ಚಾಮರಾಜನಗರ: ರುಚಿಯಿಲ್ಲದ ಊಟ, ಡೀನ್ ದಬ್ಬಾಳಿಕೆ ಖಂಡಿಸಿ ರೊಚ್ಚಿಗೆದ್ದ ಮೆಡಿಕಲ್ ಕಾಲೇಜು ವಿದ್ಯಾರ್ಥಿಗಳು
ಚಾಮರಾಜನಗರ, ನವೆಂಬರ್, 27: ಇತ್ತೀಚಿನ ದಿನಗಳಲ್ಲಿ ರಾಜ್ಯದ ಬಹುತೇಕ ಹಾಸ್ಟೇಲ್‌ಗಳಲ್ಲಿ ಊಟ ಸರಿಯಿಲ್ಲ ಎನ್ನುವ ಆರೋಪಗಳು ಕೇಳಿಬರುತ್ತಲೇ ಇವೆ. ಹಾಗೆಯೇ ಇದೀಗ ರುಚಿ ಇಲ್ಲದ ಊಟ ಹಾಗೂ ವಿದ್ಯಾರ್ಥಿಗಳ ಮೇಲೆ ದಬ್ಬಾಳಿಕೆ ನಡೆಸುತ್ತಿರುವುದನ್ನು ಖಂಡಿಸಿ ಚಾಮರಾಜನಗರ ಮೆಡಿಕಲ್ ಕಾಲೇಜು ವಿದ್ಯಾರ್ಥಿಗಳು ತರಗತಿ ತೊರೆದು ದಿಢೀರ್ ಪ್ರತಿಭಟನೆ ನಡೆಸಿದ ಘಟನೆ ನಡೆದಿದೆ.
ಚಾಮರಾಜನಗರ ಮೆಡಿಕಲ್ ಕಾಲೇಜಿನ ಡೀನ್ ಡಾ.ಎಚ್.ಜಿ.ಮಂಜುನಾಥ್, ಯಾವುದೇ ಸಮಸ್ಯೆ ಇಲ್ಲದೇ
ವಿದ್ಯಾರ್ಥಿಗಳು ನಡೆಸುತ್ತಿದ್ದ ಮೆಸ್ ರದ್ದುಪಡಿಸಿ ಆಸ್ಪತ್ರೆಗೆ ಊಟ ಸರಬರಾಜು ಮಾಡುವ ಗುತ್ತಿಗೆದಾರರಿಗೆ ಗುತ್ತಿಗೆ ಕೊಟ್ಟಿದ್ದಾರೆ. ತಿಂಗಳಿಗೆ 3,600 ರೂಪಾಯಿ ಕೊಟ್ಟರೂ ಕಳೆದ 6 ತಿಂಗಳಿನಿಂದಲೂ ಊಟ ರುಚಿಯಾಗಿರುವುದಿಲ್ಲ, ಕಳಪೆ ಮಟ್ಟದದಿಂದ ಕೂಡಿರುತ್ತದೆ. ಇಂದು ದಿಢೀರ್ ಬೆಳಗ್ಗೆ 10ಕ್ಕೆ ಮೆಸ್ ಕ್ಲೋಸ್ ಆಗಲಿದೆ ಎಂದು ಆದೇಶ ಹೊರಡಿಸಿ, ತಿಂಡಿ ತಿನ್ನುತ್ತಿದ್ದ ಮೂವರ ಮೇಲೆ ಹಲ್ಲೆ ಕೂಡ ನಡೆಸಿದ್ದಾರೆ ಎಂದು ವಿದ್ಯಾರ್ಥಿಗಳು ಆರೋಪಿಸಿದ್ದಾರೆ.

ಮೆಡಿಕಲ್ ಕಾಲೇಜು ವಿದ್ಯಾರ್ಥಿಗಳು ತರಗತಿ ತೊರೆದು ಪ್ರತಿಭಟನೆ ನಡೆಸಿದ್ದಾರೆ ಎನ್ನುವ ಮಾಹಿತಿ ತಿಳಿದುಬಂದಿದೆ.
ರೈತರ ಆಕ್ರೊಶ: ಇನ್ನು ಮತ್ತೊಂದೆಡೆ ಚಾಮರಾಜನಗರ ಜಿಲ್ಲೆಯ ಕುದೇರು ಹಾಲು ಉತ್ಪಾದಕರ ಸಹಕಾರ ಸಂಘವು ರೈತರಿಂದ ಪಡೆಯುವ ಹಾಲಿಗೆ ಒಂದು ರೂಪಾಯಿಯನ್ನು ಕಡಿಮೆ ಮಾಡಿರುವುದನ್ನ ಖಂಡಿಸಿ ತಾಲೂಕು ಕಚೇರಿ ಮುಂಭಾಗದಲ್ಲೊ ನೂರಾರು ರೈತರು ಜಮಯಿಸಿ ಪ್ರತಿಭಟನೆ ನಡೆಸಿದ ಘಟನೆ ಇತ್ತೀಚೆಗಷ್ಟೆ ನಡೆದಿತ್ತು. ಅಲ್ಲದೆ, ಏಕಾಏಕಿ ಕಡಿಮೆ ಮಾಡಿರುವ ಹಾಲಿನ ದರವನ್ನು ಕೂಡಲೇ ಏರಿಸುವಂತೆ ರೈತರು ಆಗ್ರಹಿಸಿದ್ದರು.
ಈ ಸಂದರ್ಭದಲ್ಲಿ ಚಾಮರಾಜನಗರ ಜಿಲ್ಲಾ ರೈತ ಸಂಘದ ಅಧ್ಯಕ್ಷ ಹೊನ್ನೂರು ಬಸವಣ್ಣ ಮಾತನಾಡಿ ಚಾಮುಲ್ ಏಕಾಏಕಿ ಹಾಲಿನ ದರ ಏರಿಕೆ ಮಾಡಿ ರೈತರನ್ನು ಸಂಕಷ್ಟಕ್ಕೆ ಸಿಲುಕಿಸಿದ್ದಾರೆ. ಇಲ್ಲಿನ ಅಧಿಕಾರಿ ವರ್ಗ ಹಾಗೂ ನಿರ್ದೇಶಕರ ವೈಫಲ್ಯದಿಂದ ರೈತರ ಹಾಲಿನ ದರ ಕಡಿಮೆ ಮಾಡಿರುವುದು ಎಷ್ಟು ಸರಿ. ಬೇರೆ ಜಿಲ್ಲೆಯಲ್ಲಿ ಒಂದು ದರ ನಮ್ಮ ಜಿಲ್ಲೆಯಲ್ಲಿ ಒಂದು ದರ ಒಕ್ಕೂಟದ ವತಿಯಿಂದ ತಾರತಮ್ಯದ ನೀತಿ ಎಂದು ಕಟುವಾಗಿ ಟೀಕಿಸಿದ್ದಾರೆ.
ಹಾಲು ಒಕ್ಕೂಟದಲ್ಲಿ ಉತ್ಪಾದನೆ ಮಾಡಿದ ಉತ್ಪಾನ್ನಗಳಿಗೆ ಒಂದು ನಿಗದಿ ಮಾಡಿರುವ ಒಕ್ಕೂಟ, ರೈತರ ಹಾಲಿನ ದರ ಏಕಾಏಕಿ ಕಡಿತ ಮಾಡಿರುವುದು ಖಂಡನೀಯ ಎಂದರು. ಅಲ್ಲದೇ ರೈತರ ಹಿತ ದೃಷ್ಟಿಯಿಂದ ಕಡಿತ ಮಾಡಿರುವ 1 ರೂ ದರವನ್ನು ಮತ್ತೆ ಸೇರಿಸಬೇಕು ಎಂದು ಹಾಲು ಒಕ್ಕೂಟದ ಅಧ್ಯಕ್ಷರಿಗೆ ಮನವಿ ಮಾಡಿದ್ದಾರೆ.
ಬಳಿಕ ಚಾಮುಲ್ ಅಧ್ಯಕ್ಷ ವೈ ಸಿ ನಾಗೇಂದ್ರ ಮಾತನಾಡಿ. ಹಾಲು ಒಕ್ಕೂಟದ ಹಿತದೃಷ್ಟಿಯಿಂದ ರೈತರ ಹಾಲಿನ ದರದಲ್ಲಿ ಒಂದು ರೂಪಾಯಿ ಕಡಿತ ಮಾಡಬೇಕಾಗಿದೆ ವಿನಃ, ಯಾವುದೇ ದುರುದ್ದೇಶ ಇಲ್ಲ. ಈಗಾಗಲೇ ನಮ್ಮ ಹಾಲು ಒಕ್ಕೂಟ ನಷ್ಟದಲ್ಲಿದ್ದು, ಮುಂಬರುವ ದಿನಗಲ್ಲಿ ಈ ದರವನ್ನು ಪರಿಷ್ಕರಣೆ ಮಾಡಿ ರೈತರಿಗೆ ಸೂಕ್ತ ದರ ನೀಡಲಾಗುವುದು. ರೈತರ ಸಹಕಾರ ನಮ್ಮ ಹಾಲು ಒಕ್ಕೂಟಕ್ಕೆ ಅತ್ಯಗತ್ಯ ಎಂದು ಹೇಳಿದ್ದರು.
-
ಆಂಧ್ರಪ್ರದೇಶದಲ್ಲಿ ಕಲಬೆರಕೆ ಹಾಲು ಸೇವಿಸಿ 16 ಮಂದಿ ಸಾವು: ಹಲವು ರಾಜ್ಯಗಳಲ್ಲಿ ಅಧಿಕಾರಿಗಳಿಂದ ದಾಳಿ -
ರೈಲಿನಲ್ಲಿ ಆಹಾರ ಗುಣಮಟ್ಟ, ಅಧಿಕೃತ ವೆಂಡರ್ ಮಾಹಿತಿ ತಿಳಿಯಲು QR ಕೋಡ್ ವ್ಯವಸ್ಥೆ, ಏನಿದು? -
Karnataka Weather: ಮಾ.23ರಿಂದ 28ರವರೆಗೆ 10ಕ್ಕೂ ಅಧಿಕ ಜಿಲ್ಲೆಗಳಿಗೆ ಮಳೆ ಮುನ್ಸೂಚನೆ -
'ಬೆಂಗಳೂರಿನ ಬಸವನಗುಡಿಯಿಂದ ಬೆಳ್ಳಂದೂರಿಗೆ ಹೋಗಿ ದೊಡ್ಡ ತಪ್ಪು ಮಾಡಿಬಿಟ್ಟೆ': ಅಳಲು ತೋಡಿಕೊಂಡ ಕನ್ನಡಿಗ, ಭಾರೀ ವೈರಲ್ -
Pink Line Metro: ಏಪ್ರಿಲ್ನಲ್ಲಿ ಪರೀಕ್ಷೆ ಮುಕ್ತಾಯ, ಮೇ ತಿಂಗಳಲ್ಲಿ ಗುಲಾಬಿ ಮಾರ್ಗದಲ್ಲಿ ಸಂಚಾರ -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
ಮೈಸೂರು, ಬೆಂಗಳೂರು, ವಿಜಯಪುರ ರೈಲು ಪ್ರಯಾಣಿಕರೇ ಗಮನಕ್ಕೆ; ರೈಲುಗಳ ಸಂಚಾರ ಭಾಗಶಃ ರದ್ದು












Click it and Unblock the Notifications