ರಾಂಪುರ ಕಾಡಿನಲ್ಲಿ ಬವಣೆಯ ಬದುಕು ನಡೆಸುತ್ತಿರುವ ಕಾವಡಿಗಳು
ಬಂಡೀಪುರ ರಾಷ್ಟ್ರೀಯ ಉದ್ಯಾನದಲ್ಲಿನ ಸಾಕಾನೆಗಳಿಂದ ಅರಣ್ಯ ಇಲಾಖೆಗೆ ಯಾವುದೇ ಉಪಯೋಗವಿಲ್ಲ. ಇದೀಗ ಕೆಲವು ಆನೆಗಳನ್ನು ರಾಂಪುರ ಶಿಬಿರಕ್ಕೆ ಸ್ಥಳಾಂತರಿಸಿದ್ದರಿಂದ ಕಾವಡಿಗಳು ಮಕ್ಕಳ ಸಹಿತ ಅಲ್ಲಿಗೆ ಅನಿವಾರ್ಯವಾಗಿ ತೆರಳಿದ್ದು ಅಲ್ಲಿ ಕಷ್ಟಪಡುತ್ತ
ಚಾಮರಾಜನಗರ, ಮೇ 24: ಸಂಚರಿಸಲು ಸಮರ್ಪಕ ರಸ್ತೆಯಿಲ್ಲ, ವಿದ್ಯುತ್ ಬೆಳಕಿಲ್ಲ, ಮಕ್ಕಳ ವಿದ್ಯಾಭ್ಯಾಸಕ್ಕೆ ಹತ್ತಿರದಲ್ಲಿ ಶಾಲೆಯಿಲ್ಲ! ಆನೆಗಳನ್ನು ತೊಳೆಯುವ ನೀರನ್ನೇ ಕುಡಿಯಬೇಕಾದ ಅನಿವಾರ್ಯತೆ! ಮಳೆ-ಗಾಳಿ ಬಂದರೆ ಕಿತ್ತೊಗುವಂತಹ ಜೋಪಡಿಯಲ್ಲೇ ವಾಸ... ಇವೆಲ್ಲವೂ ಬಂಡೀಪುರ ರಾಷ್ಟ್ರೀಯ ಉದ್ಯಾನ ವ್ಯಾಪ್ತಿಗೊಳಪಡುವ ರಾಂಪುರ ಆನೆ ಶಿಬಿರದಲ್ಲಿ ಕಂಡು ಬರುವ ಸಮಸ್ಯೆಗಳು.
ಬಂಡೀಪುರದಲ್ಲಿ ಸಾಕಾನೆಗಳಿಗೆ ಸಮರ್ಪಕ ನೀರು ದೊರಕದ ಕಾರಣದಿಂದ ಕಾವಡಿಗಳ ಕುಟುಂಬಗಳ ಸಮೇತ 17 ಆನೆಗಳನ್ನು ಮೂಲೆಹೊಳೆ ಸಮೀಪದ ರಾಂಪುರ ಶಿಬಿರಕ್ಕೆ ಸ್ಥಳಾಂತರಗೊಳಿಸಿದ್ದು, ಇದೀಗ ಅಲ್ಲಿಗೆ ತೆರಳಿರುವ ಕಾವಡಿಗಳು ಮತ್ತು ಮಕ್ಕಳು ಹಲವು ಸಮಸ್ಯೆಗಳನ್ನು ಎದುರಿಸುವ ಪರಿಸ್ಥಿತಿ ಬಂದೊದಗಿದೆ.[ಬತ್ತಿದ ಬಂಡೀಪುರದ ಕೆರೆಕಟ್ಟೆಗಳಿಗೆ ಜೀವ ನೀಡಿದ ವರುಣ!]
ಬಂಡೀಪುರದಲ್ಲಿ ಶಾಲೆಗೆ ತೆರಳುತ್ತಿದ್ದ ಹತ್ತು ಮಕ್ಕಳು ಶಾಲೆ ದೂರವಾದ ಕಾರಣ ಶಾಲೆಯಿಂದ ಹೊರಗುಳಿಯುವ ಪರಿಸ್ಥಿತಿ ನಿರ್ಮಾಣವಾಗಿದೆ. ಬಂಡೀಪುರ ರಾಷ್ಟ್ರೀಯ ಉದ್ಯಾನದಲ್ಲಿನ ಸಾಕಾನೆಗಳಿಂದ ಅರಣ್ಯ ಇಲಾಖೆಗೆ ಯಾವುದೇ ಉಪಯೋಗವಿಲ್ಲ. ಇದೀಗ ಕೆಲವು ಆನೆಗಳನ್ನು ರಾಂಪುರ ಶಿಬಿರಕ್ಕೆ ಸ್ಥಳಾಂತರಿಸಿದ್ದರಿಂದ ಕಾವಡಿಗಳು ಮಕ್ಕಳ ಸಹಿತ ಅಲ್ಲಿಗೆ ಅನಿವಾರ್ಯವಾಗಿ ತೆರಳಿದ್ದು ಅಲ್ಲಿ ಕಷ್ಟಪಡುತ್ತಿದ್ದಾರೆ.[ಗುಂಡ್ಲುಪೇಟೆಯ ದೊಡ್ಡಕೆರೆ, ಚೋಳರ ಕಾಲದ ಕಲ್ಯಾಣಿಯೇ?]
1914ರಲ್ಲಿ ಬಂಡೀಪುರ ಶಿಬಿರದಲ್ಲಿ ಪ್ರಾರಂಭಿಸಲಾಗಿದ್ದ ಸಾಕಾನೆಗಳ ಒಟ್ಟು ಸಂಖ್ಯೆ 20, ಇವುಗಳನ್ನು ನಿರ್ವಹಿಸಲು 24 ಕಾವಡಿಗಳು, 3 ಮಾವುತರು ಹಾಗೂ ಕುಟುಂಬಗಳು ಬಂಡೀಪುರದಲ್ಲಿ ನೆಲೆಸಿದ್ದರು. ಅಲ್ಲಿಂದ ಇಲ್ಲಿ ತನಕ ಕಾವಡಿಗಳ ಕುಟುಂಬ ಅಲ್ಲಿಯೇ ನೆಲೆಸಿವೆ. ಆದರೆ ಬಂಡೀಪುರದಲ್ಲಿ ನೀರು ಮತ್ತಿತರ ಸಮಸ್ಯೆಗಳು ಕಂಡುಬಂದ ಕಾರಣದಿಂದ ಮೂಲೆಹೊಳೆಯ ರಾಂಪುರ ಶಿಬಿರಕ್ಕೆ ಆನೆ ಮತ್ತು ಕಾವಡಿಗಳ ಕುಟುಂಬವನ್ನು ಸ್ಥಳಾಂತರಿಸಲಾಗಿದೆ.

ದ್ವೀಪದಂತಾಗಿದೆ ಬದುಕು!

ಮನುಷ್ಯರಿಗೂ-ಆನೆಗೂ ಕುಡಿಯೋದಕ್ಕೆ ಒಂದೇ ನೀರು!

ಆನೆಗಳಿಗೆ ರಕ್ಷಣೆಯಿಲ್ಲ

ಶಿಬಿರದ ಸುರಕ್ಷತೆ ಅಂದರೆ ದಿವ್ಯ ನಿರ್ಲಕ್ಷ್ಯ
ಇಷ್ಟೆಲ್ಲ ಕಷ್ಟಗಳಿದ್ದರೂ ಸಂಬಂಧಿಸಿದ ಅಧಿಕಾರಿಗಳಿಗೆ ಇದ್ಯಾವುದರ ಪರಿವೇ ಇಲ್ಲದೆ ಶಿಬಿರದ ಸುರಕ್ಷತೆಗೆ ಯಾವುದೇ ಕ್ರಮ ಕೈಗೊಳ್ಳದೆ ಸಂಪೂರ್ಣ ನಿರ್ಲಕ್ಷ್ಯಿಸಿರುವುದು ಮೇಲ್ನೋಟಕ್ಕೆ ಕಂಡು ಬರುತ್ತಿದೆ.

ಮಕ್ಕಳ ವಿದ್ಯಾಭ್ಯಾಸಕ್ಕೆ ಅನುಕೂಲವಾಗಲಿ
ಇನ್ನು ಮುಂದೆಯಾದರೂ ಕಾವಡಿಗಳ ಮತ್ತು ಅವರ ಕುಟುಂಬದ ಬಗ್ಗೆ ಅರಣ್ಯ ಇಲಾಖೆ ಗಮನಹರಿಸಿ ಅವರಿಗೂ ಎಲ್ಲರಿಗೂ ಸಿಗುವಂತಹ ಸೌಲಭ್ಯ ನೀಡಬೇಕಾಗಿದೆ. ಮಕ್ಕಳಿಗೆ ವಿದ್ಯಾಭ್ಯಾಸಕ್ಕೆ ಅನುಕೂಲವಾಗುವಂತೆ ಸೌಲಭ್ಯ ಕಲ್ಪಿಸಿಕೊಡಬೇಕಿದೆ.












Click it and Unblock the Notifications