ಮನೆಯ ಹಿತ್ತಲಲ್ಲೇ ಗಾಂಜಾ ಬೆಳೆದು ಸಿಕ್ಕಿಬಿದ್ದ ಭೂಪ!

By: ಚಾಮರಾಜನಗರ ಪ್ರತಿನಿಧಿ
Subscribe to Oneindia Kannada

ಚಾಮರಾಜನಗರ, ಡಿಸೆಂಬರ್ 31: ವ್ಯಕ್ತಿಯೊಬ್ಬ ತನ್ನ ಮನೆಯ ಹಿತ್ತಲಲ್ಲೇ ಗಾಂಜಾ ಬೆಳೆಸಿ ಪೊಲೀಸರಿಗೆ ಸಿಕ್ಕಿ ಬಿದ್ದು ಜೈಲು ಪಾಲಾದ ಘಟನೆ ಕೊಳ್ಳೇಗಾಲ ತಾಲೂಕಿನ ಸಿಂಗನಲ್ಲೂರು ಗ್ರಾಮದ ಹೊಸ ಬಡಾವಣೆಯಲ್ಲಿ ನಡೆದಿದೆ.

ಗ್ರಾಮದ ನಿವಾಸಿ ದೊಡ್ಡಸಿದ್ದ ಅಲಿಯಾಸ್ ಕರಡಿ ಎಂಬಾತನೇ ಗಾಂಜಾ ಬೆಳೆದು ಪೊಲೀಸರ ಅತಿಥಿಯಾದವನು.[ಹೈದರಾಬಾದಿನಲ್ಲಿ 81.44 ಲಕ್ಷ ಮೌಲ್ಯದ 814 ಕೆಜಿ ಗಾಂಜಾ ವಶ]

Police arrested the man who was caught growing marijuana in the houseback

ಗಾಂಜಾಕ್ಕೆ ಹೆಚ್ಚಿನ ಬೆಲೆ ಸಿಗುತ್ತದೆ ಎಂಬ ಕಾರಣಕ್ಕೆ ದೊಡ್ಡಸಿದ್ದ ಇದನ್ನು ತನ್ನ ಮನೆಯ ಹಿತ್ತಲಲ್ಲೇ ಬೆಳೆದಿದ್ದನು. ಗಿಡ ಹುಲುಸಾಗಿ ಬೆಳೆದಿತ್ತು. ಗಿಡಗಳು ಚಿಕ್ಕದಾಗಿದ್ದಾಗ ನೋಡಲು ಚೆಂಡು ಹೂವಿನ ಗಿಡದಂತೆಯೇ ಇದ್ದ ಕಾರಣ ಯಾರಿಗೂ ಅನುಮಾನ ಬಂದಿರಲಿಲ್ಲ. ಆದರೆ ಬೆಳೆದು ದೊಡ್ಡದಾಗುತ್ತಿದ್ದಂತೆಯೇ ವಿಭಿನ್ನವಾಗಿದ್ದರಿಂದ ಇದು ಯಾವ ಹೂವಿನ ಗಿಡ ಎಂದು ಜನ ಕೇಳುತ್ತಿದ್ದರು. ಆಗ ಆತ ಒಂದೊಂದು ರೀತಿಯ ಹೇಳಿಕೆ ನೀಡಿಕೊಂಡು ಜಾರಿಕೊಳ್ಳುತ್ತಿದ್ದನು.

ಹೆಚ್ಚಿನವರಿಗೆ ಗಾಂಜಾ ಗಿಡದ ಪರಿಚಯ ಇಲ್ಲದ ಕಾರಣ ಆ ಬಗ್ಗೆ ತಲೆಕೆಡಿಸಿಕೊಂಡಿರಲಿಲ್ಲ. ಈ ನಡುವೆ ಸ್ಥಳೀಯರಿಗೆ ಗಾಂಜಾ ಗಿಡದ ಬಗ್ಗೆ ಮಾಹಿತಿ ಸಿಕ್ಕಿದ ಹಿನ್ನೆಲೆಯಲ್ಲಿ ಅವರು ಪೊಲೀಸರಿಗೆ ಮಾಹಿತಿ ನೀಡಿದ್ದರು.

ಮನೆಯ ಹಿತ್ತಲಿನಲ್ಲಿಯೇ ಅಕ್ರಮವಾಗಿ ಗಾಂಜಾ ಗಿಡವನ್ನು ಬೆಳೆದಿರುವ ಬಗ್ಗೆ ಖಚಿತಪಡಿಸಿಕೊಂಡ ಬಳಿಕ ಎಸ್ಪಿ ಕುಲದೀಪ್ ಕುಮಾರ್ ಆರ್. ಜೈನ್ ಹಾಗೂ ಕೊಳ್ಳೇಗಾಲ ಪೊಲೀಸ್ ಉಪ ಅಧೀಕ್ಷಕಿ ಸ್ನೇಹಾ ಅವ ಸಿಪಿಐ ಅಮರನಾರಾಯಣ್ ಅವರ ಮಾರ್ಗದರ್ಶನದಲ್ಲಿ ಕೊಳ್ಳೇಗಾಲ ಗ್ರಾಮಾಂತರ ಠಾಣಾ ಪಿಎಸ್ ಐ ವನರಾಜು ನೇತೃತ್ವದಲ್ಲಿ ತಂಡ ದಾಳಿ ನಡೆಸಿ ಹಿತ್ತಲಿನಲ್ಲಿ ಬೆಳೆದಿದ್ದ ಸುಮಾರು ಐದೂವರೆ ಕೆಜಿಯ ರು 15 ಸಾವಿರ ಮೌಲ್ಯದ ಗಾಂಜಾವನ್ನು ವಶಪಡಿಸಿಕೊಂಡು ದೊಡ್ಡಸಿದ್ದನನ್ನು ಬಂಧಿಸಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Police have arrested the man who was caught growing marijuana in the backyard of the house fell in kollegala taluk singanallur hosa badavane in chamarajnagar.
Please Wait while comments are loading...