ಮಾದಪ್ಪನ ರಥೋತ್ಸವಕ್ಕೆ ಕ್ಷಣಗಣನೆ: ಮಲೆ ಮಹದೇಶ್ವರ ಬೆಟ್ಟದಲ್ಲಿ ಭಕ್ತ ಸಾಗರ

ಚಾಮರಾಜನಗರ, ಫೆಬ್ರವರಿ 27: ಪವಾಡ ಪುರುಷ ಮಲೆ ಮಹದೇಶ್ವರ ನೆಲೆಸಿರುವ ಮಹದೇಶ್ವರ ಬೆಟ್ಟದಲ್ಲಿ ಮಹಾಶಿವರಾತ್ರಿ ಹಬ್ಬದ ಹಿನ್ನಲೆಯಲ್ಲಿ ಜಾತ್ರೆ ನಡೆಯುತ್ತಿದ್ದು, ಶಿವರಾತ್ರಿಗೆ ಆಗಮಿಸಿ ಮಾದಪ್ಪನ ದರ್ಶನ ಪಡೆದವರ ಪೈಕಿ ಕೆಲವರು ತಮ್ಮ ಊರುಗಳಿಗೆ ಹಿಂತಿರುಗಿದರೆ ಬಹುತೇಕ ಭಕ್ತರು ಕ್ಷೇತ್ರದಲ್ಲಿಯೇ ಉಳಿದುಕೊಂಡಿದ್ದು ಮಾ.1ರಂದು ನಡೆಯಲಿರುವ ರಥೋತ್ಸವ ಮುಗಿಸಿಕೊಂಡು ಹಿಂತಿರುಗಲಿದ್ದಾರೆ. ಹೀಗಾಗಿ ಶಿವರಾತ್ರಿ ಕಳೆದರೂ ಭಕ್ತರ ಎಲ್ಲೆಂದರಲ್ಲಿ ಕಂಡು ಬರುತ್ತಿದ್ದಾರೆ.

ಈಗಾಗಲೇ ಹಲವು ದಿನಗಳ ಹಿಂದೆಯೇ ಆಗಮಿಸಿರುವ ಭಕ್ತರು ಶಿವರಾತ್ರಿ ಜಾತ್ರೆಯನ್ನು ಮುಗಿಸಿಕೊಂಡೇ ಕ್ಷೇತ್ರದಿಂದ ಹೋಗುವುದು ಹಿಂದಿನಿಂದಲೂ ನಡೆದು ಬಂದಿದೆ ಅದರಂತೆ ಜಾತ್ರೆಗೆ ಮುನ್ನ ಪಾದಯಾತ್ರೆ ಮೂಲಕ ಆಗಮಿಸಿರುವ ಭಕ್ತರು ಇಲ್ಲಿ ವಾಸ್ತವ್ಯ ಹೂಡಿದ್ದು ಮಾದಪ್ಪನ ಸ್ಮರಣೆಯಲ್ಲಿ ನಿರತರಾಗಿದ್ದಾರೆ. ಪ್ರತಿವರ್ಷವೂ ಮಲೆಮಹದೇಶ್ವರ ಬೆಟ್ಟದಲ್ಲಿ ಶಿವರಾತ್ರಿ ಹಿನ್ನಲೆಯಲ್ಲಿ ಐದು ದಿನಗಳ ಕಾಲ ಜಾತ್ರೆ ನಡೆಯುತ್ತದೆ. ಪ್ರತಿ ದಿನವೂ ವಿಶೇಷ ಕಾರ್ಯಕ್ರಮಗಳು ನಡೆಯುತ್ತಿದ್ದು ಮಾ.1ರಂದು ರಥೋತ್ಸವ ನಡೆಯಲಿದೆ.

Mahadeshwara Hill Hosts Chariot Festival Amid Shivaratri Celebrations

ಜಾತ್ರೆಗೆ ಮಾದಪ್ಪನ ಭಕ್ತರು ಚಾಮರಾಜನಗರ ಜಿಲ್ಲೆಯಲ್ಲದೇ ಹೊರ ಜಿಲ್ಲೆಗಳ ಕನಕಪುರ, ರಾಮನಗರ, ಬಿಡದಿ, ಚೆನ್ನಪಟ್ಟಣ, ಮಂಡ್ಯ, ಮದ್ದೂರು, ಮಳವಳ್ಳಿ, ನಂಜನಗೂಡು, ಮೈಸೂರು ಸೇರಿದಂತೆ ಹೊರ ರಾಜ್ಯಗಳಿಂದಲೂ ಬರುವುದು ಹಿಂದಿನಿಂದಲೂ ನಡೆದುಕೊಂಡು ಬಂದಿದೆ. ಅದರಲ್ಲೂ ತಮಿಳುನಾಡಿನಲ್ಲಿ ಮಾದಪ್ಪನಿಗೆ ಲಕ್ಷಾಂತರ ಭಕ್ತರಿದ್ದು ಅವರೆಲ್ಲರೂ ಶಿವರಾತ್ರಿ ಜಾತ್ರೆಗೆ ತಪ್ಪದೆ ಆಗಮಿಸಿ ಮಾದಪ್ಪನ ದರ್ಶನ ಮಾಡಿಕೊಂಡು ಹರಕೆ ಸಲ್ಲಿಸಿ ಹಿಂತಿರುಗುತ್ತಾರೆ. ಇವರೆಲ್ಲರೂ ಜಾತ್ರೆಯಲ್ಲಿ ಭಕ್ತಿಭಾವದಿಂದ ಪಾಲ್ಗೊಂಡು ಮಾದಪ್ಪನ ಕೃಪೆಗೆ ಪಾತ್ರರಾಗುತ್ತಾರೆ.

ಈಗಾಗಲೇ ಮಹದೇಶ್ವರ ಬೆಟ್ಟದಲ್ಲಿ ಬೀಡುಬಿಟ್ಟಿರುವ ಸಾವಿರಾರು ಭಕ್ತರು ಬೆಳ್ಳಿ ತೇರು, ಹುಲಿ, ರುದ್ರಾಕ್ಷಿ ಹಾಗೂ ಬಸವ ವಾಹನವನ್ನು ದೇವಸ್ಥಾನದ ಸುತ್ತ ಪ್ರದಕ್ಷಿಣೆ ಹಾಕಿಸಿ ಉತ್ಸವದಲ್ಲಿ ಪಾಲ್ಗೊಂಡಿದ್ದಾರೆ. ಅಲ್ಲದೇ ಹರಕೆ ಹೊತ್ತ ಭಕ್ತರು ಮುಡಿಸೇವೆ, ಉರುಳುಸೇವೆ, ಪಂಜಿನ ಸೇವೆ, ರಜಾ ಹೊಡೆಯುವ ಸೇವೆಗಳನ್ನು ನೆರವೇರಿಸಿದ್ದಾರೆ. ಪ್ರತಿದಿನವೂ ಸರತಿ ಸಾಲಿನಲ್ಲಿ ನಿಂತು ಉಘೆ ಮಾದಪ್ಪ ಎಂಬ ಘೋಷ ಮೊಳಗಿಸಿ ಮಾದಪ್ಪನ ದರ್ಶನ ಪಡೆದು ಪುನೀತರಾಗುತ್ತಿದ್ದಾರೆ.

ಮಾ.1ರಂದು ನಡೆಯುವ ಮಹಾರಥೋತ್ಸವದಲ್ಲಿ ಪಾಲ್ಗೊಂಡು ಆ ನಂತರ ತಮ್ಮ ಊರುಗಳಿಗೆ ತೆರಳಲಿದ್ದಾರೆ. ಭಕ್ತರಿಗೆ ಪ್ರಾಧಿಕಾರದ ವತಿಯಿಂದ ಅಗತ್ಯ ಸೌಕರ್ಯ ಕಲ್ಪಿಸಲಾಗಿದೆ. ದೇವಸ್ಥಾನದ ಮುಂಭಾಗ ಹಾಕಿರುವ ಶಾಮಿಯಾನದ ಬಳಿ, ರಂಗಮಂದಿರ ಸೇರಿದಂತೆ ಇತರೆ ಕಡೆಗಳಲ್ಲಿ ವಾಸ್ತವ್ಯ ಹೂಡಿದ್ದು ಎಲ್ಲೆಲ್ಲೂ ಭಕ್ತ ಸಾಗರ ತುಂಬಿ ತುಳುಕುತ್ತಿದ್ದಾರೆ. ಈಗಾಗಲೇ ಶಿವರಾತ್ರಿ ಪ್ರಯುಕ್ತ ಬೆಟ್ಟದಲ್ಲಿ ತಂಗಿರುವ ಲಕ್ಷಾಂತರ ಭಕ್ತರು ರಾತ್ರಿಯಿಡಿ ಜಾಗರಣೆ ಮಾಡಿದ್ದಾರೆ.

Mahadeshwara Hill Hosts Chariot Festival Amid Shivaratri Celebrations

ಇನ್ನು ಭಕ್ತರಿಗೆ ಪ್ರಾಧಿಕಾರದ ವತಿಯಿಂದ ದಾಸೋಹ ವ್ಯವಸ್ಥೆ, ಕುಡಿಯುವ ನೀರು, ನೆರಳು, ದೇವರ ದರ್ಶನ, ಪಾರ್ಕಿಂಗ್ ವ್ಯವಸ್ಥೆ ಸೇರಿದಂತೆ ಇತದರೆ ಅಗತ್ಯ ಸೌಕರ್ಯಗಳನ್ನು ಕಲ್ಪಿಸಲಾಗಿದೆ. ಯಾವುದೇ ಅಹಿತಕರ ಘಟನೆ ನಡೆಯದಂತೆ ಮುಂಜಾಗ್ರತಾ ಕ್ರಮವಹಿಸಲು ಸೂಕ್ತ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ಮಹಾಶಿವರಾತ್ರಿ ಜಾತ್ರಾ ಮಹೋತ್ಸವದ ಹಿನ್ನೆಲೆಯಲ್ಲಿ ಮಾದಪ್ಪನ ಸನ್ನಿಧಿ ವಿದ್ಯುತ್ ದೀಪಲಂಕಾರಗಳಿಂದ ಕಂಗೊಳಿಸುತ್ತಿದೆ. ವಿವಿಧ ಹೂವುಗಳು, ಹಣ್ಣುಗಳಿಂದ ದೇವಸ್ಥಾನವನ್ನು ಅಲಂಕರಿಸಲಾಗಿದೆ.

ಮಾದಪ್ಪನಿಗೆ ರುದ್ರಾಭಿಷೇಕ, ಬಿಲ್ವಾರ್ಚನೆ ಸೇರಿದಂತೆ ವಿವಿಧ ಅಭಿಷೇಕ ನೆರವೇರಿತು. ದೇವರಿಗೆ ಮಂಗಳಾರತಿ ಬಳಿಕ ಭಕ್ತರಿಗೆ ದೇವರ ದರ್ಶನಕ್ಕೆ ಅವಕಾಶ ಕಲ್ಪಿಸಲಾಗುತ್ತಿದೆ. ಒಟ್ಟಾರೆ ಶಿವರಾತ್ರಿ ಹಬ್ಬದ ಪ್ರಯುಕ್ತ ನಡೆಯುತ್ತಿರುವ ಜಾತ್ರಾ ಮಹೋತ್ಸವದಲ್ಲಿ ಮಕ್ಕಳಿಂದ ವೃದ್ಧರವರೆಗೆ ಎಲ್ಲರೂ ಪಾಲ್ಗೊಂಡಿದ್ದು, ಕ್ಷೇತ್ರದಲ್ಲಿ ಬೀಡು ಬಿಟ್ಟು ಮಾದಪ್ಪನ ಸ್ಮರಣೆಯಲ್ಲಿ ಕಾಲ ಕಳೆಯುತ್ತಿರುವುದು ಕಂಡು ಬರುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+