Get Updates
Get notified of breaking news, exclusive insights, and must-see stories!

ಉಪಚುನಾವಣೆಯಲ್ಲಿ ‘ಕೈ’ ತಂತ್ರ ಸಫಲವಾಗುತ್ತಾ?

ಗುಂಡ್ಲುಪೇಟೆ, ನಂಜನಗೂಡು ಉಪಚುನಾವಣೆಯಲ್ಲಿ ಕಾಂಗ್ರೆಸ್ ಹೆಣೆದಿರುವ ರಣತಂತ್ರ ಕೈ ಹಿಡಿಯುತ್ತಾ ಎಂಬ ಪ್ರಶ್ನೆ ಎದುರಾಗಿದೆ. ಮುಖ್ಯಮಂತ್ರಿಯಾದಿಯಾಗಿ ಸಚಿವರು ಚುನಾವಣೆಗಾಗಿ ನಡೆಸುತ್ತಿರುವ ರಣತಂತ್ರದ ವಿವರಗಳು ಇಲ್ಲಿವೆ

ಮೈಸೂರು, ಏಪ್ರಿಲ್ 1: ಉಪಚುನಾವಣೆ ಘೋಷಣೆ ಮುನ್ನವೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಒಂದಷ್ಟು ತಂತ್ರವನ್ನು ಮಾಡಿ, ಕೆಲವು ಅಭಿವೃದ್ಧಿ ಯೋಜನೆಗಳಿಗೆ ಶಿಲಾನ್ಯಾಸ, ಮತ್ತೊಂದಷ್ಟು ನೂತನ ಯೋಜನೆಗಳಿಗೆ ಚಾಲನೆ ನೀಡಿ, ಕಾರ್ಯಕರ್ತರ ಸಭೆಯನ್ನು ನಡೆಸಿದ್ದರು. ಮತದಾರರನ್ನು ಓಲೈಸಿಕೊಳ್ಳುವ ಯತ್ನ ಮಾಡಿದ್ದರು.

ರಾಜ್ಯದ ಯಾವ ಭಾಗಕ್ಕೂ ಮಾಡದ ಯೋಜನೆಗಳ ಘೋಷಣೆಯನ್ನು ನಂಜನಗೂಡಿನಲ್ಲಿ ಮಾಡಿದರು. ಡಾ.ಎಚ್.ಸಿ.ಮಹದೇವಪ್ಪ, ಸಂಸದ ಧ್ರುವನಾರಾಯಣ, ಸಚಿವರಾಗಿದ್ದ ದಿ.ಮಹದೇವಪ್ರಸಾದ್ ಅವರನ್ನು ಕರೆತಂದು ಕ್ಷೇತ್ರದಾದ್ಯಂತ ಓಡಾಡಿಸಿ ಒಂದಷ್ಟು ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಿದರು.[ಗುಂಡ್ಲುಪೇಟೆಯಲ್ಲಿ ಅತ್ತೆ ಪರವಾಗಿ ಮತ ಯಾಚಿಸುತ್ತಿರುವ ಸೊಸೆ]

ತನ್ನ ಬಲಗೈ ಎಂಬಂತೆ ಇದ್ದ ಮಹದೇವಪ್ರಸಾದ್ ಅವರ ಮೂಲಕ ಮತದಾರರನ್ನು ಸೆಳೆದು, ರಾಜಕೀಯ ವಿರೋಧಿ ಶ್ರೀನಿವಾಸ ಪ್ರಸಾದ್ ಅವರಿಗೆ ತೊಡೆತಟ್ಟಿ ನಿಲ್ಲಬಹುದು ಎಂದು ನಂಬಿದರು. ಆದರೆ ವಿಧಿಯಾಟವೇ ಬೇರೆಯಾಗಿತ್ತು. ಎಚ್.ಎಸ್.ಮಹದೇವಪ್ರಸಾದ್ ಅವರು ಅಕಾಲ ಮರಣಕ್ಕೀಡಾದರು. ಅವತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಜಂಘಾಬಲವೇ ಇಳಿದು ಹೋಗಿತ್ತು.

ಜತೆಗೆ ಮಹದೇವಪ್ರಸಾದ್ ಅವರು ಪ್ರತಿನಿಧಿಸುತ್ತಿದ್ದ ಕ್ಷೇತ್ರಕ್ಕೂ ಉಪಚುನಾವಣೆ ನಡೆಸಬೇಕಾದ ಅನಿವಾರ್ಯ ಎದುರಾಯಿತು. ತಮಗಾದ ಆಘಾತದಿಂದ ಸಾವರಿಸಿಕೊಂಡು ಮೇಲೇಳುವ ವೇಳೆಗೆ ಅತ್ತ ಬಿಜೆಪಿಯಲ್ಲಿ ರಣತಂತ್ರ ಆರಂಭವಾಗಿತ್ತು. ಅದಾಗಲೇ ಅದರ ನಾಯಕರು ಕೆಳಮಟ್ಟದಿಂದಲೇ ಪಕ್ಷವನ್ನು ಗಟ್ಟಿ ಮಾಡಲು ಸಜ್ಜಾಗಿದ್ದರು. ಅದರ ಪರಿಣಾಮವೇ ಕಾಂಗ್ರೆಸ್ ನಿಂದ ಹಲವು ಮುಖಂಡರು ಬಿಜೆಪಿಗೆ ವಲಸೆ ಹೋಗಿಯಾಗಿತ್ತು.[ಉಪಚುನಾವಣೆ - ಚಿರ ಯುವಕರಂತಾದ ಯಡಿಯೂರಪ್ಪ]

ಕಾಂಗ್ರೆಸ್ ಗೆ ನಾಯಕರೇ ಸಿಕ್ಕಲಿಲ್ಲ

ಕಾಂಗ್ರೆಸ್ ಗೆ ನಾಯಕರೇ ಸಿಕ್ಕಲಿಲ್ಲ

ನಂಜನಗೂಡು ಕ್ಷೇತ್ರದಲ್ಲಿ ಕಾಂಗ್ರೆಸ್ ಗೆ ಅಭ್ಯರ್ಥಿಯಾಗಿ ಸ್ಪರ್ಧಿಸುವಂತಹ ನಾಯಕರೇ ಸಿಕ್ಕಿರಲಿಲ್ಲ. ಹೀಗಾಗಿ ಹಲವು ಗೊಂದಲಗಳ ಬಳಿಕ ಹೇಗೋ ಜೆಡಿಎಸ್ ನಲ್ಲಿದ್ದ ಕಳಲೆ ಕೇಶವ ಮೂರ್ತಿ ಅವರನ್ನು ಕಾಂಗ್ರೆಸ್ ಗೆ ಕರೆತಂದು ಕಣಕ್ಕಿಳಿಸಲಾಯಿತು. ಇಷ್ಟಕ್ಕೂ ಇಲ್ಲಿ ಬಿಜೆಪಿಯ ಅಭ್ಯರ್ಥಿ ಶ್ರೀನಿವಾಸಪ್ರಸಾದ್ ಅವರನ್ನು ಸೋಲಿಸಲೇ ಬೇಕೆಂಬ ಕಾರಣಕ್ಕೆ ಜೆಡಿಎಸ್ ನೊಂದಿಗೆ ಕಾಂಗ್ರೆಸ್ ಫಿಕ್ಸಿಂಗ್ ಮಾಡಿಕೊಂಡಿದೆ ಎಂಬುದನ್ನು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ.

ಬಿಜೆಪಿಯನ್ನು ತೆಗಳುತ್ತಿರುವ ಸಿದ್ದರಾಮಯ್ಯ

ಬಿಜೆಪಿಯನ್ನು ತೆಗಳುತ್ತಿರುವ ಸಿದ್ದರಾಮಯ್ಯ

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇದೀಗ ಎರಡು ಕ್ಷೇತ್ರಗಳಲ್ಲಿ ಗೆದ್ದೇ ತೀರಬೇಕೆಂಬ ಕಾರಣಕ್ಕೆ ರಾಜ್ಯದಲ್ಲಿ ಜನ ಬರದಿಂದ ಸಾಯುತ್ತಿದ್ದರೂ ತವರು ಕ್ಷೇತ್ರಕ್ಕೆ ಬಂದು ವಾಸ್ತವ್ಯ ಹೂಡಿದ್ದು, ಚುನಾವಣಾ ಪ್ರಚಾರದಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಭಾಷಣದುದ್ದಕ್ಕೂ ತಮ್ಮ ಅಭಿವೃದ್ಧಿ ಕಾರ್ಯದ ಬಗ್ಗೆ ಹೇಳದ ಅವರು, ಕೇವಲ ಬಿಜೆಪಿ ನಾಯಕರನ್ನು ತೆಗಳುತ್ತಾ ಮತ ಕೇಳುತ್ತಿರುವುದು ಅಚ್ಚರಿ ತರುತ್ತಿದೆ.

ಎರಡನೇ ಹಂತದ ಪ್ರಚಾರ

ಎರಡನೇ ಹಂತದ ಪ್ರಚಾರ

ಕಾಂಗ್ರೆಸ್ ನಾಯಕರಿಗಿಂತ ಮುಂಚಿತವಾಗಿಯೇ ಕ್ಷೇತ್ರಗಳ ಭೇಟಿ ಮಾಡಿ ಬಂದಿರುವ ಬಿಜೆಪಿ ನಾಯಕರು, ಇದೀಗ ಎರಡನೇ ಹಂತದ ಪ್ರಚಾರಕ್ಕೆ ಮುಂದಾಗಿದ್ದಾರೆ. ಯಡಿಯೂರಪ್ಪ, ಜಗದೀಶ್ ಶೆಟ್ಟರ್, ಅಶೋಕ್, ಸಿ.ಟಿ.ರವಿ, ವಿ.ಸೋಮಣ್ಣ, ಶ್ರೀರಾಮುಲು, ಸುರೇಶ್ ಕುಮಾರ್ ಹೀಗೆ ಎಲ್ಲರೂ ಮತಯಾಚನೆಯಲ್ಲಿ ತೊಡಗಿದ್ದಾರೆ.

ಕಣ್ಣೀರಿಟ್ಟರು ಗೀತಾಮಹದೇವಪ್ರಸಾದ್

ಕಣ್ಣೀರಿಟ್ಟರು ಗೀತಾಮಹದೇವಪ್ರಸಾದ್

ಕಾಂಗ್ರೆಸ್ ನ ಪ್ರಭಾವಿ ನಾಯಕ ಡಿ.ಕೆ.ಶಿವಕುಮಾರ್ ಅವರ ರಣತಂತ್ರ ಕಾಂಗ್ರೆಸ್ ಗೆಲುವಿಗೆ ಸಹಕಾರಿಯಾಗುತ್ತಿದೆ ಎಂದು ಹೇಳಲಾಗುತ್ತಿದ್ದು, ಅವರು ಕೂಡ ಒಂದಷ್ಟು ತಂತ್ರಗಳನ್ನು ಹೆಣೆಯುತ್ತಾ ಮತದಾರರ ಒಲವು ಗಳಿಸಲು ಮುಂದಾಗಿದ್ದಾರೆ. ಮೊದಲ ತಂತ್ರವಾಗಿ ಗೀತಾಮಹದೇವಪ್ರಸಾದ್ ಅವರ ಮೂಲಕ ಸುದ್ದಿಗೋಷ್ಠಿ ಕರೆಯಿಸಿ, ಕಣ್ಣೀರು ಹಾಕಿಸಿದ್ದಾರೆ.

ಪ್ರಮುಖ ಕಾರ್ಯಕರ್ತರ ಸೆಳೆದರು

ಪ್ರಮುಖ ಕಾರ್ಯಕರ್ತರ ಸೆಳೆದರು

ಆದರೆ, ಇದರಿಂದ ಪ್ರಯೋಜನ ಆದಂತೆ ಕಂಡು ಬಾರದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಗೆಲುವಿಗೆ ಕಾರಣರಾದ ಹಂಗಳ ಎಚ್.ಎಸ್.ನಂಜಪ್ಪ ಹಾಗೂ ಕೊಡಸೋಗೆ ಶಿವಬಸಪ್ಪ ಅವರ ನೆರವಿನಿಂದ ಬಿಜೆಪಿಯ ಪ್ರಮುಖ ಕಾರ್ಯಕರ್ತರನ್ನು ಸೆಳೆಯಲು ಪ್ರಯತ್ನಿಸುತ್ತಿದ್ದಾರೆ. ಇದರಲ್ಲಿ ಒಂದಷ್ಟು ಸಫಲತೆ ಕಾಣುತ್ತಿದೆ.

ಎಷ್ಟರ ಮಟ್ಟಿಗೆ ಪರಿಣಾಮ?

ಎಷ್ಟರ ಮಟ್ಟಿಗೆ ಪರಿಣಾಮ?

ಕಾರಣ ಗುಂಡ್ಲುಪೇಟೆ ಕ್ಷೇತ್ರದ ಮೂಡ್ನಾಕೂಡು, ಅರಳೀಕಟ್ಟೆ, ಮಲೆಯೂರು, ಲಕ್ಕೂರು ಹಾಗೂ ಕುಂದಕೆರೆ ಗ್ರಾಮದ ಕೆಲವು ಯುವಕರು ಡಿಕೆಶಿ ಸಮ್ಮುಖದಲ್ಲಿ ಕಾಂಗ್ರೆಸ್ಸಿಗೆ ಸೇರ್ಪಡೆಯಾಗಿದ್ದಾರೆ. ಆದರೆ ಕೊನೆ ಗಳಿಗೆಯಲ್ಲಿ ಡಿ.ಕೆ.ಶಿವಕುಮಾರ್ ಅನುಸರಿಸುತ್ತಿರುವ ತಂತ್ರ ಎಷ್ಟರ ಮಟ್ಟಿಗೆ ಪರಿಣಾಮ ಬೀರುತ್ತೆ ಎಂಬುದು ಫಲಿತಾಂಶ ಬಂದ ಬಳಿಕವಷ್ಟೆ ಗೊತ್ತಾಗಬೇಕಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+