ಚಾಮರಾಜನಗರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಚಾಮರಾಜನಗರ: ಇದ್ದಕ್ಕಿದ್ದಂತೆ ಕಾಡುಹಂದಿಗಳ ಸಾವು, ಕಾಡಂಚಿನ ರೈತರಲ್ಲಿ ಆತಂಕ

By ಚಾಮರಾಜ ನಗರ ಪ್ರತಿನಿಧಿ
|
Google Oneindia Kannada News

ಚಾಮರಾಜನಗರ , ಡಿ.11: ಗುಂಡ್ಲುಪೇಟೆ ತಾಲೂಕಿನ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶ ಗೋಪಾಲಸ್ವಾಮಿ ಬೆಟ್ಟ ವಲಯ ಮೇಲುಕಾಮನಹಳ್ಳಿ ಗ್ರಾಮದ ಸುತ್ತಮುತ್ತ 50 ಕ್ಕೂ ಹೆಚ್ಚಿನ ಕಾಡು ಹಂದಿಗಳು ಮೃತಪಟ್ಟಿವೆ. ನಿತ್ಯವೂ ಕಾಡುಹಂದಿಗಳ ಸಾವು ಮರುಕಳಿಸುತ್ತಿರುವುದರಿಂದ ಅಲ್ಲಿನ ಗಿರಿಜನರು ಹಾಗೂ ರೈತರು ಆತಂಕಕ್ಕೆ ಒಳಗಾಗಿದ್ದಾರೆ.

ಗುಂಡ್ಲುಪೇಟೆ ತಾಲೂಕಿನ ಮೇಲುಕಾಮನಹಳ್ಳಿ ಹಾಗೂ ಗಿರಿಜನ ಕಾಲೋನಿಯ ಮನೆ ಮತ್ತು ರಾಷ್ಟ್ರೀಯ ಹೆದ್ದಾರಿ ಅಕ್ಕಪಕ್ಕದಲ್ಲಿ ಪ್ರತಿನಿತ್ಯ ಹಂದಿಗಳು ಇರುತ್ತಿದ್ದವು. ಇದ್ದಕ್ಕಿದ್ದಂತೆ ಕಳೆದ ಒಂದು ತಿಂಗಳಿನಿಂದ ಪ್ರತಿನಿತ್ಯ ಮೂರ್ನಾಲ್ಕು ಹಂದಿಗಳ ಅಲ್ಲಲ್ಲಿ ಸತ್ತು ಬೀಳುತ್ತಿವೆ. ಕೆಲವೊಮ್ಮೆ ಹಂದಿಗಳ ಸಾವು ತಕ್ಷಣವೇ ಸಾರ್ವಜನಿಕರಿಗೆ ತಿಳಿದು ಬಂದಿವೆ. ಮತ್ತೆ ಹಲವು ಕೊಳೆತು ವಾಸನೆ ಬಂದ ಮೇಲೆ ಹಂದಿಗಳು ಸತ್ತಿದೆ ಎಂಬುದು ತಿಳಿಯುತ್ತಿದೆ.

ಮಲೆ ಮಹದೇಶ್ವರ ಬೆಟ್ಟದಲ್ಲಿ ಹುಂಡಿ ಎಣಿಕೆ ಕಾರ್ಯ: 34 ದಿನಗಳಲ್ಲಿ ₹2 ಕೋಟಿ ಸಂಗ್ರಹಮಲೆ ಮಹದೇಶ್ವರ ಬೆಟ್ಟದಲ್ಲಿ ಹುಂಡಿ ಎಣಿಕೆ ಕಾರ್ಯ: 34 ದಿನಗಳಲ್ಲಿ ₹2 ಕೋಟಿ ಸಂಗ್ರಹ

Sudden death of wild boars in Chamarajanagar

ಹಂದಿಗಳು ಕಾಯಿಲೆಯಿಂದ ಸಾವನ್ನಪ್ಪುತ್ತಿವೆ ಎಂಬ ಅನುಮಾನ ಶುರುವಾಗಿದ್ದು, ಈ ಕಾಯಿಲೇ ಜನ ಮತ್ತು ಜಾನುವಾರುಗಳಿಗೆ ತಗುಲುತ್ತದೆ ಎಂಬ ಭಯ ಸ್ಥಳೀಯರಲ್ಲಿ ಆವರಿಸಿದೆ. ಸುತ್ತಮುತ್ತಲಿನ ಪ್ರದೇಶಗಳಲ್ಲಿ ಹಂದಿಗಳು ಸಾಯುತ್ತಿದೆ. ಈ ಭಾಗದಲ್ಲಿ ವಿಷ ಪ್ರಾಷನವಾಗಲಿ, ಬೇಟೆಯಾಡುವವರು ಬಳಸುವ ನಾಡಮದ್ದಾಗಲಿ ತಿಂದು ಮೃತಪಟ್ಟಿವೆ ಎಂದಯ ಮೇಲ್ನೋಟಕ್ಕೆ ಕಣಿಸಿಲ್ಲ. ಇದು ಇತರೆ ವನ್ಯಜೀವಿಗಳಿಗೆ ಏನಾದರೂ ತೊಂದರೆಯಾಗಲಿದೆಯೇ ಎಂಬ ಚಿಂತೆಯಲ್ಲಿ ಅರಣ್ಯ ಇಲಾಖೆಯಿದೆ.

Sudden death of wild boars in Chamarajanagar

ಪಶುವೈದ್ಯರು ಹಾಗೂ ಸಿಬ್ಬಂದಿಗಳು ಗ್ರಾಮಕ್ಕೆ ಭೇಟಿ ಪರಿಶೀಲನೆ ನಡೆಸಿ ಮೃತ ಹಂದಿಯನ್ನು ಮರಣೋತ್ತರ ಪರೀಕ್ಷೆ ನಡೆಸಿ ಅದರ ಅಂಗಾಂಗಗಳನ್ನು ಪರೀಕ್ಷಿಸಲು ಪ್ರಯೋಗಾಲಯಕ್ಕೆ ಕಳುಹಿಸಿದ್ದಾರೆ.

ಕಾಲುಬಾಯಿ ಜ್ವರ ಬಂದರೆ ಮೊದಲು ಜಾನುವಾರುಗಳಿಗೆ ಕಾಣಿಸಿಕೊಳ್ಳುತ್ತದೆ. ಬಳಿಕ ಹಂದಿಗಳಿಗೆ ಬರುತ್ತದೆ. ಹಂದಿಗಳಿಗೆ ರೋಗನಿರೋಧಕ ಶಕ್ತಿ ಹೆಚ್ಚಿರುವುದರಿಂದ ಈ ರೋಗಗಳಿಂದ ಮೃತ ಪಟ್ಟಿರಲು ಸಾಧ್ಯವಿಲ್ಲ, ಪ್ರಯೋಗಾಲಯದ ವರದಿ ಬಂದ ಬಳಿಕ ನಿಜಾಂಶ ತಿಳಿಯಲಿದೆ ಎಂದು ಬಂಡೀಪುರ ಸಿಎಫ್ಒ ರಮೇಶ್ ಕುಮಾರ್ ತಿಳಿಸಿದರು.

English summary
More than 50 wild boars Sudden death in Chamarajanagar, farmers and tribal people suspects something wrong know more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X