ದಲಿತರೇ ಎಚ್ಚರ! ಸಿದ್ದರಾಮಯ್ಯ ಒಬ್ಬ ಸುಳ್ಳುಗಾರ: ಶ್ರೀನಿವಾಸ ಪ್ರಸಾದ್

By: ಒನ್ಇಂಡಿಯಾ ಪ್ರತಿನಿಧಿ
Subscribe to Oneindia Kannada

ಚಾಮರಾಜನಗರ, ನವೆಂಬರ್ 27: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನುತುಘಲಕ್ ಎಂದಿದ್ದ ಮಾಜಿ ಸಚಿವ ವಿ ಶ್ರೀನಿವಾಸ ಪ್ರಸಾದ್ ಅವರು ಈಗ ಸಿದ್ದರಾಮಯ್ಯ ಅವರನ್ನು ಮಹಾನ್ ಸುಳ್ಳುಗಾರ ಎಂದಿದ್ದಾರೆ. ದಲಿತ ನಾಯಕರ ನಡುವೆ ಒಡಕು ಮೂಡಿಸಲು ಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

ಚಾಮರಾಜನಗರದಲ್ಲಿ ನಡೆದ ಸ್ವಾಭಿಮಾನ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಸಿಎಂ ಆಗಿ, ಓರ್ವ ರಾಜಕಾರಣಿಯಾಗಿ ಸಿದ್ದರಾಮಯ್ಯ ಇನ್ನೂ ಪಳಗಬೇಕಿದೆ. ನನ್ನ ಸಲಹೆಯನ್ನು ತಿರಸ್ಕರಿಸಿದ್ದಕ್ಕೆ ಈಗ ಅನುಭವಿಸುತ್ತಿದ್ದಾರೆ.

V Srinivasa Prasad

ಸಿಎಂ ಆದ ಮೇಲೆ ನನ್ನ ಮಾತು ಕೇಳಿಸಿಕೊಳ್ಳಲೇ ಇಲ್ಲ, ಬದಲಿಗೆ ದಲಿತ ಮುಖಂಡರು, ನಾಯಕರು ರಾಜಕೀಯವಾಗಿ ಬೆಳೆಯುವುದನ್ನು ಸಹಿಸದೆ, ಅವರಲ್ಲೇ ಒಡಕು ಮೂಡಿಸಲು ಸುಳ್ಳುಗಳನ್ನು ಹೆಣೆಯಲು ಸಿದ್ದರಾಮಯ್ಯ ಮುಂದಾದರು.

ಐದು ಬಾರಿ ಲೋಕಸಭೆ ಪ್ರವೇಶ ಮಾಡಿದ್ದು, ವಾಜಪೇಯಿ ಅವರ ಆಡಳಿತದಲ್ಲಿ ಸಚಿವನಾಗಿದ್ದು ಈಗ ಇತಿಹಾಸ, ಸಿದ್ದರಾಮಯ್ಯ ಅವರು ಚಾಮುಂಡೇಶ್ವರಿ ಕ್ಷೇತ್ರದಿಂದ 8 ಸಾವಿರ ಮತ ಪಡೆಯಲು ಹೆಣಗಾಡುತ್ತಿದ್ದರು.ನಂತರ ವರುಣಾ ಕ್ಷೇತ್ರದ ಬಗ್ಗೆ ನಾನೇ ಸಲಹೆ ನೀಡಿದೆ. ಅವರು ಇಂದು ಸಿಎಂ ಆಗಿರುವುದು ಜನತಾ ಪರಿವಾರದ ಬಲದಿಂದ ಎಂಬುದನ್ನು ಮರೆತ್ತಿದ್ದಾರೆ.ಸಮಾಜವಾದಿಯಿಂದ ಬಂದವರು ಈಗ ಲೂಟಿಕೋರರ ನಾಯಕರಾಗಿರುವುದು ದುರಂತ ಎಂದು ಸಿದ್ದರಾಮಯ್ಯ ಅವರನ್ನು ಟೀಕಿಸಿದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Former revenue minister V Srinivas Prasad hits as chief minister at Swabhimana Samavesha in Chamarajanagra on Saturday(November 26). Srinivas Prasad said Siddaramaiah is big liar and trying break unity among Dalit leaders.
Please Wait while comments are loading...