ಪ್ರವಾಸಿಗರಿಗೆ ಸಿಹಿಸುದ್ದಿ: ಕರ್ನಾಟಕದಲ್ಲಿ ಇನ್ನೂ ಎರಡು ಹುಲಿ ಸಫಾರಿ ಆರಂಭ
ಚಾಮರಾಜನಗರ, ಡಿಸೆಂಬರ್ 28: ದೇಶದಲ್ಲಿಯೇ ಹುಲಿಗಳ ಸಂಖ್ಯೆಯಲ್ಲಿ 2ನೇ ಸ್ಥಾನದಲ್ಲಿದೆ ಕರ್ನಾಟಕ. ರಾಜ್ಯದಲ್ಲಿ ಹುಲಿ ಸಫಾರಿ ಆನಂದಿಸುವವರಿಗೆ ಅರಣ್ಯ ಇಲಾಖೆ ಸಿಹಿಸುದ್ದಿಯನ್ನು ನೀಡಿದೆ. ರಾಜ್ಯದಲ್ಲಿ ಈಗಿರುವ ಹುಲಿ ಸಫಾರಿಯ ಜೊತೆಗೆ ಇನ್ನೂ ಎರಡು ಸಫಾರಿ ಕೇಂದ್ರಗಳು ಆರಂಭವಾಗಲಿವೆ. ಅವು ಸಹ ಚಾಮರಾನಗರ ಜಿಲ್ಲೆಯಲ್ಲಿ ಶೀಘ್ರದಲ್ಲೇ ಆರಂಭವಾಗಲಿದೆ. ಪರಿಸರದ ಕುರಿತು ಅರಿವು ಮೂಡಿಸಲು, ಪ್ರವಾಸೋದ್ಯಮ ಉತ್ತೇಜನಕ್ಕೆ ಇದು ಸಹಕಾರಿಯಾಗಲಿದೆ ಎಂದು ಅಂದಾಜಿಸಲಾಗಿದೆ.
ಚಾಮರಾಜನಗರ ಜಿಲ್ಲೆಯಲ್ಲಿ ಬಿಳಿಗಿರಿ ರಂಗನಾಥ ಬೆಟ್ಟ ಹುಲಿ ಸಂರಕ್ಷಿತ ಪ್ರದೇಶವಿದೆ. ಇಲ್ಲಿ ಕೆ. ಗುಡಿಯಲ್ಲಿ ಈಗಾಗಲೇ ಹುಲಿ ಸಫಾರಿ ಕಾರ್ಯ ನಿರ್ವಹಣೆ ಮಾಡುತ್ತಿದೆ. ಪ್ರವಾಸೋದ್ಯಮಕ್ಕೆ ಅನುಕೂಲ ಮಾಡಿಕೊಡಲು ಇಲ್ಲಿ ಇನ್ನೂ ಎರಡು ಸಫಾರಿ ಆರಂಭಿಸಲು ಅರಣ್ಯ ಇಲಾಖೆ ಮುಂದಾಗಿದೆ. ಇದಕ್ಕೆ ಅನುಮತಿ ಕೇಳಿದ್ದು, ಶೀಘ್ರವೇ ಹುಲಿ ಸಫಾರಿ ಆರಂಭವಾಗುವ ನಿರೀಕ್ಷೆ ಇದೆ.

ಹುಲಿಗಳನ್ನು ನೋಡಲು ಬರುವ ಪ್ರವಾಸಿಗರಿಗೆ ಅನುಕೂಲ ಮಾಡಿಕೊಡಲು ಬಿಳಿಗಿರಿ ರಂಗನಾಥ ಬೆಟ್ಟ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಇನ್ನೂ ಎರಡು ಹುಲಿ ಸಫಾರಿ ಆರಂಭವಾಗಲಿದೆ. ಜಿಲ್ಲೆಯಲ್ಲಿ ಈಗಾಗಲೇ 4 ಹುಲಿ ಸಫಾರಿ ಇದ್ದು, ಅರಣ್ಯ ಇಲಾಖೆ ಇನ್ನೂ ಎರಡು ಸಫಾರಿ ಆರಂಭಿಸಲು ಮುಂದಾಗಿದೆ. ಇಲ್ಲಿಗೆ ಹೆಚ್ಚು ಪ್ರವಾಸಿಗರು ಭೇಟಿ ನೀಡುವುದರಿಂದ ಹೊಸ ಎರಡು ಸಫಾರಿ ಆರಂಭವಾಗಲಿದೆ.
ಎಲ್ಲೆಲ್ಲಿ ಸಫಾರಿ ಕೇಂದ್ರ ನಿರ್ಮಾಣ?; ಬಿಳಿಗಿರಿ ರಂಗನಾಥ ಬೆಟ್ಟ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಕೆ. ಗುಡಿಯಲ್ಲಿ ಈಗಾಗಲೇ ಹುಲಿ ಸಫಾರಿ ಕೇಂದ್ರವಿದೆ. ಸದ್ಯದ ಮಾಹಿತಿ ಪ್ರಕಾರ ಅರಣ್ಯ ಇಲಾಖೆ ಗುಂಡಾಲ್ ಮತ್ತು ಬೂದಿಪಡಗದಲ್ಲಿ ಇನ್ನೂ ಎರಡು ಸಫಾರಿ ಕೇಂದ್ರವನ್ನು ಆರಂಭಿಸಲಿದೆ. ಇದರಿಂದಾಗಿ ರಾಜ್ಯದಲ್ಲಿ ಹುಲಿ ಸಫಾರಿ ನಡೆಸುವವರಿಗೆ ಅನುಕೂಲವಾಗಲಿದ್ದು, ಅರಣ್ಯ ಇಲಾಖೆಗೆ ಹೆಚ್ಚಿನ ಆದಾಯವೂ ಬರಲಿದೆ.
ಅರಣ್ಯ ಇಲಾಖೆ ಅಧಿಕಾರಿಗಳ ಮಾಹಿತಿ ಪ್ರಕಾರ ಜಿಲ್ಲೆಯಲ್ಲಿ ಕೊಳ್ಳೆಗಾಲ ತಾಲೂಕಿನ ಗುಂಡಾಲ್ ಮತ್ತು ಚಾಮರಾಜನಗರ ತಾಲೂಕಿನ ಬೂದಿಪಗಡದಲ್ಲಿ ಎರಡು ಹೊಸ ಹುಲಿ ಸಫಾರಿ ಆರಂಭವಾಗಲಿದೆ. ಬಹಳ ವರ್ಷಗಳಿಂದ ಹೊಸ ಸಫಾರಿ ಆರಂಭಿಸಲು ಬೇಡಿಕೆ ಇತ್ತು. ಅರಣ್ಯ ಇಲಾಖೆಯೂ ಈ ಕುರಿತು ಈಗ ಚಿಂತನೆ ನಡೆಸಿ, ಸಫಾರಿ ಆರಂಭಕ್ಕೆ ಮುಂದಾಗಿದೆ.
ರಜೆ ದಿನಗಳು ಮತ್ತು ವಾರಾಂತ್ಯದಲ್ಲಿ ಬಿಳಿಗಿರಿ ರಂಗನಾಥ ಬೆಟ್ಟ ಹುಲಿ ಸಂರಕ್ಷಿತ ಪ್ರದೇಶದ ಕೆ. ಗುಡಿಗೆ ನೂರಾರು ಪ್ರವಾಸಿಗರು ಲಗ್ಗೆ ಇಡುತ್ತಾರೆ. ಇಲ್ಲಿ ಉಂಟಾಗುವ ಪ್ರವಾಸಿಗರ ದಟ್ಟಣೆ ಕಡಿಮೆ ಮಾಡಲು ಎರಡು ಹೊಸ ಹುಲಿ ಸಫಾರಿ ಆರಂಭಿಸಲಾಗುತ್ತದೆ. ಇದರಿಂದಾಗಿ ಹೆಚ್ಚಿನ ಪ್ರವಾಸಿಗರು ಸಹ ಹುಲಿ ಸಫಾರಿ ಕೈಗೊಳ್ಳಲು ಅನುಕೂಲವಾಗುತ್ತದ ಎಂದು ಅಧಿಕಾರಿಗಳು ಹೇಳಿದ್ದಾರೆ.
ಗುಂಡಾಲ್ ಮತ್ತು ಬೂದಿಪಗಡದಲ್ಲಿ ಹೊಸ ಹುಲಿ ಸಫಾರಿ ಆರಂಭಿಸುವ ಜೊತೆಗೆ ಇಲ್ಲಿ ಪರಿಸರ ಸಂರಕ್ಷಣೆ ಬಗ್ಗೆ ಜನರಲ್ಲಿ ಅರಿವು ಮೂಡಿಸಲಾಗುತ್ತದೆ. ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡಲು ಹುಲಿ ಸಫಾರಿ ಆರಂಭಿಸಲು ಮುಂದಾಗಿದ್ದು, ಇದಕ್ಕಾಗಿ ಅನುಮತಿ ಕೇಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಬಿಳಿಗಿರಿ ರಂಗನಾಥ ಬೆಟ್ಟ ಆಗ್ನೇಯ ಕರ್ನಾಟಕ ಮತ್ತು ತಮಿಳುನಾಡಿನ ಈರೋಡ್ ಜಿಲ್ಲೆಯ ಗಡಿಯಲ್ಲಿದೆ. ಈ ಪ್ರದೇಶವನ್ನು ಬಿಳಿಗಿರಂಗನಾಥ ಸ್ವಾಮಿ ದೇವಾಲಯವಿದ್ದು, ಇದೇ ಹೆಸರಿನಲ್ಲಿ ವನ್ಯಜೀವಿ ಧಾಮ ಅಥವಾ ಅಭಯಾರಣ್ಯವಿದೆ. ಇಲ್ಲಿಗೆ ಪ್ರತಿವರ್ಷ ಸಾವಿರಾರು ಪ್ರವಾಸಿಗರು ಭೇಟಿ ನೀಡುತ್ತಾರೆ. ಹುಲಿ ಸಫಾರಿ ನಡೆಸಿ, ಆನೆ, ಹುಲಿ, ಜಿಂಕೆ ಮುಂತಾದ ಪ್ರಾಣಿಗಳನ್ನು ಕಣ್ತುಂಬಿಕೊಳ್ಳುತ್ತಾರೆ.
-
Bengaluru: ಬೆಳ್ಳಂಬೆಳಗ್ಗೆ ಬೆಂಗಳೂರಿನ ಸಮಸ್ಯೆಗಳು: ಬೇರೆ ಊರುಗಳಿಂದ ಬಂದ ಮೆಜೆಸ್ಟಿಕ್ನಲ್ಲಿ ಸಂಕಷ್ಟ, 7 ಪ್ರಮುಖ ಸಂಕಷ್ಟಗಳು -
Karnataka Weather: ಇಂದು ರಾಜ್ಯದ ಈ ಜಿಲ್ಲೆಗಳಲ್ಲಿ ಗುಡುಗು, ಬಿರುಗಾಳಿ ಸಹಿತ ಮಳೆಯಾಗುವ ಮುನ್ಸೂಚನೆ -
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ -
March 24 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
ಕೂಲಿಗೆ ಹೋಗಿದ್ದ ವಿದ್ಯಾರ್ಥಿನಿಯನ್ನು ದ್ರಾಕ್ಷಿ ತೋಟದಿಂದಲೇ ಕರೆತಂದು SSLC ಪರೀಕ್ಷೆ ಬರೆಸಿದ ಗದಗ ಬಿಇಒ -
Bengaluru Land: ಕಾಡುಗೋಡಿಯಲ್ಲಿ 78 ಜಾಗ ಹಿಂತಿರುಗಿಸುವಂತೆ ಎಂಬೆಸ್ಸಿಗೆ ಕೆಐಎಸಿಬಿ ಆದೇಶ -
Train Ticket: ರೈಲು ಟಿಕೆಟ್ ರದ್ದತಿ, ಮರುಪಾವತಿ ರೂಲ್ಸ್ ಬದಲಾವಣೆ: ಏಪ್ರಿಲ್ನಿಂದ ಹೊಸ ನಿಯಮ -
Mutton: ಕುಕ್ಕರ್ 20 ಬಾರಿ ಕೂಗಿದರೂ ಬೇಯದ ತಲೆ ಮಟನ್: ಪೊಲೀಸ್ ಠಾಣೆಗೆ ಪಾತ್ರೆ ಹಿಡಿದು ಬಂದು ರಾದ್ಧಾಂತ -
Viral Post: 'ಬೆಂಗಳೂರು ಟ್ರಾಫಿಕ್' ಕಿರಿಕಿರಿ ತಪ್ಪಿಸಲು ಆಫೀಸ್ನಿಂದ ಮನೆಗೆ ನಡೆದುಕೊಂಡು ಹೋಗುತ್ತಿರುವ ಮಹಿಳೆ -
Gas: ಬೆಳಗಾವಿಯಲ್ಲಿ ಸಿಲಿಂಡರ್, ಇಂಧನ ಲಭ್ಯತೆಯ ಬಗ್ಗೆ: ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅಪ್ಡೇಟ್ಸ್ -
Liquor Ban: ಬೆಂಗಳೂರಲ್ಲಿ 48 ಗಂಟೆಗಳ ಕಾಲ ಮದ್ಯ ಮಾರಾಟ ನಿಷೇಧ, ಎಲ್ಲೆಲ್ಲಿ - ಯಾಕೆ ಇಲ್ಲಿದೆ ಮಾಹಿತಿ -
Bengaluru property: ಬೆಂಗಳೂರು ಆಸ್ತಿ ತೆರಿಗೆ ಬಾಕಿದಾರರಿಗೆ ಇದೀಗ ಬಿಗ್ ಶಾಕ್: ಪಾಲಿಕೆಗಳೇ ಆಸ್ತಿ ಖರೀದಿ












Click it and Unblock the Notifications