ಕೆರೆಯಲ್ಲಿ ಈಜಲು ಹೋದವರು ಮಸಣ ಸೇರಿದರು
ಚಾಮರಾಜನಗರ, ಮೇ 6:ಕೆರೆಯಲ್ಲಿ ಈಜಲು ಹೋದ ಭಾವ - ಮೈದುನ ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ಗುಂಡ್ಲುಪೇಟೆಯಲ್ಲಿ ಭಾನುವಾರ (ಮೇ.05) ನಡೆದಿದೆ.
ಇಲ್ಲಿನ ಉತ್ತೂರು ಕೆರೆಗೆ ಈಜಲು ತೆರಳಿದ್ದ ಚಾಮರಾಜ ತಾಲೂಕಿನ ಉತ್ತವಳ್ಳಿ ಗ್ರಾಮದ ನಿವಾಸಿ ನಂದೀಶ್ವರ ಹಾಗೂ ತಮಿಳನ್ ಸಾವನ್ನಪ್ಪಿದ್ದಾರೆ. ತೆರಕಣಾಂಬಿಯ ತನ್ನ ಮಾವನ ಮನೆಗೆ ಬಂದಿದ್ದ ನಂದೀಶ್ವರ ತನ್ನ ಭಾವಮೈದುನ ತಮಿಳನ್ ಹಾಗೂ ಇತರ ಇಬ್ಬರು ಸ್ನೇಹಿತರೊಂದಿಗೆ ಉತ್ತೂರು ಕೆರೆಯಲ್ಲಿ ಸ್ನಾನ ಮಾಡಲು ಹೋಗಿದ್ದಾಗ ಕಾಲು ಜಾರಿ ನೀರಿನಲ್ಲಿ ಮುಳುಗಿದ್ದಾರೆ.
ಸ್ಥಳದಲ್ಲಿದ್ದ ಸ್ನೇಹಿತರು ಕೂಡಲೇ ಪೊಲೀಸರಿಗೆ ವಿಷಯ ತಿಳಿಸಿದ್ದಾರೆ. ಆ ನಂತರ ಅಗ್ನಿಶಾಮಕ ದಳದ ನೆರವಿನಿಂದ ಪೊಲೀಸರು ಹುಟುಕಾಟ ನಡೆಸಿದರೂ ಇದುವರೆಗೂ ಪತ್ತೆಯಾಗಿಲ್ಲ.

ಮತ್ತೊಂದು ಘಟನೆಯಲ್ಲಿ ತಾಲೂಕಿನ ಕೋಣನೂರು ಕೆರೆಯಲ್ಲಿ ಈಜಲು ಹೋಗಿದ್ದ ಅಬ್ದುಲ್ಲಾ ಎಂಬ ವ್ಯಕ್ತಿ ಸಾವನ್ನಪ್ಪಿದ್ದಾರೆ.ಚಾಮರಾಜನಗರದ 15 ಜನರ ತಂಡವೊಂದು ಕೋಣನೂರು ಕೆರೆಯಲ್ಲಿ ಈಜುತ್ತಿದ್ದಾಗ ಅಬ್ದುಲ್ಲಾ ಎಂಬ ವ್ಯಕ್ತಿ ಕೆರೆಗಿಳಿದ ಕೂಡಲೇ ನಾಪತ್ತೆಗೊಂಡಿದ್ದಾರೆ.
ಇನ್ನಿತರರು ಅಲ್ಲಿಂದ ಪರಾರಿಯಾಗಿ ಮೃತನ ಮನೆಯವರಿಗೆ ವಿಷಯ ಮುಟ್ಟಿಸಿದ್ದಾರೆ. ನಂತರ ಕುಟುಂಬದವರೇ ಆಗಮಿಸಿ ಮೃತದೇಹವನ್ನು ಕೆರೆಯಿಂದ ಹೊರತೆಗೆದಿದ್ದಾರೆ.











Click it and Unblock the Notifications