರು. ಇನ್ನು ಇದೇ ವೇಳೆ , ರೆಡ್ ಕಾರ್ನರ್ ನೋಟಿಸ್ ಕೊಡಲು ಎಸ್ಐಟಿ ಕ್ರಮ ವಹಿಸಲಿದೆ. ಪ್ರಕರಣವನ್ನು ಸಿಬಿಐಗೆ ವಹಿಸುವ ಅಗತ್ಯವಿಲ್ಲ ಎಂದರು.
ಸಚಿವ ಎಚ್.ಸಿ.ಮಹಾದೇವಪ್ಪ ಮಾಧ್ಯಮದವರೊಂದಿಗೆ ಮಾತನಾಡಿ, ಸರ್ಕಾರ 1 ವರ್ಷ ಪೂರೈಸಿರುವುದು ನಮಗೆ ಸಂತೃಪ್ತಿ ತಂದಿದೆ. 1 ಕೋಟಿಗೂ ಅಧಿಕ ಕುಟುಂಬಕ್ಕೆ ಆರ್ಥಿಕ ಸ್ವಾವಲಂಬನೆ ತರಲಾಗಿದೆ ಎಂದರು.
ಸರ್ಕಾರದ ಸಾಧನೆ ಶೂನ್ಯ ಎಂಬ ಬಿಜೆಪಿ ರಾಜ್ಯಾದ್ಯಕ್ಷ ವಿಜಯೇಂದ್ರ ಎಂಬ ಆರೋಪಕ್ಕೆ ಪ್ರತಿಕ್ರಿಯಿಸಿ, ಟ್ರೈನು ಹೋಗ್ತಾ ಇದೆ. ಗಡಗಡ ಅಲ್ಲಾಡ್ತಿದೆ, ರೈಲು ಬಿದ್ದು ಹೋಗಲ್ಲ. ಇವರಿಗೇನು ಲಾಭ ಸಿಗಲ್ಲ ಎಂದು ವ್ಯಂಗ್ಯ ಮಾಡಿದರು.
ಇದೇ ವೇಳೆ ಪೆನ್‌ಡ್ರೈವ್ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾತನಾಡಿ, ಎಸ್ಐಟಿ ತನಿಖೆ ನಡೆಸುತ್ತಿದೆ. ಇದರಲ್ಲಿ ಯಾವುದೇ ರಾಜಕೀಯ ಹಸ್ತಕ್ಷೇಪ ಇಲ್ಲ ಎಂದರು. ಇನ್ನು ಕಾನೂನು ಸುವ್ಯವಸ್ಥೆ ಕುಸಿದಿದೆ ಎಂಬ ವಿಪಕ್ಷಗಳ ಟೀಕೆಗೆ ಉತ್ತರಿಸಿ, ಕಾನೂನು ಸುವ್ಯವಸ್ಥೆ ರಾಜ್ಯದಲ್ಲಿ ಉತ್ತಮವಾಗಿದೆ. ಕಾನೂನನ್ನು ಕೈಗೆ ತೆಗೆದುಕೊಳ್ಳುವರ ವಿರುದ್ದ ಕಠಿಣ ಕ್ರಮ ಕೈಗೊಳ್ಳಲಾಗುತ್ತಿದೆ ಎಂದರು.












Click it and Unblock the Notifications