ಚಾಮರಾಜನಗರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬಂಡೀಪುರ ರಾತ್ರಿ ಸಂಚಾರ ಬಂದ್ ತೆರವಿಗೆ ಮನವಿ

ಬಂಡೀಪುರದ ಮುಖೇನ ಕೇರಳಕ್ಕೆ ತೆರಳುವ ಮಾರ್ಗದಲ್ಲಿ ರಾತ್ರಿ ಸಂಚಾರವನ್ನು ಬಂದ್‍ಗೊಳಿಸಿರುವುದನ್ನು ತೆರವು ಮಾಡುವಂತೆ ಕೇರಳದ ವೈನಾಡು ಪ್ರಾಂತ್ಯದ ಶಾಸಕರು ಕರ್ನಾಟಕ ಸರಕಾರಕ್ಕೆ ಮನವಿ ಮಾಡಿದ್ದಾರೆ.

By ಚಾಮರಾಜನಗರ ಪ್ರತಿನಿಧಿ
|
Google Oneindia Kannada News

ಚಾಮರಾಜನಗರ, ಫೆಬ್ರವರಿ 13: ಬಂಡೀಪುರದ ಮುಖೇನ ಕೇರಳಕ್ಕೆ ತೆರಳುವ ಮಾರ್ಗದಲ್ಲಿ ರಾತ್ರಿ ಸಂಚಾರವನ್ನು ಬಂದ್‍ಗೊಳಿಸಿರುವುದನ್ನು ತೆರವು ಮಾಡುವಂತೆ ಕೇರಳದ ವೈನಾಡು ಪ್ರಾಂತ್ಯದ ಶಾಸಕರನ್ನೊಳಗೊಂಡ ನಿಯೋಗ ಕರ್ನಾಟಕ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.

ಈ ಸಂಬಂಧ ಮನವಿ ಸಲ್ಲಿಸಿರುವ ಕಲ್ಪೆಟ್ಟ ಕ್ಷೇತ್ರದ ಶಾಸಕ ಸಿ.ಕೆ.ಶಶಿಧರನ್, ಸುಲಾನ್ ಬತ್ತೇರಿ ಶಾಸಕ ಎಂ.ಸಿ.ಬಾಲಕೃಷ್ಣ, ಮಲಪುರಂ ಶಾಸಕ ಬಿ.ಅನ್ವರ್, ಸುಲಾನ್ ಬತ್ತೇರಿ ನಗರಸಭೆ ಅಧ್ಯಕ್ಷ ಸಿ.ಕೆ.ಸಹದೇವ್, ಬಿಜೆಪಿ ಮುಖಂಡ ಸದಾನಂದ, ಕಾಂಗ್ರೆಸ್ ಮುಖಂಡ ಕೆ.ಜೆ.ದೇವದಾಸ್, ಯೂತ್ ಘಟಕದ ಅಧ್ಯಕ್ಷರನ್ನೊಳಗೊಂಡ ನಿಯೋಗ ಗುಂಡ್ಲುಪೇಟೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಸ್ತುವಾರಿ ಸಚಿವ ಯು.ಟಿ.ಖಾದರ್, ಸಂಸದ ಧ್ರುವನಾರಾಯಣ್ ಮೊದಲಾದವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದೆ.[ಬಂಡೀಪುರ ಹೆದ್ದಾರಿ ವಿಸ್ತರಣೆಗಿಲ್ಲ ಹಸಿರು ನಿಶಾನೆ!]

Kerala legislators Appeal to clear the clog of traffic at night in Bandipur.

ನಂಜನಗೂಡು ನೆಲಂಬೂರು ರೈಲ್ವೆ ಮಾರ್ಗ ನಿರ್ಮಾಣಕ್ಕೆ ಹಳಿ ಅಳವಡಿಕೆಗೆ ಅವಕಾಶ ಮಾಡಿಕೊಡಬೇಕು. ಬಂಡೀಪುರ ರಾಷ್ಟ್ರೀಯ ಉದ್ಯಾನದಲ್ಲಿ ರಾತ್ರಿ 9ರಿಂದ ಚೆಕ್ ಪೋಸ್ಟ್ ಬಂದ್ ಮಾಡುವುದನ್ನು ತೆರವುಗೊಳಿಸಬೇಕು ಎಂಬುದನ್ನು ಮನವಿ ಪತ್ರದಲ್ಲಿ ತಿಳಿಸಲಾಗಿದೆ.

English summary
Kerala legislators request to Karnataka government, Appeal to clear the clog of traffic at night in Bandipur.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X