Get Updates
Get notified of breaking news, exclusive insights, and must-see stories!

Ram Mandir Inauguration: ಚಾಮರಾಜನಗರ ಜಿಲ್ಲೆಯ ಮುಡಿಗುಂಡಂ ವಿರಕ್ತ ಮಠದ ಸ್ವಾಮೀಜಿಗೆ ಆಹ್ವಾನ

ಚಾಮರಾಜನಗರ, ಜನವರಿ, 18: ಅಯೋಧ್ಯೆಯ ರಾಮ ಮಂದಿರ ಜನವರಿ 22ರಂದು ಉದ್ಘಾಟನೆ ಆಗಲಿದ್ದು, ಈ ಕ್ಷಣವನ್ನು ಕಣ್ತುಂಬಿಕೊಳ್ಳಲು ಬರೀ ಭಾರತ ಅಷ್ಟೇ ಅಲ್ಲ, ವಿಶ್ವವೇ ಕಾತರದಿಂದ ಕಾಯುತ್ತಿದೆ. ಈಗಾಗಲೇ ಅಂತಾರಾಷ್ಟ್ರೀಯ ಮಟ್ಟದ ಕ್ರೀಡಾಪಟುಗಳು, ಸಿನಿ ತಾರೆಯರು, ರಾಜಕೀಯ ಗಣ್ಯರು ಸೇರಿದಂತೆ ಇನ್ನಿತರರಿಗೂ ಆಹ್ವಾನ ನೀಡಲಾಗಿದೆ. ಹಾಗೆಯೇ ಇದೀಗ ಚಾಮರಾಜನಗರ ಜಿಲ್ಲೆ ಕೊಳ್ಳೇಗಾಲ ತಾಲೂಕಿನ ಮುಡಿಗುಂಡಂ ವಿರಕ್ತ ಮಠದ ಶ್ರೀಕಂಠಸ್ವಾಮೀಜಿಗೆ ಅಧಿಕೃತ ಆಹ್ವಾನ ನೀಡಲಾಗಿದೆ.

ಜನವರಿ 22ರಂದು ಅಯೋಧ್ಯೆಯಲ್ಲಿ ರಾಮ ಮಂದಿರ ಉದ್ಘಾಟನೆ ಕಾರ್ಯಕ್ರಮ ಇದ್ದು, ಈ ಹಿನ್ನೆಲೆ ರಾಮ ಮಂದಿರ ಟ್ರಸ್ಟ್‌ನಿಂದ ಚಾಮರಾಜನಗರ ಜಿಲ್ಲೆಯ ಏಕೈಕ ಸ್ವಾಮೀಜಿಗೆ ಮಾತ್ರ ಆಹ್ವಾನ ನೀಡಲಾಗಿದೆ.

Ram Mandir Inauguration: Invitated to Mudigundam Virakta Mutt Swamiji of Chamarajanagar District

ಇನ್ನು ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಸ್ವಾಮೀಜಿ ಅವರು ನಾಳೆಯೇ ಅಯೋಧ್ಯೆಗೆ ತೆರಳಲಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.

ವಿಶ್ವದ ಅತೀ ಉದ್ದದ ಅಗರಬತ್ತಿ: ಅಯೋಧ್ಯೆಯ ರಾಮಮಂದಿರ ಉದ್ಘಾಟನೆ ಜನವರಿ 22ಕ್ಕೆ ನಡೆಯಲಿದೆ. ಇದೇ ಕ್ಷಣಕ್ಕಾಗಿ ಇಡೀ ದೇಶವೆ ಕಾತರದಿಂದ ಕಾಯುತ್ತಿದೆ. ಇನ್ನು ಇಲ್ಲಿನ ರಾಮ ಮಂದಿರವನ್ನು ದೈವಿಕ ಸುಗಂಧದಿಂದ ತುಂಬಲು 108 ಅಡಿ ಉದ್ದದ ಅಗರಬತ್ತಿಯಿಂದ ಬೆಳಗಿಸಲಾಗಿದ್ದು, ಈ ವಿಡಿಯೋ ಭಾರೀ ವೈರಲ್‌ ಆಗುತ್ತಿದೆ. ಹಾಗಾದರೆ ಇದನ್ನು ಎಲ್ಲಿಂದ ತರಲಾಗಿದೆ ಹಾಗೂ ಮಹತ್ವ ಏನೆಂದು ತಿಳಿಯಿರಿ.

ಈ 108 ಅಡಿ ಉದ್ದದ ಅಗರಬತ್ತಿಯನ್ನು ಗುಜರಾತ್‌ನಿಂದ ಕಳುಹಿಸಲಾಗಿದೆ. ರಾಮ ಜನ್ಮಭೂಮಿ ತೀರ್ಥ ಕ್ಷೇತ್ರದ ಅಧ್ಯಕ್ಷ ಮಹಂತ್ ನೃತ್ಯಗೋಪಾಲ್ ದಾಸ್ ಮಹಾರಾಜ್ ಅವರ ಸಮ್ಮುಖದಲ್ಲಿ ಈ ಬೃಹತ್ ಅಗರಬತ್ತಿಯನ್ನು ಬೆಳಗಿಸಲಾಯಿತು. ಎಎನ್‌ಐ ಹಂಚಿಕೊಂಡಿರುವ ಈ ವೀಡಿಯೊದಲ್ಲಿ ಭಕ್ತರು ಅಗರಬತ್ತಿಯನ್ನು ಬೆಳಗಿಸುವಾಗ ಜಯ್ ಶ್ರೀ ರಾಮ್ ಎನ್ನುವ ಘೋಷಣೆಯನ್ನು ತೋರಿಸಲಾಗಿದೆ. ಉದ್ಘಾಟನೆಗೆ ಒಂದು ವಾರ ಮುಂಚಿತವಾಗಿ ಅಯೋಧ್ಯೆಗೆ ಬರಲು ಆರಂಭಿಸಿದ ವಿವಿಧ ಉಡುಗೊರೆಗಳಲ್ಲಿ 108 ಅಡಿ ಉದ್ದದ ಧೂಪದ್ರವ್ಯವೂ ಕೂಡ ಸೇರಿದೆ.

2024ರ ಜನವರಿ 22ರಂದು ಅಯೋಧ್ಯೆಯಲ್ಲಿ ನಿರ್ಮಾಣವಾದ ರಾಮ ಮಂದಿರ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಉಪಸ್ಥಿತಿಯಲ್ಲಿ ಭವ್ಯ ಸಮಾರಂಭದಲ್ಲಿ ಉದ್ಘಾಟನೆ ಆಗಲಿದೆ. ಇದೇ ಕ್ಷಣಕ್ಕಾಗಿ ಇಡೀ ದೇಶವೇ ತುದಿಗಾಲಲ್ಲಿ ಕಾಯುತ್ತಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+