ಬಂಡೀಪುರದಲ್ಲಿ ಅರಣ್ಯ ಸಚಿವರ ಮಹತ್ವದ ಸಭೆ, ಕೇರಳ ಸಚಿವ ಭಾಗಿ.!, ಇದರ ಗುಟ್ಟೇನು?-ಮಾಹಿತಿ, ವಿವರ
ಚಾಮರಾಜನಗರ, ಮಾರ್ಚ್, 10: ಅಂತರರಾಜ್ಯ ಅರಣ್ಯ ಸಚಿವರ ಮಹತ್ವದ ಸಭೆ ಇಂದು ಗುಂಡ್ಲುಪೇಟೆ ತಾಲೂಕಿನ ಬಂಡೀಪುರದಲ್ಲಿ ಆರಂಭವಾಗಿದೆ.
ಕರ್ನಾಟಕದ ಅರಣ್ಯ ಸಚಿವ ಈಶ್ವರ ಬಿ ಖಂಡ್ರೆ ಮತ್ತು ಕೇರಳದ ಅರಣ್ಯ ಸಚಿವ ಎ.ಕೆ. ಶಶೀಂದ್ರನ್ ಭಾಗಿಯಾಗಿದ್ದು ಕರ್ನಾಟಕ, ಕೇರಳ, ತಮಿಳುನಾಡು ರಾಜ್ಯಗಳ ಅರಣ್ಯ ಇಲಾಖೆ ಉನ್ನತಮಟ್ಟದ ಅಧಿಕಾರಿಗಳು ಸಭೆಯಲ್ಲಿದ್ದಾರೆ.

3 ರಾಜ್ಯಗಳ ಸಮನ್ವಯ ಸಮಿತಿ ಮೊದಲನೇ ಸಭೆ ಇದಾಗಿದ್ದು, ಮೂರೂ ರಾಜ್ಯಗಳ ನಡುವೆ ಅರಣ್ಯ ಸಂರಕ್ಷಣೆ, ಮಾನವ ಮತ್ತು ಪ್ರಾಣಿ ಸಂಘರ್ಷ, ಕಳ್ಳಬೇಟೆ, ಅರಣ್ಯ ನಾಶ, ಮತ್ತು ವನ್ಯಜೀವಿಗಳ ಸಂಚಾರ ಕುರಿತಂತೆ ಚರ್ಚೆಯಾಗಲಿದೆ.
ಮಾರ್ಚ್ 11ರ ಬಳಿಕ ಟಿಕೆಟ್ ಘೋಷಣೆ: ಇನ್ನು ಸಭೆ ಆರಂಭಕ್ಕೂ ಮುನ್ನ ಸಚಿವ ಈಶ್ವರ್ ಖಂಡ್ರೆ ಮಾಧ್ಯಮವರೊಂದಿಗೆ ಮಾತನಾಡಿ, ಎಂಪಿ ಟಿಕೆಟ್ ವಿಚಾರವನ್ನು ವರಿಷ್ಠರು ತೀರ್ಮಾನ ಮಾಡಲಿದ್ದಾರೆ. ಮಾರ್ಚ್ 11ರ ಬಳಿಕ ಯಾವ ಸಂದರ್ಭದಲ್ಲಾದರೂ ಟಿಕೆಟ್ ಘೋಷಣೆ ಆಗಬಹುದು ಎಂದರು.
ಬೆಳಗಾವಿ ಕಾಂಗ್ರೆಸ್‌ನಲ್ಲಿ ಎರಡು ಬಣ ವಿಚಾರಕ್ಕೆ ಪ್ರತಿಕ್ರಿಯಿಸಿ, ನಮ್ಮಲ್ಲಿ ಯಾವುದೇ ಬಣ ಇಲ್ಲ. ವರಿಷ್ಠರು ಎಲ್ಲವನ್ನೂ ಸರಿ ಮಾಡ್ತಾರೆ, ಕೆಲವು ಅಭಿಪ್ರಾಯದಲ್ಲಿ ಭಿನ್ನ ಇದೆ ಅಷ್ಟೇ ಎಂದರು. ಹೆಚ್ಚುತ್ತಿರುವ ವನ್ಯಜೀವಿ-ಮಾನವ ಸಂಘರ್ಷ ಹಿನ್ನಲೆ ಇಂದು ಅಂತರರಾಜ್ಯ ಅರಣ್ಯ ಇಲಾಖೆಯ ಮಹತ್ವದ ಸಭೆ ಕರೆದಿದ್ದೇವೆ. ಸಭೆಗೆ ಕರ್ನಾಟಕ ಕೇರಳ ತಮಿಳುನಾಡು ಮೂರು ರಾಜ್ಯದ ಹಿರಿಯ ಅರಣ್ಯ ಅಧಿಕಾರಿಗಳು ಬಂದಿದ್ದಾರೆ.
ಕೇರಳದ ಅರಣ್ಯ ಸಚಿವ ಎ.ಕೆ. ಶಶೀಂದ್ರನ್ ಭಾಗಿಯಾಗಲಿದ್ದಾರೆ. ಇನ್ನು ಸಭೆಯಲ್ಲಿ ಮೂರೂ ರಾಜ್ಯಗಳ ನಡುವೆ ಅರಣ್ಯ ಸಂರಕ್ಷಣೆ, ಮಾನವ ಮತ್ತು ಪ್ರಾಣಿ ಸಂಘರ್ಷ, ಕಳ್ಳಬೇಟೆ, ಅರಣ್ಯ ನಾಶ, ಮತ್ತು ವನ್ಯಜೀವಿಗಳ ಸಂಚಾರ ಕುರಿತಂತೆ ಚರ್ಚೆ ಆಗಲಿದೆ ಎಂದು ತಿಳಿಸಿದರು.












Click it and Unblock the Notifications