ಭಾಷಣದ ವೇಳೆ ಎದ್ದು ಹೋದ ಜನ: ಏ ಪಂಚೆ ಕೂತ್ಕೊಳ್ಳಯ್ಯಾ ಎಂದು ಗದರಿದ ಸಿದ್ದರಾಮಯ್ಯ

Recommended Video

      ಸಿದ್ದು ಭಾಷಣದ ವೇಳೆ ಎದ್ದು ಹೋದ ಜನ..! | Oneindia Kannada

      ಚಾಮರಾಜನಗರ, ಮಾರ್ಚ್ 15: ನನ್ನ ಹೆಸರಿನಲ್ಲೂ ರಾಮ ಇದ್ದಾನೆ, ರಾಮ ಏನು ಬಿಜೆಪಿಯ ಸ್ವತ್ತಲ್ಲಾ, ಚುನಾವಣೆಯ ವೇಳೆ ರಾಮನ ನೆನಪು ಮಾಡುವ ಬಿಜೆಪಿಯವರು, ಇನ್ನೂ ರಾಮಮಂದಿರದ ಇಟ್ಟಿಗೆಯ ಲೆಕ್ಕವನ್ನು ಕೊಟ್ಟಿಲ್ಲ ಎಂದು ಸಿದ್ದರಾಮಯ್ಯ ಕಿಡಿಕಾರಿದ್ದಾರೆ.

      ಚುನಾವಣಾ ಸಭೆಯಲ್ಲಿ ಸಿದ್ದರಾಮಯ್ಯ ಮಾತನಾಡುತ್ತಿರಬೇಕಾದರೆ, ಜನ ಎದ್ದು ಹೋಗಲು ಆರಂಭಿಸಿದರು. ಆಗ ಸಿಟ್ಟಾದ ಸಿದ್ದರಾಮಯ್ಯ, "ಏ.. ಕೂತ್ಕೊಳ್ರೋ.. ಯಾಕ್ ಹೋಗ್ತಾ ಇದ್ದೀರಾ.. ನಂದೂ ಊಟ ಆಗಿಲ್ಲ.. ಏ ಪಂಚೇ.. ಎಲ್ಲಿಗಯ್ಯಾ ಹೋಗ್ತಾ ಇದ್ದೀಯಾ" ಎಂದು ಗದರಿದ್ದಾರೆ

      ಭಾಷಣದುದ್ದಕ್ಕೂ ಬಿಜೆಪಿ ಮತ್ತು ಪ್ರಧಾನಿ ನರೇಂದ್ರ ಮೋದಿ ವಿರುದ್ದ ಅಕ್ಷರಸಃ ಕಿಡಿಕಾರಿದ ಸಿದ್ದರಾಮಯ್ಯ, ಚಾಮರಾಜನಗರಕ್ಕೆ 2000 ಕೋಟಿಗೂ ಹೆಚ್ಚಿನ ಅನುದಾನ ನೀಡಿದ್ದರೆ ಅದು ಕಾಂಗ್ರೆಸ್ ಸರ್ಕಾರ ಎಂಬುದನ್ನು ನಾನು ಹೆಮ್ಮೆಯಿಂದ ಹೇಳುತ್ತೇನೆ ಎಂದಿದ್ದಾರೆ.

      ಮೋದಿ ಶೈಲಿಯಲ್ಲೇ ಭಾಷಣ ಮಾಡಿದ ಸಿದ್ದರಾಮಯ್ಯ, ಪ್ರಜಾಪ್ರಭುತ್ವ ಉಳಿಯಬೇಕಾದರೆ, ಬಿಜೆಪಿಗೆ ಮತ ಹಾಕಬಾರದು. ಬಿಜೆಪಿಗೆ ಮತಹಾಕುವುದೂ ಒಂದೇ, ಆತ್ಮಹತ್ಯೆ ಮಾಡಿಕೊಳ್ಳುವುದೂ ಒಂದೇ ಎಂದು ಅವರು ಹೇಳಿದ್ದಾರೆ.

      ಕಚ್ಚಾತೈಲ ಬೆಲೆ ಕಮ್ಮಿಯಾದರೂ ಪೆಟ್ರೋಲ್ ಬೆಲೆ ಕಮ್ಮಿಯಾಗಿದೆಯಾ ಎಂದು ಮೋದಿ ಸ್ಟೈಲ್ ನಲ್ಲೇ ಪ್ರಶ್ನೆ ಕೇಳಿದ ಸಿದ್ದರಾಮಯ್ಯ, ಲಕ್ಷಾಂತರ ಕೋಟಿ ರೂಪಾಯಿ ಇದರಿಂದ ಉಳಿಯಿತಲ್ಲಾ ಆ ಹಣ ಎಲ್ಲಿಗೆ ಹೋಯಿತು, ನಿಮಗೆ ಹದಿನೈದು ಲಕ್ಷಾ ಬಂತಾ ಎಂದು ಸಭಿಕರನ್ನು ಪ್ರಶ್ನಿಸಿದ್ದಾರೆ.

      Former CM Siddaramaiah lambasts BJP and PM Narendra Modi

      ಎರಡು ಬಾರಿ ಪಾಕಿಸ್ತಾನದ ಮೇಲೆ ಯುದ್ದ ಮಾಡಿ ಸೋಲಿಸಿದ್ದು ಯಾರ ಅವಧಿಯಲ್ಲಿ, ನಮ್ಮ ಸರಕಾರ ಇರುವಾಗಲೂ ಬಹಳಷ್ಟು ಬಾರಿ ಸರ್ಜಿಕಲ್ ಸ್ಟ್ರೈಕ್ ಮಾಡಿದ್ದೇವೆ. ಆದರೆ, ನಾವು ಬಿಜೆಪಿಯವರಂತೆ ಟಾಂಟಾಂ ಮಾಡಿಕೊಂಡು ಬಂದಿಲ್ಲ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+