ಬಂಡೀಪುರ: ಕೆರೆಯಲ್ಲಿ ಹಾಯಾಗಿ ಮಲಗಿದ್ದ ಹುಲಿಯನ್ನು ಅಟ್ಟಾಡಿಸಿದ ಗಜರಾಜ-ವಿಡಿಯೋ ಭಾರೀ ವೈರಲ್
ಚಾಮರಾಜನಗರ, ಜೂನ್, 27: ಕೆರೆಯಲ್ಲಿ ಮಲಗಿ ಕೂಲ್ ಕೂಲ್ ಆಗುತ್ತಿದ್ದ ಹುಲಿಯು ಆನೆಯನ್ನು ಕಂಡು ಕಂಗೆಟ್ಟು ಓಡಿದ ಘಟನೆ ಗುಂಡ್ಲುಪೇಟೆ ತಾಲೂಕಿನ ಬಂಡೀಪುರದ ಸಫಾರಿಯಲ್ಲಿ ಬುಧವಾರ (ಜೂನ್ 27) ಸಂಜೆ ನಡೆದಿದ್ದು, ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗುತ್ತಿದೆ.
ಗಜರಾಜನ ನೋಡಿ ಹುಲಿರಾಯ ಕಾಲ್ಕಿತ್ತಿದ್ದನ್ನು ಕಂಡ ಸಫಾರಿಗರು ರೋಮಾಂಚಿತರಾಗಿದ್ದಾರೆ. ಬಂಡೀಪುರದಲ್ಲಿ ಕೆರೆಯಲ್ಲಿ ಬಿಸಿಲಿನ ತಾಪಕ್ಕೆ ಹುಲಿಯೊಂದು ಕೆರೆಗೆ ಇಳಿದು ರಿಲ್ಯಾಕ್ಸ್ ಮೂಡಿಗೆ ಜಾರಿತ್ತು. ದಾಹ ತಣಿಸಿಕೊಳ್ಳಲು ಬಂದ ಗಜರಾಜ ಹುಲಿಯನ್ನು ಕಂಡ ಕೂಡಲೇ ದಾಳಿ ಮಾಡುವಂತೆ ಮುನ್ನುಗ್ಗಿ ಹುಲಿಯನ್ನು ಅಟ್ಟಾಡಿಸಿ ಓಡಿಸಿದ್ದು, ಸದ್ಯ, ವೀಡಿಯೋ ಭಾರೀ ಸದ್ದು ಮಾಡುತ್ತಿದೆ.

ಆತಂಕಗೊಂಡ ಜನ: ರಾಜ್ಯದ ಪ್ರಮುಖ ಪ್ರವಾಸಿ ಸ್ಥಳಗಳಲ್ಲಿ ಒಂದಾದ ಯಳಂದೂರು ತಾಲೂಕಿನ ಬಿಳಿಗಿರಿರಂಗನ ಬೆಟ್ಟದಲ್ಲಿ ಜೂನ್ 13ರಂದು ಬೆಳ್ಳಂಬೆಳಗ್ಗೆ ಆನೆ ಓಡಾಡಿ ಜನರನ್ನು ಆತಂಕಕ್ಕೆ ಈಡು ಮಾಡಿರುವ ಘಟನೆ ನಡೆದಿದೆ.
ಬಿಳಿಗಿರಿರಂಗನ ಬೆಟ್ಟದ ಮುಖ್ಯರಸ್ತೆ, ಬಂಗಲೆ ಪೋಡಿನ ನಡುವೆ ನೀಳದಂತದ ಕಾಡಾನೆಯೊಂದು ಓಡಾಡಿ ಅಲ್ಲಿನ ಜನರನ್ನು, ಭಕ್ತರನ್ನು ಪರದಾಡುವಂತೆ ಮಾಡಿದೆ.
ಬೆಳ್ಳಂಬೆಳಗ್ಗೆಯೇ ಗಜರಾಜ ದಾದಾಗಿರಿಗೆ ಜನರು ಅವಾಕ್ಕಾಗಿದ್ದು, ಎದುರಿಗೆ ಬಂದ ಕೆಎಸ್ಆರ್‌ಟಿ ಬಸ್, ಟಾಟಾ ಏಸ್ ವಾಹನವನ್ನು ಹಿಮ್ಮೆಟ್ಟಿಸಿ ಓಡಿಸಿದೆ. ಇನ್ನು ಕಳೆದ ಎರಡು ತಿಂಗಳಿನಿಂದಲೂ ಪೋಡುಗಳತ್ತ ಈ ಆನೆ ಧಾವಿಸುತ್ತಿದೆ ಎಂದು ತಿಳಿದುಬಂದಿದೆ. ಮಾವಿನ ಹಣ್ಣು ಹಾಗೂ ಹಲಸಿನ ಹಣ್ಣಿಗಾಗಿ ಪೋಡುಗಳತ್ತ ಬರುತ್ತಿದೆ ಎನ್ನಲಾಗಿದೆ.
ಎರಡು ಪ್ರಾಣಿಗಳ ನಡುವೆ ಕಾಳಗ: ಇತ್ತೀಚಿನ ದಿನಗಳಲ್ಲಿ ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆ ತಾಲೂಕಿನ ವ್ಯಾಪ್ತಿಯಲ್ಲಿ ಪ್ರಾಣಿಗಳ ರಸ್ತೆಗಿಳಿಯುವುದು ಹೆಚ್ಚಾಗಿಬಿಟ್ಟಿದೆ. ಅಷ್ಟೇ ಅಲ್ಲದೆ, ಕಾಳಗಕ್ಕೆ ಇಳಿದಿರುವ ಘಟನೆಗಳು ಸಹ ನಡೆದಿವೆ. ಹಾಗೆಯೇ ಮೇ 30ರ ಬೆಳ್ಳಂಬೆಳಗ್ಗೆ ಎರಡು ಪ್ರಾಣಿಗಳ ನಡುವೆ ಕಾಳಗ ನಡೆದಿದ್ದು, ಈ ವೇಳೆ ಪಾಪದ ಪ್ರಾಣಿಯೊಂದು ಮೃತಪಟ್ಟ ಘಟನೆ ಪಡಗೂರು-ಕಲ್ಲಹಳ್ಳಿ ಮಾರ್ಗ ಮಧ್ಯದಲ್ಲಿ ನಡೆದಿದೆ.
ಹುಲಿ ದಾಳಿ ನಡೆಸಿ ಜಿಂಕೆಯೊಂದನ್ನು ಕೊಂದು ಹಾಕಿರುವ ಘಟನೆ ಗುಂಡ್ಲುಪೇಟೆ ತಾಲೂಕಿನ ಪಡಗೂರು-ಕಲ್ಲಹಳ್ಳಿ ಮಾರ್ಗ ಮಧ್ಯದ ಜಮೀನೊಂದರಲ್ಲಿ ಗುರುವಾರ (ಮೇ 30) ಬೆಳಗ್ಗೆ ನಡೆದಿದೆ.
ಪಡಗೂರು ಅಡವಿ ಮಠದ ಶ್ರೀಗಳಿಗೆ ಸೇರಿದ ಜಮೀನಿನ ಪಕ್ಕದ ಬಯಲಲ್ಲಿ ಗುರುವಾರ ಬೆಳಗ್ಗೆ ಮೇವು ಮೇಯುತ್ತಿದ್ದ ಜಿಂಕೆಯ ಮೇಲೆ ಹುಲಿ ಏಕಾಏಕಿ ದಾಳಿ ನಡೆಸಿ ಕುತ್ತಿಗೆ ಭಾಗಕ್ಕೆ ಬಲವಾಗಿ ಕಚ್ಚಿದೆ. ಈ ವೇಳೆ ರೈತರು ಕೂಗಿಕೊಂಡ ಪರಿಣಾಮ ಜಿಂಕೆ ಬಿಟ್ಟು ಓಡಿ ಹೋಗಿದೆ. ನಂತರ ಜಿಂಕೆಗೆ ಸೂಕ್ತ ಚಿಕಿತ್ಸೆ ಸಿಗದ ಪರಿಣಾಮ ಕೆಲಕಾಲ ಒದ್ದಾಡಿ ಸಾವನ್ನಪ್ಪಿದೆ ಎಂದು ಸ್ಥಳೀಯ ರೈತರು ಮಾಹಿತಿ ನೀಡಿದರು. ಅಲ್ಲದೆ, ಜಿಂಕೆ ಒದ್ದಾಟದ ವೀಡಿಯೋವನ್ನು ರೈತರು ಸೆರೆ ಹಿಡಿದು ಅರಣ್ಯ ಇಲಾಖೆ ಗಮನಕ್ಕೆ ತಂದಿದ್ದಾರೆ.
-
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
March 23 Horoscope: ಈ 3 ರಾಶಿಗಳಿಗೆ ಭಾರಿ ಲಾಭ! ಉಳಿದವರು ಜಾಗ್ರತೆ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
ಷೇರು ಪೇಟೆ ಧೂಳೀಪಟ: ಹೂಡಿಕೆದಾರರಿಗೆ 10 ಲಕ್ಷ ಕೋಟಿ ಲಾಸ್; ಸೆನ್ಸೆಕ್ಸ್, ನಿಫ್ಟಿ ಶೇ. 2.4ರಷ್ಟು ಇಳಿಕೆ! -
ಏ.1ರಿಂದ ಅರಣ್ಯ ಇಲಾಖೆ ಹೊರಗುತ್ತಿಗೆ ನೌಕರರಿಂದ ಮುಷ್ಕರ: ಈಶ್ವರ್ ಖಂಡ್ರೆ ಮಹತ್ವದ ಸೂಚನೆ -
'ಧುರಂಧರ್ 2' ರಣವೀರ್ ಸಿಂಗ್ ಎಂಟ್ರಿ ದೃಶ್ಯ ಮರುಸೃಷ್ಟಿಸಿದ ಯೂಟ್ಯೂಬರ್: 13 ಮಿಲಿಯನ್ ವೀಕ್ಷಣೆ ಪಡೆದ Viral Video -
Video: ಬೆಂಗಳೂರು ರಸ್ತೆಯಲ್ಲಿ ಯುವಕರ 'ಬಿಯರ್' ದರ್ಬಾರ್: ಬೈಕ್ನಲ್ಲೇ ಟ್ರಿಪಲ್ ರೈಡಿಂಗ್ ಜತೆ ಮದ್ಯಪಾನ -
KPSC- KEA: ಕೆಪಿಎಸ್ಸಿಗೆ ಬಿಗ್ ಶಾಕ್! ಕೃಷಿ ಇಲಾಖೆಯ 945 ಹುದ್ದೆಗಳ ನೇಮಕಾತಿ ಹೊಣೆ ಕೆಇಎಗೆ, ಮಹತ್ವದ ಆದೇಶ












Click it and Unblock the Notifications