Get Updates
Get notified of breaking news, exclusive insights, and must-see stories!

ರಾಷ್ಟ್ರಪತಿ ಆಗಮನ ಹಿನ್ನೆಲೆ ಬಿಳಿಗಿರಿರಂಗನಬೆಟ್ಟಕ್ಕೆ 2 ದಿನ ಪ್ರವೇಶ ನಿಷೇಧ

ಚಾಮರಾಜನಗರ, ಅಕ್ಟೋಬರ್ 5: ರಾಷ್ಟ್ರಪತಿ ರಾಮನಾಥ್ ಕೋವಿಂದ್ ಚಾಮರಾಜನಗರ ಜಿಲ್ಲಾ ಪ್ರವಾಸದ ಹಿನ್ನೆಲೆಯಲ್ಲಿ ರಾಷ್ಟ್ರಪತಿ ಅಂಗರಕ್ಷಕರು ಜಿಲ್ಲೆಗೆ ಆಗಮಿಸಿದ್ದು, ಕಟ್ಟೆಚ್ಚರ ವಹಿಸಿದ್ದಾರೆ. ಅಲ್ಲದೇ ಜಿಲ್ಲಾ ಪೊಲೀಸರಿಗೂ ಕೆಲ ಸೂಚನೆಗಳನ್ನು ನೀಡಿದ್ದಾರೆ.

ರಾಷ್ಟ್ರಪತಿಗಳ ಅಂಗರಕ್ಷಕರು ಮಂಗಳವಾರ ವಾಯುಸೇನೆ ಹೆಲಿಕಾಪ್ಟರ್ ಮೂಲಕ ಚಾಮರಾಜನಗರ ಮತ್ತು ಬಿಳಿಗಿರಿರಂಗನ ಬೆಟ್ಟಕ್ಕೆ ಭೇಟಿ ನೀಡಿದ್ದು, ಮೂರು- ನಾಲ್ಕು ಬಾರಿ ಹೆಲಿಕಾಪ್ಟರ್ ಮೂಲಕ ಹಾರಾಟ ನಡೆಸಿ ಸಕಲ ತಯಾರಿ ನಡೆಸಿದರು.

ಈಗಾಗಲೇ ಚಾಮರಾಜನಗರ ಮೆಡಿಕಲ್ ಕಾಲೇಜು ಮತ್ತು ಬಿಳಿಗಿರಿರಂಗನ ಬೆಟ್ಟ ಸಮೀಪ ನಿರ್ಮಾಣವಾಗಿರುವ ಹೆಲಿಪ್ಯಾಡ್‌ಗಳನ್ನು ಪರಿಶೀಲಿಸಿದ್ದು, ರಸ್ತೆ ಮಾರ್ಗದಲ್ಲೂ ಸೈನಿಕರು ಟ್ರಯಲ್ ನಡೆಸಿದ್ದಾರೆ. ಬಿಳಿಗಿರಿರಂಗನ ಬೆಟ್ಟ ದೇವಾಲಯಕ್ಕೆ ರಾಷ್ಟ್ರಪತಿಗಳ ಖಾಸಗಿ ಭೇಟಿಯಾಗಿರುವುದರಿಂದ ಪತ್ರಕರ್ತರ ಪ್ರವೇಶಕ್ಕೂ ಅಂದು ನಿರ್ಬಂಧ ಹೇರಲಾಗಿದೆ.

Chamarajanagar: President Ramnath Kovind Visit: People Entry Restricted to Biligirirangana Hill For Next 2 Days

ಸಾರ್ವಜನಿಕರಿಗೆ ನಿರ್ಬಂಧ
ಚಾಮರಾಜನಗರ ಜಿಲ್ಲೆಗೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಭೇಟಿ ಹಿನ್ನೆಲೆ ಅಕ್ಟೋಬರ್ 6 ಮತ್ತು 7 ರಂದು ಬಿಳಿಗಿರಿರಂಗನ ಬೆಟ್ಟಕ್ಕೆ ಸಾರ್ವಜನಿಕರು, ಭಕ್ತರ ಪ್ರವೇಶಕ್ಕೆ ನಿರ್ಬಂಧ ವಿಧಿಸಿ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ.

ಅ.7ರಂದು ವಡ್ಡಗೆರೆ ಹೆಲಿಪ್ಯಾಡ್, ಬಿಳಿಗಿರಿರಂಗನ ಬೆಟ್ಟ, ಚಾಮರಾಜನಗರದ ಸರ್ಕಾರಿ ಮೆಡಿಕಲ್ ಕಾಲೇಜು ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. 15 ಕಿ.ಮೀ. ವ್ಯಾಪ್ತಿಯಲ್ಲಿ ಮಾನವ ರಹಿತ ಏರ್ ಕ್ರಾಫ್ಟ್ ಬಳಕೆ, ಏರ್ ಬಲೂನ್‌ಗಳ ಹಾರಾಟ, ಬ್ಯಾನರ್, ಬಂಟಿಂಗ್ಸ್ ಅಳವಡಿಕೆ ನಿಷೇಧ ಮಾಡಲಾಗಿದೆ.

ರಾಷ್ಟ್ರಪತಿಗಳ ರಾಜ್ಯ ಪ್ರವಾಸದ ಪಟ್ಟಿ
ರಾಷ್ಟ್ರಪತಿ ರಾಮನಾಥ ಕೋವಿಂದ್ ಅ.6ರಿಂದ 8ರವರೆಗೆ ಮೂರು ದಿನಗಳ ಕರ್ನಾಟಕ ರಾಜ್ಯ ಪ್ರವಾಸಕ್ಕೆ ಬರುತ್ತಿದ್ದಾರೆ. ಅ.6 ರಂದು ರಾಜಭವನದಲ್ಲಿ ಸಂಜೆ ಹೈಕೋರ್ಟ್‌ ನ್ಯಾಯಮೂರ್ತಿಗಳು ಮತ್ತು ಅವರ ಕುಟುಂಬಸ್ಥರೊಂದಿಗೆ ಚಹಾಕೂಟದಲ್ಲಿ ಪಾಲ್ಗೊಳ್ಳತ್ತಾರೆ.

Chamarajanagar: President Ramnath Kovind Visit: People Entry Restricted to Biligirirangana Hill For Next 2 Days

ಅ.7ರಂದು ಬೆಳಿಗ್ಗೆ 11.40ಕ್ಕೆ ಚಾಮರಾಜನಗರ ಜಿಲ್ಲೆಯ ಯಳಂದೂರು ತಾಲ್ಲೂಕಿನ ಬಿಳಿಗಿರಿರಂಗನ ಬೆಟ್ಟಕ್ಕೆ ಭೇಟಿ ನೀಡಿ, ದೇವರ ದರ್ಶನ ಪಡೆಯಲಿದ್ದಾರೆ. ಬಳಿಕ ಮಧ್ಯಾಹ್ನ 3.30ರಿಂದ ಸಂಜೆ 4.40ರವರೆಗೆ ಚಾಮರಾಜನಗರ ಮೆಡಿಕಲ್ ಕಾಲೇಜಿನ 450 ಹಾಸಿಗೆಗಳ ಆಸ್ಪತ್ರೆ ಉದ್ಘಾಟಿಸಲಿದ್ದಾರೆ.

ಬಳಿಕ ಅ.8ರಂದು ಬೆಳಿಗ್ಗೆ 11.50ಕ್ಕೆ ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ಶಾರದಾ ಮಠಕ್ಕೆ ಭೇಟಿ ನೀಡಲಿದ್ದಾರೆ ಎಂದು ಅಧಿಕೃತ ಪ್ರವಾಸದ ಪಟ್ಟಿ ತಿಳಿಸಿದೆ.

ರಾಷ್ಟ್ರಪತಿಯವರು ಚಾಮರಾಜನಗರಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಶಿಷ್ಟಾಚಾರದ ಪ್ರಕಾರ ರಾಜ್ಯ ಸರ್ಕಾರದ ಮುಖ್ಯಮಂತ್ರಿಗಳೂ ಸಹ ಹಾಜರಿರಬೇಕಾಗುತ್ತದೆ. ಅಲ್ಲದೆ, ರಾಜ್ಯ ಸರ್ಕಾರದ ಮೆಡಿಕಲ್ ಕಾಲೇಜು ಆಗಿರುವುದರಿಂದ ರಾಜ್ಯ ಸರ್ಕಾರವೇ ಕಾರ್ಯಕ್ರಮ ಆಯೋಜಿಸಿದೆ. ಇಂತಹ ಸಂದರ್ಭದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಮೂಢನಂಬಿಕೆ ಬದಿಗೊತ್ತಿ ಪಾಲ್ಗೊಳ್ಳಲೇಬೇಕಾದ ಅನಿವಾರ್ಯತೆ ಇರುತ್ತದೆ.

Recommended Video

      ಮೊಣಕಾಲು ನೋವಿನಿಂದ ಬಳಲ್ಲುತ್ತಿರುವ ವರುಣ್ ಚಕ್ರವರ್ತಿ! | Oneindia Kannada

      More From
      Prev
      Next
      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+