ಚಾಮರಾಜನಗರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಚಾಮರಾಜನಗರ ಜಿಲ್ಲೆಗೆ 20ರ ಹರೆಯ, ಸಾರ್ವಜನಿಕರಿಂದ ಸಂಭ್ರಮಾಚರಣೆ

By ಬಿಎಂ ಲವಕುಮಾರ್
|
Google Oneindia Kannada News

ಚಾಮರಾಜನಗರ, ಆಗಸ್ಟ್ 16: ಮೈಸೂರು ಜಿಲ್ಲೆಯಿಂದ ಬೇರ್ಪಟ್ಟು ಚಾಮರಾಜನಗರ ಜಿಲ್ಲೆಯಾಗಿ 20 ವರ್ಷ ಸಂದ ಹಿನ್ನಲೆಯಲ್ಲಿ ಕನ್ನಡ ಚಳವಳಿಗಾರರು ಸಾರ್ವಜನಿಕರಿಗೆ ಸಿಹಿ ಹಂಚಿ ಸಂಭ್ರಮಿಸಿದರು.

ಚಾಮರಾಜನಗರದ ಭುವನೇಶ್ವರಿ ವೃತ್ತದಲ್ಲಿ ಸಮಾವೇಶಗೊಂಡ ಕನ್ನಡ ಚಳವಳಿಗಾರರು, ಜಿಲ್ಲೆಯಾಗಲು ಕಾರಣಕರ್ತರಾದ ಮಾಜಿ ಮುಖ್ಯಮಂತ್ರಿ ದಿ. ಜೆ.ಹೆಚ್. ಪಟೇಲ್, ಅಂದು ಶಾಸಕರಾಗಿದ್ದ ವಾಟಾಳ್ ನಾಗರಾಜು, ಕೊಳ್ಳೇಗಾಲದ ಎಸ್. ಜಯಣ್ಣ, ಹನೂರಿನ ಶಾಸಕರಾದ ದಿ. ಹೆಚ್.ನಾಗಪ್ಪ, ಗುಂಡ್ಲುಪೇಟೆ ಶಾಸಕರಾಗಿದ್ದ ದಿ. ಎಚ್.ಎಸ್.ಮಹದೇವಪ್ರಸಾದ್ ಮತ್ತು ಸಂತೇಮರಹಳ್ಳಿ ಶಾಸಕರಾಗಿದ್ದ ಎ.ಆರ್. ಕೃಷ್ಣಮೂರ್ತಿರವರಿಗೆ ಜೈಕಾರ ಕೂಗಿ ಸಂತೋಷ ವ್ಯಕ್ತಪಡಿಸಿದರು.

Kannada activists celebrates 20 years celebration of Chamarajanagar district

ಈ ವೇಳೆ ಮಾತನಾಡಿದ ಕನ್ನಡ ಸಂಘಟನೆಯ ಮುಖಂಡ ಹಾಗೂ ಕರ್ನಾಟಕ ಸೇನಾ ಪಡೆಯ ರಾಜ್ಯಾಧ್ಯಕ್ಷ ಚಾ.ರಂ.ಶ್ರೀನಿವಾಸಗೌಡ, "ನೂತನವಾಗಿ ಜಿಲ್ಲೆಯಾದ ಬಳಿಕ ಚಾಮರಾಜನಗರ ಜಿಲ್ಲೆಯಲ್ಲಿ ನಿರೀಕ್ಷೆಯಷ್ಟು ಅಭಿವೃದ್ದಿಯಾಗಿಲ್ಲ. ಈ ಬಗ್ಗೆ ಸರ್ಕಾರ ಗಮನ ಹರಿಸಿ ಅಭಿವೃದ್ದಿ ಪಡಿಸಬೇಕು," ಎಂದು ಮನವಿ ಮಾಡಿದರು. ಕನ್ನಡ ಚಳವಳಿಗಾರರಾದ ಹ.ವಿ. ನಟರಾಜು, ಶಾ.ಮುರಳಿ ಸೇರಿದಂತೆ ಹಲವಾರು ಮಂದಿ ಇದ್ದರು.

English summary
20 years completed for Chamarajanagar district. In this background, Kannada activists celebrated the event by distributing sweets to the public.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X