ಚಾಮರಾಜನಗರದಲ್ಲಿ ಗುತ್ತಿಗೆ ನೌಕರರಿಗೆ ಸಮಾನ ವೇತನ ನೀಡುವಂತೆ ಆಗ್ರಹಿಸಿ ಪ್ರತಿಭಟನೆ
ಚಾಮರಾಜನಗರ, ಅಕ್ಟೋಬರ್.25: ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಇಂದು ಗುರುವಾರ (ಅ.25) ಚಾಮರಾಜನಗರದಲ್ಲಿ ಆರೋಗ್ಯ ಇಲಾಖೆ ಗುತ್ತಿಗೆ ನೌಕರ ನಗರ ಘಟಕ ವತಿಯಿಂದ ಪ್ರತಿಭಟನೆ ನಡೆಸಲಾಯಿತು.
ಪ್ರತಿಭಟನಕಾರರು ಚಾಮರಾಜನಗರದ ಚಾಮರಾಜೇಶ್ವರ ದೇವಾಲಯದಿಂದ ಮೆರವಣಿಗೆ ಹೊರಟು ಜೋಡಿ ರಸ್ತೆ ಮೂಲಕ ಸಾಗಿ ಜಿಲ್ಲಾಡಳಿತ ಭವನ ತಲುಪಿ ಮನವಿ ಪತ್ರ ಸಲ್ಲಿಸಿದರು.
ಗುತ್ತಿಗೆ ನೌಕರರಿಗೆ ಸೇವಾಭದ್ರತೆ ಒದಗಿಸಬೇಕು, ಸಮಾನ ವೇತನ ನೀಡಬೇಕು, ವೇತನ ಶ್ರೇಣಿ ನೀಡಲು ಹರಿಯಣ ಮಾದರಿಯಲ್ಲಿ HR ಪಾಲಿಸಿ ರಚಿಸಬೇಕು. ಕಾನೂನು ತೊಡಕುಗಳನ್ನು ಇಲ್ಲವಾಗಿಸಲು ಸಂಸತ್ತಿನಲ್ಲಿ ನಿರ್ಣಯ ಕೈಗೊಂಡು ಖಾಯಮಾತಿ ಮಾಡಲು ಕ್ರಮಕೈಗೊಳ್ಳಬೇಕು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸಲು ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ಹೇಮಂತ್ ಕುಮಾರ್, ಚಂದನ್, ಶೇಖರ್, ದುಶ್ಯಂತ್, ಡಾ.ಹೇಮಕುಮಾರ್, ವಿಜಯ, ಅನುಪಮ, ನಾಗವೇಣಿ, ಗುರುಪಾದಸ್ವಾಮಿ, ಗಣೇಶ ಪ್ರಸಾದ್, ಸುರೇಶ್ ಸೇರಿದಂತೆ ನೂರಾರು ನೌಕರರು ಭಾಗವಹಿಸಿದ್ದರು.











Click it and Unblock the Notifications