'ಭಾರತದಲ್ಲಿ ಸ್ಟ್ರಾಂಗೆಸ್ಟ್ ಸಿಎಂ ಇದ್ದರೇ.. ಅದು ಸಿದ್ದರಾಮಯ್ಯ ಮಾತ್ರ'
ಚಾಮರಾಜನಗರ, ನವೆಂಬರ್, 18: ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗಿನಿಂದ ಬಿಜೆಪಿ ಆಪಾದನೆ ಮಾಡಿಕೊಂಡೇ ಬರುತ್ತಿದೆ. ಸಿದ್ದರಾಮಯ್ಯ ಅವರನ್ನು ಸಿಎಂ ಸ್ಥಾನದಿಂದ ಕೆಳಗಿಳಿಸಿ ಅಂಥಾ ಪ್ರತಿಭಟನೆ ಮಾಡುತ್ತಾರೆ. ಯಾವ ಕಾರಣಕ್ಕೆ ಸಿದ್ದರಾಮಯ್ಯ ಅವರನ್ನು ಇಳಿಸುತ್ತೀರಿ ಎಂದು ಖ್ಯಾತ ಸಾಹಿತಿ ಕುಂ ವೀರಭದ್ರಪ್ಪ ಪ್ರಶ್ನೆ ಮಾಡಿದ್ದಾರೆ.
ಚಾಮರಾಜನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕರ್ನಾಟಕಕ್ಕೆ ಸಿದ್ದರಾಮಯ್ಯ ಈ ಸಂದರ್ಭದ ಸೂಕ್ತ ಮುಖ್ಯಮಂತ್ರಿ. ಕಾಂಗ್ರೆಸ್ ಉಳಿದಿದೆ ಅಂದರೆ, ಅದಕ್ಕೆ ಮುಖ್ಯ ಕಾರಣ ಸಿದ್ದರಾಮಯ್ಯನವರೇ ಆಗಿದ್ದಾರೆ. ಭಾರತದಲ್ಲಿ ಯಾರಾದರೂ ಸ್ಟ್ರಾಂಗೆಸ್ಟ್ ಸಿಎಂ ಇದ್ದರೆ, ಅದು ಸಿದ್ದರಾಮಯ್ಯ ಎಂದು ಹೇಳಿದರು.

ಮುಡಾ ಪ್ರಕರಣದಲ್ಲಿ ಆಗಿರುವುದು ತಾಂತ್ರಿಕ ನ್ಯೂನತೆ, ಎಲ್ಲಾ ರಾಜಕಾರಣಿಗಳು ಸೈಟ್ ಮಾಡಿದ್ದಾರೆ. ರಾಜಕಾರಣಿಗಳು ಸಂಬಂಧಿಕರ ಹೆಸರಲ್ಲಿ ಸೈಟ್ ಮಾಡಿದ್ದಾರೆ. 14 ಸೈಟ್ ವಿವಾದ ಆಗಿರುವುದು ತಾಂತ್ರಿಕ ಕಾರಣದಿಂದ. ಸೈಟ್ ಹಿಂತಿರುಗಿಸಿದ ಬಳಿಕ ಬಾಯಿ ಮುಚ್ಚಿಕೊಂಡು ಇರಬೇಕಲ್ವಾ? ಅನಾವಶ್ಯಕವಾಗಿ ಕಾರಣ ಇಲ್ಲದೆ, ಸಿದ್ದರಾಮಯ್ಯ ಅವರನ್ನು ಪದಚ್ಯುತಿಗೊಳಿಸಲು ನಡೆಸಿರುವ ಸಂಚಿದು ಎಂದು ಬಿಜೆಪಿ ವಿರುದ್ಧ ಆರೋಪ ಮಾಡುವ ಮೂಲಕ ಆಕ್ರೊಶ ಹೊರಹಾಕಿದರು.
ಇನ್ನು ಕಸಾಪ ಸಮ್ಮೇಳನದ ಅಧ್ಯಕ್ಷತೆ ಕುರಿತು ಮಾತನಾಡಿ, ಮತೀಯ ಶಕ್ತಿ ಬೆಂಬಲದಿಂದ ಅಧಿಕಾರ ಪಡೆದಿರುವ ಮಹೇಶ್ ಜೋಶಿ ಕಾಲಿಟ್ಟ ಕ್ಷಣದಿಂದ ಸರ್ವಾಧಿಕಾರಿ ಧೋರಣೆ ಅನುಸರಿಸುತ್ತಿದ್ದಾರೆ. ಕಸಾಪದಲ್ಲಿ ಈಗ ಡೆಮೊಕ್ರಸಿ ಇಲ್ಲ- ಜಿಲ್ಲಾಧ್ಯಕ್ಷ, ತಾಲೂಕು ಅಧ್ಯಕ್ಷರಿಗೆ ಸ್ವಾತಂತ್ರ್ಯ ಇಲ್ಲದಂತಾಗಿದೆ ಎಂದು ಕಿಡಿಕಾರಿದರು.
ಸಾಹಿತ್ಯೇತರ ಶಕ್ತಿಗಳು, ಮತಿಯ ಶಕ್ತಿಗಳು ಮಂಡ್ಯ ಸಮ್ಮೇಳನಕ್ಕೆ ಪ್ರವೇಶ ಮಾಡುತ್ತಿದ್ದಾರೆ. ಸಾಹಿತ್ಯೇತರನ್ನು ಸಮ್ಮೇಳನದ ಅಧ್ಯಕ್ಷರನ್ನಾಗಿ ಮಾಡಬೇಕು ಎಂಬುದು ಅಪ್ರಬುದ್ಧ ನಿಲುವು. ಯಾವ ಕಾರಣಕ್ಕೂ ಸಾಹಿತ್ಯೇತರು ಸಮ್ಮೇಳನದ ಅಧ್ಯಕ್ಷರಾಗಬಾರದು, ಸಾಹಿತಿಗಳಿಗೆ ಪ್ರಾಧ್ಯಾನತೆ ಕೊಡಬೇಕು. ಅದು ಕನ್ನಡ ಪರಿಷತ್ ಅಲ್ಲ- ಕನ್ನಡ ಸಾಹಿತ್ಯ ಪರಿಷತ್, ಸಾಹಿತ್ಯ ಲೋಕದಲ್ಲಿ ಗಣನೀಯವಾಗಿ ಸೇವೆ ಸಲ್ಲಿಸಿದವರು ಅಧ್ಯಕ್ಷರಾಗಬೇಕು ಎಂದು ಆಗ್ರಹಿಸಿದರು.
ನಿಖಿಲ್ ಬಗ್ಗೆ ಗುರೂಜಿ ಭವಿಷ್ಯ: ಈಗಾಗಲೇ ಚನ್ನಪಟ್ಟಣ ಉಪಚುನಾವಣೆ ಮುಗಿದಿದ್ದು, ಫಲಿತಾಂಶ ಪ್ರಕಟವೊಂದೇ ಬಾಕಿಯಿದೆ. ಇದರ ನಡುವೆಯೇ ಇದೀಗ ಕ್ಷೇತ್ರದಲ್ಲಿ ಸೋಲು, ಗೆಲುವಿನ ಲೆಕ್ಕಾಚಾರಗಳು ಜೋರಾಗಿ ನಡೆಯುತ್ತಿದೆ. ಇನ್ನು ಈ ಕ್ಷೇತ್ರದಲ್ಲಿ ಎನ್‌ಡಿಎ ಮೈತ್ರಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಕೇಂದ್ರ ಸಚಿವ ಕುಮಾರಸ್ವಾಮಿ ಪುತ್ರ ನಿಖಿಲ್ ಕುಮಾರಸ್ವಾಮಿ ಅವರ ರಾಜಕೀಯ ಭವಿಷ್ಯದ ಬಗ್ಗೆ ಗುರೂಜಿವೊಬ್ಬರು ಸ್ಫೋಟಕ ಭವಿಷ್ಯ ನುಡಿದಿದ್ದಾರೆ.
ನವೆಂಬರ್ 13ರಂದು ಚನ್ನಪಟ್ಟಣ ಕ್ಷೇತ್ರಕ್ಕೆ ಉಪಚುನಾವಣೆ ನಡೆದಿದ್ದು, ನವೆಂಬರ್ 23ಕ್ಕ ಫಲಿತಾಂಶ ಹೊರಬೀಳಲಿದೆ. ಇದಕ್ಕೂ ಮೊದಲೇ "ಎನ್‌ಡಿಎ ಮೈತ್ರಿ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಅವರಿಗೆ ರಾಜಯೋಗ ಶುರು ಆಗಿದೆ. ಚನ್ನಪಟ್ಟಣ ಉಪಚುನಾವಣೆಯಲ್ಲಿ ನಿರೀಕ್ಷೆಗೂ ಮೀರಿ ಗೆಲುವು ಸಾಧಿಸಲಿದ್ದಾರೆ ಎಂದು ಡಾ. ಲಕ್ಷ್ಮೀಕಾಂತ್ ಆಚಾರ್ಯ ಗುರೂಜಿ ಸ್ಫೋಟ ಭವಿಷ್ಯ ನುಡಿದು ಗಮನ ಸೆಳೆದಿದ್ದಾರೆ.
ತುಮಕೂರಿನಲ್ಲಿ ಮಾತನಾಡಿದ ಗುರೂಜಿ ಅವರು, 2016ರಲ್ಲಿ ಎಚ್.ಡಿ.ದೇವೆಗೌಡ ಅವರು ತುಮಕೂರು ತಾಲೂಕಿನ ಚಿನಗ ಗ್ರಾಮದಲ್ಲಿರುವ ಮುಕಾಬಿಂಕಾ ದೇವಿ ಅಮ್ಮನ ಸನ್ನಿಧಿಯಲ್ಲಿ ಚಂಡಿಕಾಯಾಗ ಮಾಡಿಸಿದ್ದರು. ಅದರ ಫಲ 2024ಕ್ಕೆ ಲಭಿಸಿದೆ. ಅಂದೇ ಮುಕಾಬಿಂಕಾ ದೇವಿ ನಿಖಿಲ್ ಕುಮಾರಸ್ವಾಮಿಯವರ ಭವಿಷ್ಯ ನುಡಿದಿತ್ತು ಎಂದು ಹೇಳಿದ್ದಾರೆ.
ನಿಖಿಲ್ ಕುಮಾರಸ್ವಾಮಿಗೆ 2023ರಿಂದಲೇ ರಾಜಯೋಗ ಶುರುವಾಗಿದೆ. ನಿಖಿಲ್ ಕುಮಾರಸ್ವಾಮಿ ಮೇಲೆ ಭಗವತಿಯ ಸಂಪೂರ್ಣ ಆಶೀರ್ವಾದ ಆಗಿದೆ, ಅಮ್ಮನವರು ಒಪ್ಪಿಗೆ ಸೂಚಿಸಿದ್ದಾರೆ ಎಂದು ಭವಿಷ್ಯ ನುಡಿದ್ದಾರೆ. ಇನ್ನು ನಿಖಿಲ್ ಕುಮಾರಸ್ವಾಮಿ ಅವರಿಗೆ ಮುಂದಿನ ದಿನಗಳಲ್ಲಿ ಅಮ್ಮನ ಆಶೀರ್ವಾದ, ಜಯಶೀಲರಾಗುವಂತಹ ಎಲ್ಲಾ ಅನುಗ್ರಹವನ್ನ ಅಮ್ಮನವರು ಮಾಡಿಕೊಟ್ಟಿದ್ದಾರೆ. ಈ ಬಾರಿ ಅಮ್ಮನವರ ಆಶಿರ್ವಾದ ಆಗಿರುವುದರಿಂದ ಗೆಲುವು ಖಚಿತವಾಗಿದೆ ಎಂದರು.












Click it and Unblock the Notifications