ಚಾಮರಾಜನಗರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬಿಸಲವಾಡಿ ಗ್ರಾಮದಲ್ಲಿ ಬಿಳಿಕಲ್ಲು ಕ್ವಾರಿ ಕುಸಿದು ಇಬ್ಬರು ಸಾವು, ಓರ್ವನ ಸ್ಥಿತಿ ಗಂಭೀರ

By ಚಾಮರಾಜನಗರ ಪ್ರತಿನಿಧಿ
|
Google Oneindia Kannada News

ಚಾಮರಾಜನಗರ, ಡಿಸೆಂಬರ್‌, 26: ಬಿಳಿಕಲ್ಲು ಕ್ವಾರಿ ಕುಸಿದು ಇಬ್ಬರು ಕಾರ್ಮಿಕರು ಮೃತಪಟ್ಟಿರುವ ಘಟನೆ ಚಾಮರಾಜನಗರ ತಾಲೂಕಿನ ಬಿಸಲವಾಡಿ ಗ್ರಾಮದಲ್ಲಿ ನಡೆದಿದೆ.

ಚಾಮರಾಜನಗರ ತಾಲೂಕಿನ ಕಾಗಲವಾಡಿ ಮೋಳೆ ಗ್ರಾಮದ ಶಿವರಾಜು ಹಾಗೂ ಕುಮಾರ್ ಮೃತ ದುರ್ದೈವಿಗಳಾಗಿದ್ದಾರೆ‌. ಹಾಗೂ ಸಿದ್ದರಾಜು ಎಂಬಾತ ಗಂಭೀರವಾಗಿ ಗಾಯಗೊಂಡಿದ್ದಾನೆ ಎನ್ನುವ ಮಾಹಿತಿ ತಿಳಿದುಬಂದಿದೆ. ರೇಣುಕಾದೇವಿ ಎಂಬುವವರ ಹೆಸರಿನಲ್ಲಿ ಈ ಬಿಳಿಕಲ್ಲು ಕ್ವಾರಿಯ ಪರವಾನಗಿ ಇದೆ ಎನ್ನುವ ಮಾಹಿತಿ ಲಭ್ಯವಾಗಿದೆ. ರೇಣುಕಾದೇವಿ ಪರವಾಗಿ ಅವರ ಪತಿ ಭಾಸ್ಕರ್ ಎಂಬವವರು ಈ ಕ್ವಾರಿಯನ್ನು ನಡೆಸುತ್ತಿದ್ದರು ಎಂದು ತಿಳಿದುಬಂದಿದೆ.

1,693 ವಿಶೇಷ ಚೇತನರಿಗೆ ನೆರವಾದ ಕೇಂದ್ರ ಸರ್ಕಾರ: ₹1 ಕೋಟಿ ವೆಚ್ಚದ ಸಾಧನ ಸಲಕರಣೆ ವಿತರಣೆ1,693 ವಿಶೇಷ ಚೇತನರಿಗೆ ನೆರವಾದ ಕೇಂದ್ರ ಸರ್ಕಾರ: ₹1 ಕೋಟಿ ವೆಚ್ಚದ ಸಾಧನ ಸಲಕರಣೆ ವಿತರಣೆ

ಅಧಿಕಾರಿಗಳ ವಿರುದ್ಧ ಸ್ಥಳೀಯರ ಆಕ್ರೋಶ

ಗುಂಡ್ಲುಪೇಟೆ ತಾಲೂಕಿನ ಮಡಹಳ್ಳಿ ಗುಡ್ಡ ಕುಸಿತ ಪ್ರಕರಣ ಮಾಸುವ ಮುನ್ನವೇ ಈ ದುರಂತ ನಡೆದಿರುವುದು ವಿಪರ್ಯಾಸವಾಗಿದೆ. ಗಣಿಗಾರಿಕೆ ಅಧಿಕಾರಿಗಳ ಜಾಣಮೌನದಿಂದ ದುರಂತ ಮರುಕಳಿಸಿರುವ ಆರೋಪ ಕೇಳಿಬಂದಿದೆ. ದುರ್ಘಟನೆ ಸಂಭವಿಸಿದ ನಂತರ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ ಎಂದು ಅಲ್ಲಿನ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Stone quarry collapse in Bisalawadi village of Chamarajanagr taluk, two people death

ತೋಟದ ಮನೆಗಳ ಸಮೀಪವೇ ಮರಿ ಹಾಕಿದ ಚಿರತೆ

ಚಿರತೆಯೊಂದು ತೋಟದ ಮನೆಗಳ ಸಮೀಪವೇ ಎರಡು ಮರಿಗಳನ್ನು ಹಾಕಿರುವ ಘಟನೆ ಬಿಳಿಗಿರಿರಂಗನಾಥ ದೇವಾಲಯದ ಹುಲಿ ಸಂರಕ್ಷಿತ ಪ್ರದೇಶಕ್ಕೆ ಒಳಪಡುವ ಚಾಮರಾಜನಗರ ತಾಲೂಕಿನ ಕಟ್ನವಾಡಿ ಗ್ರಾಮದಲ್ಲಿ ನಡೆದಿದೆ. ಕಟ್ನವಾಡಿ ಗ್ರಾಮದ ಗುರು ಎಂಬುವವರು ಕಬ್ಬಿನ ಫಸಲನ್ನು ಕಟಾವು ಮಾಡುವಾಗ 15-20 ದಿನಗಳ ಅವಧಿಯ ಎರಡು ಚಿರತೆ ಮರಿಗಳು ಪತ್ತೆಯಾಗಿವೆ. ವಿಚಾರ ತಿಳಿದ ಚಾಮರಾಜನಗರ ವಲಯ ಅರಣ್ಯಾಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಚಿರತೆ ಮರಿಗಳನ್ನು ಜಮೀನಿನಲ್ಲೇ ಬಿಟ್ಟು ನಿಗಾ ಇಟ್ಟಿದ್ದಾರೆ.

ಫೋಟೋ ಕ್ಲಿಕ್ಲಿಸಿಕೊಂಡ ರೈತರು

ಚಿರತೆ ಮರಿ ಹಾಕಿರುವ ಸ್ಥಳದಿಂದ 70-100 ಮೀಟರ್‌ ಅಂತರದಲ್ಲೇ ತೋಟದ ಮನೆಗಳು, ಜನರ ಓಡಾಟ ಹೆಚ್ಚಿನ ಪ್ರಮಾಣದಲ್ಲಿದೆ. ಆದರೆ ಮರಿಗಳನ್ನು ಹಾಕಿದ ಬಳಿಕವೂ ಚಿರತೆ ಜನರಿಗೆ ಕಾಣದಿರುವುದು ಪವಾಡವೇ ಆದಂತಾಗಿದೆ‌. ತಾಯಿ ಚಿರತೆ ಮರಿಗಳನ್ನು ಕರೆದೊಯ್ಯಲಿದೆ ಎಂದು ಅರಣ್ಯ ಇಲಾಖೆಯು ಕ್ಯಾಮರಾಗಳನ್ನು ಅಳವಡಿಸಿ ನಿಗಾ ಇಟ್ಟಿದೆ‌‌. ಮರಿಗಳು ಪತ್ತೆಯಾದ ಬಳಿಕ ರೈತರು ಮರಿಗಳೊಟ್ಟಿಗೆ ಫೋಟೋ ಕ್ಲಿಕ್ಲಿಸಿಕೊಂಡು ಸಂಭ್ರಮಿಸಿದ್ದು, ಈ ದೃಶ್ಯ ಇದೀಗ ಎಲ್ಲೆಡೆ ವೈರಲ್‌ ಆಗಿದೆ.

English summary
Stone quarry collapse in Bisalavadi village of Chamarajanagr taluk, Kagalawadi Mole village of Chamarajanagar taluk Shivaraju and Kumar death
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X