Heavy Rain: ಭಾರೀ ಮಳೆಯಿಂದ ಹನೂರು ತಾಲ್ಲೂಕಿನಲ್ಲಿ ಜನಜೀವನ ಅಸ್ತವ್ಯಸ್ತ
Heavy Rain: ಫೆಂಗಲ್ ಚಂಡಮಾರುತ ಹಿನ್ನೆಲೆ ರಾಜ್ಯದ ಹಲವೆಡೆ ಮಳೆರಾಯನ ಆರ್ಭಟ ಮುಂದುವರೆದಿದೆ. ಹಾಗೆಯೇ ಕಳೆದ ಎರಡು ದಿನಗಳಿಂದ ಸತತವಾಗಿ ಬಾರಿ ಮಳೆಯಾಗುತ್ತಿರುವ ಹಿನ್ನೆಲೆ ಹನೂರು ತಾಲೂಕು ವ್ಯಾಪ್ತಿಯಲ್ಲಿ ಜನಜೀವನ ಅಸ್ತವ್ಯಸ್ತವಾಗಿದೆ. ಹಾಗಾದರೆ ಏನೆಲ್ಲಾ ಅವಾತರಗಳು ಸೃಷ್ಟಿಯಾಗಿವೆ ಎನ್ನುವ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.
ಕಳೆದ ಎರಡು ದಿನಗಳಿಂದ ಬೀಳುತ್ತಿರುವ ಬಾರಿ ಮಳೆಯಿಂದ ಶ್ರೀ ಕ್ಷೇತ್ರ ಮಲೆ ಮಹದೇಶ್ವರ ಬೆಟ್ಟದ ತಂಬಡಗೇರಿ ಸಮೀಪದ ಪುಟ್ಟಸ್ವಾಮಿ ಹಾಗೂ ರಾಜೇಶ್ವರಿ ಎಂಬ ದಂಪತಿಗೆ ಸೇರಿದ ಮನೆಯ ಗೋಡೆ ಕುಸಿತು ಅಪಾರ ಪ್ರಮಾಣದ ಪಾತ್ರೆ ಸಾಮಾಗ್ರಿಗಳು ನೆಲಕಚ್ಚಿದೆ. ಪಾತ್ರೆ ಸಾಮಾಗ್ರಿಗಳ ಜೊತೆಗೆ ಗೋಡೆ ಕುಸಿದಿರುವುದರಿಂದ ಸುಮಾರು ಒಂದು ಲಕ್ಷಕ್ಕೂ ಹೆಚ್ಚು ನಷ್ಟ ಉಂಟಾಗಿದೆ. ಇದಲ್ಲದೆ, ಸತತ ಮಳೆ ಆಗುತ್ತಿರುವ ಹಿನ್ನೆಲೆ ಸಂಪೂರ್ಣ ಒಂದು ಭಾಗ ಗೋಡೆ ಕುಸಿಯುವ ಭೀತಿಯಲ್ಲಿ ದಂಪತಿಗಳಿದ್ದಾರೆ.

ಸೂಕ್ತ ಪರಿಹಾರಕ್ಕೆ ಒತ್ತಾಯ: ಶ್ರೀ ಕ್ಷೇತ್ರ ಮಲೆ ಮಹದೇಶ್ವರ ಬೆಟ್ಟದ ತಂಬಡಿಗೇರಿ ನಿವಾಸಿಗಳಾದ ರಾಜೇಶ್ವರಿ ಹಾಗೂ ಪುಟ್ಟಸ್ವಾಮಿ ಬಡವರಾಗಿದ್ದು, ಇರುವ ಮನೆಯ ಗೋಡೆ ಕುಸಿದಿರುವುದರಿಂದ ಹೆದರಿ ಸಂಬಂಧಿಕರ ಮನೆಯಲ್ಲಿ ಆಶ್ರಯ ಪಡೆದಿದ್ದಾರೆ. ಸಂಬಂಧಪಟ್ಟ ಕಂದಾಯ ಇಲಾಖೆ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ ಸೂಕ್ತ ಪರಿಹಾರ ಕೊಡಬೇಕು ಎಂದು ಮನವಿ ಮಾಡಿದ್ದಾರೆ.
ಇನ್ನು ಕಳೆದ ಎರಡು ವರ್ಷಗಳಿಂದ ಸಮರ್ಪಕ ಮಳೆಯಾಗದ ಹಿನ್ನೆಲೆ ಬರಗಾಲದಿಂದ ತತ್ತರಿಸಿದ್ದ ರೈತರಿಗೆ ಈ ಬಾರಿ ಸಮರ್ಪಕ ಮಳೆಯಾದ ಹಿನ್ನೆಲೆ ಉತ್ತಮ ಬೆಳೆಯ ನಿರೀಕ್ಷೆಯಲ್ಲಿದ್ದರು. ಆದರೆ, ಕಳೆದೆರಡು ದಿನಗಳಿಂದ ಬೀಳುತ್ತಿರುವ ಫೆಂಗಲ್ ಚಂಡಮಾರುತದ ಮಳೆಗೆ ಮಲೆ ಮಹದೇಶ್ವರ ಬೆಟ್ಟ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪಡಸಲನತ್ತ ಗ್ರಾಮದ ರೈತ ನಾಗರಾಜರವರಿಗೆ ಸೇರಿದ ರಾಗಿ ಹಾಗೂ ತೊಗರಿ ಬೆಳೆ ಸಂಪೂರ್ಣವಾಗಿ ನೆಲೆ ಕಚ್ಚಿದೆ.
ರೈತ ನಾಗರಾಜುರವರು ತಮಗೆ ಸೇರಿದ ಎರಡೂವರೆ ಎಕರೆ ಜಮೀನಿನಲ್ಲಿ ರಾಗಿ, ತೊಗರಿ ಬೆಳೆದಿದ್ದರು. ಸಮರ್ಪಕ ಮಳೆಯಾಗಿದ್ದ ಹಿನ್ನೆಲೆ ಉತ್ತಮ ಬೆಳೆ ಬೆಳೆದು ಲಾಭದ ನಿರೀಕ್ಷೆಯಲ್ಲಿದ್ದ ರೈತರಿಗೆ ಫೆಂಗಲ್ ಚಂಡಮಾರುತ ಬರಸಿಡಿಲು ಬಡಿದು ಕೈಗೆ ಬಂದ ತುತ್ತು ಬಾಯಿಗೆ ಬಾರದ ರೀತಿ ಆಗಿದೆ. ಸತತವಾಗಿ ಎರಡು ದಿನಗಳಿಂದ ಬೀಳುತ್ತಿರುವ ಭಾರಿ ಮಳೆಗೆ ರಾಗಿ ಬೆಳೆ ಸಂಪೂರ್ಣ ನೆಲೆ ಕಚ್ಚಿರುವುದರಿಂದ ಸಂಪೂರ್ಣ ನಷ್ಟವಾಗಿದೆ. ಸತತವಾಗಿ ಬೀಸುತ್ತಿರುವ ಬಿರುಗಾಳಿಗೆ ತೊಗರಿ ಬೆಳೆಗಳು ಸಹ ಬಾಗಿರುವುದರಿಂದ ಈ ಬೆಳೆಯು ನಷ್ಟವಾಗಿದೆ. ಈ ಹಿನ್ನೆಲೆ ಸಂಬಂಧಪಟ್ಟ ಅಧಿಕಾರಿಗಳು ಸೂಕ್ತ ಪರಿಹಾರ ಕೊಡಬೇಕೆಂದು ರೈತ ನಾಗರಾಜು ಮನವಿ ಮಾಡಿದ್ದಾರೆ.












Click it and Unblock the Notifications