36 ದಿನಗಳಲ್ಲಿ ಮಲೆ ಮಾದಪ್ಪನಿಗೆ ಹರಿದುಬಂತು 1.73 ಕೋಟಿ ಹಣ

ಚಾಮರಾಜನಗರ, ಸೆಪ್ಟೆಂಬರ್ 28: ದಕ್ಷಿಣ ಭಾರತದ ಪ್ರಮುಖ ದೇವಾಲಯಗಳಲ್ಲಿ ಒಂದಾದ ಹನೂರು ತಾಲೂಕಿನ ಮಲೆಮಹದೇಶ್ವರ ಬೆಟ್ಟದಲ್ಲಿ ಬುಧವಾರ ಹುಂಡಿ ಎಣಿಕೆ ಕಾರ್ಯ ನಡೆದಿದ್ದು ಮಾದಪ್ಪನ ಸನ್ನಿದಿಯಲ್ಲಿ ಕೇವಲ 36 ದಿನಗಳಲ್ಲಿ 1.73 ಕೋಟಿ ರೂ. ಸಂಗ್ರಹವಾಗಿದೆ.

ಮಲೆಮಹದೇಶ್ವರ ಬೆಟ್ಟ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಹಾಗೂ ಎಡಿಸಿ ಆಗಿರುವ ಕಾತ್ಯಾಯಿನಿದೇವಿ ಮೇಲ್ವಿಚಾರಣೆಯಲ್ಲಿ ನಡೆದ ಹುಂಡಿ ಎಣಿಕೆಯಲ್ಲಿ 1,73,56,691 ರೂ.ಗಳನ್ನು ಅರ್ಪಿಸಿದ್ದು ನಗದು ಹಣದ ಪೈಕಿ 10 ಲಕ್ಷ ರೂ.ಗೂ ಹೆಚ್ಚು ಹಣ ನಾಣ್ಯಗಳ ರೂಪದಲ್ಲೇ ಕಾಣಿಕೆ ಸಲ್ಲಿಸಿದ್ದಾರೆ. ಇನ್ನು, ಹಣದ ಜೊತೆಗೆ 56 ಗ್ರಾಂ ಚಿನ್ನ, 2.1 ಕೆಜಿ ಬೆಳ್ಳಿಯನ್ನು ಕಾಣಿಕೆ ರೂಪದಲ್ಲಿ ಮಲೆ ಮಹದೇಶ್ವರನಿಗೆ ಭಕ್ತರು ಅರ್ಪಿಸಿದ್ದಾರೆ.

ಅಪಾರ ಭಕ್ತರ ಸಮೂಹ ಹೊಂದಿರುವ ಮಲೆ ಮಹದೇಶ್ವರ ಬೆಟ್ಟದಲ್ಲಿ ಮಾರ್ಚ್‌ನಲ್ಲಿ 2.83 ಕೋಟಿ ರೂ, 3.8 ಕೆಜಿ ಬೆಳ್ಳಿ, 70 ಗ್ರಾಂ ಚಿನ್ನ ಸಂಗ್ರಹವಾಗಿತ್ತು. ಏಪ್ರಿಲ್‌ನಲ್ಲಿ 28 ದಿನಗಳಲ್ಲಿ 2.13 ಕೋಟಿ ರೂ ನಗದು, 45 ಗ್ರಾಂ ಚಿನ್ನ, 1.9 ಕೆಜಿ ಬೆಳ್ಳಿ, ಜೂನ್‌ನಲ್ಲಿ 35 ದಿನಗಳಲ್ಲಿ 2 ಕೋಟಿ ರೂ ನಗದು, ಆಗಸ್ಟ್‌ನಲ್ಲಿ 2 ಕೋಟಿ ರೂ ಹಾಗೂ 50 ಗ್ರಾಮ್ ಚಿನ್ನ 2.3 ಕೆಜಿ ಬೆಳ್ಳಿ ಸಂಗ್ರಹವಾಗಿತ್ತು.

Rs 1.76 crore Hundi collection at M.M. Hills temple last 36 Days

ಸಾವಿನಲ್ಲೂ ಸಾರ್ಥಕತೆ ಮೆರೆದ ಕುಟುಂಬ

ಅಪಘಾತದಲ್ಲಿ ಮೃತಪಟ್ಟ ಮಗನ ಕಣ್ಣುಗಳನ್ನು ದಾನ ಮಾಡುವ ಮೂಲಕ ಯುವಕನ ಕೊನೆ ಬಯಕೆ ಈಡೇರಿಸಿ ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದಾನೆ

ಚಂದ್ರಶೇಖರ್ (21) ಮೃತ ದುರ್ದೈವಿ. ಹನೂರು ತಾಲ್ಲೂಕಿನ ಚಿಕ್ಕರಂಗಶೆಟ್ಟಿ ದೊಡ್ಡಿ ಗ್ರಾಮದ ನಿವಾಸಿಯಾಗಿರುವ ನಂಜುಂಡಸ್ವಾಮಿ ಅವರ ಪುತ್ರ ಚಂದ್ರಶೇಖರ್ ಡಿಪ್ಲೋಮಾ ಮುಗಿಸಿ ಇಂಜಿನಿಯರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದರು. ಮಂಗಳವಾರ ಮೈಸೂರಿನಲ್ಲಿ ಸ್ನೇಹಿತನ ಹುಟ್ಟುಹಬ್ಬ ಆಚೆರಣೆಗೆ ಹೋಗಿ ಹಿಂದಿರುಗುವ ಸಮಯದಲ್ಲಿ ನಡೆದ ಅಪಘಾತದಲ್ಲಿ ಚಂದ್ರಶೇಖರ್ ತೀವ್ರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ ಆಸ್ಪತ್ರೆಗೆ ಸಾಗಿಸುವ ವೇಳೆ ಚಂದ್ರೇಶೇಖರ್ ಮೃತಪಟ್ಟಿದ್ದರಿಂದ ಕುಟುಂಬಸ್ಥರು ಲಯನ್ಸ್‌ ಕಣ್ಣಿನ ಆಸ್ಪತ್ರೆಗೆ ನೇತ್ರದಾನ ಮಾಡಿದ್ದಾರೆ.

ಮನೆ ಮಗನ ಸಾವಿನ ನೋವಿನಲ್ಲೂ ಮತ್ತೊಬ್ಬರ ಬಾಳಿಗೆ ಬೆಳಕಾಗುವ ನಿರ್ಧಾರ ತೆಗೆದುಕೊಂಡ ಕುಟುಂಬಸ್ಥರಿಗೆ ಪ್ರಶಂಸೆಯ ಪೂರವೇ ಹರಿದು ಬಂದಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+