ಮಹಿಳೆ ಜೊತೆಗಿನ ವೀಡಿಯೋ ತೋರಿಸಿ ಬ್ಲಾಕ್ ಮೇಲ್: ನವವಿವಾಹಿತ ಆತ್ಮಹತ್ಯೆ.!, ಎಲ್ಲಿ ಗೊತ್ತಾ?
ಚಾಮರಾಜನಗರ, ಡಿಸೆಂಬರ್, 01: ಮಹಿಳೆ ಜೊತೆಗಿದ್ದ ವೀಡಿಯೋ ತೋರಿಸಿ ಬ್ಲಾಕ್ ಮೇಲ್ ಮಾಡುತ್ತಿದ್ದರಿಂದ ಬೇಸತ್ತು ನವವಿವಾಹಿತ ಆತ್ಮಹತ್ಯೆ ಮಾಡಿಕೊಂಡ ಘಟನೆ ಯಳಂದೂರು ತಾಲೂಕಿನ ಕಚ್ಚಿಹುಂಡಿ ಗ್ರಾಮದಲ್ಲಿ ನಡೆದಿದೆ.
ಕಜ್ಜಿಹುಂಡಿ ಗ್ರಾಮದ ಪ್ರಸನ್ನ (31) ಮೃತ ದುರ್ದೈವಿ. ಈತ ಕಳೆದ 1 ತಿಂಗಳ ಹಿಂದೆಯಷ್ಟೇ ವಿವಾಹವಾಹಿದ್ದು, ವ್ಯಕ್ತಿ ಹಾಗೂ ಮಹಿಳೆಯ ಕಿರುಕುಳ ತಾಳದೇ ನೇಣಿಗೆ ಶರಣಾಗಿದ್ದಾನೆ.

ಏನಿದು ಬ್ಲಾಕ್ ಮೇಲ್ ಕಹಾನಿ?
ಪ್ರಸನ್ನ ಬೆಂಗಳೂರಿನಲ್ಲಿ ಕ್ಯಾಟರಿಂಗ್ ಕೆಲಸ ಮಾಡಿಕೊಂಡಿದ್ದು, ರವಿ ಎಂಬಾತ ಈತನ ಸ್ನೇಹಗಳಿಸಿಕೊಂಡಿದ್ದ. ಜೊತೆಗೆ 4-5 ಬಾರಿ ಒಟ್ಟಿಗೆ ಮದ್ಯ ಸೇವಿಸುವ ಮಟ್ಟಿಗೆ ದೋಸ್ತಿಗಳಾಗಿದ್ದರು. ಅದಾದ ನಂತರ, ರವಿ ಜೊತೆಗಿದ್ದ ಮಹಿಳೆ ಜೊತೆ ಪ್ರಸನ್ನ ಇರುವಾಗ ವೀಡಿಯೋ ಮಾಡಿಕೊಂಡಿದ್ದ ಎಂದು ತಿಳಿದುಬಂದಿದೆ.
ಆ ವೀಡಿಯೋ ಮಾಡಿಕೊಂಡು ರವಿ ರೇಪ್ ಮಾಡಲು ಮುಂದಾಗಿದ್ದೀಯಾ ಎಂದು ಪೊಲೀಸರಿಗೆ ದೂರು ಕೊಡುತ್ತೇನೆಂದು ಬೆದರಿಸಿ 2 ಲಕ್ಷ ರೂಪಾಯಿ ಪೀಕಿಸಿದ್ದನಂತೆ. ಅದಾದ ನಂತರ, ಕಳೆದ 1 ತಿಂಗಳಿನ ಹಿಂದೆ ಪ್ರಸನ್ನಗೆ ವಿವಾಹವಾಗಿದ್ದು, ಪ್ರಸನ್ನ ಕುಟುಂಬದವರಿಗೆ ವೀಡಿಯೋ ಕಳುಹಿಸುತ್ತೇನೆಂದು 50 ಸಾವಿರ ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ. ಮಾನಸಿಕವಾಗಿ ಕುಗ್ಗಿ ಹೋಗಿದ್ದ ಪ್ರಸನ್ನ ಮನೆಯಲ್ಲಿ ಯಾರೂ ಇರದ ವೇಳೆ ಇಂದು ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಸಾಯುವ ಮುನ್ನ ಬ್ಲಾಕ್ ಮೇಲ್ ಕಹಾನಿಯನ್ನು ವಾಟ್ಸಾಪ್ ಮೂಲಕ ಕುಟುಂಬದವರಿಗೆ ತಿಳಿಸಿದ್ದಾನೆ. ಸದ್ಯ, ರವಿ ಹಾಗೂ ಮಹಿಳೆ ವಿರುದ್ಧ ಮಾಂಬಳ್ಳಿ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.
Helplines: COOJ Mental Health Foundation (COOJ)- 0832-2252525, ಪರಿವರ್ತನ್- +91 7676 602 602, Connecting Trust- +91 992 200 1122/+91-992 200 4305 or Sahai- 080-25497777/ [email protected]
ನಿಮ್ಹಾನ್ಸ್, ರೋಟರಿ ಸಂಸ್ಥೆ ಹಾಗೂ ಮೆಡಿಕೊ ಪ್ಯಾಸ್ಟೊರಾಲ್ ಅಸೋಸಿಯೇಷನ್ ನೆರವಿನಿಂದ ಆತ್ಮಹತ್ಯೆ ತಡೆಗಟ್ಟಲು, ಮಾನಸಿಕ ಖಿನ್ನತೆಯಿಂದ ಬಳಲುವವರಿಗಾಗಿ ಸ್ನೇಹಾ ಫೌಂಡೇಷನ್ ಸಹಾಯವಾಣಿ ಇಂತಿದೆ: 04424640050, ಟಾಟಾ ಇನ್ಸ್ಟಿಟ್ಯೂಟ್ ಆಫ್ ಸೋಷಿಯಲ್ ಸೈನ್ಸ್ 02225521111ಗೆ ಕರೆ ಮಾಡಬಹುದು.












Click it and Unblock the Notifications