Get Updates
Get notified of breaking news, exclusive insights, and must-see stories!

ವೀರಪ್ಪನ್ ಊರಲ್ಲಿ ಮಾರಿ ಹಬ್ಬ: ಬಾಯಿಗೆ ಬೀಗ, ಬೆನ್ನಿಗೆ ಸರಳು ಚುಚ್ಚಿಕೊಂಡು ಭಕ್ತಿ‌ ಪರಾಕಷ್ಠೆ

ಚಾಮರಾಜನಗರ, ಆಗಸ್ಟ್‌, 28: ಚಾಮರಾಜನಗರ ಜಿಲ್ಲೆ, ಹನೂರು ತಾಲೂಕಿನ ಗೋಪಿನಾಥಂ ಗ್ರಾಮದಲ್ಲಿ ಬುಧವಾರ (ಆಗಸ್ಟ್‌ 28) ಸಂಜೆ ವಿಜೃಂಭಣೆಯಿಂದ ಮಾರಿ ಹಬ್ಬ ನಡೆಯಿತು. ಇನ್ನೂ ಈ ಊರಿಗೂ ಹಾಗೂ ಕಾಡುಗಳ್ಳ ವೀರಪ್ಪನಗೂ ಅವಿನಾಭನ ನಂಟಿದೆ. ಇದು ಹೇಗೆ ಎನ್ನುವ ಸಂಪೂರ್ಣ ಮಾಹಿತಿ ಇಲ್ಲಿ ನೀಡಲಾಗಿದೆ ಗಮನಿಸಿ.

ವಿಜೃಂಭಣೆಯಿಂದ ನಡೆದ ಈ ಮಾರಿಹಬ್ಬದಲ್ಲಿ ಹತ್ತಾರು ಭಕ್ತರು ಸರಳು ಚುಚ್ಚಿಕೊಂಡು ಭಕ್ತಿ ಪರಾಕಾಷ್ಠೆ ಮೆರೆದಿದ್ದಾರೆ. ಹಲವರು ಬಾಯಿಗೆ ಬೀಗ ಹಾಕಿಕೊಂಡು ಹರಕೆ ತೀರಿಸಿದರೇ ಮೂವರು ಬೆನ್ನಿಗೆ ಸರಳು ಚುಚ್ಚಿಕೊಂಡು ನೇತಾಡಿ ಗಿರಗಿಟ್ಲೆಯಂತೆ ಸುತ್ತಿ ಸೇರಿದ್ದ ಭಕ್ತರ ಮೈನವಿರೇಳುವಂತೆ ಮಾಡಿದ್ದಾರೆ.

Mari festival in Criminal Veerappan village Know details

ಅರಣ್ಯಾಧಿಕಾರಿ ಪಿ.ಶ್ರೀನಿವಾಸ್ ಕಟ್ಟಿಸಿದ ದೇಗುಲ ಇದಾಗಿದ್ದು, ಇಲ್ಲಿ ಪ್ರತಿವರ್ಷ ಮಾರಿಯಮ್ಮಹಬ್ಬ ನಡೆಯುತ್ತದೆ. ಈ ಬಾರಿಯೂ ಹೆಚ್ಚು ಜನರು ತಮ್ಮ ಬಾಯಿಗೆ ಬೀಗ ಹಾಕಿಕೊಂಡು ಹರಕೆ ತೀರಿಸಿದ್ದಾರೆ. ವೀರಪ್ಪನ್‌​ನ ಊರಾದ ಗೋಪೀನಾಥಂನಲ್ಲಿ ಕಾಡುಗಳ್ಳನ ನೆನಪು ನೇಪಥ್ಯಕ್ಕೆ ಸರಿಯುತ್ತಿದ್ದರೇ ಅರಣ್ಯಾಧಿಕಾರಿ ಪಿ‌.ಶ್ರೀನಿವಾಸ್ ಅವರ ಸೇವಾ ಕಾರ್ಯವು ವರ್ಷದಿಂದ ವರ್ಷಕ್ಕೆ ಪ್ರವರ್ಧಮಾನಕ್ಕೆ ಬರುತ್ತಿದೆ.

ಮಾರಿಯಮ್ಮ ಹಬ್ಬದ ಆಹ್ವಾನ ಪತ್ರಿಕೆಯಲ್ಲೂ ಶ್ರೀನಿವಾಸ್ ಅವರ ಫೋಟೋವನ್ನು ಗ್ರಾಮಸ್ಥರು ಅಚ್ಚು ಹಾಕಿಸುತ್ತಾರೆ. ಇನ್ನು, ಅರಣ್ಯಾಧಿಕಾರಿ ಕೆಲಸವನ್ನು ಮಾದರಿಯಾಗಿ ತೆಗೆದುಕೊಂಡಿರುವ ಗ್ರಾಮದ ಯುವಕರು ಗ್ರೀನ್ ವಾರಿಯರ್ಸ್ ಎಂಬ ತಂಡ ಕಟ್ಟಿಕೊಂಡು ಪಿ.ಶ್ರೀನಿವಾಸ್ ಕಾರ್ಯವನ್ನು‌ ಶಾಶ್ವತಗೊಳಿಸುತ್ತಿದ್ದಾರೆ.

ಚಾಮರಾಜನಗರ ದಸರಾ ಯಾವಾಗ ಆರಂಭ: ನಾಡಹಬ್ಬ ಮೈಸೂರು ದಸರಾ ಭಾಗವಾಗಿ ಗಡಿಜಿಲ್ಲೆ ಚಾಮರಾಜನಗರ ಜಿಲ್ಲೆಯಲ್ಲೂ ದಸರಾ ಮಹೋತ್ಸವವನ್ನು ಅಕ್ಟೋಬರ್ 7, 8 ಮತ್ತು 9ರಂದು ಒಟ್ಟು ಮೂರು ದಿನಗಳ ಕಾಲ ಅರ್ಥಪೂರ್ಣ ಹಾಗೂ ವಿಜೃಂಭಣೆಯಿಂದ ಆಚರಿಸಲು ನಿರ್ಧರಿಸಲಾಗಿದೆ. ಕಾರ್ಯಕ್ರಮಗಳ ವಿವರ ಇಲ್ಲಿದೆ ನೋಡಿ.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜಿಲ್ಲಾಧಿಕಾರಿ ಶಿಲ್ಪಾನಾಗ್ ಅಧ್ಯಕ್ಷತೆಯಲ್ಲಿ ನಡೆದ ವಿವಿಧ ಸಂಘ ಸಂಸ್ಥೆಗಳ ಮುಖಂಡರು, ಕಲಾವಿದರು, ಅಧಿಕಾರಿಗಳನ್ನೊಳಗೊಂಡ ದಸರಾ ಆಚರಣೆ ಕುರಿತ ಪೂರ್ವಭಾವಿ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಯಿತು.

ಮೈಸೂರು ದಸರಾ ಭಾಗವಾಗಿ ಈ ಹಿಂದಿನಂತೆ ಚಾಮರಾಜನಗರ ದಸರಾ ಮಹೋತ್ಸವವನ್ನು ಮೂರು ದಿನಗಳ ಕಾಲ ಹೆಚ್ಚು ಆಕರ್ಷಕವಾಗಿ ಹಾಗೂ ವಿಭಿನ್ನ ಕಾರ್ಯಕ್ರಮಗಳ ಮೂಲಕ ಅರ್ಥಪೂರ್ಣ ಹಾಗೂ ವಿಜೃಂಭಣೆಯಿಂದ ನಡೆಸಲು ನಿರ್ಧಾರ ತೆಗೆದುಕೊಳ್ಳಲಾಯಿತು.

ಸಭೆಯಲ್ಲಿ ಮಾತನಾಡಿದ ಸಂಘ ಸಂಸ್ಥೆಗಳ ಮುಖಂಡರು, ಕಲಾವಿದರು ದೀಪಾಲಂಕಾರವನ್ನು ವ್ಯಾಪಕವಾಗಿ ಪಟ್ಟಣದಲ್ಲಿ ಮಾಡಬೇಕು. ನಗರ ಪ್ರವೇಶಿಸುವ ಮುಖ್ಯ ದ್ವಾರದಲ್ಲಿ ವಿಶೇಷವಾಗಿ ವಿದ್ಯುತ್ ದೀಪಾಲಂಕಾರ ಇರಬೇಕು. ಸ್ಥಳೀಯ ಕಲಾವಿದರಿಗೆ ಆದ್ಯತೆ ನೀಡಬೇಕು. ರಾಜ್ಯಮಟ್ಟದಲ್ಲಿ ಹೆಸರು ಮಾಡಿರುವ ಜಿಲ್ಲೆಯ ಕಲಾವಿದರು ಹಾಗೂ ಇನ್ನಿತರ ಕಲಾವಿದರನ್ನು ಆಹ್ವಾನಿಸಿ ಕಾರ್ಯಕ್ರಮವನ್ನು ಆಯೋಜಿಸಬೇಕು. ಯುವಕರಿಗೆ ಆದ್ಯತೆ ನೀಡಬೇಕು ಎಂದು ಸಲಹೆ ನೀಡಿದರು.

ವಿದ್ಯಾರ್ಥಿಗಳಿಗೆ ಅವಕಾಶ ಮಾಡಿಕೊಡುವ ಸಾಂಸ್ಕೃತಿಕ ಕಾರ್ಯಕ್ರಮಗಳು ಇರಬೇಕು. ಜಿಲ್ಲೆಯ ಕ್ರೀಡಾ ಸಾಧಕರನ್ನು ಸನ್ಮಾನಿಸಬೇಕು. ಬೊಂಬೆ ಕೂರಿಸುವುದು, ಸಂವಿಧಾನ ಜಾಗೃತಿಯಂತಹ ಕಾರ್ಯಕ್ರಮಗಳು, ಜನಪದ, ರಂಗಗೀತೆ ಸೇರಿದಂತೆ ವೈವಿಧ್ಯಮಯ ಕಾರ್ಯಕ್ರಮಗಳು ನಡೆಯಬೇಕು. ಜನನಮಂಟಪವನ್ನು ಸ್ವಚ್ಚಗೊಳಿಸಿ ದಸರಾ ಮಹೋತ್ಸವದ ಸಂದರ್ಭದಲ್ಲಿ ಅರ್ಥಪೂರ್ಣ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಏರ್ಪಡಿಸಬೇಕು ಎಂಬುದೂ ಸೇರಿದಂತೆ ಇನ್ನಿತರ ಹಲವು ಸಲಹೆ, ಅಭಿಪ್ರಾಯಗಳನ್ನು ಮುಖಂಡರು, ಕಲಾವಿದರು ಸಭೆಯಲ್ಲಿ ನೀಡಿದರು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+