BREAKING: ಚಾಮರಾಜನಗರ: ಕಾರಿನ ಮೇಲೆ ಲಾರಿ ಪಲ್ಟಿ, ಮೂವರು ಸಾವು, ಇಬ್ಬರಿಗೆ ಗಂಭೀರ ಗಾಯ
ಚಾಮರಾಜನಗರ, ಮಾರ್ಚ್, 12: ಕಾರಿನ ಮೇಲೆ ಲಾರಿ ಪಲ್ಟಿಯಾಗಿ ಮೂವರು ಸಾವನ್ನಪ್ಪಿದ ಘಟನೆ ತಮಿಳುನಾಡಿನ ದಿಂಬಂ ಘಟ್ಟದಲ್ಲಿ ನಡೆದಿದೆ.
ಚಾಮರಾಜನಗರ ಗಡಿಭಾಗದಲ್ಲಿರುವ ತಮಿಳುನಾಡಿನ ದಿಂಬಂ ಘಾಟ್ 27ನೇ ತಿರುವಿನಲ್ಲಿ ಕಾರಿನ ಮೇಲೆ ಕಬ್ಬು ತುಂಬಿದ ಲಾರಿ ಪಲ್ಟಿಯಾಗಿ, ಸ್ಥಳದಲ್ಲೇ ಮೂವರು ಸಾವು, ಇಬ್ಬರು ಗಂಭೀರ ಗಾಯಗೊಂಡಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ. ಇನ್ನು ಮೃತರ ಕುರಿತು ಗುರುತು ಪತ್ತೆಯಾಗಿಲ್ಲ. ಸದ್ಯ ಆಸನೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ ಎನ್ನಲಾಗಿದೆ.

ಮೂವರು ಸ್ಥಳದಲ್ಲೇ ದುರ್ಮರಣ: ಮಹೀಂದ್ರ ಪಿಕ್ ಅಪ್ ವಾಹನದ ಹಿಂಬದಿ ಟೈರ್ ಸ್ಫೋಟಗೊಂಡು ಮೂವರು ಸ್ಥಳದಲ್ಲೇ ದುರ್ಮರಣಕ್ಕೀಡಾದ ಘಟನೆ ದಾವಣಗೆರೆ ಬಳಿ ಇತ್ತೀಚೆಗಷ್ಟೇ ನಡೆದಿತ್ತು.
ಚಿತ್ರದುರ್ಗದಿಂದ ಹರಿಹರ ಕಡೆ ಹೋಗುವ ಎನ್.ಹೆಚ್ -48 ರಸ್ತೆಯ ಪಂಜಾಬಿ ಡಾಬಾ ಎದುರು ಭಾನುವಾರ ತಡರಾತ್ರಿ (ಫೆಬ್ರವರಿ 25) ಈ ದುರ್ಘಟನೆ ನಡೆದಿದ್ದು, ಮಂತ್ರಾಲಯ ಮೂಲದ ಮೂವರು ಸ್ಥಳದಲ್ಲಿಯೇ ಮೃತಪಟ್ಟಿದ್ದರು.
ಆಂಧ್ರ ಪ್ರದೇಶದ ಕರ್ನೂಲ್ ಜಿಲ್ಲೆಯ ಮಂತ್ರಾಲಯ ಸಮೀಪದ ಸಿಂಗರಾಜನಹಳ್ಳಿ ಗ್ರಾಮದ ತಗರಂ ಈರಣ್ಣ (55), ಪದ್ಮ ಕಡಬೂರು ಮಂಡಲದ ನಾಗಲಾಪುರ ಗ್ರಾಮದ ಪಿಂಜಾರಿ ಮಸ್ತಾನ್ ಸಾಬ್ (55), ಚಿನ್ನ ತುಂಬಳ ಪಂಚಾಯಿತಿ ವ್ಯಾಪ್ತಿಯ ನಾಗಲಾಪುರ ಗ್ರಾಮದ ಪೆದ್ದವೆಂಕಣ್ಣ (46) ಸಾವನ್ನಪ್ಪಿದ್ದ ದುರ್ದೈವಿಗಳು. ಇನ್ನು ಹುಸೇನ್, ಬಿ.ಲಿಂಗಣ್ಣ, ಸುಧಾಕರ ಹಾಗೂ ನಾಗಣ್ಣ ಸೇರಿದಂತೆ ಮತ್ತಿತರರು ಗಾಯಗೊಂಡಿದ್ದರು.
ಘಟನೆ ಹಿನ್ನೆಲೆ ಏನು?: ಹಾವೇರಿ ಜಿಲ್ಲೆಯ ಬ್ಯಾಡಗಿ ಮಾರುಕಟ್ಟೆಗೆ ಹೋಗುತ್ತಿರುವಾಗ ಭಾನುವಾರ ರಾತ್ರಿ 11:25ರ ಸುಮಾರಿಗೆ ಶಾಮನೂರು ಅಂಡರ್ ಪಾಸ್ ದಾಟಿದ ನಂತರ ಬರುವ ದಾವಣಗೆರೆ ಪಂಜಾಬಿ ಡಾಬಾ ಎದುರು ಚಿತ್ರದುರ್ಗದಿಂದ ಹರಿಹರ ಕಡೆಗೆ ಹೋಗುವ ರಾಷ್ಟ್ರೀಯ ಹೆದ್ದಾರಿ -48ರಲ್ಲಿ ಹುಸೇನ್ ಎಂಬಾತ ಮಹಿಂದ್ರಾ ಪಿಕ್ ಅಪ್ ವಾಹನ ಚಾಲನೆ ಮಾಡಿಕೊಂಡು ಹೋಗುತ್ತಿದ್ದರು.
ತನ್ನ ಪಕ್ಕದ ಸೀಟಿನ ಕ್ಯಾಂಬಿನ್‌ನಲ್ಲಿ ಹುಸವಿ, ಹುಸೇನಿ ಮಚ್ಚ ಬಜಾರಿ ಅವರನ್ನು ಕೂರಿಸಿಕೊಂಡು ವಾಹನದಲ್ಲಿ ಮೆಣಸಿನಕಾಯಿ ಲೋಡ್ ಮೇಲೆ ತಗರಂ ಈರಣ್ಣ, ಸುಧಾಕರ, ಪಿಂಜಾರಿ ಮಸ್ತಾನ್ ಸಾಬ್, ಪದ್ಯವಂಕಣ್ಣ ಬೋಯಾ, ಚಿನ್ನರಡ್ಡಿ ಲಿಂಗಣ್ಣ ನಾಗಣ್ಣ ಎಂಬುವವರನ್ನು ಕೂರಿಸಿಕೊಂಡು ತನ್ನ ವಾಹನವನ್ನು ಅತೀ ವೇಗವಾಗಿ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಹೋಗುತ್ತಿದ್ದರು. ಪರಿಣಾಮ ವಾಹನದ ಹಿಂಭಾಗದ ಎಡಬದಿಯ ಟೈರ್ ಬ್ಲಾಸ್ಟ್ ಆಗಿ ವಾಹನ ರಸ್ತೆಯಲ್ಲಿ ಎಡಕ್ಕೆ ಪಲ್ಟಿಯಾಗಿ ಬಿದ್ದಿತ್ತು.
ವಾಹನದ ಮೇಲಿದ್ದ ತಗರಂ ಈರಣ್ಯ , ಪಿಂಜಾರಿ ಮಸ್ತಾನ್ ಸಾಬ್ , ಪದ್ಮವಂಕಣ , ಬೋಯಾ ಅವರಿಗೆ ಬಲವಾದ ಪಟ್ಟು ಬಿದ್ದು ರಕ್ತಸಿಕ್ತರಾಗಿದ್ದರು. ತಗರಂ ಈರಣ್ಣ, ಪಿಂಜಾಸಿ ಮಸ್ತಾನ್ ಸಾಬ್ ಹಾಗೂ ಪೆದ್ದವೆಂಕಣ್ಣ ಬೋಯಾ ಸ್ಥಳದಲ್ಲಿಯೇ ಮೃತಪಟ್ಟಿದ್ದರು.
ಉಳಿದವರಾದ ವಾಹನ ಚಾಲಕ ಹುಸೇನ್, ಬಿ.ಲಿಂಗಣ್ಣ, ಸುಧಾಕರ ಹಾಗೂ ನಾಗಣ್ಣ ಅವರ ಮೈಕೈಗೆ ಪೆಟ್ಟು ಬಿದ್ದು ಗಾಯಗಳಾಗಿದ್ದು, ಆಂಬುಲೆನ್ಸ್ ಮೂಲಕ ಆಸ್ಪತ್ರೆಗೆ ಸೇರಿಸಲಾಗಿತ್ತು. ಮೃತರ ಶವಗಳನ್ನು ದಾವಣಗೆರೆ ಸಿಜಿ ಆಸ್ಪತ್ರೆಯ ಶವಾಗಾರಕ್ಕೆ ಕಳುಹಿಸಿಕೊಟ್ಟರು. ಈ ಅಪಘಾತಕ್ಕೆ ಕಾರಣನಾದ ವಾಹನ ಚಾಲಕ ಹುಸೇನ್ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂದು ದಾವಣಗೆರೆ ದಕ್ಷಿಣ ಟ್ರಾಫಿಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.












Click it and Unblock the Notifications