ಇನ್ನು ಮುಂದೆ ಧರ್ಮದ ಬಗ್ಗೆ ಮಾತನಾಡುವುದಿಲ್ಲ ಎಂದ ಸಿದ್ದರಾಮಯ್ಯ

ಚಾಮರಾಜನಗರ, ಡಿಸೆಂಬರ್ 8: 'ನಾನು ಧರ್ಮದ ಬಗ್ಗೆ ಮಾತನಾಡಿದರೆ ವಿವಾದವಾಗುತ್ತದೆ. ಹಾಗಾಗಿ ಇನ್ನು ಮುಂದೆ ಧರ್ಮಗಳ ಬಗ್ಗೆ ಮಾತನಾಡುವುದಿಲ್ಲ' ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ಚಾಮರಾಜನಗರದಲ್ಲಿ ಮಾತನಾಡಿದ ಸಿದ್ದರಾಮಯ್ಯ, 'ನಾನು ಸಿಎಂ ಆಗಿದ್ದಾಗ ಬಸವಾದಿ ಶರಣರು ಲಿಂಗಾಯತ ಧರ್ಮ ಮಾಡಿ ಎಂದು ಅವರೇ ಗಂಟುಬಿದ್ದರು. ಗುರು ಪರಂಪರೆಯವರು ಬಂದು ವೀರಶೈವ ಮಾಡಿ ಎಂದರು. ಗೊಂದಲವಾಗಿ ಮೈನಾರಿಟಿ ಸಮಿತಿಗೆ ವರದಿ ನೀಡಲು ಹೇಳಿದೆ ಎಂದು ತಿಳಿಸಿದರು.

ಬಸವ ಅನುಯಾಯಿಗಳಲ್ಲಿ ಗುರು ಮತ್ತು ವಿರಕ್ತ ಪರಂಪರೆಯವರು ಇರ್ತಾರೆ. ಲಿಂಗಾಯತ ವೀರಶೈವ ಮಹಾಸಭಾದ ಶ್ಯಾಮನೂರು ಶಿವಶಂಕರಪ್ಪ ಲಿಂಗಾಯತ ವೀರಶೈವ ಪ್ರತ್ಯೇಕ ಧರ್ಮ ಮಾಡಿ ಎಂದರು. ಆಗ ಗುರು ಪರಂಪರೆಯವರು ವೀರಶೈವದ್ದೇ ಪ್ರತ್ಯೇಕ ಧರ್ಮ ಮಾಡಿ ಎಂದರು.

Siddaramaiah chamarajanagar lingayat religion issue wrong decision

ಶಿವಶಂಕರಪ್ಪ, ಎಂಬಿ ಪಾಟೀಲ್ ಅವರ ತಪ್ಪುಗಳಿಂದ ನನ್ನ ಬಗ್ಗೆ ಅಪಪ್ರಚಾರ ನಡೆಯಿತು. ಧರ್ಮದ ವಿಚಾರದಲ್ಲಿ ನನಗೇನು ಆಗಬೇಕಿತ್ತು? ಇವರೇ ಮಾಡಿಕೊಂಡಿದ್ದಕ್ಕೆ ನನಗೆ ಕೆಟ್ಟ ಹೆಸರು ಬಂತು.

ಧರ್ಮಗಳ ವಿಚಾರದಲ್ಲಿ ದುಡುಕಬಾರದಿತ್ತು. ನಾನು ಏನೇ ಹೇಳಿದರೂ ಅದು ವಿವಾದವಾಗುತ್ತದೆ. ಇನ್ನು ಮುಂದು ಧರ್ಮದ ವಿಚಾರದಲ್ಲಿ ಎಚ್ಚರಿಕೆಯಿಂದ ಇರುತ್ತೇನೆ ಎಂದು ಸಿದ್ದರಾಮಯ್ಯ ಹೇಳಿದರು.

ಯಡಿಯೂರಪ್ಪಗೆ ವಯಸ್ಸಾಯ್ತು
ಯಡಿಯೂರಪ್ಪ ಅವರಿಗೆ ವಯಸ್ಸಾಯ್ತು. ಲೋಕಸಭೆ ಚುನಾವಣೆ ಒಳಗೆ ಅವರು ಸಿಎಂ ಆಗದೆ ಇದ್ದರೆ ಜೀವನದಲ್ಲಿ ಮತ್ತೆ ಯಾವತ್ತೂ ಸಿಎಂ ಆಗುವುದಿಲ್ಲ ಎಂದು ಅವರಿಗೂ ಗೊತ್ತಾಗಿದೆ ಎಂದು ಸಿದ್ದರಾಮಯ್ಯ ವ್ಯಂಗ್ಯವಾಡಿದರು.

Siddaramaiah chamarajanagar lingayat religion issue wrong decision

ಮೈಸೂರಿನಲ್ಲಿ ಮಾತನಾಡಿದ ಅವರು, ಲೋಕಸಭೆ ಚುನಾವಣೆ ಬಳಿಕ ತಾವು ಸಿಎಂ ಆಗಲು ಸಾಧ್ಯವಿಲ್ಲ ಎಂಬುದು ಯಡಿಯೂರಪ್ಪ ಅವರಿಗೆ ತಿಳಿದಿದೆ. ಈ ಕಾರಣಕ್ಕಾಗಿಯೇ ಅವರು ಕಾಂಗ್ರೆಸ್-ಬಿಜೆಪಿ ಶಾಸಕರ ಖರೀದಿಗೆ ಮುಂದಾಗಿದ್ದಾರೆ. ಆದರೆ, ಇದರಲ್ಲಿ ಅವರು ಯಶಸ್ವಿಯಾಗುವುದಿಲ್ಲ ಎಂದು ಹೇಳಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+