ಚಾಮರಾಜನಗರ : ಬಿಜೆಪಿ ಟಿಕೆಟ್ ಆಕಾಂಕ್ಷಿ ಗೋಡೆ ಗಡಿಯಾರ ವಶ
ಚಾಮರಾಜನಗರ, ಮಾರ್ಚ್ 29 : ಕರ್ನಾಟಕ ವಿಧಾನಸಭೆ ಚುನಾವಣೆ ದಿನಾಂಕ ಘೋಷಣೆಯಾಗಿದ್ದು, ರಾಜ್ಯದಲ್ಲಿ ಚುನಾವಣಾ ನೀತಿ ಸಂಹಿತೆ ಜಾರಿಗೆ ಬಂದಿದೆ. ಮತದಾರರಿಗೆ ಹಂಚಲು ತಂದಿದ್ದು ಎನ್ನಲಾದ ಗೋಡೆ ಗಡಿಯಾರ ಚಾಮರಾಜನಗರದಲ್ಲಿ ಸಿಕ್ಕಿದೆ.
ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ |ಚುನಾವಣೆಯ ಮುಖ್ಯ ದಿನಾಂಕಗಳು
ಬಿಜೆಪಿ ಟಿಕೆಟ್ ಆಕಾಂಕ್ಷಿಯೊಬ್ಬರ ಭಾವಚಿತ್ರದೊಂದಿಗೆ ಕಮಲದ ಗುರುತು ಇರುವ ಗೋಡೆ ಗಡಿಯಾರ ಸಿಕ್ಕಿದೆ. ಚುನಾವಣಾಧಿಕಾರಿಗಳು ಅವುಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಚಾಮರಾಜನಗರ ಜಿಲ್ಲೆಯ ಹನೂರು ವಿಧಾನಸಭಾ ಕ್ಷೇತ್ರದ ಮಧುವನಹಳ್ಳಿ ಗೋಡೆ ಗಡಿಯಾರವನ್ನು ಹಂಚಲಾಗುತ್ತಿತ್ತು.

ಮಧುವನಹಳ್ಳಿ ಗ್ರಾಮದ ಶಿವರಾಜ್ ಅವರ ಅಂಗಡಿ ಮೇಲೆ ಸೆಕ್ಟರ್ ಮ್ಯಾಜಿಸ್ಟ್ರೇಟ್ ಸವಿತಾಕುಮಾರಿ ದಾಳಿ ನಡೆಸಿದ್ದು, ಈ ವೇಳೆ ಅಲ್ಲಿದ್ದ 142 ಗೋಡೆ ಗಡಿಯಾರಗಳಲ್ಲಿ ಬಿಜೆಪಿ ಟಿಕೆಟ್ ಆಕಾಂಕ್ಷಿ ಮಂಜುನಾಥ್ ಹಾಗೂ ಕಮಲದ ಭಾವಚಿತ್ರ ಇದ್ದದ್ದು ಕಂಡು ಬಂದಿದ್ದು ಅವುಗಳನ್ನು ತಕ್ಷಣವೇ ವಶಪಡಿಸಿಕೊಳ್ಳಲಾಯಿತು.

ಪ್ರಕರಣ ದಾಖಲಿಸಿಕೊಂಡ ಚುನವಾಣಾ ಸಿಬ್ಬಂದಿ ಸವಿತಾ ಕುಮಾರಿ, ಶಿವರಾಜ್, ಬಸವಶೆಟ್ಟಿ ಹಾಗೂ ಬಿಜೆಪಿ ಟಿಕೆಟ್ ಆಕಾಂಕ್ಷಿ ಮಂಜುನಾಥ್ ಮೇಲೆ ಕೊಳ್ಳೇಗಾಲ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.












Click it and Unblock the Notifications