Vatal Nagaraj Nomination: ವಾಟಾಳ್‌ ನಾಗರಾಜ್‌ ನಾಮಪತ್ರ ಸಲ್ಲಿಕೆ: ಕನ್ನಡ ಪರ ಹೋರಾಟಗಾರನ ಒಟ್ಟು ಆಸ್ತಿ ಎಷ್ಟು?

ಚಾಮರಾಜನಗರ, ಏಪ್ರಿಲ್‌ 19: ಚಾಮರಾಜನಗರ ವಿಧಾನಸಭಾ ಕ್ಷೇತ್ರದಿಂದ ಕನ್ನಡ ಚಳವಳಿ ವಾಟಾಳ್ ಪಕ್ಷದ ಅಭ್ಯರ್ಥಿಯಾಗಿ ವಾಟಾಳ್‌ ನಾಗರಾಜ್ ಅವರು ತಮ್ಮ ಉಮೇದುವಾರಿಕೆಯನ್ನು ಚುನಾವಣಾಧಿಕಾರಿಗಳಿಗೆ ಸಲ್ಲಿಸಿದರು.

ನಗರ ಶ್ರೀಚಾಮರಾಜೇಶ್ವರ ದೇವಸ್ಥಾನ ಮುಂಭಾಗ ಈಡುಗಾಯಿ ಒಡೆದು ಅಲ್ಲಿಂದ ತಮ್ಮ ಬೆಂಗಲಿಗರೊಂದಿಗೆ ತೆರಳಿದ ವಾಟಾಳ್‌ನಾಗರಾಜ್ ಚುನಾವಣಾಧಿಕಾರಿ ಯೋಗಾನಂದ ಅವರಿಗೆ ಮಂಗಳವಾರ ನಾಮಪತ್ರ ಸಲ್ಲಿಸಿದ್ದಾರೆ. ಈ ವೇಳೆ ಪುತ್ರಿ ಅನುಪಮಾ ವಾಟಾಳ್‌ ನಾಗರಾಜ್, ಚಾ.ರಂ.ಶ್ರೀನಿವಾಸಗೌಡ, ಕುಮಾರ್ ಹಾಗೂ ಪಾರ್ಥ ಸಾರಥಿ ಹಾಜರಿದ್ದರು.

Vatal Nagaraj Filed Nomination From Chamarajanagar Constituency

ನಾಮಪತ್ರ ಸಲ್ಲಿಕೆ ಬಳಿಕ ಮಾತನಾಡಿದ ವಾಟಾಳ್‌ ನಾಗರಾಜ್, ಇದು ನನ್ನ ಕೊನೆಯ ಚುನಾವಣೆ ಆಗಿದೆ. ಚಾಮರಾಜನಗರ ಜನತೆ ಯಾವುದೇ ಆಸೆ, ಆಮಿಷಗಳಿಗೆ ಬಗ್ಗಬೇಡಿ, ಚಾಮರಾಜನಗರ ಸಮಗ್ರ ಅಭಿವೃದ್ಧಿಗಾಗಿ ಈ ಬಾರಿ ನನಗೊಂದು ಅವಕಾಶ ಮಾಡಿಕೊಡಬೇಕು ಎಂದು ಮನವಿ ಮಾಡಿದರು.

ಚುನಾವಣೆ ಬೇಕು ಎಂದರೆ ಭ್ರಷ್ಟಾಚಾರ, ವ್ಯಾಪಾರ ನಿಲ್ಲಬೇಕು. ಇಲ್ಲದಿದ್ದರೆ ಜನರಿಗೆ ಚುನಾವಣೆ ಮೇಲೆ ನಂಬಿಕೆ, ಗೌರವ ಬರುವುದಿಲ್ಲ. ಮುಂದಿನ ಚುನಾವಣೆಯಲ್ಲಿ ಶಾಸನ ಸಭೆಯಲ್ಲಿ ಹೊಡೆದಾಟ ಆಗುತ್ತದೆ. ಬುರುಡೆ ಒಡೆದುಕೊಳ್ಳುತ್ತಾರೆ. ಪೊಲೀಸರು ಶಾಸನಸಭೆ ಒಳಗೆ ನುಗ್ಗಬೇಕಾದ ಪರಿಸ್ಥಿತಿ ಬರುತ್ತದೆ. ಹೀಗಾಗಿ ಆ ದೃಷ್ಟಿಯಿಂದ ಚುನಾವಣೆ ಪ್ರಾಮಾಣಿಕವಾಗಿ ನಡೆಯಬೇಕಿದೆ ಎಂದರು.

ಮಾತು ಮುಂದುವರಿಸಿದ ವಾಟಾಳ್‌ ನಾಗರಾಜ್‌, ಯಾವ ಪಕ್ಷದವರೇ ಆಗಲಿ, ಮಾಜಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ, ಯಡಿಯೂರಪ್ಪ, ಕುಮಾರಸ್ವಾಮಿ ಹಾಗೂ ಪ್ರಮುಖ ನಾಯಕರಾದ ಈಶ್ವರಪ್ಪ ಸೇರಿದಂತೆ ಪ್ರಬುದ್ಧ ರಾಜಕಾರಣಿಗಳ ವಿರುದ್ಧ ಯಾವ ಪಕ್ಷದ ಅಭ್ಯರ್ಥಿಗಳನ್ನು ಕಣಕ್ಕಿಳಿಸದೇ ಅವರನ್ನು ಅವಿರೋಧವಾಗಿ ಆಯ್ಕೆ ಮಾಡುವ ಅಸೆಂಬ್ಲಿಗೆ ಹೋದರೆ ಒಂದು ಶಕ್ತಿ ಬರುತ್ತದೆ ಎಂದರು.

ಬಿಜೆಪಿ, ಆರ್‌ಎಸ್‌ಎಸ್ ವಿರುದ್ಧ ಹೋರಾಟ ಮಾಡಬೇಕಾದರೆ ತಾವು ಸಮರ್ಥರು ಎಂದು ಹೇಳಿಕೊಂಡ ವಾಟಾಳ್ ನಾಗರಾಜ್, ತಮ್ಮನ್ನು ಗೆಲ್ಲಿಸಿ ವಿಧಾನಸೌಧಕ್ಕೆ ಕಳುಹಿಸಿ ಕೊಟ್ಟರೆ ನೂರು ಜನ ಶಾಸಕರ ಶಕ್ತಿ ಬರುತ್ತದೆ. ಚಾಮರಾಜನಗರ ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿ ನಿಲ್ಲುತ್ತಿಲ್ಲ ಆದರಿಂದ ಜೆಡಿಎಸ್‌ನವರು ನನಗೆ ಸಂಪೂರ್ಣ ಬೆಂಬಲ ಕೊಡಬೇಕು ಎಂದು ಮನವಿ ಮಾಡಿದರು.

ಕಾಂಗ್ರೆಸ್ ನಿಜವಾಗಲೂ ಜಾತ್ಯಾತೀತದ ಮೇಲೆ ನಂಬಿಕೆ ಇದ್ದರೆ ಹಾಗೂ ಬಿಜೆಪಿ ವಿರುದ್ಧ ಪ್ರಚಂಡ ಹೋರಾಟ ಮಾಡಬೇಕು ಎನ್ನುವ ಚಿಂತನೆ ಇದ್ದರೆ, ಕಾಂಗ್ರೆಸ್‌ನವರು ನಮ್ಮ ವಿರುದ್ಧ ಅಭ್ಯರ್ಥಿ ಆಗಬಾರದು. ಅವರ ಅಭ್ಯರ್ಥಿಯನ್ನು ವಿಧಾನ ಪರಿಷತ್‌ಗೆ ಹಾಗೂ ಸಚಿವರಾಗಿ ಮಾಡಲು ನಮ್ಮದು ಯಾವುದೇ ಅಭ್ಯಂತರ ಇಲ್ಲ ಎಂದರು.

ಸಾಲದ ಹೊರೆ ಇಲ್ಲದ ವಾಟಾಳ್ ನಾಗರಾಜ್ ಆಸ್ತಿ ವಿವರ

ಚಾಮರಾಜನಗರ ವಿಧಾನಸಭಾ ಕ್ಷೇತ್ರದಿಂದ ನಾಮಪತ್ರ ಸಲ್ಲಿಸಿರುವ ವಾಟಾಳ್ ನಾಗರಾಜ್ ತಮ್ಮ ಬಳಿ ಇರುವ ಒಟ್ಟು ಆಸ್ತಿಯ ಮೌಲ್ಯ 5.3 ಕೋಟಿ ಎಂದು ಘೋಷಣೆ ಮಾಡಿದ್ದಾರೆ. ಯಾವುದೇ ಸಾಲದ ಹೊರೆ ಹೊಂದಿರದ ವಾಟಾಳ್ ನಾಗರಾಜ್ ತಮ್ಮ ಬಳಿ ಯಾವುದೇ ಚಿನ್ನಾಭರಣಗಳಿಲ್ಲ ಎಂದಿದ್ದಾರೆ. ಅಲ್ಲದೇ ತಮ್ಮ ಬಳಿಕ 50 ಸಾವಿರ ನಗದಿದೆ ಎಂದು ಮಾಹಿತಿ ನೀಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+