Get Updates
Get notified of breaking news, exclusive insights, and must-see stories!

ಕರಿವರದರಾಜ ಬೆಟ್ಟದ ಬಳಿ ತ್ಯಾಜ್ಯದ ರಾಶಿಯಲ್ಲಿ ಚಿಂದಿ ಆಯುವ ಮಕ್ಕಳು: ಇಲ್ಲಿದೆ ಹೆಚ್ಚಿನ ವಿವರ

ಚಾಮರಾಜನಗರ, ನವೆಂಬರ್‌ 09: ಬಿಳಿಗಿರಿರಂಗನಾಥ ಹುಲಿ ಸಂರಕ್ಷಿತ ಪ್ರದೇಶಕ್ಕೆ ಹೊಂದಿಕೊಂಡಂತಿರುವ ಚಾಮರಾಜನಗರ ಜಿಲ್ಲಾ ಕೇಂದ್ರದಿಂದ ಅಣತಿ ದೂರದಲ್ಲಿರುವ ಕರಿವರದರಾಜ ಬೆಟ್ಟದ ಬಳಿ ಇರುವ ಘನತ್ಯಾಜ್ಯ ವಿಲೇವಾರಿ ಘಟಕದಲ್ಲಿ ಅಸ್ಸಾಂ ರಾಜ್ಯದ ಚಿಂದಿ ಹೆಕ್ಕುವ ಮಂದಿ ಇದ್ದು, ಅವರೊಂದಿಗೆ ಪುಟ್ಟ ಕಂದಮ್ಮಗಳಿದ್ದು, ಅವುಗಳ ಸುರಕ್ಷತೆ ಯಾರಿಗೂ ಬೇಡದಂತಹ ಸ್ಥಿತಿ ಬೆಳಕಿಗೆ ಬಂದಿದೆ.

ಕರಿವರದರಾಜ ಬೆಟ್ಟದ ಸಮೀಪದಲ್ಲಿ ನಗರಸಭೆಯಿಂದ ಘನತ್ಯಾಜ್ಯ ವಿಲೇವಾರಿ ಘಟಕ ಸ್ಥಾಪಿಸಲಾಗಿದ್ದು, ಅದು ದುರ್ನಾತದಿಂದ ಕೂಡಿದೆ. ಕೊಳಗೇರಿಗಿಂತ ಕಡೆಯಾಗಿದೆ ಈ ಪ್ರದೇಶ. ಇಲ್ಲಿ ಜೀವನ ಸಾಗಿಸಲು ಅಸ್ಸಾಂ ರಾಜ್ಯದಿಂದ ರಸ್ತೆ ಬದಿ ಸಿಗುವ ಚಿಂದಿ ಹಾಯ್ದುಕೊಂಡು ಬರುವ ಮಂದಿ ಇರುವರು. ಇವರೊಂದಿಗೆ ಎಳೆ ಕಂದಮ್ಮಗಳು ಇದ್ದು, ಅವುಗಳಿಗೆ ಸುರಕ್ಷತೆ ಇಲ್ಲದಂತಾಗಿದೆ. ಸ್ಥಳೀಯ ಸಂಸ್ಥೆಯು ಇಂತಹ ಅಸಹಾಯಕ ಮಂದಿಯ ಮೇಲೆ ಕಾಳಜಿ ವಹಿಸಿ ರಕ್ಷಣೆ ನೀಡಬೇಕಾಗಿದ್ದು ಕರ್ತವ್ಯವಾಗಿದೆ. ಆದರೆ ಅಧಿಕಾರಿಗಳ ನಿರ್ಲಕ್ಷ್ಯತನದಿಂದ ಅಸಹಾಯಕರು ಸುರಕ್ಷತೆಗೆ ಪರದಾಡುವಂತಾಗಿದೆ.

People of Assam State At The Solid Waste Disposal Plant Near Karivaradharaja Hill

ಚಾಮರಾಜನಗರದ ಹೊರವಲಯದಲ್ಲಿರುವ ಕರಿವರದರಾಜ ವೃಕ್ಷವನದ ಹಿಂಭಾಗದಲ್ಲಿರುವ ಕಸ ವಿಲೇವಾರಿ ಘಟಕವ ದುರ್ನಾತ ಬೀರುವ ಕಸದ ದೊಡ್ಡ ರಾಶಿಗಳ ನಡುವೆ ಚಿಂದಿ ಆಯುವವರ ಮೂವರು ಮಕ್ಕಳು ಇದ್ದಾರೆ. ಅಸ್ಸಾಂ ರಾಜ್ಯದಿಂದ ಜೀವನ ಸಾಗಿಸಲು ಅಲೆಯುತ್ತಾ ಚಾಮರಾಜನಗರದವರೆಗೂ ಬಂದಿರುವ ಚಿಂದಿ ಆಯುವವರಲ್ಲಿ 5 ಜನರು ಕೆಲಸ (ಇಬ್ಬರು ಪುರುಷರು, ಮೂವರು ಮಹಿಳೆಯರು) ಮಾಡುತ್ತಿದ್ದರು.

ಘನ ತ್ಯಾಜ್ಯ ವಿಲೇವಾರಿ ಘಟಕದಲ್ಲಿ ಚಿಂದಿ ಹಾಕುವವರು ಸಮೀರ್, ಮುಕುಲ್, ಶಹೀನಾ, ಮಾಮೂನಿ, ಶಹೀದಾ ಎಂದು ಹೇಳಿಕೊಳ್ಳುವರು. ಇವರೊಂದಿಗೆ 6 ವರ್ಷ, 5 ವರ್ಷ ಮತ್ತು 8-9 ತಿಂಗಳ ಮಗುವೊಂದು ದುರ್ನಾತ ವಾಸನೆಗೆ ಉಸಿರುಗಟ್ಟುವ ವಾತಾವರಣದಲ್ಲಿ ಜೀವನ ಸಾಗಿಸುತ್ತಿದ್ದಾರೆ.

ನಗರಸಭೆ ವ್ಯಾಪ್ತಿಯ ಮನೆಗಳಿಂದ ವಿಂಗಡಣೆಯಾಗದೆ ಬಂದಿರುವ ಘನತ್ಯಾಜ್ಯದ ನಡುವೆ ಚಿಂದಿ ಆಯುವವರು ಯಾವುದೇ ಸುರಕ್ಷತಾ ಸಾಮಗ್ರಿ ಧರಿಸದೆ ಪ್ಲಾಸ್ಟಿಕ್ಗಳನ್ನು ಸಂಗ್ರಹಿಸುತ್ತಿದ್ದರೆ, ತ್ಯಾಜ್ಯದಿಂದ ಹೊರಬರುವ ಕಲುಷಿತ ನೀರು, ವಾತಾರವಣದ ತುಂಬೆಲ್ಲಾ ಆವರಿಸಿರುವ ಮಲೀನದ ನಡುವೆ ಪುಟ್ಟ ಕಂದಮ್ಮಗಳಿದ್ದವು.

People of Assam State At The Solid Waste Disposal Plant Near Karivaradharaja Hill

ತಾನಿರುವ ಜಾಗವು ತನ್ನ ಆರೋಗ್ಯವನ್ನೇ ಚಿಂದಿ ಮಾಡುತ್ತದೆ ಎಂಬ ಅರಿವು ಇಲ್ಲದ ಎರಡು ಮಕ್ಕಳು ಕಸದ ರಾಶಿಯಲ್ಲಿ ಸಿಕ್ಕ ಆಟಿಕೆಗಳೊಂದಿಗೆ ಆಟವಾಡುತ್ತಿದ್ದವು. 8-9 ತಿಂಗಳ ಮಗುವನ್ನು ಸೊಂಟದಲ್ಲಿ ಕೂಡಿಸಿಕೊಂಡಿದ್ದ ಸಣ್ಣ ವಯಸ್ಸಿನ ತಾಯಿ ತನ್ನ ಮತ್ತು ತನ್ನ ಮಗುವಿನ ಭವಿಷ್ಯವನ್ನು ಕಸದ ಮಧ್ಯೆ ಬಂಧಿ ಮಾಡಿಕೊಂಡಿದ್ದಾಳೆ.

ಜಿಲ್ಲಾ ಕೇಂದ್ರದಲ್ಲಿರುವ ನಗರಸಭೆಯೇ ತನ್ನ ವ್ಯಾಪ್ತಿಯಲ್ಲಿ ಕೆಟ್ಟದಾಗಿ ದುಡಿಸಿಕೊಳ್ಳುತ್ತಿದೆ. ಇವರು ಕಸದಲ್ಲಿ ಪ್ಲಾಸ್ಟಿಕ್ ಆಯ್ದುಕೊಂಡು ನಗರಸಭೆಗೆ ಹಣ ಕೊಡುತ್ತಾರೆ. ಬರುವ ಆದಾಯವನ್ನು ಮಾತ್ರ ನೋಡದೆ ದುಡಿಯುವವರ ಆರೋಗ್ಯದ ಕಡೆಯೂ ಗಮನ ನೀಡುತ್ತಿಲ್ಲ. ಇವರೊಂದಿಗೆ ಇರುವ ಮಕ್ಕಳ ಮೇಲೆ ಕಾಳಜಿ ತೋರುತ್ತಿಲ್ಲ ಎನ್ನುವುದು ಶೋಚನೀಯ ಸಂಗತಿಯಾಗಿದೆ.

ಇಲ್ಲಿಗೆ ಭೇಟಿ ನೀಡಿದ ವೇಳೆ ನಗರಸಭೆ ಕಸ ವಿಲೇವಾರಿ ಘಟಕದಲ್ಲಿ ಚಿಂದಿ ಆಯುತ್ತಿದ್ದವರು ಯಾವುದೇ ಸುರಕ್ಷತಾ ಸಲಕರಣೆಗಳನ್ನು ಧರಿಸಿರಲಿಲ್ಲ. ಜೊತೆಗೆ ಇಲ್ಲೇ ಒಣ ಕಸವನ್ನು ಗೊಬ್ಬರವನ್ನಾಗಿ ತಯಾರು ಮಾಡುವ ನಗರಸಭೆ ಸಿಬ್ಬಂದಿಯೂ ಸುರಕ್ಷತಾ ಸಾಮಗ್ರಿಗಳನ್ನು ಹಾಕಿಕೊಂಡಿರಲಿಲ್ಲ.

ಪ್ರಧಾನ ಮಂತ್ರಿ ದಕ್ಷ ಮತ್ತು ಕೌಶಲ ಸಂಪನ್ನ ಹಿತಗ್ರಹಿ ಯೋಜನೆಯಡಿ ೧೮ರಿಂದ ೪೫ ವರ್ಷದೊಳಗಿನ ಚಿಂದಿ ಆಯುವವರು ಸೌಲಭ್ಯ ಪಡೆಯಲು ಅರ್ಹರಾಗಿರುತ್ತಾರೆ. ಇದರಲ್ಲಿ ಫಲಾನುಭವಿಗಳು ಕೌಶಲಾಭಿವೃದ್ಧಿ ತರಬೇತಿ, ಉದ್ಯಮಶೀಲತೆ ಅಭಿವೃದ್ಧಿ ತರಬೇತಿ ಪಡೆಯಹುದಾಗಿತ್ತು. ಚಾಮರಾಜನಗರ ನಗರಸಭೆ ವ್ಯಾಪ್ತಿಯಲ್ಲಿ ಇಂತಹ ಕಾರ್ಯಕ್ರಮಗಳು ನಡೆದಿರುವುದು ಅನುಮಾನವಾಗಿದೆ.

ಚಿಂದಿ ಆಯುವವರು ಅಸಂಘಟಿತ ಕಾರ್ಮಿಕ ವಲಯಕ್ಕೆ ಬರುತ್ತಾರೆ. ಕಾರ್ಮಿಕ ಇಲಾಖೆಯಲ್ಲಿ ಇವರು ನೋಂದಣಿಯಾದರೆ ಹಲವು ಸೌಲಭ್ಯಗಳು ಸಿಗುತ್ತವೆ. ಈ ಸಂಬಂಧ ಜಿಲ್ಲಾ ಕಾರ್ಮಿಕ ಇಲಾಖೆ ಚಿಂದಿ ಆಯುವವರನ್ನು ಪತ್ತೆ ಮಾಡಿ ನೋಂದಣಿ ಮಾಡಿಸಲು ನಗರಸಭೆಗೆ ತಿಂಗಳ ಹಿಂದೆ ಪತ್ರ ಬರೆದಿತ್ತು. ಆದರೆ ಅವರಿಂದ ಯಾವುದೇ ಮಾಹಿತಿ ಬಂದಿಲ್ಲ ಎಂದು ತಿಳಿದುಬಂದಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+