ಅಂಬೇಡ್ಕರ್ ಗೆ ಅವಮಾನ, ಕೊಳ್ಳೇಗಾಲ ಉದ್ವಿಗ್ನ, ಸೆಕ್ಷನ್ 144 ಜಾರಿ

Posted By:
Subscribe to Oneindia Kannada

ಕೊಳ್ಳೇಗಾಲ, ಜನವರಿ 14: ಚಾಮರಾಜನಗರ ಜಿಲ್ಲೆ ಕೊಳೇಗಾಲದಲ್ಲಿ ಶನಿವಾರ ಅಂಬೇಡ್ಕರ್ ಗೆ ಅವಮಾನ ಮಾಡಿದ್ದರಿಂದ ಆಕ್ರೋಶಗೊಂಡ ಜನರು, ವಾಹನಗಳನ್ನು ಜಖಂಗೊಳಿಸಿದ್ದಾರೆ ಮತ್ತು ಉದ್ವಿಗ್ನ ವಾತಾವರಣ ನಿರ್ಮಾಣವಾಗಿದೆ. ಪರಿಶಿಷ್ಟ ಜಾತಿಯ ಸಂಘಟನೆಗಳಿಂದ ಪಟ್ಟಣದಲ್ಲಿ ಪ್ರತಿಭಟನೆಗಳು ನಡೆದವು.

ಜಿಲ್ಲೆ ಪೊಲೀಸರು ಕೊಳ್ಳೇಗಾಲದಲ್ಲಿ ಜನವರಿ 22ರವರೆಗೆ ನಿಷೇಧಾಜ್ಞೆ ಆದೇಶಿಸಿದ್ದಾರೆ. ಕೆಲವು ಅಪರಿಚಿತರು ದಲಿತರೇ ಹೆಚ್ಚಾಗಿ ವಾಸಿಸುವ ಭೀಮ್ ನಗರ್ ನಲ್ಲಿ ಅಂಬೇಡ್ಕರ್ ಗೆ ಅವಮಾನ ಮಾಡಿದ್ದಾರೆ. ಕಮಾನಿನ ಮಧ್ಯೆ ಅಂಬೇಡ್ಕರ್ ಚಿತ್ರವಿತ್ತು. ಅದಕ್ಕೆ ಚಪ್ಪಲಿ ಹಾರ ಹಾಕಿದ್ದಾರೆ.[ನೋಟು ಬದಲಿಸಲು ಶೇ 30 ಕಮಿಷನ್: ಬ್ಯಾಂಕ್ ನೌಕರ ಅಮಾನತು]

Chamarajanagar

ಈ ವಿಚಾರ ತಿಳಿಯುತ್ತಿದ್ದಂತೆ ಆಕ್ರೋಶಗೊಂಡ ಸ್ಥಳೀಯರು ಹಾಗೂ ವಿವಿಧ ಸಂಘಟನೆ ಕಾರ್ಯಕರ್ತರು ಪ್ರಮುಖ ರಸ್ತೆಗಳನ್ನು ತಡೆದರು. "ಒಂದು ಕೆ ಎಸ್ ಆರ್ ಟಿಸಿ ಬಸ್ ಮೇಲೆ ಕಲ್ಲು ತೂರಲಾಗಿದೆ. ಖಾಸಗಿ ವಾಹನವೊಂದು ಜಖಂ ಆಗಿದೆ. ಪಟ್ಟಣದಲ್ಲಿ ಪೊಲಿಸರನ್ನು ನಿಯೋಜಿಸಿದ್ದೇವೆ. ಪರಿಸ್ಥಿತಿ ಹತೋಟಿಯಲ್ಲಿದೆ" ಎಂದು ಜಿಲ್ಲೆಯ ಎಸ್ ಪಿ ಕುಲದೀಪ್ ಕುಮಾರ್ ಜೈನ್ ತಿಳಿಸಿದ್ದಾರೆ.

ತಪ್ಪಿತಸ್ಥರನ್ನು ಬಂಧಿಸುವಂತೆ ವಿವಿಧ ಸಂಘಟನೆ ಸದಸ್ಯರು ಆಗ್ರಹಿಸಿದ್ದಾರೆ. ಪೊಲೀಸರು ತಿಳಿಸಿರುವ ಪ್ರಕಾರ ಈವರೆಗೆ ಯಾರನ್ನೂ ಬಂಧಿಸಿಲ್ಲ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
A tense environment prevailed, while a couple of vehicles were damaged, after footwear was hung on an arch commemorating B.R. Ambedkar at Kollegal town of Chamrajnagar district on Saturday.
Please Wait while comments are loading...