Get Updates
Get notified of breaking news, exclusive insights, and must-see stories!

ಹೆಗ್ಗವಾಡಿ: ಭೂಮಾತೆಯ ಒಡಲು ಸೇರಿದ ಧ್ರುವನಾರಾಯಣ: ಮುಗಿಲು ಮುಟ್ಟಿದ ಕುಟುಂಬಸ್ಥರ ಆಕ್ರಂದನ

ಚಾಮರಾಜನಗರ, ಮಾರ್ಚ್‌, 12: ಕೆಪಿಸಿಸಿ ಕಾರ್ಯಧ್ಯಕ್ಷ, ಮಾಜಿ ಸಂಸದ ಆರ್. ಧ್ರುವನಾರಾಯಣ್ ತಮ್ಮ ಹುಟ್ಟೂರಿನ ಜನ್ಮದಾತರ ಸಮಾಧಿಯ ಬಳಿಯೇ ಭೂತಾಯಿಯ ಒಡಲಲ್ಲಿ ಚಿರನಿದ್ರೆಗೆ ಜಾರಿದ್ದಾರೆ. ಆ ಮೂಲಕ ಇನ್ನೇನಿದ್ದರೂ ಧ್ರುವನಾರಾಯಣ್ ಅವರು ಜನರ ಪಾಲಿಗೆ ಬರೀ ನೆನಪಷ್ಟೆ.

ಚಾಮರಾಜನಗರ ಮೀಸಲು ಲೋಕಸಭಾ ಕ್ಷೇತ್ರದಿಂದ ಎರಡು ಭಾರಿ ಸಂಸದರಾಗಿ ಜನ ಮನ್ನಣೆ ಪಡೆದಿದ್ದ ಆರ್. ಧ್ರುವನಾರಾಯಣ್ ಅವರು ಶನಿವಾರ ಬೆಳಗ್ಗೆ ಮೈಸೂರಿನ ಸ್ವಗೃಹದಲ್ಲಿ ಅಸ್ವಸ್ಥರಾಗಿದ್ದು, ಆಸ್ಪತ್ರೆಗೆ ಕರೆದುಕೊಂಡು ಹೋಗುವಾಗ ಮಾರ್ಗದ ಮಧ್ಯೆ ಮೃತಪಟ್ಟಿದ್ದರು. ಅವರ ಅಂತ್ಯಕ್ರಿಯೆ ಕುಟುಂಬದರ ಬಯಕೆಯಂತೆ ಹುಟ್ಟೂರಾದ ಚಾಮರಾಜನಗರ ತಾಲ್ಲೂಕಿನ ಗುಂಡ್ಲುಪೇಟೆ ವಿಧಾನಸಭಾ ಕ್ಷೇತ್ರದ ಹೆಗ್ಗವಾಡಿ ಗ್ರಾಮದ ತೋಟದಲ್ಲಿ ಹಿಂದೂ ಸಂಪ್ರದಾಯದಂತೆ ನೇರವೇರಿತು.

ಸಾವಿರಾರು ಅಭಿಮಾನಿಗಳು, ಬಂಧು ಬಳಗದವರ ಸಮ್ಮುಖದಲ್ಲಿ ಧ್ರುವನಾರಾಯಣ್ ಅವರ ಅಂತ್ಯಕ್ರಿಯೆ ನೆರವೇರಿತು. ಧ್ರುವನಾರಾಯಣ ಅವರ ಹಿರಿಯ ಪುತ್ರ ದರ್ಶನ್ ದೃವ ಧಾರ್ಮಿಕ ವಿಧಿವಿಧಾನ ಕಾರ್ಯಗಳನ್ನು ನೆರವೇರಿಸಿದರು. ಜನ್ಮದಾತರ ಸಮಾಧಿಯ ಬಳಿ ಆರ್. ಧ್ರುವನಾರಾಯಣ್ ಅಜರಾಮರರಾದರು.

ಇದಕ್ಕೂ ಮುನ್ನ ಪಾರ್ಥೀವ ಶರೀರವನ್ನು ರುದ್ರಭೂಮಿಗೆ ತಂದಾಗ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಹೆಗಲುಕೊಟ್ಟಿದ್ದು ವಿಶೇಷವಾಗಿತ್ತು. ಹಾಗೂ ಪಾರ್ಥೀವ ಶರೀರದ ಮುಂದೆ ಗದ್ಗದಿತರಾದ ಡಿ.ಕೆ.ಶಿವಕುಮಾರ್ ಕೈಎತ್ತಿ ನಮಿಸಿದ್ದು ಕಂಡುಬಂದಿತು.

 ಅಂತ್ಯಕ್ರಿಯೆಯಲ್ಲಿ ಯಾರೆಲ್ಲ ಭಾಗಿಯಾಗಿದ್ದರು?

ಅಂತ್ಯಕ್ರಿಯೆಯಲ್ಲಿ ಯಾರೆಲ್ಲ ಭಾಗಿಯಾಗಿದ್ದರು?

ಅಂತ್ಯಕ್ರಿಯೆಯಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಮಾಜಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಕಾರ್ಯಧ್ಯಕ್ಷ ಸತೀಶ್ ಜಾರಕಿಹೊಳಿ, ಮಾಜಿ ಸಚಿವ ಹಾಗೂ ಶಾಸಕ ಸಿ.ಪುಟ್ಟರಂಗಶೆಟ್ಟಿ, ಆರ್. ನರೇಂದ್ರ, ಮಾಜಿ ಶಾಸಕರಾದ ಎ.ಆರ್. ಕೃಷ್ಣಮೂರ್ತಿ, ಎಸ್ ಬಾಲರಾಜು ಸೇರಿದಂತೆ ಹಲವಾರು ರಾಜಕೀಯ ಮುಖಂಡರು, ಕಾರ್ಯಕರ್ತರು ಭಾಗವಹಿಸಿದ್ದರು.

 ಕಾಂಗ್ರೆಸ್‌ ಕಾರ್ಯಕರ್ತರಿಂದ ಆಗ್ರಹ

ಕಾಂಗ್ರೆಸ್‌ ಕಾರ್ಯಕರ್ತರಿಂದ ಆಗ್ರಹ

ಇದೇ ವೇಳೆ ಈ ಆರ್ ಧ್ರುವನಾರಾಯಣ್ ಅಭಿಮಾನಿಗಳು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರಿಗೆ ಮುಂದಿನ ದಿನಗಳಲ್ಲಿ ನಡೆಯಲಿರುವ ನಂಜನಗೂಡು ವಿಧಾನಸಭಾ ಕ್ಷೇತ್ರದಿಂದ ದರ್ಶನ್ ಧ್ರುವರವರಿಗೆ ಟಿಕೆಟ್ ಕೊಡುವಂತೆ ಒತ್ತಾಯ ಮಾಡಿದರು.

ರಾಷ್ಟ್ರ ರಾಜಕಾರಣದಿಂದ ರಾಜ್ಯ ರಾಜಕಾರಣದತ್ತ ಧ್ರುವನಾರಾಯಣ ಚಿತ್ತ ಮಾಡಿದ್ದು, ಅವರು ನಂಜನಗೂಡು ಮೀಸಲು ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧೆಗೆ ಇಂಗಿತ ವ್ಯಕ್ತಪಡಿಸಿ ವ್ಯಾಪಕ ಪ್ರಚಾರವನ್ನು ಕೈಗೊಂಡಿದ್ದರು. ಇದೀಗ ನಂಜನಗೂಡು ವಿಧಾನಸಭಾ ಕ್ಷೇತ್ರದಿಂದ ದರ್ಶನ್‌ ಅವರನ್ನು ಜನತೆ ಆಯ್ಕೆ ಮಾಡುವ ಮೂಲಕ ಧ್ರುವನಾರಾಯಣ ಅವರ ಕೊನೆಯ ಆಸೆ ಈಡೇರಿಕೆ ಮಾಡಲು ಅವಕಾಶ ಮಾಡಿಕೊಡುವಂತೆ ಅಭಿಮಾನಿಗಳು ಮನವಿ ಮಾಡಿದರು.

 ಹೆಗ್ಗವಾಡಿಯಲ್ಲಿ ಅಂತ್ಯಕ್ರಿಯೆ

ಹೆಗ್ಗವಾಡಿಯಲ್ಲಿ ಅಂತ್ಯಕ್ರಿಯೆ

ಇದೀಗ ಧ್ರುವನಾರಾಯಣ ಹುಟ್ಟೂರಿನಲ್ಲಿ ನೀರವ ಮೌನ ಮನೆ ಮಾಡಿದೆ. ಧ್ರುವನಾರಾಯಣ್ ಅವರ ಅಗಲಿಕೆಯನ್ನು ಸಹಿಸಿಕೊಳ್ಳಲು ಬಹಳಷ್ಟು ದಿನಗಳೇ ಬೇಕಾಗಿದೆ. ಅದರಲ್ಲೂ ಚಾಮರಾಜನಗರದಲ್ಲಿ ಕಾಂಗ್ರೆಸ್‌ನ ಮುಂಚೂಣಿ ನಾಯಕರಾಗಿದ್ದ ಧ್ರುವನಾರಾಯಣ ಅವರು ಜಿಲ್ಲೆಯಲ್ಲಿ ಕಾಂಗ್ರೆಸ್ ಬೆಳವಣಿಗೆಗೆ ಸಹಕಾರಿಯಾಗಿದ್ದರು.

ಧ್ರುವನಾರಾಯಣ ಅವರ ಸಾವನ್ನು ಯಾರೂ ನಿರೀಕ್ಷೆ ಮಾಡಿರಲಿಲ್ಲ. ಅವರ ಸಾವು ಎಲ್ಲರಿಗೂ ಭಾರಿ ನೋವುಂಟು ಮಾಡಿದೆ. ಅವರ ಸಾವು ನನಗೆ ನಂಬಲಿಕ್ಕೇ ಆಗಲಿಲ್ಲ. ಅವರು ಬಹಳ ಡಿಸಿಪ್ಲೀನ್ ಲೈಫ್ ಲೀಡ್ ಮಾಡುತ್ತಿದ್ದರು. ಅಂತವರಿಗೆ ಸಾವು ಬಂದಿದೆ ಎಂದರೆ ನಂಬಲು ಸಾಧ್ಯವಾಗುತ್ತಿಲ್ಲ ಎಂಬುದಾಗಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಬೇಸರ ವ್ಯಕ್ತಪಡಿಸಿದರು.

ಅಲ್ಲದೆ ಹಲವು ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದಾರೆ. ಪಕ್ಷದ ಕಾರ್ಯಾಧ್ಯಕ್ಷರಾಗಿ ಒಂದು ದಿನ ಕುಳಿತುಕೊಳ್ಳದೇ ಇಡೀ ರಾಜ್ಯದಲ್ಲಿ ಸಂಚಾರ ಮಾಡಿ ಪಕ್ಷ ಸಂಘಟನೆ ಮಾಡುತ್ತಿದ್ದರು. ಅವರ ಸಾವು ಪಕ್ಷಕ್ಕೆ ದೊಡ್ಡ ನಷ್ಟ ಎಂದು ಹೇಳಿದ್ದಾರೆ.

 ರಾಜ್ಯಕ್ಕೆ ತುಂಬಲಾರದ ನಷ್ಟವಾಗಿದೆ

ರಾಜ್ಯಕ್ಕೆ ತುಂಬಲಾರದ ನಷ್ಟವಾಗಿದೆ

ಜಾತಿ, ಧರ್ಮ ಭೇದವಿಲ್ಲದೆ ಎಲ್ಲ ಜನರೂ ಕೂಡ ಅವರನ್ನು ಪ್ರೀತಿಸುತ್ತಿದ್ದರು. ಧ್ರುವನಾರಾಯಣ ಅವರ ಸಾವಿನಿಂದ ರಾಜ್ಯಕ್ಕೆ ತುಂಬಲಾರದ ನಷ್ಟವಾಗಿದೆ. ಮಹದೇವಪ್ರಸಾದ್ ನಿಧನರಾದಾಗ ಹಿನ್ನೆಡೆಯಾಗಿತ್ತು. ಅದನ್ನು ಧ್ರುವನಾರಾಯಣ್ ತುಂಬಿದ್ದರು. ಇದೀಗ ಅವರೇ ನಮ್ಮನ್ನಗಲಿದ್ದಾರೆ. ಇದು ಮತ್ತೆ ನಮ್ಮ ಪಕ್ಷಕ್ಕೆ ದೊಡ್ಡ ಹಿನ್ನೆಡೆಯಾಗಿದೆ ಎಂದು ಹೇಳಿದರು.

ಎರಡು ಬಾರಿ ಶಾಸಕರಾಗಿ, ಎರಡು ಬಾರಿ ಸಂಸದರಾದ ಅಪಾರ ಅನುಭವಗಳಿಸಿದ್ದ ಧ್ರುವನಾರಾಯಣ, ಪಕ್ಷ ಸಂಘಟನೆಯಲ್ಲಿ ಚಾಣಾಕ್ಷ್ಯರಾಗಿದ್ದರು. ಚುನಾವಣೆ ಹೊಸ್ತಿಲಲ್ಲಿ ಹಳೆ ಮೈಸೂರು ಭಾಗದಲ್ಲಿ ಪ್ರಮುಖ ನಾಯಕರಲ್ಲಿ ಒಬ್ಬರಾಗಿದ್ದ ಧ್ರುವನಾರಾಯಣ ಅವರ ನಿಧನದಿಂದ ಈ ಭಾಗದಲ್ಲಿ ಕಾಂಗ್ರೆಸ್‌ಗೆ ದೊಡ್ಡ ಹೊಡೆತ ಬಿದ್ದಂತಾಗಿದೆ. ಬಿ.ರಾಚಯ್ಯ, ಶ್ರೀನಿವಾಸಪ್ರಸಾದ್, ಬಳಿಕ ಪ್ರಮುಖ ದಲಿತ ನಾಯಕರಾಗಿ ಬೆಳೆದವರಾಗಿದ್ದರು. ಎಲ್ಲಾ ಪಕ್ಷದವರೊಂದಿಗೂ ಉತ್ತಮ ಒಡನಾಟ ಹೊಂದಿದ್ದ ಧ್ರುವನಾರಾಯಣ ಅಜಾತಶತ್ರುವಾಗಿದ್ದರು. ಅವರ ಈ ನಿಧನ ಹಳೆ ಮೈಸೂರು ಭಾಗದಲ್ಲಿ ಶೂನ್ಯ ಸೃಷ್ಟಿಸಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+