Shivratri Rathotsava: ಮಲೆ ಮಹದೇಶ್ವರ ಬೆಟ್ಟದಲ್ಲಿ ನೆರೆದ ಲಕ್ಷಾಂತರ ಭಕ್ತರ ದಂಡು
ಚಾಮರಾಜನಗರ, ಮಾರ್ಚ್, 11: ಪ್ರಸಿದ್ಧ ಯಾತ್ರಸ್ಥಳವಾದ ಹನೂರು ತಾಲೂಕಿನ ಮಲೆಮಹದೇಶ್ವರ ಬೆಟ್ಟದಲ್ಲಿ ನಡೆಯುತ್ತಿದ್ದ ಶಿವರಾತ್ರಿ ಜಾತ್ರಾ ಪ್ರಯುಕ್ತ ಇಂದು ವೈಭವದಿಂದ ಮಲೆಮಹದೇಶ್ವರ ರಥೋತ್ಸವ ನಡೆಯಿತು.
ಹರಿದು ಬಂದ ಭಕ್ತಸಾಗರ: ಸೋಮವಾರ (ಮಾರ್ಚ್ 11) ಬೆಳಗ್ಗೆ 9:40ರಿಂದ 10:10ರ ವರೆಗೆ ಸಲ್ಲುವ ಶುಭ ಲಗ್ನದಲ್ಲಿ ನಡೆದ ಮಹದೇಶ್ವರ ಸ್ವಾಮಿಯ ಮಹಾ ರಥೋತ್ಸವಕ್ಕೆ ಲಕ್ಷಾಂತರ ಮಂದಿ ಭಕ್ತರು ಸಾಕ್ಷಿಯಾದರು. ಸಾಲೂರು ಮಠದ ಶಾಂತ ಮಲ್ಲಿಕಾರ್ಜುನ ಸ್ವಾಮೀಜಿಯವರ ನೇತೃತ್ವದಲ್ಲಿ ಬೇಡಗಂಪಣ ಸಮುದಾಯದ ಪುಟ್ಟ ಬಾಲೆಯರ ಬೆಲ್ಲದ ಆರತಿಯೊಂದಿಗೆ, ಮಂಗಳವಾದ್ಯಗಳ ಸಮೇತ, ತಾಳ ಮೇಳಗಳ ಜೊತೆಯಲ್ಲಿ ಭಕ್ತಗಣದ ಜೊತೆಗೆ ದೇವಾಲಯದ ಹೊರ ಆವರಣದಲ್ಲಿ ಜಯಘೋಷಗಳ ಜೊತೆ ತೇರು ಸಾಗಿತು.

5 ಲಕ್ಷ ಲಾಡು ಪ್ರಸಾದ ತಯಾರಿ: ಕಳೆದ 5 ದಿನಗಳಿಂದ ಪಾದಯಾತ್ರೆ, ಬಸ್‌ಗಳ ಮೂಲಕ ಕ್ಷೇತ್ರಕ್ಕೆ ಲಕ್ಷಾಂತರ ಮಂದಿ ಭಕ್ತರು ಆಗಮಿಸಿ ದೇವರ ದರ್ಶನ ಪಡೆದು ಹರಕೆ ತೀರಿಸಿದ್ದಾರೆ. ಪ್ರಾಧಿಕಾರವೂ ಕೂಡ 5 ಲಕ್ಷ ಲಾಡು ಪ್ರಸಾದ ತಯಾರಿಸಿ, ಕುಡಿಯುವ ನೀರು, ನಿರಂತರ ದಾಸೋಹ, ಶೌಚಾಲಯದ ವ್ಯವಸ್ಥೆ ಸೇರಿ ಅಚ್ಚುಕಟ್ಟಾದ ವ್ಯವಸ್ಥೆ ಕಲ್ಪಿಸಿತ್ತು.












Click it and Unblock the Notifications