ಮಲೆಮಹದೇಶ್ವರ ಬೆಟ್ಟದಲ್ಲಿ ಝಣಝಣ ಕಾಂಚಣ, ಹುಂಡಿಯಲ್ಲಿ ಸಂಗ್ರಹವಾದ ಹಣ ಎಷ್ಟು ಗೊತ್ತಾ?
ಚಾಮರಾಜನಗರ, ಆಗಸ್ಟ್, 24: ದಕ್ಷಿಣ ಭಾರತದ ಪ್ರಮುಖ ಯಾತ್ರ ಸ್ಥಳಗಳಲ್ಲಿ ಒಂದಾಗಿರುವ ಹನೂರು ತಾಲೂಕಿನ ಮಲೆಮಹದೇಶ್ವರ ಬೆಟ್ಟದಲ್ಲಿ ಹುಂಡಿ ಎಣಿಕೆ ನಡೆದಿದ್ದು, ಎರಡು ಕೋಟಿ ರೂಪಾಯಿ ಹಣ ಸಂಗ್ರಹವಾಗಿದೆ.
ಮಲೆಮಹದೇಶ್ವರ ಬೆಟ್ಟ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಕಾತ್ಯಾಯಿನಿದೇವಿ ಸಮಕ್ಷಮದಲ್ಲಿ ಹುಂಡಿ ಎಣಿಕೆ ಕಾರ್ಯ ನಡೆಯಿತು. 40 ದಿನಕ್ಕೆ 2,00,16,340 ಹಣ ಸಂಗ್ರಹವಾಗಿದೆ. ಜೊತೆಗೆ 50 ಗ್ರಾಂ ಚಿನ್ನ, 2,342 ಗ್ರಾಂ ಬೆಳ್ಳಿಯನ್ನು ಕಾಣಿಕೆ ರೂಪದಲ್ಲಿರುವ ಮಲೆಮಹದೇಶ್ವರನಿಗೆ ಭಕ್ತರು ಸಮರ್ಪಿಸಿದ್ದಾರೆ.
ಮಲೆ ಮಹದೇಶ್ವರ ಬೆಟ್ಟದಲ್ಲಿ ಅಭಿವೃದ್ಧಿ ಕಾಮಗಾರಿ: ಜಿ.ಪಂ. ಸಿಇಒ ಭೇಟಿ
ದಿನದಿಂದ ದಿನಕ್ಕೆ ಭಕ್ತರ ದಂಡನ್ನೇ ಮಲೆಮಹದೇಶ್ವರ ತನ್ನತ್ತ ಸೆಳೆಯುತ್ತಿದ್ದು, ಈ ಮೂಲಕ ಪ್ರತಿ ತಿಂಗಳು ತನ್ನ ಆದಾಯವನ್ನು ಹೆಚ್ಚಿಸಿಕೊಳ್ಳುತ್ತಿದ್ದಾನೆ. ಶ್ರೀ ಮಲೆ ಮಹದೇಶ್ವರ ಪುರಾತನ ಮತ್ತು ಪವಿತ್ರ ದೇವಾಲಯವು ಆಗಿದೆ. ಇದು ಮಹದೇಶ್ವರರು ವಾಸಿಸುತ್ತಿದ್ದ ಯಾತ್ರಾ ಕೇಂದ್ರವಾಗಿದೆ. ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನಲ್ಲಿರುವ ಮಲೆಮಹದೇಶ್ವರ ದೇವಸ್ಥಾನ ದಕ್ಷಿಣ ಭಾರತದ ಪ್ರಮುಖ ದೇವಾಲಯಗಳಲ್ಲಿ ಒಂದಾಗಿದ್ದು, ಇದು ಬಹಳ ಕಾರಣಿಕವಾಗಿದೆ. ಇದೀಗ ಮಲೆ ಮಹದೇಶ್ವರ ದೇವಸ್ಥಾನದ ಹುಂಡಿ ಎಣಿಕೆ ಕಾರ್ಯ ನಡೆದಿದ್ದು, 2ಕೋಟಿಗೂ ಅಧಿಕ ಮೊತ್ತದ ಹಣ ಸಂಗ್ರಹವಾಗಿದೆ.
ದಿನನಿತ್ಯದ ವಿವಿಧ ಸೇವಗಳನ್ನು ಹೊರತುಪಡಿಸಿ ಹುಂಡಿಯಲ್ಲೇ ಇಷ್ಟೊಂದು ಪ್ರಮಾಣದ ಆದಾಯ ಬಂದಿದ್ದು, ಕೊರೊನಾ ಬಳಿಕ ಭಕ್ತಸಾಗರವೇ ಬೆಟ್ಟಕ್ಕೆ ಹರಿದುಬರುತ್ತಿದೆ. ವಾರಾಂತ್ಯ ಹಾಗೂ ಸೋಮವಾರದಂದು ಚಿನ್ನದ ರಥ ಸೇವೆ ಮಾಡಲು ಕಿಕ್ಕಿರಿದು ಜರನು ಸೇರುತ್ತಿದ್ದಾರೆ. ತಿರುಪತಿ ಮಾದರಿಯಲ್ಲೇ ಹೆಚ್ಚಿನ ಸಂಖ್ಯೆಯ ಭಕ್ತರು ವಾರಾಂತ್ಯದಲ್ಲಿ ಬೆಟ್ಟಕ್ಕೆ ಹರಿದುಬರುತ್ತಿದ್ದಾರೆ. ಮಾದಪ್ಪನ ಸನ್ನಿಧಿಯಲ್ಲಿ ಹುಂಡಿಯ ಎಣಿಕೆ ಕಾರ್ಯ ಭರದಿಂದ ನಡೆದಿದ್ದು, ಸುಮಾರು ಎರಡು ಕೋಟಿ ರೂಪಾಯಿವರೆಗೂ ಹಣ ಸಂಗ್ರಹವಾಗಿದೆ.

ಬೆಳಗ್ಗೆಯಿಂದ ತಡರಾತ್ರಿವರೆಗೂ ಎಣಿಕೆ ಕಾರ್ಯ ನಡೆದಿದ್ದು, ಕೇವಲ 40 ದಿನಗಳಲ್ಲಿ 2,00,16,340 ನಗದು ಸಂಗ್ರಹವಾಗಿದೆ. ಅದಲ್ಲದೆ ಹುಂಡಿಯಲ್ಲಿ ಕಾಣಿಕೆ ರೂಪದಲ್ಲಿ ಭಕ್ತರು ಮಹದೇಶ್ವರನಿಗೆ ಅರ್ಪಿಸಿದ 50 ಗ್ರಾಂ ಚಿನ್ನ, 2,342 ಗ್ರಾಂ ಬೆಳ್ಳಿ ಕೂಡ ಸಂಗ್ರಹವಾಗಿದೆ. ತಿರುಪತಿ ತಿಮ್ಮಪ್ಪನ ನಂತರ ರಾರಾಜಿಸುವ ಮಾದಪ್ಪನು, ಈ ಬಾರಿ ಕೂಡ ಕೋಟ್ಯಾಧೀಶನಾಗಿದ್ದಾನೆ.