ವಿಶ್ವ ಆನೆ ದಿನದಂದೇ ಹಾವಳಿ ಶರು ಮಾಡಿದ ಗಜರಾಜ-ರಾಷ್ಟ್ರೀಯ ಹೆದ್ದಾರಿಯಲ್ಲಿ ಸವಾರರ ಪರದಾಟ, ವಿಡಿಯೋ ವೈರಲ್‌

World Elephant Day: ಬಂಡೀಪುರ ವ್ಯಾಪ್ತಿಯಲ್ಲಿ ಪ್ರಾಣಿಗಳ ಓಡಾಟದ ದೃಶ್ಯ ಪ್ರವಾಸಿಗರ ಕ್ಯಾಮೆರಾ ಕಣ್ಣಲ್ಲಿ ಸೆರೆಯಾಗಿ, ಅವುಗಳು ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್‌ ಆದ ಘಟನೆಗಳು ನಡೆದಿವೆ. ಇನ್ನು ಇಂದು (ಅಗಸ್ಟ್‌ 12) ವಿಶ್ವ ಆನೆ ದಿನವಾಗಿದ್ದು, ಇಂದೇ‌ ರೋಡಿಗಿಳಿದ ಗಜರಾಜ ವಾಹನ ಸವಾರರನ್ನು ಪರದಾಡುವಂತೆ ಮಾಡಿರುವ ಘಟನೆ ಚಾಮರಾಜನಗರ ಗಡಿಭಾಗವಾದ ತಮಿಳುನಾಡಿನ ಆಸನೂರು ಬಳಿ ನಡೆದಿದೆ.

ಕಬ್ಬು ತುಂಬಿದ ಲಾರಿಗಳ‌ ಮೇಲೆ ದಾಳಿ ಮಾಡಲು ರಸ್ತೆಗಿಳಿದ ಆನೆ ಕಬ್ಬು ತಿಂದ ಬಳಿಕ ರಸ್ತೆಯಲ್ಲಿ ಸುತ್ತಾಡಿದ ಪರಿಣಾಮ ರಾಷ್ಟ್ರೀಯ ಹೆದ್ದಾರಿಯಲ್ಲಿ ಅರ್ಧ ತಾಸು ಸಂಚಾರ ಅಸ್ತವ್ಯಸ್ತವಾಗಿತ್ತು. ಬಳಿಕ, ವಾಹನಗಳ ಶಬ್ಧದಿಂದ ಅರಣ್ಯಕ್ಕೆ ಆನೆ ತೆರಳಿದ್ದು, ವಾಹನ ಸವಾರರು ನಿಟ್ಟುಸಿರು ಬಿಟ್ಟಿದ್ದಾರೆ.

Motorists worried due to elephant attack on national highway near Asanuru Video Viral

ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಬಂಡೀಪುರ ಹುಲಿ ಸಂರಕ್ಷಿತ ಅರಣ್ಯ ಪ್ರದೇಶ ಒಂದಲ್ಲ ಒಂದು ರೀತಿಯಲ್ಲಿ ಸುದ್ದಿಯಾಗುತ್ತಲೇ ಇರುತ್ತದೆ. ಹಾಗೆಯೇ ಇದೀಗ ಈ ಜನಪ್ರಿಯ ಹುಲಿ ರಕ್ಷಿತಾರಣ್ಯ ಪ್ರದೇಶದಲ್ಲಿ ವಿಭಿನ್ನ, ವಿಶೇಷ ಚಿರತೆ ಕ್ಯಾಮರಾಗೆ ಸೆರೆಯಾಗಿದ್ದು, ಚಿರತೆಯ ಎರಡು ಕಣ್ಣುಗಳು ವಿಭಿನ್ನ ಬಣ್ಣದ್ದಾಗಿವೆ.

ವನ್ಯಜೀವಿ ಛಾಯಾಗ್ರಹಕ ಧ್ರುವ್ ಪಾಟೀಲ್ ಈ ಚಿತ್ರವನ್ನು ಸೆರೆ ಹಿಡಿದು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದು, ಭಾರತದಲ್ಲಿ ಈ‌ ರೀತಿ ಚಿರತೆ ಭಾರತದಲ್ಲಿ ಇದೇ ಮೊದಲ ಬಾರಿಗೆ ಪತ್ತೆಯಾಗಿದೆ ಎಂದು ಬರೆದುಕೊಂಡಿದ್ದಾರೆ.

ಹೆಣ್ಣು ಚಿರತೆಯೊಂದು ಮರದ ಮೇಲೆ ವಿರಮಿಸುವ ಚಿತ್ರ ಸೆರೆ ಹಿಡಿಯಲಾಗಿದ್ದು, ಇದರ ಎರಡು ಕಣ್ಣುಗಳು ಸಹ ಬೇರೆ ಬಣ್ಣದ್ದಾಗಿದೆ.‌ ಚಿರತೆಯ ಎಡಗಣ್ಣು ಕಂದು ಬಣ್ಣದ್ದಾಗಿದ್ದು, ಬಲಗಣ್ಣು ನೀಲಿ-ಹಸಿರಿನಿಂದ ಕೂಡಿದೆ. ಕಣ್ಣುಗಳ ಬಣ್ಣಕ್ಕೆ ಹೆಟ್ರೋಕ್ರೊಮಿಯಾ ಎಂಬುದು ಕಾರಣವಾಗಿದ್ದು, ಭಾರತದಲ್ಲಿ ಈ ರೀತಿಯ ವಿಭಿನ್ನ ಕಣ್ಣುಗಳು ಹೊಂದಿರುವ ಚಿರತೆ ದಾಖಲಾಗಿಲ್ಲ ಎಂದು ತಿಳಿದುಬಂದಿದೆ.

ಒಟ್ಟಿನಲ್ಲಿ ಬಂಡೀಪುರದಲ್ಲಿ ಅಪರೂಪದ, ವಿಶೇಷವಾದ, ವಿಭಿನ್ನವಾದ ಚಿರತೆಯನ್ನು ವನ್ಯಜೀವಿ ಛಾಯಾಗ್ರಾಹಕ ಧ್ರುವ್ ಪಾಟೀಲ್ ಪತ್ತೆಹಚ್ಚಿದ್ದಾರೆ.

ಕಾಡೆಮ್ಮೆ ನುಂಗಿದ ವ್ಯಾಘ್ರ: ಚಾಮರಾಜನಗರ ಜುಲ್ಲೆಯಲ್ಲಿ ಕಾಡುಪ್ರಾಣಿಳ ಹಾವಳಿ ಆಗಾಗ ಮುನ್ನೆಲೆಗೆ ಬರುತ್ತಲೇ ಇರುತ್ತದೆ. ಹಾಗೆಯೇ ಇದೀಗ ಜನಪ್ರಿಯ ಹುಲಿ ರಕ್ಷಿತಾರಣ್ಯಗಳಲ್ಲಿ ಒಂದಾದ ಗುಂಡ್ಲುಪೇಟೆ ತಾಲೂಕಿನ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ‌ ಹುಲಿಯೊಂದು ಭರ್ಜರಿ ಬೇಟೆ ಆಡಿ ಪ್ರವಾಸಿಗರ ಮುಂದೆ ಕಾಡೆಮ್ಮೆಯನ್ನು ಚಪ್ಪರಿಸಿ ತಿಂದಿದ್ದು, ಈ ವಿಡಿಯೋ ಇದೀಗ ಭಾರೀ ವೈರಲ್‌ ಆಗುತ್ತಿದೆ.

ಕ್ಯಾಮರಾದಲ್ಲಿ ಸೆರೆ: ಸಫಾರಿಗೆ ತೆರಳಿದ್ದ ವೇಳೆ ಪ್ರವಾಸಿಗರಿಗೆ ಹಚ್ಚ ಹಸಿರಿನ‌ ಹುಲ್ಲಿನ ಮೇಲೆ ವಿರಾಜಮಾನವಾದ ವ್ಯಾಘ್ರ ಕಾಡೆಮ್ಮೆಯ ಮಾಂಸವನ್ನು ಕಿತ್ತು ತಿನ್ನುತ್ತಿರುವ ರೋಮಾಂಚಕ ದೃಶ್ಯ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಇದೀಗ ಭಾರೀ ವೈರಲ್‌ ಆಗುತ್ತಿದೆ.

ಸಾಮಾಜಿಕ ಜಾಲತಾಣಗಳಲ್ಲಿ ವೀಡಿಯೋ ವೈರಲ್: ಬಂಡೀಪುರದ ಕೆರೆ ಬಳಿ ಕಾಡೆಮ್ಮೆ ಬೇಟೆಯಾಡಿ ತಿನ್ನುತ್ತಿದ್ದು, ಪ್ರವಾಸಿಗರು ಎದುರಾದರೂ ಯಾವುದಕ್ಕೂ ಕೇರ್ ಮಾಡದೇ ಹಸಿವು ನೀಗಿಸಿಕೊಂಡಿದೆ. ಸಫಾರಿಗರ‌ ಸದ್ದಿಗೆ ಸಫಾರಿಯಲ್ಲಿ ಪ್ರವಾಸಿಗರ ಕಣ್ಣಿಗೆ ಹುಲಿರಾಯ ರಸದೌತಣ ನೀಡಿದ್ದು, ಸದ್ಯ ಈ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೀಡಿಯೋ ವೈರಲ್ ಆಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+