ಕೊಳ್ಳೇಗಾಲ: ಅತಿಥಿ ಶಿಕ್ಷಕನಿಂದ ವಿದ್ಯಾರ್ಥಿನಿ ಮೇಲೆ ಲೈಂಗಿಕ ದೌರ್ಜನ್ಯ
ಚಾಮರಾಜನಗರ, ಡಿಸೆಂಬರ್, 08: ಅತಿಥಿ ಶಿಕ್ಷಕ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವ ಘಟನೆ ಕೊಳ್ಳೇಗಾಲ ತಾಲೂಕಿನ ಹಿರಿಯ ಪ್ರಾಥಮಿಕ ಶಾಲೆಯೊಂದರಲ್ಲಿ ನಡೆದಿದೆ.
ಅತಿಥಿ ಶಿಕ್ಷಕ ಸುಧಾಕರ್ ಎಂಬಾತ ಬಂಧಿತ ಆರೋಪಿ. ಡಿಸೆಂಬರ್ 4ರಂದು ವಿದ್ಯುಚ್ಛಕ್ತಿ ಬಿಲ್ ವಸೂಲಾತಿಗೆ ಸಿಬ್ಬಂದಿ ತೆರಳಿದ್ದ ವೇಳೆ ಶಾಲಾ ಕೊಠಡಿಯೊಂದರಲ್ಲಿ ಬಾಲಕಿಗೆ ಲೈಂಗಿಕ ದೌರ್ಜನ್ಯ ಎಸಗುತ್ತಿದ್ದನ್ನು ಕಂಡಿದ್ದಾರೆ.

ಬಳಿಕ, ಈ ವಿಚಾರವನ್ನು ಕೊಳ್ಳೇಗಾಲ ಕ್ಷೇತ್ರ ಶಿಕ್ಷಣಾಧಿಕಾರಿ ಮಂಜುಳ ಅವರ ಗಮನಕ್ಕೆ ತಂದಿದ್ದು, ಈ ಬಗ್ಗೆ ಕೊಳ್ಳೇಗಾಲ ಗ್ರಾಮಾಂತರ ಠಾಣೆಯಲ್ಲಿ ಪೋಕ್ಸೋ ಕಾಯ್ದೆ ಅಡಿ ದೂರು ದಾಖಲಿಸಿದ್ದಾರೆ. ಸದ್ಯ, ಅತಿಥಿ ಶಿಕ್ಷಕನನ್ನು ಬಂಧಿಸಿದ್ದು, ಕೊಳ್ಳೇಗಾಲ ಗ್ರಾಮಾಂತರ ಠಾಣೆ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.
ಲೈಂಗಿಕ ಕಿರುಕುಳ ನೀಡಿದವನ ಬಂಧನ
ಬೆಂಗಳೂರಿನ ಜೀವನಾಡಿಯ ಸಾರಿಗೆಗಳಲ್ಲಿ ಒಂದಾಗಿರುವ ನಮ್ಮ ಮೆಟ್ರೋದಲ್ಲಿ ಇತ್ತೀಚಿನ ದಿನಗಳಲ್ಲಿ ಅಸಹ್ಯಕರ ಘಟನೆಗಳು ನಡೆಯುತ್ತಲೇ ಇವೆ. ಅಲ್ಲದೆ ಬಿಎಂಆರ್‌ಸಿಎಲ್ ಕೂಡ ಇಂತಹ ಘಟನೆಗಳ ವಿರುದ್ಧ ಸೂಕ್ತ ಕ್ರಮ ಕೈಗೊಂಡಿರುವ ಉದಾಹರಣೆಗಳು ಇವೆ. ಆದರೂ ಮತ್ತೇ ಇದೀಗ ಕಾಮುಕ ಯುವಕನೊಬ್ಬ ಯುವತಿಗೆ ಲೈಂಗಿಕ ಕಿರುಕುಳ ಕೊಟ್ಟಿರುವ ಘಟನೆ ಜರುಗಿದೆ.
ಬೆಂಗಳೂರಿನ ನಮ್ಮ ಮೆಟ್ರೋ ದಲ್ಲಿ ಈ ಹಿಂದೆಯೂ ಎರಡ್ಮೂರು ಲೈಂಗಿಕ ಕಿರುಕುಳ ಆರೋಪ ಕೇಳಿಬಂದಿದ್ದು, ಇದೀಗ ಮತ್ತೊಂದು ಇಂತಹ ಘಟನೆ ಬೆಳಕಿಗೆ ಬಂದಿದೆ. ನಿನ್ನೆ (ಡಿಸೆಂಬರ್ 07) ಬೆಳಗ್ಗೆ 9.40ರ ಸುಮಾರಿಗೆ ಬೆಂಗಳೂರಿನ ರಾಜಾಜಿನಗರದಲ್ಲಿ ಯುವಕನೊಬ್ಬ ಮೆಟ್ರೋ ಹತ್ತಿದ್ದ ಯುವತಿಯ (22) ಮೈಕೈ ಮುಟ್ಟಿದ್ದಾನೆ.
ಬಳಿಕ ಯುವತಿ ಕಿರುಚಾಡುತ್ತಿದ್ದಂತೆ ಆ ಕಾಮುಕ ಯುವಕ ಮುಂದಿನ ನಿಲ್ದಾಣದಲ್ಲಿ ಪರಾರಿ ಆಗಲು ಯತ್ನಿಸಿದ್ದ, ನಂತರ ಆರೋಪಿ ಲೋಕೇಶ್ ಎಂಬಾತನನ್ನು ಮೆಟ್ರೋ ಭದ್ರತಾ ಅಧಿಕಾರಿಗಳು ವಶಕ್ಕೆ ಪಡೆದು ಉಪ್ಪಾರಪೇಟೆ ಪೊಲೀಸರಿಗೆ ಒಪ್ಪಿಸಿದ್ದಾರೆ ಎಂದು ತಿಳಿದುಬಂದಿದೆ.
ತನಿಖೆ ನಡೆಸಿದ ವೇಳೆ ಆರೋಪಿ ಲೋಕೇಶ್ನ ಅಸಲಿ ಇತಿಹಾಸ ಬಟಾ ಬಯಲಾಗಿದೆ. ಈತನ ಮೇಲೆ ಈ ಹಿಂದೆ ಕೂಡ ಕೆಲ ಪ್ರಕರಣಗಳು ದಾಖಲಾಗಿದ್ದವು. ಈ ಹಿಂದೆ ಬಿಎಂಟಿಸಿ ಬಸ್ನಲ್ಲಿ ಯುವತಿಯ ಮೊಬೈಲ್ ಕಳ್ಳತನ ಮಾಡಲು ಹೋಗಿ ಬಲೆಗೆ ಬಿದ್ದಿದ್ದ ಎನ್ನುವ ಸತ್ಯ ತನಿಖೆಯ ವೇಳೆ ಬಯಲಾಗಿದೆ. ಇನ್ನು ಆರೋಪಿಯಿಂದ 20 ಮೊಬೈಲ್ ಫೋನ್, ಒಂದು ದ್ವಿಚಕ್ರ ವಾಹನವನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.












Click it and Unblock the Notifications