ಚಾಮರಾಜನಗರ: ರಸ್ತೆಗೆ ಜಾಗ ವಶಪಡಿಸಿಕೊಂಡು 7 ವರ್ಷವಾದರೂ ಇಲ್ಲ ಪರಿಹಾರ: ಶಾಸಕ, ಸಚಿವರ ವಿರುದ್ಧ ಸಂತ್ರಸ್ತ ಕಿಡಿ

ಚಾಮರಾಜನಗರ, ಜನವರಿ, 02: ರಸ್ತೆ ಅಗಲೀಕರಣದ ವೇಳೆ ಜಾಗವನ್ನು ವಶಕ್ಕೆ ಪಡೆದು 7 ವರ್ಷಗಳಾದರೂ ಪರಿಹಾರ ಸಿಕ್ಕಿಲ್ಲ ಎಂದು ಸಂತ್ರಸ್ಥನೋರ್ವ ಸಚಿವ ಹಾಗೂ ಶಾಸಕರ ವಿರುದ್ಧ ಆಕ್ರೋಶ ಹೊರಹಾಕಿದ ಘಟನೆ ನಡೆಯಿತು.

ಚಾಮರಾಜನಗರ ಜಿಲ್ಲಾಡಳಿತ ಭವನದಲ್ಲಿರುವ ಜಿಲ್ಲಾ ಉಸ್ತುವಾರಿ ಸಚಿವ ಕಚೇರಿಯಲ್ಲಿ ಅಹವಾಲು ಸ್ವೀಕಾರದ ವೇಳೆ ಸೈಯದ್ ನಸೀರ್ ಅಹ್ಮದ್ ಎಂಬಾತ ಸಚಿವ ವೆಂಕಟೇಶ್, ಶಾಸಕ ಸಿ‌.ಪುಟ್ಟರಂಗಶೆಟ್ಟಿ ವಿರುದ್ಧ ಆಕ್ರೋಶ ಹೊರಹಾಕಿದರು‌. ಸ್ಥಳವನ್ನು ವಶಕ್ಕೆ ಪಡೆದು 7 ವರ್ಷಗಳಾದರೂ ನಮಗೆ ಬೇರೆ ಸಿಕ್ಕಿಲ್ಲ, ಪರಿಹಾರವೂ ಸಿಕ್ಕಿಲ್ಲ. ಜನ ಸಂಪರ್ಕ ಸಭೆಯಲ್ಲಿ ಈ ಬಗ್ಗೆ ದೂರು ಕೊಡಲಾಗಿತ್ತು. ಆದರೂ ಪರಿಹಾರ ಏನೂ ಸಿಕ್ಕಿಲ್ಲ ಎಂದರು.

Land acquisition Even after 7 years for the road, But no compensation in Chamarajanagar

ಶಾಸಕರಿಂದ ದರ್ಪ: ಅಹವಾಲು ಸಲ್ಲಿಸುವ ವೇಳೆ ತನ್ನ ಸಮಸ್ಯೆ ಹೇಳಿಕೊಳ್ಳದಂತೆ ಶಾಸಕರ ಹಿಂಬಾಲಕರು ಹೊರಕ್ಕೆ ಕಳುಹಿಸಿದ್ದಾರೆ, ಶಾಸಕರು ದರ್ಪ ಮೆರೆದಿದ್ದಾರೆ ಎಂದು ಕಿಡಿಕಾರಿದರು.

ಸಂತ್ರಸ್ಥ ಹಾಗೂ ಶಾಸಕರ ನಡುವೆ ವಾರ್‌: ಬೇರೆಯವರು ನ್ಯಾಯಾಲಯಕ್ಕೆ ಹೋಗಿ ಪರಿಹಾರ ಪಡೆದುಕೊಂಡಿದ್ದಾರೆ ಎಂದು ಸಂತ್ರಸ್ಥ ನಾಸಿರ್ ಹೇಳಿದ್ದಕ್ಕೆ ಸಿಡಿಮಿಡಿಗೊಂಡ ಶಾಸಕ ಸಿ.ಪುಟ್ಟರಂಗಶೆಟ್ಟಿ ಗರಂ ಆದರು. ಇದು ಚಾಲೆಂಜ್ ಆಗೇ ಬಿಡಲಿ, ಯಾರು ಪರಿಹಾರ ತೆಗೆದುಕೊಂಡಿದ್ದಾರೆ ತೋರಿಸು ಎಂದು ಕುಪಿತರಾದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+