ಯುವಕರಿಗೂ 'ಶಕ್ತಿ' ಯೋಜನೆ ಟಿಕೆಟ್ ಕೊಟ್ಟು ಯಾಮಾರಿಸಿದ ಕಂಡಕ್ಟರ್-ಮುಂದೇನಾಯ್ತು ನೋಡಿ
ಚಾಮರಾಜನಗರ, ಅಕ್ಟೋಬರ್, 27: ಕಾಂಗ್ರೆಸ್ ನ 5 ಗ್ಯಾರಂಟಿ ಯೋಜನೆಗಳಲ್ಲಿ ಶಕ್ತಿ ಯೋಜನೆ ಕೂಡ ಒಂದಾಗಿದೆ. ಈ ಯೋಜನೆಯಡಿಯಲ್ಲಿ ಸಾರಿಗೆ ಬಸ್‌ಗಳಲ್ಲಿ ಮಹಿಳೆಯರಿಗೆ ಉಚಿತವಾಗಿ ಪ್ರಯಾಣಿಸಲು ಅವಕಾಶ ಕಲ್ಪಿಸಲಾಗಿದೆ. ಆದರೆ ಇದೀಗ ಇದು ದುರ್ಬಳಕೆ ಆಗಿರುವುದು ಭಾನುವಾರ (ಅಕ್ಟೋಬರ್ 27) ಬೆಳಕಿಗೆ ಬಂದಿದೆ.
ಮೈಸೂರಿನಿಂದ-ಚಾಮರಾಜನಗರಕ್ಕೆ ಬರುತ್ತಿದ್ದ ಬಸ್‌ನಲ್ಲಿ ಯುವಕರಿಂದ ಹಣ ಪಡೆದು ಶಕ್ತಿ ಯೋಜನೆ ಟಿಕೆಟ್ ಅನ್ನು ಕಂಡಕ್ಟರ್ ಕೊಟ್ಟಿದ್ದು ಪ್ರಶ್ನಿಸಿದ್ದಕ್ಕೆ ಅವಾಜ್ ಹಾಕಿದ್ದಾರಂತೆ.

ಬೇಡರಪುರ ಎಂಜಿನಿಯರಿಂಗ್ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿರುವ ಬಸವರಾಜ್ ಮತ್ತಿತ್ತರ ಸ್ನೇಹಿತರು ಚಾಮರಾಜನಗರಕ್ಕೆ ಬರಲು ಹಣ ಕೊಟ್ಟು ಟಿಕೆಟ್ ಪಡೆದ ವೇಳೆ ಶಕ್ತಿ ಯೋಜನೆ ಟಿಕೆಟ್ ಕೊಟ್ಟಿದ್ದಾರೆ. ಬೇರೆ ಸಹ ಪ್ರಯಾಣಿಕರಿಗೂ ಕಂಡಕ್ಟರ್ ಟಿಕೆಟ್ ಕೊಟ್ಟು ಯಾಮಾರಿಸಿದ್ದು, ಕಂಡಕ್ಟರ್ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಿ ಎಂದು ಟಿಕೆಟ್ ಸಮೇತ ವಿದ್ಯಾರ್ಥಿಗಳು ದೂರು ಕೊಟ್ಟಿದ್ದಾರೆ.
ದೂರು ದಾಖಲಿಸಿಕೊಂಡಿರುವ ಚಾಮರಾಜನಗರ ಡಿಪೊ ಮ್ಯಾನೇಜರ್ ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ. ಒಟ್ಟಿನಲ್ಲಿ, ಕಾಂಗ್ರೆಸ್‌ನ ಕನಸಿನ ಯೋಜನೆ ಶಕ್ತಿ ದುರ್ಬಳಕೆ ಆಗುತ್ತಿದ್ದು, ಈ ಬಗ್ಗೆ ಸಾರಿಗೆ ಇಲಾಖೆ ಸೂಕ್ತ ಕ್ರಮ ವಹಿಸಬೇಕಿದೆ ಎನ್ನುವುದು ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರ ಆಗ್ರಹವಾಗಿದೆ.
ಅಕ್ರಮವಾಗಿ ಗಾಂಜಾ ಸಾಗಾಟ: ಅಕ್ರಮವಾಗಿ ಗಾಂಜಾ ಸಾಗಾಟ ಮಾಡಿ ತಗ್ಲಾಂಡಿರುವವರನ್ನು ನಾವು ನೋಡಿರುತ್ತೇವೆ. ಆದರೆ ಇದೀಗ ಜಮೀನಿನಲ್ಲಿ ಫಸಲಿನ ಮಧ್ಯೆ ಅಕ್ರಮವಾಗಿ ಗಾಂಜಾ ಬೆಳೆದಿದ್ದನ್ನು ಅಬಕಾರಿ ಪೊಲೀಸರು ಪತ್ತೆಹಚ್ಚಿ ವ್ಯಕ್ತಿ ಬಂಧಿಸಿರುವ ಘಟನೆ ಚಾಮರಾಜನಗರ ತಾಲೂಕಿನ ಕುಂಟಗುಡಿ ಕಾಲೋನಿಯಲ್ಲಿ ಅಕ್ಟೋಬರ್ 06ರಂದು ನಡೆದಿತ್ತು.
ಖಚಿತ ಮಾಹಿತಿ ಮೇರೆಗೆ ಅಬಕಾರಿ ಉಪ ಆಯುಕ್ತ ನಾಗಶಯನ ಮಾರ್ಗದರ್ಶನದಲ್ಲಿ ಅಬಕಾರಿ ಪೊಲೀಸರು ಈ ಕಾರ್ಯಾಚರಣೆ ನಡೆಸಿದ್ದಾರೆ. ಹನುಮೇಗೌಡ ಎಂಬಾತ ತನ್ನ ಜಮೀನಿನಲ್ಲಿ ಬೆಳೆದಿದ್ದ ತಲಾ 8 ಅಡಿಗೂ ಹೆಚ್ಚು ಎತ್ತರದ ಒಟ್ಟು 18 ಗಾಂಜಾ ಗಿಡಗಳನ್ನು ವಶಕ್ಕೆ ಪಡೆಯಲಾಗಿದ್ದು, ಇವುಗಳ ತೂಕ 26 ಕೆ.ಜಿಯಷ್ಟಿದೆ ಎಂದು ತಿಳಿದುಬಂದಿದೆ.
ಬಂಧಿತನ ವಿರುದ್ಧ ಅಬಕಾರಿ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ. ಈ ಹಿಂದೆಯೂ ಕೂಡ ಹನುಮೇಗೌಡ ಗಾಂಜಾ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿದ್ದ ಎಂದು ಅಬಕಾರಿ ಪೊಲೀಸರು ತಿಳಿಸಿದ್ದಾರೆ.
ಎರಡು ಕ್ವಿಂಟಾಲ್ ಒಣ ಗಾಂಜಾ ವಶ: ಬರೋಬ್ಬರಿ ಎರಡು ಕ್ವಿಂಟಾಲ್‌ನಷ್ಟು ಒಣ ಗಾಂಜಾವನ್ನು ಸಾಗಾಟ ಮಾಡುತ್ತಿದ್ದವರನ್ನು ಬಂಧಿಸಿರುವ ಘಟನೆ ಕೊಳ್ಳೇಗಾಲದ ಮಧುವನಹಳ್ಳಿ ಬೈಪಾಸ್ ಬಳಿ ಫೆಬ್ರವರಿ 13ರಂದು ನಡೆದಿತ್ತು.
ಕೊಳ್ಳೇಗಾಲ ಪೊಲೀಸರು ಭರ್ಜರಿ ಬೇಟೆಯಾಡಿದ್ದು, ಅಕ್ರಮವಾಗಿ ಸಾಗಿಸುತ್ತಿದ್ದ 1.44 ಕೋಟಿ ಮೌಲ್ಯದ ಗಾಂಜಾ ಜೊತೆ 25 ಲಕ್ಷ ಮೌಲ್ಯದ ಲಾರಿ, 9 ಲಕ್ಷ ಮೌಲ್ಯದ ಪ್ಲೈವುಡ್ ಶೀಟ್ ಅನ್ನು ವಶಕ್ಕೆ ಪಡೆದಿದ್ದಾರೆ. ಆರೋಪಿಗಳು ಬೆಂಗಳೂರು, ದಾವಣಗೆರೆ, ಯಾದಗಿರಿ, ಹರಹರ ಮೂಲದವರಾಗಿದ್ದು, ಬೆಂಗಳೂರು ಮೂಲದ ಸೆಂದಿಲ್ ಕುಮಾರ್, ದಾವಣಗೆರೆಯ ರವಿಕುಮಾರ್, ಯಾದಗಿರಿಯ ಉಮಾಶಂಕರ್ ಹಾಗೂ ಹರಿಹರದ ವಿನಾಯಕ ಬಂಧಿತ ಆರೋಪಿಗಳಾಗಿದ್ದಾರೆ.
ಈಚರ್ ವಾಹನದಲ್ಲಿ ಹನೂರು ಭಾಗದಲ್ಲಿ ಮಾರಾಟ ಮಾಡಲು ಗಾಂಜಾ ತರಲಾಗುತ್ತಿದ್ದವರ ಮೇಲೆ ಖಚಿತ ಮಾಹಿತಿ ಮೇರೆಗೆ ಕೊಳ್ಳೇಗಾಲ ಗ್ರಾಮಾಂತರ ಠಾಣೆ ಪೊಲೀಸರು ದಾಳಿ ನಡೆಸಿ ಮಾಲನ್ನು ವಶಕ್ಕೆ ಪಡೆದಿದ್ದಾರೆ. ನಾಲ್ಕು ಬಿಳಿ ಬಣ್ಣದ ಪ್ಲಾಸ್ಟಿಕ್ ಚೀಲಗಳಲ್ಲಿ ಒಟ್ಟು 221 ಕೆ.ಜಿ.ಒಣ ಗಾಂಜವನ್ನು ಪ್ಲೈವುಡ್ ಶೀಟ್‌ಗಳೊಂದಿಗೆ ಅಡಗಿಸಿಕೊಂಡು ಬರುತ್ತಿದ್ದುದು ಪತ್ತೆಯಾಗಿದೆ.
ಸದ್ಯ, ನಾಲ್ವರು ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಕೊಳ್ಳೇಗಾಲ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ತಿಳಿದುಬಂದಿದೆ.












Click it and Unblock the Notifications